ಶುಕ್ರವಾರ ದೇವಸ್ಥಾನಕ್ಕೆ ಹೋಗುತ್ತೀನಿ,ಮನೆಯಲ್ಲಿ ಹುಡುಗನನ್ನು ಹುಡುಕುತ್ತಿದ್ದಾರೆ: ಭಾಗ್ಯಲಕ್ಷ್ಮಿ ಶ್ರೇಷ್ಠ ಮದುವೆ ಶೀಘ್ರದಲ್ಲಿ

ಕಾವ್ಯಾ ಗೌಡ ಮನೆಯಲ್ಲಿ ವರ ಹುಡುಕಾಟ. ಆನ್‌ಸ್ಕ್ರೀನ್ ವಿಲನ್ ಆಗಿದ್ರೂ ಆಫ್ ಸ್ಕ್ರೀನ್ ಸಿಕ್ಕಾಪಟ್ಟೆ ಸಾಫ್ಟ್‌ ನಮ್ಮ ಹುಡುಗಿ....
 

Colors kannada bhagyalakshmi kavya gowda visit temple every friday as family search for groom vcs

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮಿ ಧಾರಾವಾಹಿಯಲ್ಲಿ ಸ್ಟೈಲಿಷ್ ವಿಲನ್ ಆಗಿ ಮಿಂಚುತ್ತಿರುವ ಶೇಷ್ಠ ಉರ್ಫ್ ಕಾವ್ಯಾ ಗೌಡರಿಗೆ ಮನೆಯಲ್ಲಿ ಹುಡುಗನನ್ನು ಹುಡುಕುತ್ತಿದ್ದಾರೆ. ಆನ್‌ಸ್ಕ್ರೀನ್‌ ಮದುವೆಯಾಗಿರುವ ವ್ಯಕ್ತಿಯನ್ನು ಇಷ್ಟ ಪಡುತ್ತಿರುವ ಶ್ರೇಷ್ಠ ಆಫ್‌ಸ್ಕ್ರೀನ್‌ ಮಾತ್ರ ಒಳ್ಳೆ ಹುಡುಗಬೇಕು ಅಂತಿದ್ದಾರೆ. ಅಷ್ಟಕ್ಕೂ ಕಾವ್ಯಾ ಗೌಡ ಯಾವ ರೀತಿಯ ಹುಡುಗನನ್ನು ಇಷ್ಟ ಪಡುತ್ತಾರೆ?

ಮನೆಯಲ್ಲಿ ಹುಡುಗ ಹುಡುಕುತ್ತಿದ್ದಾರೆ ಆದರೆ ಸೆಟ್ ಆಗುವ ಹುಡುಗ ಸಿಗುತ್ತಿಲ್ಲ. ಮದುವೆ ಸಂಬಂಧ ಬಂದಾಗ ಕೆಲವರು ಇವಳು ಸೀರಿಯ್‌ನಲ್ಲಿ ನಟಿಸುತ್ತಾಳೆ ವಿಲನ್ ಪಾತ್ರ ಮಾಡುತ್ತಾಳೆ ಹೇಗೋ ಏನೋ ಅಂತ ಹೇಳಿದುಂಟು. ಹುಡುಗನಿಗೆ ದುಡ್ಡು ಇರಬೇಕು ನೋಡೋಕೆ ಸಖತ್ ಆಗಿರಬೇಕು ಅಂತ ಇರುತ್ತದೆ ಆದರೆ ನನಗೆ ಮಾತ್ರ ಹುಡುಗ ಅರ್ಥ ಮಾಡಿಕೊಳ್ಳುವವನಾಗಿರಬೇಕು ಹೊಂದಾಣಿಕೆ ಮಾಡಿಕೊಂಡು ಹೋಗಬೇಕು. ಒಂದು ಹುಡುಗ ಒಂದು ಹುಡುಗಿ ನೋಡೋಕೆ ಚೆನ್ನಾಗಿ ಕಾಣಿಸಿದರೆ ಮದುವೆ ಆಗೋಕೆ ಆಗೋದಿಲ್ಲ ಅವರಿಬ್ಬರ ಭಾವನೆಗಳು ಬೇರೆ ಇರುತ್ತದೆ. ಹೀಗಾಗಿ ನಮ್ಮನ್ನು ಅರ್ಥ ಮಾಡಿಕೊಂಡು ಚೆನ್ನಾಗಿ ನೋಡಿಕೊಳ್ಳುವವರನ್ನು ಮದುವೆ ಆದರೆ ಚೆನ್ನಾಗಿರುತ್ತೀವಿ' ಎಂದು ಖಾಸಗಿ ಸಂದರ್ಶನದಲ್ಲಿ ಕಾವ್ಯಾ ಮಾತನಾಡಿದ್ದಾರೆ.

'ಸಾಮಾನ್ಯ ಜನರು ಯಾರನ್ನೋ ಮದುವೆಯಾದರೆ ಸಮಸ್ಯೆ ಆಗುವುದಿಲ್ಲ ಆದರೆ ಕಲಾವಿದರು ಮದುವೆ ಆದರೆ ವಿಮರ್ಶೆ ಮಾಡುತ್ತಾರೆ. ಈ ರೀತಿ ಯಾಕೆ ಎಂದು ನನಗೆ ಅರ್ಥವಾಗುತ್ತಿಲ್ಲ.  ನಾನು ತುಂಬಾ ನಾಚಿಕೆ ಸ್ವಭಾವದ ಹುಡುಗಿ. ಪ್ರತಿ ಶುಕ್ರವಾರ ದೇವಸ್ಥಾನಕ್ಕೆ ಹೋಗುತ್ತೀನಿ ಅದರೆ ಯಾರೂ ನಂಬುವುದಿಲ್ಲ. ನನಗೆ ಸ್ವಲ್ಪವೂ ದೇಹ ಕಾಣಿಸುವ ಬಟ್ಟೆ ಹಾಕೋಕೆ ಅಥವಾ ಒಬ್ಬರಿಗೆ ಹಾಯ್ ಹೇಳುವುದಕ್ಕೆ ತುಂಬಾ ಯೋಚನೆ ಮಾಡುತ್ತೀನಿ' ಎಂದು ಕಾವ್ಯಾ ಹೇಳಿದ್ದಾರೆ.

'ನನ್ನ ತಂದೆ ತಾಯಿ ತುಂಬಾ ಬೋಲ್ಡ್‌ ಆಗಿ ಬೆಳೆಸಿದ್ದಾರೆ ಏನಾದರೂ ಅಯ್ತು ಅಂದ್ರೆ ಮನೆಯವರಿಗೆ ಹೇಗೆ ಹೇಳೋದು ಅಂತ ಭಯ ಪಡುತ್ತಾರೆ ಆದರೆ ನಾನು ನನ್ನ ಮನೆಯಲ್ಲಿ ಯಾವುದನ್ನು ಜಡ್ಜ್ ಮಾಡದೆ ಬೆಂಬಲ ಕೊಡ್ತಾರೆ. ಈ ಗುಣವೇ ನನ್ನನ್ನು ಮಾನಸಿಕವಾಗಿ ಬೋಲ್ಡ್‌ ಮಾಡಿರಬಹುದು. ಒಬ್ಬರಿಗೆ ನಾವು ಒಳ್ಳೆಯದನ್ನು ಮಾಡಿದರೆ ಮಾತ್ರ ನಮಗೆ ಒಳ್ಳೆಯದಾಗುವುದು ಎಂದು ನಾನು ನಂಬುತ್ತೀನಿ ಅಲ್ಲದೆ ಕರ್ಮ ಸಿದ್ಧಾಂತವನ್ನು ಒಪ್ಪಿಕೊಳ್ಳುತ್ತೀನಿ. ದೇವಸ್ಥಾನಕ್ಕೆ ಹೋಗಲು ಶುರು ಮಾಡಿದ ಮೇಲೆ ಜೀವನವನ್ನು ನೋಡುವ ರೀತಿ ಬದಲಾಗಿದೆ' ಎಂದಿದ್ದಾರೆ ಕಾವ್ಯಾ ಗೌಡ. 

Latest Videos
Follow Us:
Download App:
  • android
  • ios