ತೆಲುಗು ವಾಹಿನಿಯ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್‌ ಸೀಸನ್‌ 4ರಿಂದ ಖ್ಯಾತ ಕರಾಟೆ ಕ್ಷೀನ್‌ ಕಲ್ಯಾಣಿ ಎಲಿಮಿನೇಟ್ ಆಗಿದ್ದಾರೆ. ಹೊರ ಬಂದ ನಂತರ ಸಂದರ್ಶನವೊಂದರಲ್ಲಿ ವೋಟಿಂಗ್ ಸಿಸ್ಟಂ ಬಗ್ಗೆ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ. 

ಬಿಗ್ ಬಾಸ್‌ ಹೊಸ ಸೀಸನ್‌ ಶುರು; ಲಿಸ್ಟ್‌ನಲ್ಲಿ ಸೆಲೆಬ್ರಿಟಿಗಳ ಹೆಸರು ರಿವೀಲ್!

ಈಗಾಗಲೇ ಇಬ್ಬರು ನಾಮಿನೇಟ್‌ ಆಗಿದ್ದು, ಕಲ್ಯಾಣಿ ಅವರು ಮನೆಯಿಂದ ಹೊರ ಬಂದ 3ನೇ ಸ್ಪರ್ಧಿ. ಕನಿಷ್ಠ 5 ವಾರವಾದರೂ ಬಿಗ್ ಬಾಸ್‌ ಮನೆಯಲ್ಲಿ ಉಳಿಯುವುದಾಗಿ ಭರವಸೆ ಹೊಂದಿದ್ದ ಕಲ್ಯಾಣಿ ಬೋಟ್‌ ಟಾಸ್ಕ್‌ನಲ್ಲಿ ತಮ್ಮನ್ನು ನಾನು ನಾಮಿನೇಟ್‌ ಮಾಡಿಕೊಂಡಿರಲಿಲ್ಲವಾದರೆ ಉಳಿಯುತ್ತಿದ್ದೆ ಎಂದು ವ್ಯಥೆ ಪಟ್ಟಿದ್ದಾರೆ. 

ವೋಟಿಂಗ್‌ ಫ್ರಾರ್ಡ್‌?
ಆನ್‌ಲೈನ್‌ ವೋಟಿಂಗ್ ಸರಿ ಇಲ್ಲ ಎಂದು ಕಲ್ಯಾಣಿ ಆರೋಪ ಮಾಡಿದ್ದಾರೆ. 'ಶೋ ಆಯೋಜಕರು ನನಗೆ ಬರಬೇಕಿದ್ದ ವೋಟ್‌ಗಳನ್ನು ಬೇರೆ ಸ್ಪರ್ಧಿಗಳಿಗೆ ಬರವಂತೆ ಮಾಡಿ ನನ್ನನ್ನು ಎಲಿಮಿನೇಟ್ ಮಾಡಿದ್ದಾರೆ' ಎಂದು ಕಲ್ಯಾಣಿ ಆರೋಪ ಮಾಡಿದ್ದಾರೆ.

ನನ್ನ ಮಗಳಿಗೆ ಹೆಸರಿಟ್ಟ ಚಂದನ್, ತಿಳಿಯದೆ ಮಾಡಿದ ತಪ್ಪಿಗೆ ಕ್ಷಮಿಸಿ: ಬಿಗ್ ಬಾಸ್ ದಿವಾಕರ್‌ 

ಅಲ್ಲದೇ ಅಪಾರ ಜನರ ಬೆಂಬಲ ಹೊಂದಿರುವ ಕರಾಟೆ ಕಲ್ಯಾಣಿ ಇದರಲ್ಲಿ ಬೋಗಸ್‌ ನಡೆದಿದೆ. ತಮ್ಮ ಬಳಿ ಎಲ್ಲಾ ರೀತಿಯ ಸಾಕ್ಷಿಗಳು ಇವೆ ಎಂದು ಸಂದರ್ಶನದಲ್ಲಿ ಮಾತನಾಡಿದ್ದಾರೆ. 20 ವರ್ಷಗಳ ಹಿಂದೆಯೇ ಮಾರ್ಷಿಯಲ್ ಆರ್ಟ್ಸ್‌ಗೆ ಗುಡ್‌ ಬೈ ಹೇಳಿದ್ದಾರೆ ಇವರು. ಬಿಗ್ ಬಾಸ್‌ನಲ್ಲಿ ಇನ್ನೂ  ಕೆಲವು ದಿನಗಳ ಕಾಲ ಉಳಿದುಕೊಂಡಿದ್ದರೆ, ತಮಗಿದ್ದ ಆರ್ಥಿಕ ಸಂಕಷ್ಟ ಬಗೆಹರಿಯುವುದು ಎಂದು ಕೊಂಡಿದ್ದೆ, ಎಂದು ಹೇಳಿದ್ದಾರೆ. 

ಈ ತಪ್ಪು ಇನ್ನು ಮುಂದೆ ಆಗದಂತೆ ನೋಡಿಕೊಳ್ಳಲು ಹಾಗೂ ತಮಗೆ ಆಗಿರುವ ಅನ್ಯಾಯಕ್ಕೆ ನ್ಯಾಯ ಕೊಡಿಸಲು ಕಲ್ಯಾಣಿ ನಟ ಕಮ್ ನಿರೂಪಕ ನಾಗರ್ಜುನ್‌ ಅಕ್ಕಿನೇನಿ ಅವರ ಮೊರೆ ಹೋಗಿದ್ದಾರೆ.