ಖಾಸಗಿ ವೆಬ್‌ಸೈಟ್‌ನ ಲೈವ್‌ ಚಾಟ್‌ನಲ್ಲಿ ಮಾತನಾಡಿದ ದಿವಾಕರ್‌, ಚಂದನ್ ಶೆಟ್ಟಿ ಹಾಡುಗಳ ಬಗ್ಗೆ ಮಾತನಾಡಿದ್ದಾರೆ.  

ಬಿಗ್ ಬಾಸ್‌ ಸೀಸನ್‌ 5 ಸ್ಪರ್ಧಿ ದಿವಾಕರ್‌ ಹಲವು ದಿನಗಳ ನಂತರ ಮಾಧ್ಯಮದಲ್ಲಿ ಕಾಣಿಸಿಕೊಂಡಿದ್ದಾರೆ. ಲೈವ್‌ ಚಾಟ್‌ ಮೂಲಕ ಅಭಿಮಾನಿಗಳ ಜೊತೆ ಮಾತನಾಡಿ ತಮ್ಮ ಆಪ್ತ ಗೆಳೆಯ ಚಂದನ್‌ ಶೆಟ್ಟಿ ಮಾಡಿಕೊಂಡ ಎಡವಟ್ಟಿನ ಬಗ್ಗೆ ಅಭಿಮಾನಿಗಳಿಗೆ ಉತ್ತರಿಸಿದ್ದಾರೆ. 

'ಗುಲಾಲ್‌.ಕಾಂನ'ಲ್ಲಿ ಬಿಗ್ ಬಾಸ್‌ ದಿವಾಕರ!

ಬಿಗ್ ಬಾಸ್‌ ಮನೆ ಒಳಗೂ ಹಾಗೂ ಹೊರಗೂ ದಿವಾಕರ್‌ಗೆ ಆಪ್ತವಾಗಿದ್ದವರೇ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ. ರಿಯಾಲಿಟಿ ಶೋ ಮುಗಿದ ನಂತರ ಸೇಲ್ಸ್‌ ಕೆಲಸದಲ್ಲಿ ತೊಡಗಿಸಿಕೊಂಡ ದಿವಾಕರ್‌ಗೆ ಅದೆಷ್ಟೋ ವಿಚಾರಗಳಲ್ಲಿ ಚಂದನ್ ಸಹಾಯ ಮಾಡಿದ್ದಾರಂತೆ. ಅಲ್ಲದೇ ತಮ್ಮ ಮಗಳಿಗೆ ಹೆಸರಿಟ್ಟಿದ್ದು, ಚಂದನಾ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. 

ಚಂದನ್ ಶೆಟ್ಟಿ ಕೋಲುಮಂಡೆ ಹಾಡನ್ನು ಮೆಚ್ಚಿಕೊಂಡ ದಿವಾಕರ್, ನೃತ್ಯ ಸಂಯೋಜನೆಯಲ್ಲಿ ಎಡವಿದ್ದಾರೆ ಎಂದು ಒಪ್ಪಿಕೊಂಡಿದ್ದಾರೆ. ಹಲವು ವರ್ಷಗಳಿಂದ ಜೊತೆಗಿರುವ ದಿವಾಕರ್‌ ಚಂದನ್ ಉದ್ದೇಶ ಪೂರ್ವಕವಾಗಿ ಯಾವುದೇ ತಪ್ಪು ಕೆಲಸ ಮಾಡಿರುವುದಿಲ್ಲ ಎಂದಿದ್ದಾರೆ.

ಚಂದನ್‌ ಶೆಟ್ಟಿ ವಿರುದ್ಧ ಮತ್ತೊಂದು ದೂರು 

ಚಂದನ್ ಮಾಡಿರುವ ತಪ್ಪಿಗೆ ನಾನು ಕ್ಷಮೆ ಕೇಳುತ್ತೇನೆ ಹಾಗೂ ಇಂದು (ಸೆಪ್ಟೆಂಬರ್ 17) ಚಂದನ್ ಹುಟ್ಟುಹಬ್ಬಕ್ಕೆ ವಿಶೇಷ ಉಡುಗೊರೆಯನ್ನು ಕೊಡಲು ರೆಡಿ ಮಾಡಿಕೊಂಡಿದ್ದಾರೆ.

"