Asianet Suvarna News Asianet Suvarna News

ವೇಟ್‌ ಜಾಸ್ತಿ ಇದ್ದೀನಿ ರೂಪೇಶ್ ಶೆಟ್ಟಿ ಮೈ-ಕೈ ಒತ್ತುತ್ತಾರೆ: ಆರ್ಯವರ್ಧನ್ ಗುರೂಜಿ ಮಾಸ್ಟರ್ ಪ್ಲ್ಯಾನ್ ವರ್ಕ್‌ ಆಯ್ತಾ?

ನಾನು ಪ್ರೀತಿ ಕೊಟ್ಟಷ್ಟೇ ಕರ್ನಾಟಕದ ಜನರು ಪ್ರೀತಿ ಕಟ್ಟಿದ್ದಾರೆ. ರೂಪೇಶ್‌ಗೆ ಕನ್ನಡ ಚಿತ್ರರಂಗ ಕೈ ಹಿಡಿಯಬೇಕು....

Bigg boss 9 Aryavardhan appreciates Roopesh shetty as a son vcs
Author
First Published Jan 3, 2023, 9:57 AM IST

ಬಿಗ್ ಬಾಸ್ ಓಟಿಟಿ ಸೀಸನ್ 1ರ ವಿನ್ನರ್ ರೂಪೇಶ್ ಶೆಟ್ಟಿ ಟಿವಿ ಬಿಗ್ ಬಾಸ್ ಸೀಸನ್‌ 9ಕ್ಕೆ ಕಾಲಿಟ್ಟು ಅಲ್ಲಿಯೂ ಜಯ ಕಂಡಿದ್ದಾರೆ. ವಿನ್ನರ್ ಟ್ರೋಫಿ ಮತ್ತು 7 ಲಕ್ಷ ರೂಪಾಯಿ ಹಣವನ್ನು ಗಿಟ್ಟಿಸಿಕೊಂಡಿದ್ದಾರೆ. ರೂಪೇಶ್ ಶೆಟ್ಟಿ ಈ ಜರ್ನಿಯಲ್ಲಿ ಜೊತೆಗೆ ನಿಂತು ಸಾಥ್ ಕೊಟ್ಟವರು ಆರ್ಯವರ್ಧನ್ ಗುರೂಜಿ. ತಂದೆ ಸ್ಥಾನದಲ್ಲಿ ನಿಂತು ಪ್ರತಿಯೊಂದು ಹೆಜ್ಜೆಗೂ ಮಾರ್ಗದರ್ಶನ ಕೊಟ್ಟಿದ್ದಾರೆ. ರೂಪೇಶ್ ಟ್ರೋಫಿ ಪಡೆದ ನಂತರ ಆರ್ಯವರ್ಧನ್ ನೀಡಿದ ಫಸ್ಟ್‌ ರಿಯಾಕ್ಷನ್ ಇದು. 

'ಮೊದಲಾಗಿ ಐ ಲವ್ ಯು ಮಗನೆ ಎಂದು ಹೇಳುತ್ತೀನಿ. ನೀನು ಕರ್ನಾಟಕದ ಮಗ ಆಗಬೇಕು ಅಂತ ನಾನು ಎಲ್ಲಾ ಟಿವಿಯಲ್ಲೂ ಹೇಳಿದ್ದೆ ಈಗ ನೀನು ಮಗನಾಗಿರುವೆ. ಕರ್ನಾಟಕದಲ್ಲಿ ಅದ್ಭುತ ಅರ್ಜುನನಾಗಿ ನೀನು ಬೆಳೆಯಬೇಕು ಅನ್ನೋದು ನನ್ನ ಆಸೆ. ಕನ್ನಡ ಸಿನಿಮಾ ರಂಗ ನಿನ್ನ ಕೈ ಹಿಡಿಯ ಬೇಕು. ಕನ್ನಡ ಸಿನಿಮಾರಂಗಕ್ಕೆ ನೀನು ಒಳ್ಳೆ ಸಿನಿಮಾಗಳನ್ನು ಕೊಡಬೇಕು. ತುಳು ಭಾಷೆ ಕರಾವಳಿ ಭಾಗದಿಂದ ಬಂದಿರುವೆ ಕರ್ನಾಟಕದ ಜನರು ನಿನ್ನು ಎತ್ತಿ ಬೆಳೆಸಿದ್ದಾರೆ. ಎಲ್ಲದ್ದಕ್ಕಿಂತ ಮಿಗಿಲಾಗ ಪ್ರೀತಿ ನಿನಗೆ ಕೊಟ್ಟಿರುವುದು ನನ್ನ ಜೀವನ ಪಾವನವಾಗಿದೆ. ನೀನು ಗೆದ್ದಾಗ ನಾನು ಎಷ್ಟು ಖುಷಿ ಪಟ್ಟಿರುವೆ ಅಷ್ಟೇ ಖುಷಿ ಕರ್ನಾಟಕದ ಜನ ಖುಷಿ ಪಟ್ಟಿದ್ದಾರೆ. ಅದೇ ರೀತಿ ನಿನಗೆ ಆಶೀರ್ವಾದ ಮಾಡಿ ಮುಂದೆ ಬೆಳೆಸಬೇಕು ಅನ್ನೋದು ನನ್ನ ಆಸೆ.' ಎಂದು ಆರ್ಯವರ್ಧನ್ ಗುರೂಜಿ ಖಾಸಗಿ ಟಿವಿ ಸಂದರ್ಶನದಲ್ಲಿ ಮಾತನಾಡಿದ್ದಾರೆ.

Bigg boss 9 Aryavardhan appreciates Roopesh shetty as a son vcs

'ನೀನು ಎತ್ತರಕ್ಕೆ ಬೆಳೆಯುವುದನ್ನು ನೋಡಿ ನಾನು ತಂದೆಯಾ ಆಸೆ ಪಡುವೆ. ನಿನ್ನ ಅದೃಷ್ಟ ನಿನಗೆ ನಿಜವಾದ ತಂದೆ ಮತ್ತು ಪ್ರೀತಿಯ ತಂದೆ ಅಂದ್ರೆ ಎರಡು ತಂದೆಯರು ಸಿಕ್ಕಿದ್ದಾರೆ ಪುಣ್ಯ ಮಾಡಿರುವೆ. ನಾನೊಬ್ಬ ಜೋತಿಷಿ ನನ್ನ ಬಗ್ಗೆ ಕಾಮಿಡಿ ಮಾಡುತ್ತಾರೆ ಇನ್ನೊಂದು ಮತ್ತೊಂದು ಮಾಡುತ್ತಾರೆ ಆಗ ಸಂದರ್ಭ ಇದ್ದರು ನಾನು ಮಾತನಾಡಲು ಆಗುವುದಿಲ್ಲ ಆಗ ಬಂದು ನನ್ನ ಮಗನಾಗಿ ಮತನಾಡುತ್ತಾರೆ. ನನ್ನ ಮೈ-ಕೈ ನೋಡು ಜಾಸ್ತಿ ಇರುತ್ತದೆ ನಾನು ಜಾಸ್ತಿ ವೇಟ್ ಇರ್ತೀನಿ ರೂಪೇಶ್ ಬಂದು ಕಾಲು ಒತ್ತುತ್ತಾರೆ. ಊಟ ಮತ್ತು ನೀರು ಕೊಡುತ್ತಾರೆ...ನಿಜವಾದ ತಂದೆಯನ್ನು ಹೇಗೆ ನೋಡಿಕೊಳ್ಳಬೇಕು ಹಾಗೆ ನೋಡಿಕೊಳ್ಳುತ್ತಾರೆ. ರೂಪೇಶ್‌ಗೆ ತಂದೆ ಕೂಡ ನಾನೇ ಆದೆ ಚಾನಕ್ಯನೂ ನಾನೇ ಆಗಿದ್ದೆ. ನಂಬರ್‌ ಗೇಮ್‌ ವರ್ಕ್‌ ಆಗಿದ್ದಕ್ಕೆ ಚೆನ್ನಾಗಿರುವುದು' ಎಂದು ಆರ್ಯವರ್ಧನ್ ಹೇಳಿದ್ದಾರೆ.

BBK9 ನಮ್ಮುಂದೆ ಶೋ ಆಫ್‌ ಹೆಂಡ್ತಿ ಮುಂದೆ ಮೀಟ್ರು ಆಫ್; ಆರ್ಯವರ್ಧನ್‌ಗೆ ಹೆಂಡ್ತಿ ಅಂದ್ರೆ ಭಯ?

'ಮಗಳಿಗೆಂದು ಬರೆದಿರುವ ಹಾಡು ಎವರ್‌ಗ್ರೀನ್ ಹಾಡು ನನ್ನ ಲೈಫ್‌ನಲ್ಲಿ ಮರೆಯುವುದಿಲ್ಲ. ಅಪ್ಪ ಐ ಲವ್ ಯು, ಮರುಭೂಮಿ ಮತ್ತು ಬ್ರಹ್ಮದೇವರ ಬಗ್ಗೆ ಬರೆದಿರುವ ಹಾಡು  ಸಖತ್ ಅಗಿದೆ. ಹೀಗೆ ಮನೋರಂಜನೆ ನೀಡು' ಎಂದಿದ್ದಾರೆ ಆರ್ಯವರ್ಧನ್.  

Follow Us:
Download App:
  • android
  • ios