Asianet Suvarna News Asianet Suvarna News

ತಂದೆ ಆಸ್ಪತ್ರೆಯಲ್ಲಿ ಜೀವ ಬಿಟ್ಟರು, ತಾಯಿ ಮತ್ತೊಂದು ಮದ್ವೆಯಾಗಿ ಖುಷಿಯಾಗಿದ್ದಾರೆ; ನೋವು ಬಿಚ್ಚಿಟ್ಟ ವಿನಯ್!

ಫ್ಯಾಮಿಲಿ ರೌಂಡ್‌ನಲ್ಲಿ ಪತ್ನಿಯನ್ನು ನೋಡಿ ಖುಷಿ ಪಟ್ಟ ವಿನಯ್ ಪೋಷಕರನ್ನು ಯಾರೆ ನೆನಪು ಮಾಡಿಕೊಳ್ಳಲಿಲ್ಲ? ವಿನಯ್ ಕೊಟ್ಟ ಉತ್ತರವಿದು....

Bigg Boss 10 Kannada Vinay Gowda talks about father mother and family vcs
Author
First Published Feb 1, 2024, 11:12 AM IST

ಬಿಗ್ ಬಾಸ್ ಸೀಸನ್ 10ರ ಸ್ಪರ್ಧಿ ವಿನಯ್ ಗೌಡ ಸಾಕಷ್ಟ ಏಳುಬೀಳುಗಳನ್ನು ಕಂಡವರು. ಈಗ ಯಶಸ್ಸನ್ನು ಎಂಜಾಯ್ ಮಾಡುತ್ತಿರುವ ಹರಹರ ಮಹಾದೇವ್ ನಟ ಯಾಕೆ ಪತ್ಮಿಯನ್ನು ನೆನಪು ಮಾಡಿಕೊಳ್ಳುವಷ್ಟು ಪೋಷಕರನ್ನು ನೆನಪು ಮಾಡಿಕೊಳ್ಳುವುದಿಲ್ಲ? ಪೋಷಕರು ಎಲ್ಲಿದ್ದಾರೆ? ಏನಾಗಿದೆ ವೈಯಕ್ತಿಕ ಜೀವನದಲ್ಲಿ ಎಂದು ನೆಟ್ಟಿಗರು ಪ್ರಶ್ನೆ ಮಾಡಿದ್ದರು. ಹಲವು ವರ್ಷಗಳ ಹಿಂದೆ ವಿನಯ್ ಫೋಷಕರು ವಿಚ್ಛೇದನ ಪಡೆದುಕೊಂಡು ಆಗ ಎಲ್ಲರನ್ನು ಬಿಟ್ಟು ವಿನಯ್ ಮುಂಬೈಗೆ ಹೋಗಿ ವೃತ್ತಿ ಬದುಕು ಕಟ್ಟಿಕೊಳ್ಳುತ್ತಾರೆ. ಬಿಗ್ ಬಾಸ್‌ನಿಂದ ಹೊರ ಬಂದ ನಂತರ ಪ್ರಶ್ನೆ ಉತ್ತರ ಕೊಟ್ಟಿದ್ದಾರೆ. 

'ನನ್ನ ತಂದೆ ತಾಯಿ ವಿಚಾರದಲ್ಲಿ ನೋಡಿದ್ದೀನಿ ಮೂರನೇ ವ್ಯಕ್ತಿ ಬಂದು ಏನಾದರೂ ಹೇಳಿದರೆ ಅವರಿಬ್ಬರ ನಡುವೆ ಜಗಳ ಆಗುತ್ತಿತ್ತು. ನನ್ನ ಹೆಂಡತಿ ಮತ್ತು ನನ್ನ ನಡುವೆ ಮೂರನೇ ವ್ಯಕ್ತಿ ಬಂದು ಏನಾದರೂ ಹೇಳಿದರೆ ನಾವಿಬ್ಬರು ಅವರನ್ನು ದೂರ ಇಡುತ್ತೀವಿ ನಾವು ದೂರ ಆಗುವುದಿಲ್ಲ. ನಮ್ಮಿಬ್ಬರಲ್ಲಿ ಅಷ್ಟು ಅಂಡರ್‌ಸ್ಟಾಂಡಿಂಗ್ ಇದೆ. ನನ್ನ ತಂದೆ ತಾಯಿ ಬಗ್ಗೆ ಎಲ್ಲೂ ಮಾತನಾಡುವುದಿಲ್ಲ' ಎಂದು ಖಾಸಗಿ ಟಿವಿ ಸಂದರ್ಶನದಲ್ಲಿ ವಿಜಯ್ ಮಾತನಾಡಿದ್ದಾರೆ.

ಬಟ್ಟೆ ಬರ್ತಿಲ್ಲ ಅಂತ ನೋವಿತ್ತು; ವರ್ತೂರ್ ಚಪ್ಪಲಿ, ವಿನಯ್ ಬಟ್ಟೆ ಸಹಾಯ ಮೆಚ್ಚಿದ ತುಕಾಲಿ ಸಂತೋಷ್!

'ಮತ್ತೊಂದು ರಿಯಾಲಿಟಿ ಶೋನಲ್ಲಿ ನಾನು ಸ್ಪರ್ಧಿಸುವಾಗ ನನ್ನ ತಂದೆ ತೀರಿಕೊಂಡರು. ಮನೆಯಿಂದ ಹೊರ ಬಂದು 16 ವರ್ಷಗಳ ಕಾಲ ಅವರನ್ನು ನೋಡಿಲ್ಲ. ಕೊನೆ ದಿನಗಳಲ್ಲಿ ನನ್ನನ್ನು ತುಂಬಾ ನೆನಪಿಸಿಕೊಂಡಿದ್ದರಂತೆ. ತಂದೆ ಆರೋಗ್ಯ ಕೆಟ್ಟಾಗ ಅವರ ಜೊತೆಗಿದ್ದವರು ಆಸ್ಪತ್ರೆಗೂ ಸೇರಿಸಿಲ್ಲ ರಿಸೆಪ್ಶನ್‌ನಲ್ಲಿ ಬಿಟ್ಟು ಹೋಗಿದ್ದರು. ನನ್ನ ಹೆಂಡತಿ ಅಕ್ಕ ಅವರಿಗೆ ವಿಚಾರ ತಿಳಿದು ಆಸ್ಪತ್ರೆಗೆ ಹೋಗುವಷ್ಟರಲ್ಲಿ ಅಲ್ಲಿ ಅರ್ಧ ಜೀವ ಹೋಗಿಬಿಟ್ಟಿತ್ತು. ರಿಯಾಲಿಟಿ ಶೋ ಮುಗಿಸಿಕೊಂಡು ಬಂದು ಒಂದು ಸಾರಿ ಕೇಳಬೇಕಿತ್ತು ಮಾತನಾಡಬೇಕಿತ್ತು ಅಂದುಕೊಂಡೆ ಅಷ್ಟರಲ್ಲಿ ಅವರು ಇರಲಿಲ್ಲ. ಈ ವಿಚಾರದಲ್ಲಿ ನನಗೆ ಬೇಸರನೂ ಇದೆ ಕೋಪನೂ ಇದೆ' ಎಂದು ವಿನಯ್ ಗೌಡ ಹೇಳಿದ್ದಾರೆ.

ವಿನಯ್ ಮತ್ತು ನನ್ನ ಮನೆಯವರು ನರಕ ಅನುಭವಿಸಿದ್ದಾರೆ; ನೆಗೆಟಿವ್ ಕಾಮೆಂಟ್‌ಗೆ ನಮ್ರತಾ ಗೌಡ ಕಿಡಿ!

'ತಾಯಿ ಮತ್ತೊಂದು ಮದುವೆ ಮಾಡಿಕೊಂಡು ಖುಷಿಯಾಗಿದ್ದಾರೆ, ಅವರಿಗೂ ಮಕ್ಕಳಿದ್ದಾರೆ. ಅವರ ಫ್ಯಾಮಿಲಿಗೆ ತೊಂದರೆ ಕೊಡಲು ನನಗೆ ಇಷ್ಟವಿಲ್ಲ.ಎಲ್ಲೇ ಇದ್ರೂ ಚೆನ್ನಾಗಿರಲಿ, ನಾನು ಚೆನ್ನಾಗಿರಲಿ ಎಂದು ಅವರು ಭಾವಿಸುತ್ತಿರುತ್ತಾರೆ. ನನಗೆ ಅಪ್ಪ ಅಮ್ಮ ತಂದೆ ತಾಯಿ ಎಲ್ಲವೂ ನನ್ನ ಹೆಂಡತಿನೇ' ಎಂದಿದ್ದಾರೆ ವಿನಯ್. 

Follow Us:
Download App:
  • android
  • ios