Bigg Boss ಸೀಸನ್ 18ರ ಮೊದಲ ಟೀಸರ್ ಔಟ್, ಆಂಕರ್ ಧ್ವನಿ ಕೇಳಿ ಫ್ಯಾನ್ಸ್ ಖುಷ್
ಬಿಗ್ ಬಾಸ್ ಸೀಸನ್ 18ರ ಮೊದಲ ಟೀಸರ್ ಬಿಡುಗಡೆಯಾಗಿದೆ. ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಬಿಗ್ ಬಾಸ್ ಶೋ ಈ ಬಾರಿ ಹೊಸ ಥೀಮ್ ನೊಂದಿಗೆ ಬರ್ತಿದೆ. ಏನೇ ಆಗ್ಲಿ ಸಲ್ಲು ವಾಪಸ್ ಬಂದ್ರಲ್ಲ ಎನ್ನುವ ಖುಷಿಯಲ್ಲಿ ಅಭಿಮಾನಿಗಳಿದ್ದಾರೆ.
ರಿಯಾಲಿಟಿ ಶೋ ಬಿಗ್ ಬಾಸ್ ಫ್ಯಾನ್ಸ್ (reality show Bigg Boss Fans) ಗೆ ಈ ಬಾರಿ ಡಬಲ್ ಧಮಾಕಾ. ಒಂದ್ಕಡೆ ಬಿಗ್ ಬಾಸ್ ಕನ್ನಡ ಸೀಸನ್ 11 (Bigg Boss Kannada Season 11) ಶುರುವಾಗ್ತಿದೆ. ಇನ್ನೊಂದ್ಕಡೆ ಬಿಗ್ ಬಾಸ್ ಹಿಂದಿ ಸೀಸನ್ 18 (Big Boss Hindi Season 18). ಕಿಚ್ಚ ಸುದೀಪ್ ಹಾಗೂ ಬಾಲಿವುಡ್ ದಬಾಂಗ್ ಸಲ್ಮಾನ್ ಈ ಕಾರ್ಯಕ್ರಮ ಹೋಸ್ಟ್ ಮಾಡ್ತಿದ್ದು, ಇಬ್ಬರು ದಿಗ್ಗಜರೇ ಮತ್ತೆ ಶೋ ನಡೆಸಿಕೊಡ್ತಿರೋದು ಅಭಿಮಾನಿಗಳಿಗೆ ಖುಷಿ ತಂದಿದೆ. ಸೆಪ್ಟೆಂಬರ್ ಕೊನೆಯಲ್ಲಿ ಶುರುವಾಗುವ ಶೋ ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ. ಈ ಬಾರಿ ಬಿಗ್ ಬಾಸ್ ಧಮಾಕಾ ಮಾಡಲಿದೆ ಎಂಬ ಆಸೆಯಲ್ಲಿ ಫ್ಯಾನ್ಸ್ ಇದ್ದಾರೆ.
ಬಿಗ್ ಬಾಸ್ ಹಿಂದಿ ಸೀಸನ್ 18ರ ಮೊದಲ ಟೀಸರ್ (Teaser) ಬಿಡುಗಡೆಯಾಗಿದೆ. ಹೊಸ ಥೀಮ್ ಜೊತೆ ಬರ್ತಿರುವ ಬಿಗ್ ಬಾಸ್ ಟೀಸರ್ ನಲ್ಲಿ ಸಲ್ಮಾನ್ ಖಾನ್ ವೈಸ್ ಕೇಳ್ಬಹುದು. ಸೋಮವಾರ ರಾತ್ರಿ ಕಲರ್ಸ್ ಚಾನಲ್, ಟೀಸರ್ ಬಿಡಗಡೆ ಮಾಡಿದ್ದು, ಹೊಸ ಥೀಮ್ ಅನಾವರಣಗೊಳಿಸಿದೆ.
ತುಳಸಿ ಗರ್ಭಿಣಿ: ಆಗಿದ್ದೇ ಬೇರೆ- ತಿಳಿದುಕೊಂಡದ್ದೇ ಬೇರೆ; ಸೀರಿಯಲ್ಗೆ ಇದೇನಿದು ಟ್ವಿಸ್ಟ್?
ಬಿಗ್ ಬಾಸ್ ಹಿಂದಿ ಸೀಸನ್, ಅಕ್ಟೋಬರ್ ಮೊದಲ ವಾರದಲ್ಲಿ ಆರಂಭವಾಗಲಿದೆ ಎಂಬ ನಿರೀಕ್ಷೆ ಇದೆ. ಬಿಗ್ ಬಾಸ್ 18 ರ ಹೋಸ್ಟ್ ಆಗಿ ಸಲ್ಮಾನ್ ಮರಳುವುದನ್ನು ಟೀಸರ್ ಖಚಿತಪಡಿಸಿದೆ. ಈ ಬಾರಿ ಬಿಗ್ ಬಾಸ್ ಟೈಮ್ ಕಾ ತಾಂಡವ್ ಎಂಬ ಥೀಮ್ ಜೊತೆ ಬರ್ತಿದೆ. ಬಿಗ್ ಬಾಸ್, ಮನೆಯವರ ಭವಿಷ್ಯ ನೋಡಲಿದೆ, ಇನ್ಮುಂದೆ ನಡೆಯಲಿದೆ ಸಮಯದ ಪರಾಕಾಷ್ಠೆ ಎಂಬ ಧ್ವನಿಯೊಂದಿಗೆ ಗಡಿಯಾರವನ್ನು ತೋರಿಸಲಾಗುತ್ತದೆ. ಬಿಗ್ ಬಾಸ್ ಹೊಸ ಟ್ವಿಸ್ಟ್ ನೊಂದಿಗೆ ನಿಮಗೆ ಸಂಪೂರ್ಣ ಮನರಂಜನೆ ನೀಡಲಿದೆ. ಕಲರ್ಸ್ ಜೊತೆ ಜಿಯೋ ಸಿನಿಮಾದಲ್ಲಿ ಶೀಘ್ರದಲ್ಲಿ 18 ವೀಕ್ಷಿಸಿ ಎನ್ನುವ ಶೀರ್ಷಿಕೆಯನ್ನು ಹಾಕಲಾಗಿದೆ. ಟೀಸರ್ ಹಾಗೂ ಶೀರ್ಷಿಕೆ ನೋಡಿದ್ರೆ ಈ ಬಾರಿ ಬಿಗ್ ಬಾಸ್ ನಲ್ಲಿ ಸಮಯಕ್ಕೆ ಹೆಚ್ಚು ಮಹತ್ವ ನೀಡಲಾಗುತ್ತೆ ಎಂಬುದನ್ನು ಅರ್ಥ ಮಾಡಿಕೊಳ್ಳಬಹುದು. ಆದ್ರೆ ಒಂದೇ ಟೀಸರ್ ರಿಲೀಸ್ ಆಗಿರುವ ಕಾರಣ ಯಾವುದೂ ಸ್ಪಷ್ಟವಾಗ್ತಿಲ್ಲ.
ಕನ್ನಡ ಬಿಗ್ ಬಾಸ್ ನಂತೆ ಹಿಂದಿ ಬಿಗ್ ಬಾಸ್ ರಿಯಾಲಿಟಿ ಶೋನಲ್ಲೂ ಹೋಸ್ಟ್ ಯಾರಾಗ್ತಾರೆ ಎನ್ನುವ ಪ್ರಶ್ನೆಯಿತ್ತು. ಅದಕ್ಕೆ ಈಗ ತೆರೆ ಬಿದ್ದಿದೆ. ಸಲ್ಮಾನ್ ಖಾನ್ ಧ್ವನಿ ಕೇಳಿದ ಫ್ಯಾನ್ಸ್ ಫುಲ್ ಖುಷಿಯಾಗಿದ್ದಾರೆ. ಸಲ್ಮಾನ್ ಖಾನ್ ಕೊನೆಗೂ ವಾಪಸ್ ಆಗಿದ್ದು, ಮೂರು ತಿಂಗಳು ಸಂಪೂರ್ಣ ಮನರಂಜನೆ ಸಿಗಲಿದೆ ಎಂದು ವೀಕ್ಷಕರು ಕಮೆಂಟ್ ಮಾಡ್ತಿದ್ದಾರೆ.
ಸ್ಮಾಲ್ ಸ್ಕ್ರೀನ್ ಶೋಗಳಲ್ಲಿ ಬಿಗ್ ಬಾಸ್ ರಿಯಾಲಿಟಿ ಶೋ ಬಿಗ್ ಶೋ ಆಗಿದ್ದು, ಕೋಟ್ಯಾಂತರ ಮಂದಿ ಇದನ್ನು ವೀಕ್ಷಣೆ ಮಾಡ್ತಾರೆ. ವೇದಿಕೆ ಮೇಲೆ ಸಲ್ಮಾನ್ ಸ್ಟೈಲ್ ಹಾಗೂ ಅವರ ಮಾತು, ಬೈಗುಳ ಕೇಳಲು ಅನೇಕ ಅಭಿಮಾನಿಗಳು ಕಾತುರದಿಂದ ಕಾಯ್ತಿದ್ದಾರೆ. ಬಿಗ್ ಬಾಸ್ 18ರ ಮನೆಗೆ ಯಾವೆಲ್ಲ ಸ್ಪರ್ಧಿಗಳು ಬರ್ತಾರೆ ಎಂಬುದು ಇನ್ನೂ ಕನ್ಫರ್ಮ್ ಆಗಿಲ್ಲ. ಒಂದಿಷ್ಟು ಹೆಸರುಗಳು ಹರಿದಾಡ್ತಿದ್ದು, ನಟಿ ನಿಯಾ ಶರ್ಮಾ, ಬಿಗ್ ಬಾಸ್ ಮನೆಗೆ ಬರ್ತಿರುವ ಮೊದಲ ಸ್ಪರ್ಧಿ ಎನ್ನಲಾಗ್ತಿದೆ. ಅವರು ಈಗಾಗಲೇ ಬಿಗ್ ಬಾಸ್ ಮನೆ ಪ್ರವೇಶಕ್ಕೆ ಉತ್ಸುಕರಾಗಿದ್ದು, ಒಪ್ಪಂದಕ್ಕೆ ಸಹಿ ಹಾಕಿದ್ದಾರೆ ಎನ್ನಲಾಗ್ತಿದೆ. ಒಂದ್ವೇಳೆ ಹಾಗೆ ಆದಲ್ಲಿ ನಿಯಾ ಶರ್ಮಾ, ಅಡುಗೆ ರಿಯಾಲಿಟಿ ಶೋ ಲಾಫ್ಟರ್ ಚೆಫ್ಸ್ ನಿಂದ ಹೊರ ಬರಲಿದ್ದಾರೆ. ನಿಯಾ ಅಲ್ದೆ, ಅಂಜಲಿ ಆನಂದ್, ಡಾಲಿ ಚಾಯ್ವಾಲಾ, ಸಮೀರಾ ರೆಡ್ಡಿ, ಚಾಹತ್ ಪಾಂಡೆ ಸೇರಿದಂತೆ ಅನೇಕರ ಹೆಸರುಗಳು ಕೇಳಿ ಬಂದಿವೆ.