ಖ್ಯಾತ ಆ್ಯಂಕರ್ ಅನುಶ್ರೀ ಇತ್ತೀಚೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ಮದುವೆಯಾದ ಬೆನ್ನಲ್ಲೇ ತಮ್ಮ 38ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಇದೀಗ ಅಭಿಮಾನಿಗಳು ಅವರಿಂದ ಸಿಹಿ ಸುದ್ದಿಯನ್ನು ನಿರೀಕ್ಷಿಸುತ್ತಿದ್ದಾರೆ.
ಆ್ಯಂಕರ್ ಅನುಶ್ರೀ (Anchor Anushree) ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟು ಕೆಲವೇ ದಿನಗಳಾಗಿವೆ. 37 ವರ್ಷದ ಅನುಶ್ರೀ ಅವರು ಕೊಡಗು ಮೂಲದ ರೋಷನ್ ಜೊತೆ ಕಳೆದ ಆಗಸ್ಟ್ 28ರಂದು ಹಣೆಮಣೆ ಏರಿದ್ದಾರೆ. ಅನುಶ್ರೀ ಮದುವೆ ಯಾವಾಗ ಯಾವಾಗ ಎಂದು ಎಲ್ಲರೂ ಪ್ರಶ್ನೆ ಮಾಡುತ್ತಿದ್ದರೂ ಈ ಬಗ್ಗೆ ಸಾಕಷ್ಟು ರಹಸ್ಯವಾಗಿಯೇ ಇಟ್ಟಿದ್ದ ನಟಿ, ಕೊನೆಗೂ ಎಲ್ಲರ ಬಾಯಿ ಮುಚ್ಚಿಸಿದ್ದಾರೆ. ಇಂದು ಅರ್ಥಾತ್ ಜನವರಿ 25 ಅನುಶ್ರೀ ಅವರಿಗೆ ಹುಟ್ಟುಹಬ್ಬದ ಸಂಭ್ರಮ. ಗೂಗಲ್ ದಾಖಲೆಯ ಪ್ರಕಾರ ಇವರು ಹುಟ್ಟಿರುವುದು 1988ರಂದು. ಇದನ್ನು ಪರಿಗಣನೆಗೆ ತೆಗೆದುಕೊಂಡರೆ, ಇವರಿಗೆ ಈಗ 38ನೇ ಹುಟ್ಟುಹಬ್ಬದ ಸಂಭ್ರಮ.
ಅಷ್ಟಕ್ಕೂ ಆ್ಯಂಕರ್ ಅನುಶ್ರೀ (Anchor Anushree) ಅವರಿಗೆ ಕಿರುತೆರೆಯಲ್ಲಿ ಭಾರಿ ಡಿಮಾಂಡ್ ಇರುವುದು ಗೊತ್ತೇ ಇದೆ. ಜೀ ಟಿವಿ, ಕಲರ್ಸ್ ಕನ್ನಡ ಸೇರಿದಂತೆ ಕೆಲವು ಚಾನೆಲ್ಗಳಲ್ಲಿ ಇವರು ಆ್ಯಂಕರಿಂಗ್ ಮಾಡಿದ್ದಾರೆ. ಯಾವ ರಿಯಾಲಿಟಿ ಷೋ ನೋಡಿದರೂ ಅದರಲ್ಲಿ ಅನುಶ್ರೀ ಅವರೇ ಇರುತ್ತಾರೆ. ಇಂಥ ರಿಯಾಲಿಟಿ ಷೋ ಎಂದರೆ ಸಾಕು, ಅದರ ಬಗ್ಗೆ ಗಂಟೆಗಟ್ಟಲೆ ನಿರರ್ಗಳವಾಗಿ ಯಾವುದೇ ಪೂರ್ವ ತಯಾರಿ ಇಲ್ಲದೇ ಮಾತನಾಡಬಲ್ಲೆ, ಇದಕ್ಕೇ ತಮಗೆ ಅಷ್ಟು ಡಿಮಾಂಡ್ ಇರುವುದು ಎಂದು ಕೂಡ ಅನುಶ್ರೀ ಅವರು ಹೇಳಿದ್ದಾರೆ. ಈ ಮೂಲಕ ಇವರಿಗೆ ಅಷ್ಟು ಬೇಡಿಕೆ ಯಾಕೆ ಎನ್ನುವುದು ಗೊತ್ತಾಗುತ್ತದೆ.
ವಿಶೇಷ ವಿಡಿಯೋ
ಇಂದು ಹುಟ್ಟುಹಬ್ಬದ ದಿನ ಜೀ ವಾಹಿನಿ ಅನುಶ್ರೀ ಅವರಿಗಾಗಿ ವಿಶೇಷ ವಿಡಿಯೋ ಒಂದನ್ನು ರಿಲೀಸ್ ಮಾಡಿದೆ. ಜೀ಼ ಕುಟುಂಬದ ಆ್ಯಂಕರಿಂಗ್ ಐಕಾನ್, ಕರುನಾಡಿನ ಮನೆಮಗಳು ಅನುಶ್ರೀ ಅವರಿಗೆ ಜನ್ಮದಿನದ ಶುಭಾಶಯಗಳು ಎನ್ನುವ ಮೂಲಕ ಅನುಶ್ರೀ ಅವರ ಐಕಾನಿಕ್ ಎನ್ನಿಸಿರುವ ಕೆಲವು ವಿಡಿಯೋಗಳನ್ನು ಅದರಲ್ಲಿ ಹಾಕಿದೆ. ಈ ವಿಡಿಯೋ ನೋಡಿದರೆ, ಅನುಶ್ರೀ ಅವರು ಇಷ್ಟು ಜನಪ್ರಿಯತೆ ಪಡೆದಿರುವುದು ಏಕೆ ಎನ್ನುವುದು ತಿಳಿಯುತ್ತದೆ. ಇದರಲ್ಲಿ ಅವರು ಹೇಗೆ ತಮಾಷೆಯಾಗಿ ಇಡೀ ವೇದಿಕೆಯನ್ನು ಹೇಗೆ ನಕ್ಕು ನಗಿಸುತ್ತಾರೆ ಎನ್ನುವುದನ್ನು ನೋಡಬಹುದಾಗಿದೆ.
ಮರುದಿನವೇ ಹಾಜರ್
ಅಷ್ಟಕ್ಕೂ, ಆ್ಯಂಕರ್ ಅನುಶ್ರೀ ಅವರು ಇದಾಗಲೇ ಆ್ಯಂಕರಿಂಗ್ ಮಾಡ್ತಿರೋ ರಿಯಾಲಿಟಿ ಷೋಗಳ ಗತಿಯೇನು ಎನ್ನುವ ಚಿಂತೆ ಅಭಿಮಾನಿಗಳಿಗೆ ಇದ್ದೇ ಇತ್ತು. ರಿಯಾಲಿಟಿ ಷೋಗಳಲ್ಲಿ ಇವರು ಮದುವೆಯ ಬಳಿಕ ಹನಿಮೂನ್, ಅದೂ ಇದೂ ಎಂದು ಕೆಲವು ದಿನಗಳ ಮಟ್ಟಿಗೆ ಬಿಡುವು ತೆಗೆದುಕೊಳ್ಳಬಹುದು ಎಂದು ಊಹಿಸಲಾಗಿತ್ತು. ಈ ಬಗ್ಗೆ ಮದುವೆಯ ದಿನವೇ ಕೆಲವರು ಈ ಪ್ರಶ್ನೆಯನ್ನು ಅನುಶ್ರೀ ಮುಂದೆ ಇಟ್ಟಿದ್ದರು. ಆಗ ಅವರು, ಶಾಕಿಂಗ್ ಉತ್ತರ ಕೊಟ್ಟಿದ್ದರು. ನಾಡಿದ್ದುಯಿಂದಲೇ ಮತ್ತೆ ಕೆಲಸ ಶುರು ಮಾಡುತ್ತೇನೆ ಎಂದಿದ್ದರು.
ಇದನ್ನು ಕೇಳಿ ಹಲವರು ಇಷ್ಟು ಬೇಗ ಯಾಕಮ್ಮಾ, ಮದುವೆಯಾದ ಮೇಲೆ ಕೆಲವು ದಿನ ಎಂಜಾಯ್ ಮಾಡಿ, ಕೆಲಸವೆಲ್ಲಾ ಇದದ್ದೇ ಎಂದಿದ್ದರೂ, ಕೆಲಸದ ಮೇಲೆ ಬದ್ಧತೆ ತೋರಿಸಿದ್ದ ಅನುಶ್ರೀ ತಮ್ಮ ಮಾತಿನಂತೆ ಕೂಡಲೇ ಮತ್ತೆ ಷೋನಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಇಷ್ಟು ದಿನ ಮದುವೆಯ ಗುಡ್ನ್ಯೂಸ್ ಕೇಳ್ತಿರೋರಿಗೆ ಈಗ ಅನುಶ್ರೀ ಅಮ್ಮನಾಗ್ತಿರೋದು ಯಾವಾಗ ಎನ್ನುವ ಚಿಂತೆ ಶುರುವಾಗಿದೆ. ಬೇಗ ಆ ಗುಡ್ನ್ಯೂಸ್ ಕೂಡ ಕೊಡಿ ಎನ್ನುತ್ತಿದ್ದಾರೆ.


