ನಟಿ ಸುಕೃತಾ ನಾಗ್ ಅವರ ಮಾತು ಕೇಳಿ, ʼಭರ್ಜರಿ ಬ್ಯಾಚುಲರ್ಸ್ʼ ಶೋನಲ್ಲಿ ವಿ ರವಿಚಂದ್ರನ್ ಅವರು ತಮ್ಮ ಜಡ್ಜ್ ಸೀಟ್ ಬಿಟ್ಟುಕೊಡಲು ರೆಡಿಯಾಗಿದ್ದಾರೆ. ಹಾಗಾದರೆ ಸುಕೃತಾ ಏನು ಹೇಳಿದ್ರು?
ಬೇಡ ಬೇಡ ಅಂದ್ರೂ ಕೂಡ ಗಾಯಕ ದರ್ಶನ್ ನಾರಾಯಣ್ ಸುತ್ತ ಹುಡುಗಿಯರು ಸುತ್ತುತ್ತಿರುತ್ತಾರೆ. ಯಾಕೆ ಇವರು ʼಭರ್ಜರಿ ಬ್ಯಾಚುಲರ್ಸ್ʼ ಶೋಗೆ ಬಂದ್ರು ಎನ್ನುವ ಪ್ರಶ್ನೆ ಎದ್ದಿದೆ. ಇದಕ್ಕೆ ಸುಕೃತಾ ನಾಗ್ ಅವರು ಉತ್ತರ ಕೊಟ್ಟಿದ್ದರು. ಸುಕೃತಾ ಮಾತು ಕೇಳಿ ರವಿಚಂದ್ರನ್ ಅವರೇ ಹೌಹಾರಿದ್ದಾರೆ.
ದರ್ಶನ್‌ಗೆ ಯಾಕೆ ಗರ್ಲ್‌ಫ್ರೆಂಡ್ ಇಲ್ಲ?
“ಸಕ್ಕರೆಗೆ ಇರುವೆ ಮುತ್ತಿಕೊಳ್ಳೋ ಹಾಗೆ ನನ್ನ ಸುತ್ತ ಯಾವಾಗಲೂ ಹುಡುಗಿಯರು ತುಂಬಿಕೊಳ್ತಾರೆ. ಅಷ್ಟು ಹುಡುಗಿಯರು ಫ್ರೆಂಡ್ಸ್ ಇದ್ದರೂ ಕೂಡ, ಒಬ್ಬರೂ ಗರ್ಲ್‌ಫ್ರೆಂಡ್ ಇಲ್ಲ. ನಾನು ಬಾಯ್ ಬೆಸ್ಟಿ” ಎಂದು ದರ್ಶನ್ ನಾರಾಯಣ್ ಹೇಳಿದ್ದಾರೆ.
ರಶ್ಮಿಕಾ ಮಂದಣ್ಣ ಚಿತ್ರರಂಗಕ್ಕೆ ಬರೋ ಮುನ್ನವೇ ಆ ರೀತಿ ಹೇಳಿದ್ದ ತಂದೆ ಮದನ್ ಮಂದಣ್ಣ, ನೀವು ಒಪ್ತೀರಾ?
ಬಾಯ್ ಬೆಸ್ಟಿ ಎಂದರೇನು?
ನಿರಂಜನ್ ದೇಶಪಾಂಡೆ ಅವರು “ಬಾಯ್ ಬೆಸ್ಟಿ” ಎಂದರೇನು ಎಂದು ಪ್ರಶ್ನೆ ಮಾಡಿದ್ದಾರೆ. ಆಗ ಸುಕೃತಾ ನಾಗ್ ಅವರು “ಹುಡುಗಿಯರು ಫ್ರೆಂಡ್ಸ್ ಆಗಿದ್ದರೂ ಕೂಡ ರೊಮ್ಯಾಂಟಿಕ್ ರಿಲೇಶನ್‌ಶಿಪ್ ಇರೋದಿಲ್ಲ” ಎಂದು ಹೇಳಿದ್ದಾರೆ. ಆ ಮಾತು ಕೇಳಿ ರವಿಚಂದ್ರನ್ ಅವರು “ಸಕೃತಾ, ಐದು ನಿಮಿಷ ಇಲ್ಲಿ ಕೂತ್ಕೋ ಬಾ” ಎಂದು ಹೇಳಿದ್ದಾರೆ. ಈ ಮೂಲಕ ರವಿಚಂದ್ರನ್ ಅವರು ಜಡ್ಜ್ ಸೀಟ್ ಬಿಟ್ಟುಕೊಡ್ತೀನಿ ಎಂದು ಹೇಳಿದ್ದಾರೆ. ರವಿಚಂದ್ರನ್ ಮಾತಿಗೆ ಸುಕೃತಾ ನಕ್ಕಿದ್ದಾರೆ.
ಹುಡುಗಿಯರನ್ನು ಬೀಳಿಸಿಕೊಳ್ಳೋಕೆ ಕೆಲ ಹುಡುಗರಿಗೆ ಟಿಪ್ಸ್ ಬೇಕಿದೆ. ಈ ಟಿಪ್ಸ್ ನೋಡಲು ʼಭರ್ಜರಿ ಬ್ಯಾಚುಲರ್ಸ್ʼ ಶೋ ಆಯೋಜಿಸಲಾಗಿದೆ. ಒಂದಷ್ಟು ನಟಿಯರು, ಗಾಯಕರು, ಕಲಾವಿದರು ಈ ಶೋನಲ್ಲಿ ಭಾಗವಹಿಸಿದ್ದಾರೆ. ನಿರಂಜನ್ ದೇಶಪಾಂಡೆ ಈ ಶೋ ನಿರೂಪಕರು. ಇನ್ನು ರವಿಚಂದ್ರನ್, ರಚಿತಾ ರಾಮ್ ಅವರು ಜಡ್ಜ್ ಆಗಿದ್ದಾರೆ.
ಫ್ಯಾಮಿಲಿ ಸಿನಿಮಾ ಮಾಡಿ ಮನೆ ಮಗ ಆಗ್ಬೇಕು: ನಟ ಮಿಲಿಂದ್ ಗೌತಮ್
ಸ್ಪರ್ಧಿಗಳು ಯಾರು? ಯಾರು?
ದರ್ಶನ್ ನಾರಾಯಣ್, ಹುಲಿ ಕಾರ್ತಿಕ್, ಸೂರ್ಯ, ಪ್ರವೀಣ್ ಜೈನ್, ಉಲ್ಲಾಸ್, ಪ್ರೇಮ್ ತಪ, ರಕ್ಷಕ್ ಬುಲೆಟ್, ಡ್ರೋನ್ ಪ್ರತಾಪ್, ಭುವನೇಶ್, ಸುನೀಲ್ ಅವರು ಸ್ಪರ್ಧಿಗಳು.
ಇನ್ನು ಹುಡುಗಿಯರ ಲಿಸ್ಟ್‌ನಲ್ಲಿ ಪವಿ ಪೂವಪ್ಪ, ಸುಕೃತಾ ನಾಗ್, ಗಗನಾ, ವಿಜಯಲಕ್ಷ್ಮೀ ಮುಂತಾದವರು ಕೂಡ ಸ್ಪರ್ಧಿಗಳಾಗಿದ್ದಾರೆ.
ಈ ಹಿಂದೆ ʼಭರ್ಜರಿ ಬ್ಯಾಚುಲರ್ಸ್ʼ ಶೋ ಮೊದಲ ಸೀಸನ್‌ನ್ನು ಅಕುಲ್ ಬಾಲಾಜಿ ಅವರು ನಿರೂಪಣೆ ಮಾಡಿದ್ದರು. ಈ ಸೀಸನ್‌ಗೆ ನಿರಂಜನ್ ದೇಶಪಾಂಡೆ ನಿರೂಪಕರು. ಈ ಸೀಸನ್‌ನಲ್ಲಿ ಏನು ವಿಶೇಷ ಇರಲಿದೆ ಎಂದು ಕಾದು ನೋಡಬೇಕಿದೆ.
ಒಂದೇ ಮಾತಲ್ಲಿ ಹೇಳೋದಾದರೆ... ರವಿಚಂದ್ರನ್ ಹೊಸ ಸಿನಿಮಾದ ಹಾಡಿಗೆ ದನಿಯಾದ ಶ್ರೇಯಾ ಘೋಷಾಲ್!
ಈ ಶೋನಲ್ಲಿ ಹೊಸ ಹೊಸ ಸ್ಕಿಟ್‌ಗಳು ಇರಲಿವೆಯಂತೆ. ಅಷ್ಟೇ ಅಲ್ಲದೆ ವಿವಿಧ ರೀತಿಯ ಟಾಸ್ಕ್ ಇರಲಿವೆ, ಗೇಮ್‌ಗಳು ಇರಲಿವೆ. ಒಟ್ಟಿನಲ್ಲಿ ಈ ಶೋ ಸಿಕ್ಕಾಪಟ್ಟೆ ಕುತೂಹಲ ಮೂಡಿಸಲಿದೆ. ರವಿಚಂದ್ರನ್ ಅವರು ʼಪ್ರೇಮಲೋಕʼದ ಪಾಠ ಮಾಡ್ತಾರಾ ಅಂತ ಕಾದು ನೋಡಬೇಕಿದೆ. ಒಂದು ಸಂಬಂಧ ಹೇಗೆ ನಿಭಾಯಿಸಬೇಕು? ಒಂದು ಸಂಬಂಧದಲ್ಲಿ ಏನು ಇರಬೇಕು? ಮನಸ್ಸು ಗೆಲ್ಲೋದು ಹೇಗೆ ಎನ್ನುವ ವಿಷಯಗಳು ಇಲ್ಲಿವೆ.
