ಚಿತ್ರರಂಗಕ್ಕೆ ಕಾಲಿಡುವ ಮುನ್ನವೇ ಕೊಡಗಿನ ಕುವರಿ ರಶ್ಮಿಕಾ ಮಂದಣ್ಣಗೆ ಅವರ ತಂದೆ ಮದನ್‌ ಮಂದಣ್ಣ ಒಂದು ಮಾತು ಹೇಳಿದ್ದರಂತೆ. ಅದೇನು? ಆ ಮಾತು ನೀವು ಒಪ್ತೀರಾ? 

ಭಾರತೀಯ ಚಿತ್ರರಂಗದಲ್ಲಿ ಸ್ಟಾರ್‌ ನಟಿಯಾಗಿ ಮೆರೆಯುತ್ತಿರುವ ರಶ್ಮಿಕಾ ಮಂದಣ್ಣಗೆ ನಟಿ ಸೌಂದರ್ಯ ಬಯೋಪಿಕ್‌ನಲ್ಲಿ ನಟಿಸುವ ಆಸೆ. ಈ ವಿಷಯವನ್ನು ಕೆಲ ವರ್ಷಗಳ ಹಿಂದೆಯೇ ಅವರು ಹಂಚಿಕೊಂಡಿದ್ದರು. ಶ್ರೀದೇವಿ ಹಾಗೂ ಸೌಂದರ್ಯ ಅವರ ಬಯೋಪಿಕ್‌ನಲ್ಲಿ ನಟಿಸುವ ಅವಕಾಶ ಸಿಕ್ಕರೆ ನನಗೆ ಸಿಕ್ಕಾಪಟ್ಟೆ ಖುಷಿ ಅಂತ ಕೊಡಗಿನ ಬೆಡಗಿ ರಶ್ಮಿಕಾ ಅಂದೇ ಹೇಳಿದ್ದರು. ಈಗ ಇವರ ತಂದೆ ಕೂಡ ರಶ್ಮಿಕಾಗೆ ಈ ಬಗ್ಗೆ ಒಂದು ಮಾತು ಹೇಳಿದ್ದಾರಂತೆ. 

ಈ ಮಾತು ನೀವು ಒಪ್ತೀರಾ? 
ರಶ್ಮಿಕಾ ಮಂದಣ್ಣ ಅವರು ಚಿತ್ರರಂಗಕ್ಕೆ ಎಂಟ್ರಿ ಕೊಡುವ ಮುನ್ನವೇ ಅವರ ತಂದೆ ಮದನ್‌ ಮಂದಣ್ಣ ಅವರು “ನೀನು ನೋಡಲು ನಟಿ ಸೌಂದರ್ಯ ಥರ ಕಾಣಸ್ತೀಯಾ” ಅಂತ ಹೇಳಿದ್ದರಂತೆ. ಈ ಮಾತನ್ನು ನೀವು ಒಪ್ತೀರಾ? ನಿಮಗೆ ಏನು ಅನಿಸತ್ತೆ?

ರಶ್ಮಿಕಾ ಮಂದಣ್ಣ 8 ಕೋಟಿ ರೂ. ಮೌಲ್ಯದ ಬೆಂಗಳೂರು ಮನೆ ಟೂರ್‌, ಆಸ್ತಿ ಎಷ್ಟಿದೆ?

ಇತಿಹಾಸ ಸೃಷ್ಟಿಸಲು ಮುನ್ನುಗ್ಗುತ್ತಿರುವ ಛಾವಾ
ಸರಿ, ಈ ವಿಷಯ ಒಂದು ಕಡೆಯಾದ್ರೆ ರಶ್ಮಿಕಾ ಮಂದಣ್ಣ ಸಿನಿಮಾಗಳಲ್ಲಿ ಬ್ಯುಸಿಯಾಗುತ್ತಿದ್ದಾರೆ. ಈಗಾಗಲೇ ವಿಕ್ಕಿ ಕೌಶಲ್‌ ಜೊತೆಗೆ ʼಛಾವಾʼ ಸಿನಿಮಾದಲ್ಲಿ ರಶ್ಮಿಕಾ ನಟಿಸಿದ್ದಾಯ್ತು, ಈ ಚಿತ್ರ ರಿಲೀಸ್‌ ಆದ ಒಂದು ವಾರಕ್ಕೆ ದೊಡ್ಡ ಹಿಟ್‌ ಕೂಡ ಆಯ್ತು. ಈಗಾಗಲೇ ಎರಡು ನೂರು ಕೋಟಿ ರೂಪಾಯಿ ಬಾಚಿರುವ ʼಛಾವಾʼ ಇನ್ನೊಂದಿಷ್ಟು ಇತಿಹಾಸ ರೆಡಿ ಮಾಡಲು ಮುನ್ನುಗ್ಗುತ್ತಿದೆ.

ಗಜಕೇಸರಿ ಯೋಗ
ಕನ್ನಡದಲ್ಲಿ ಹಿಟ್‌ ಸಿನಿಮಾಗಳಲ್ಲಿ ನಟಿಸಿ, ತೆಲುಗಿನಲ್ಲಿಯೂ ಒಂದಷ್ಟು ಹಿಟ್‌ ಕೊಟ್ಟು, ತಮಿಳು, ಮಲಯಾಳಂ ಚಿತ್ರರಂಗಕ್ಕೂ ಎಂಟ್ರಿ ಕೊಟ್ಟು ಈಗ ಬಾಲಿವುಡ್‌ನಲ್ಲಿ ರಶ್ಮಿಕಾ ಭದ್ರವಾಗಿ ನೆಲೆಯೂರಲು ರೆಡಿಯಾಗಿದ್ದಾರೆ. ಅಮಿತಾಭ್‌ ಬಚ್ಚನ್‌ ಜೊತೆಗೆ ʼಗುಡ್‌ಬೈʼ, ರಣಬೀರ್‌ ಕಪೂರ್‌ ಜೊತೆಗೆ ʼಆನಿಮಲ್ʼ, ವಿಕ್ಕಿ ಕೌಶಲ್‌ ಜೊತೆಗೆ ʼಮಿಷನ್‌ ಮಜ್ನುʼ ಸಿನಿಮಾಗಳಲ್ಲಿ ನಟಿಸಿದ್ದಾರೆ. ಬಾಲಿವುಡ್‌ಗೂ ಕೂಡ ರಶ್ಮಿಕಾ ಮಂದಣ್ಣ ಅವರು ಅದೃಷ್ಟ ಆಗಿದ್ದಾರೆ. 2016ರಲ್ಲಿ ʼಕಿರಿಕ್‌ ಪಾರ್ಟಿʼ ಸಿನಿಮಾ ರಿಲೀಸ್‌ ಆದ್ಮೇಲೆ ರಶ್ಮಿಕಾ ಮಂದಣ್ಣಗೆ ಗಜಕೇಸರಿ ಯೋಗ ಬಂತು ಎಂದು ಕಾಣುತ್ತದೆ.

ಚತುರ್ಭಾಷಾ ನಟಿ
ಕಳೆದ ಎಂಟು ವರ್ಷಗಳಲ್ಲಿ ರಶ್ಮಿಕಾ ಮಂದಣ್ಣ ಅವರು ನಾಲ್ಕು ಭಾಷೆಗಳಲ್ಲಿ, ಒಂದಾದ ಮೇಲೆ ಒಂದರಂತೆ ಸ್ಟಾರ್‌ ನಟರ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡರು, ಸಂಭಾವನೆ ಜಾಸ್ತಿ ಮಾಡಿಕೊಂಡರು. ಇನ್ನು ನಟನೆಯಲ್ಲೂ ಕೂಡ ಒಂದು ಚಿತ್ರದಿಂದ ಇನ್ನೊಂದು ಚಿತ್ರಕ್ಕೆ ಮಾಗುತ್ತಿದ್ದಾರೆ. 

Chhaava Movie 200 ಕೋಟಿ ರೂ ಕಲೆಕ್ಷನ್‌; ರಶ್ಮಿಕಾ ಮಂದಣ್ಣ ಸಂಭಾವನೆ ಎಷ್ಟು?

ಕಸರತ್ತು
ಇಷ್ಟು ಭಾಷೆಗಳಲ್ಲಿ ನಟಿಸಬೇಕು ಎಂದಾಗ ಒಮ್ಮೊಮ್ಮೆ ಏಕಕಾಲಕ್ಕೆ ಎರಡು-ಮೂರು ಸಿನಿಮಾಗಳಲ್ಲಿ ನಟಿಸಬೇಕಾಗುವುದು. ಹೀಗಾಗಿ ಅವರು ಹೈದರಾಬಾದ್‌ನಿಂದ ಮುಂಬೈ ಎಂದು ಟ್ರಾವೆಲ್‌ ಮಾಡುತ್ತಿರುತ್ತಾರೆ. ಇದರ ಮಧ್ಯೆ ನಟಿಯಾಗಿ ಸೌಂದರ್ಯವನ್ನು ಕೂಡ ಕಾಪಾಡಿಕೊಳ್ಳಬೇಕು. ಮಧ್ಯರಾತ್ರಿಯಾದರೂ ಕೂಡ ಅವರು ಜಿಮ್‌ನಲ್ಲಿ ವರ್ಕೌಟ್ ಮಾಡುತ್ತಾರಂತೆ. ಒಟ್ಟಿನಲ್ಲಿ ರಶ್ಮಿಕಾ ಮಂದಣ್ಣ ಸಿಕ್ಕಾಪಟ್ಟೆ ಕಸರತ್ತು ಮಾಡುತ್ತಿದ್ದಾರೆ ಬಿಡಿ.

8 ವರ್ಷ, 24 ಸ್ಟಾರ್ ಸಿನಿಮಾ; Rashmika Mandanna ಹೇಳೋ ಆ ಧಾರ್ಮಿಕ ಮಂತ್ರದಿಂದಲೇ ಇಷ್ಟು ಯಶಸ್ಸು ಸಿಕ್ತಾ?

ಮದುವೆ ಯಾವಾಗ?
ರಶ್ಮಿಕಾ ಮಂದಣ್ಣ ಹಾಗೂ ವಿಜಯ್‌ ದೇವರಕೊಂಡ ನಡುವೆ ಲವ್‌ ಇದೆ ಎಂಬ ಗಾಸಿಪ್‌ ಇದೆ. ಈ ಬಗ್ಗೆ ಈ ಜೋಡಿ ಇನ್ನೂ ಅಧಿಕೃತವಾಗಿ ಹೇಳಿಲ್ಲ. “ನಾವಿಬ್ಬರೂ ಸ್ನೇಹಿತರು” ಎಂದು ಈ ಜೋಡಿ ಹೇಳಿಕೊಳ್ಳುತ್ತಲೇ ಇದೆ. ಇದರ ನಡುವೆ ʼಪ್ರೇಮಿಗಳ ದಿನʼದಂದು ರಶ್ಮಿಕಾ ಮಂದಣ್ಣಗೆ ಈ ಬಾರಿ ಗುಲಾಬಿ ಹೂಗಳ ಗುಚ್ಛ ಕೂಡ ಸಿಕ್ಕಿದೆ. ವಿಜಯ್‌ ಅವರೇ ಕಳಿಸಿರಬಹುದು ಎನ್ನಲಾಗಿದೆ. ಇನ್ನು ವಿಜಯ್‌ ದೇವರಕೊಂಡ ಅವರು “ನಾನು ಸಿಂಗಲ್‌ ಅಲ್ಲ” ಎಂದು ಹೇಳಿದ್ದಾರೆಯೇ ಹೊರತು, ಪ್ರಿಯತಮೆ ಯಾರು ಎಂದು ಹೇಳಿಲ್ಲ.