- Home
- Entertainment
- Sandalwood
- ಒಂದೇ ಮಾತಲ್ಲಿ ಹೇಳೋದಾದರೆ... ರವಿಚಂದ್ರನ್ ಹೊಸ ಸಿನಿಮಾದ ಹಾಡಿಗೆ ದನಿಯಾದ ಶ್ರೇಯಾ ಘೋಷಾಲ್!
ಒಂದೇ ಮಾತಲ್ಲಿ ಹೇಳೋದಾದರೆ... ರವಿಚಂದ್ರನ್ ಹೊಸ ಸಿನಿಮಾದ ಹಾಡಿಗೆ ದನಿಯಾದ ಶ್ರೇಯಾ ಘೋಷಾಲ್!
ಇತ್ತೀಚೆಗೆ ಶ್ರೇಯಾ ಘೋಷಾಲ್ ಕನ್ನಡ ಸಿನಿಮಾ ಹಾಡು ಹಾಡುತ್ತಿಲ್ಲ ಎಂಬ ಪುಕಾರು ಎದ್ದಿತ್ತು. ಆದರೆ ಕ್ರೇಜಿಸ್ಟಾರ್ ರವಿಚಂದ್ರನ್ ನಟನೆಯ ಹೊಸ ಚಿತ್ರಕ್ಕೆ ಹಾಡಿದ್ದಾರೆ.

ಕ್ರೇಜಿಸ್ಟಾರ್ ರವಿಚಂದ್ರನ್ ನಟನೆಯ ಹೊಸ ಚಿತ್ರಕ್ಕೆ ಖ್ಯಾತ ಗಾಯಕಿ ಶ್ರೇಯಾ ಘೋಷಾಲ್ ಹಾಡಿದ್ದಾರೆ. ಇತ್ತೀಚೆಗೆ ಶ್ರೇಯಾ ಘೋಷಾಲ್ ಕನ್ನಡ ಸಿನಿಮಾ ಹಾಡು ಹಾಡುತ್ತಿಲ್ಲ ಎಂಬ ಪುಕಾರು ಎದ್ದಿತ್ತು. ಅದಕ್ಕೆ ಉತ್ತರವಾಗಿ ಚಿತ್ರತಂಡವೇ ಈ ವಿಚಾರವನ್ನು ತಿಳಿಸಿದೆ.
‘ಒಂದೇ ಮಾತಲ್ಲಿ ಹೇಳೋದಾದರೆ’ ಎಂಬ ಈ ಹಾಡಿಗೆ ಪಳನಿ ಡಿ. ಸೇನಾಪತಿ ಸಂಗೀತ ನೀಡಿದ್ದು, ಕವಿರಾಜ್ ಗೀತರಚನೆ ಮಾಡಿದ್ದಾರೆ. ಎಸ್. ಸುಪ್ರೀತ್ ನಿರ್ದೇಶನದ ಈ ಚಿತ್ರವನ್ನು ಹೆಚ್.ಎಸ್. ನಾಗಶ್ರೀ ನಿರ್ಮಾಣ ಮಾಡಿದ್ದಾರೆ.
ರವಿಚಂದ್ರನ್ ಪ್ರಧಾನ ಪಾತ್ರದಲ್ಲಿ ನಟಿಸಿದ್ದು, ಈ ಸಿನಿಮಾ ಪ್ರೇಮಕತೆಯ ಜೊತೆ ತಂದೆ ಮಗಳ ಭಾವನಾತ್ಮಕ ಕತೆಯನ್ನೂ ಒಳಗೊಂಡಿದೆ. ಚಿತ್ರವು ಈಗಾಗಲೇ ಕಾಶ್ಮೀರ, ರಾಜಸ್ಥಾನ, ಅಂಡಮಾನ್ ದ್ವೀಪಗಳು, ಮಂಗಳೂರು, ಚಿಕ್ಕಮಗಳೂರು, ಮೈಸೂರು ಮತ್ತು ಬೆಂಗಳೂರು ಸೇರಿದಂತೆ ವಿವಿಧ ಸ್ಥಳಗಳಲ್ಲಿ 70 ದಿನಗಳ ಚಿತ್ರೀಕರಣವನ್ನು ಪೂರ್ಣಗೊಳಿಸಿದೆ.
ಚಿತ್ರದ ಅಂತಿಮ ಭಾಗಗಳನ್ನು ಇನ್ನೂ 15 ದಿನಗಳ ಕಾಲ ವಿದೇಶದಲ್ಲಿ ಚಿತ್ರೀಕರಿಸಲು ಚಿತ್ರತಂಡ ಈಗ ಸಿದ್ಧತೆ ನಡೆಸಿದ್ದು, ಚಿತ್ರದ ಆಕರ್ಷಣೆಯನ್ನು ಮತ್ತಷ್ಟು ಹೆಚ್ಚಿಸಿದೆ.
ಚಿತ್ರಕ್ಕೆ ಕೆಎಸ್ ಚಂದ್ರಶೇಖರ್ ಅವರ ಛಾಯಾಗ್ರಹಣವಿದೆ. ಸೋನು ನಿಗಮ್, ಕುನಾಲ್ ಗಾಂಜಾವಾಲಾ, ವಿಜಯ್ ಪ್ರಕಾಶ್, ರಾಜೇಶ್ ಕೃಷ್ಣನ್ ಮತ್ತು ಪಾಲಕ್ ಮುಚ್ಚಲ್ ಅವರಂತಹ ಇತರ ಪ್ರಸಿದ್ಧ ಗಾಯಕರು ಚಿತ್ರದ ಹಾಡುಗಳಿಗೆ ಧ್ವನಿ ನೀಡಿದ್ದಾರೆ.
ಚಿತ್ರದ ತಾರಾಗಣದಲ್ಲಿ ಹಿರಿಯ ನಟರಾದ ಶ್ರೀನಿವಾಸ ಮೂರ್ತಿ, ವಿಜಯ್ ಸೂರ್ಯ ಮತ್ತು ಶಂಕರ್ ಅಶ್ವತ್ಥ್ ಸೇರಿದಂತೆ ಇತರರು ನಟಿಸಿದ್ದಾರೆ.