ವಿನಯ್ ಮತ್ತು ನನ್ನ ಮನೆಯವರು ನರಕ ಅನುಭವಿಸಿದ್ದಾರೆ; ನೆಗೆಟಿವ್ ಕಾಮೆಂಟ್‌ಗೆ ನಮ್ರತಾ ಗೌಡ ಕಿಡಿ!
ಪದೇ ಪದೇ ಟ್ರೋಲ್‌ಗೆ ಗುರಿಯಾಗಿರುವ ವಿನಯ್ ಗೌಡ ಮತ್ತು ನಮ್ರತಾ ಗೌಡ. ಎಲಿಮಿನೇಟ್ ಆಗಿ ಹೊರ ಬರುತ್ತಿದ್ದಂತೆ ಟಾಂಗ್ ಕೊಟ್ಟ ನಾಗಿಣಿ.
ಬಿಗ್ ಬಾಸ್ ಸೀಸನ್ 10ರ ಟಾಪ್ 7ನೇ ಸ್ಥಾನ ಪಡೆದಿರುವ ನಮ್ರತಾ ಗೌಡ ಎಲಿಮಿನೇಟ್ ಆಗಿ ಹೊರ ಬಂದಿದ್ದಾರೆ. ಬಿಗ್ ಬಾಸ್ ಮನೆಗೆ ಕಾಲಿಟ್ಟ ಮೊದಲ ಸ್ಪರ್ಧಿ ನಮತ್ರಾ. ಮೊದಲ ದಿನದಿಂದಲೂ ವಿನಯ್ ಮತ್ತು ಸ್ನೇಹಿತ್ ಜೊತೆ ತುಂಬಾನೇ ಕ್ಲೋಸ್ ಆಗಿದ್ದರು. ಈ ಸ್ನೇಹವನ್ನು ತಪ್ಪಾಗಿ ಅರ್ಥ ಮಾಡಿಕೊಂಡು ಚಮಚ ಎಂದು ಟ್ರೋಲ್ ಮಾಡಿರುವವರಿಗೆ ನಮ್ರತಾ ಉತ್ತರ ಕೊಟ್ಟಿದ್ದಾರೆ.
'ವಿನಯ್ ಮತ್ತು ನನ್ನ ಬಾಂಡ್ ಬಗ್ಗೆ ಜನರು ಸಾವಿರ ಮಾತನಾಡಬಹುದು, ಏನ್ ಬೇಕಿದ್ದರೂ ಹೇಳಲಿ. ಅಣ್ಣ ಇಲ್ಲ ಅನ್ನೋ ಕೊರಗು ನನಗೆ ಕಾಡುತ್ತಿತ್ತು ಅಣ್ಣ ಇದ್ದಿದ್ದರೆ ಹೇಗೆ ನೋಡಿಕೊಳ್ಳುತ್ತಾನೆ ಅನ್ನೋ ಪ್ರಶ್ನೆ ಇತ್ತು. ನನ್ನ ಅಪ್ಪ ಅಮ್ಮ ನನ್ನನ್ನು ನೋಡಿಕೊಳ್ಳುವ ರೀತಿಯಲ್ಲಿ ವಿನಯ್ ಗೌಡ ನನ್ನನ್ನು ಬಿಗ್ ಬಾಸ್ ಮನೆಯಲ್ಲಿ ನೋಡಿಕೊಂಡಿದ್ದಾರೆ. ನಾನು ವಿನಯ್‌ಗೆ ಸಪೋರ್ಟ್ ಮಾಡಿದ್ದೀನಿ ಎಂದು ಹೇಳುತ್ತಾರೆ ಆದರೆ ನಿಜ ಹೇಳಬೇಕು ವಿನಯ್ ನನಗೆ ಸಪೋರ್ಟ್ ಮಾಡಿದ್ದಾರೆ. ನಾನು ಊಟ ಮಾಡದೇ ಇದ್ದಾಗ ಊಟ ಮಾಡಿಸಿದ್ದಾರೆ, ನಾನು ಬೇಸರದಲ್ಲಿ ಇದ್ದಾಗ ಅಡುಗೆ ಮಾಡಿ ಕೊಡುತ್ತಿದ್ದರು. ನನಗೆ ಡೆಸರ್ಟ್‌ಗಳು ತುಂಬಾನೇ ಇಷ್ಟ ಅಂತ ಹಣ್ಣುಗಳನ್ನು ಕಟ್ ಮಾಡಿ ಏನ್ ಏನೋ ಮಾಡುವರು, ಸುಮಾರು 2 ಗಂಟೆ ಏನ್ ಏನೋ ಟ್ರೈ ಮಾಡಿ ಕೊಡುತ್ತಿದ್ದರು. ಜೀವನದಲ್ಲಿ ಒಮ್ಮೆಯೂ ವಿನಯ್ ಅಡುಗೆ ಮಾಡಿಲ್ಲ ಅಂತ ಅವರ ಪತ್ನಿ ಹೇಳುತ್ತಿದ್ದರು, ನನಗೋಸ್ಕರ ಆಮ್ಲೇಟ್ ಮಾಡಿಕೊಡುತ್ತಿದ್ದರು' ಎಂದು ನಮ್ರತಾ ಗೌಡ ಕನ್ನಡ ಖಾಸಗಿ ಟಿವಿ ಸಂದರ್ಶನದಲ್ಲಿ ಮಾತನಾಡಿದ್ದಾರೆ.
'ನನಗೆ ಗೊತ್ತಿಲ್ಲದೆ ತುಂಬಾನೇ ಸಫೊರ್ಟ್ ಮಾಡಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಆಟಗೋಸ್ಕರ ನಾವು ಸ್ನೇಹಿತರು ಆಗಲಿಲ್ಲ ಅದು ತುಂಬಾನೇ ಆರ್‌ಗ್ಯಾನಿಕ್ ಆಗಿ ಆಗಿದ್ದು. ಜೀವನದ ಕೊನೆವರೆಗೂ ನಾನು ಅವರಿಗೆ ನಿಂತಿರುವೆ ನನಗೆ ಅವರ ಸಪೋರ್ಟ್ ಇದ್ದೇ ಇರುತ್ತದೆ. ಒಳಗಡೆ ನಾಡು ಆಡುತ್ತಿದ್ದ ಬಿಗ್ ಬಾಸ್‌ಗಿಂತ ಹೊರಗಡೆ ನೆಕ್ಸಟ್ ಅಂದ್ರೆ ನನ್ನ ಮನೆಯಲ್ಲಿ ಮತ್ತು ವಿನಯ್ ಮನೆಯಲ್ಲಿ ಲೆವೆಲ್‌ನಲ್ಲಿ ಬಿಗ್ ಬಾಸ್ ನಡೆಯುತ್ತಿತ್ತು ಅಂತ ಎಲಿಮಿನೇಟ್ ಆಗಿ ಬಂದ ಎರಡು ದಿನಗಳಲ್ಲಿ ತಿಳಿಯಿತ್ತು. ಇಬ್ರು ಮನೆಯವರು they have gone through hell ಎಂದು ಗೊತ್ತಾಗಿದೆ. ತುಂಬಾ ಕಷ್ಟ ಪಟ್ಟಿದ್ದಾರೆ. ಒಳಗೆ ಆಟ ಆಡುವಾಗ ಏನೂ ಗೊತ್ತಿರಲಿಲ್ಲ ಅವರಿಗೆ ಎಷ್ಟು ಕಷ್ಟ ಆಗಿದೆ. ನಾನು ವಿನಯ್ ಹೇಗೆ ಬಾಂಡ್ ಅಗಿದ್ದೀನಿ ಅದೇ ರೀತಿ ನಮ್ಮ ಫ್ಯಾಮಿಲಿ ಬಾಂಡ್ ಆಗಿದೆ. ನನ್ನ ತಂದೆ ತಾಯಿ ನೋವಿನಲ್ಲಿ ಇದ್ದಾಗ ವಿನಯ್ ಪತ್ನಿ ಕರೆ ಮಾಡಿದ್ದಾರೆ, ವಿನಯ್ ಪತ್ನಿ ಬೇಸರದಲ್ಲಿ ಇದ್ದಾಗ ನನ್ನ ತಾಯಿ ಕರೆ ಮಾಡಿದ್ದಾರೆ. ಇದೊಂದು ಬ್ಯೂಟಿಫುಲ್ ಬಾಂಡ್ ಕ್ರಿಯೇಟ್ ಆಗಿ ಖುಷಿಯಾಗಿದೆ' ಎಂದು ನಮ್ರತಾ ಹೇಳಿದ್ದಾರೆ.
ನಾನು ಕಾಮೆಂಟ್ ಮಾಡಿದ್ರೆ ಉಚ್ಚೆ ಹೊಯ್ಕಂಬಿಡಬೇಕು: ಡ್ರೋನ್ ಪ್ರತಾಪ್ ಪರ ನಿಂತವರಿಗೆ ರಕ್ಷಕ್ ಬುಲೆಟ್ ಟಾಂಗ್
'ಎಷ್ಟೋ ಪದಗಳನ್ನು ಬಳಸಿರುವುದು ತುಂಬಾ ಬೇಸರ ಆಗಿದೆ. ಶೋಕೇಸ್ ಗೊಂಬೆ, ಚಮಚಗಿರಿ ಅಂತ ಹೇಳಿರುವುದು ಬೇಸರ ಆಗಿದೆ. ನಾನು ಬೇಗ ರೆಡಿಯಾಗಿ ಪೂಜೆ ಮಾಡುತ್ತಿದ್ದೆ ಅದನ್ನು ಕೂಡ ಮತ್ತೊಂದು ರೀತಿಯಲ್ಲಿ ತಿರುವು ಹಾಕಿದ್ದಾರೆ. ಇನ್ನಿತ್ತರ ಸ್ಪರ್ಧಿಗಳು ಹೇಳಿರುವ ಸಾವಿರ ಮಾತುಗಳನ್ನು ಹೇಳಿದರೆ ಬೇಸರ ಆಗುತ್ತದೆ ಒಂದು ಎಪಿಸೋಡ್ ಬೇಕಾಗುತ್ತದೆ. ಯಾರಗೇ ಆಗಲಿ ಒಂದು ಹೆಣ್ಣು ಮಗಳಿಗೆ ಒಂದು ಫ್ಯಾಮಿಲಿ ಇರುತ್ತದೆ ನಿಮ್ಮ ಮನೆ ಮಗಳ ಬಗ್ಗೆ ಹೀಗೆ ಕಾಮೆಂಟ್ ಮಾಡುತ್ತೀರಾ? ಆಕೆ ಎಷ್ಟು ಕಷ್ಟ ಪಟ್ಟು ಆ ಶೋಗೆ ಬಂದಿದ್ದಾಳೆ , ಅವರ ಅಪ್ಪ ಅಮ್ಮ ಎಷ್ಟು ಬೇಸರ ಮಾಡಿಕೊಂಡಿದ್ದಾರೆ ಅನ್ನೋದು ನಿಮಗೆ ಗೊತ್ತಾ? ನನಗೆ ಎಷ್ಟೇ ಬೇಸರ ಆದರೂ ಪರ್ವಾಗಿಲ್ಲ ಆದರೆ ನನ್ನ ಫ್ಯಾಮಿಲಿ ಈ ವಿಚಾರ ರಿವೀಲ್ ಮಾಡುವುದಿಲ್ಲ ನಾನು ಧ್ವನ ಎತ್ತುತ್ತೀನಿ' ಎಂದಿದ್ದಾರೆ ನಮ್ರತಾ.