ತಾಳಿ ಮಹತ್ವ ತಿಳಿಸಿದ ಭಾಗ್ಯ: ಅದಕ್ಕೇ ಈಗಿನ ಹೆಣ್ಮಕ್ಕಳಿಗೆ ಇದೆಂದ್ರೆ ಅಲರ್ಜಿ ಅಂತಿದ್ದಾರೆ ನೆಟ್ಟಿಗರು!
ಭಾಗ್ಯಲಕ್ಷ್ಮಿಯ ಭಾಗ್ಯ ತಾಳಿಯ ಮಹತ್ವ ತಿಳಿಸಿದರೆ, ಅದನ್ನು ಈಗಿನ ಹೆಣ್ಣುಮಕ್ಕಳಿಗೆ ಹೋಲಿಸಿ ಕಮೆಂಟ್ ಮಾಡುತ್ತಿದ್ದಾರೆ ನೆಟ್ಟಿಗರು!
ತಾಳಿ, ಮಂಗಳ ಸೂತ್ರ ಎನ್ನುವುದು ಈಗಿನ ಬಹುತೇಕ ಹೆಣ್ಣುಮಕ್ಕಳಿಗೆ ಫ್ಯಾಷನ್ ಆಗಿಬಿಟ್ಟಿದೆ. ಬೇಕೆಂದಾಗ ತೆಗೆದಿಡುವುದು, ಇಲ್ಲವೇ ಬಟ್ಟೆಗೆ ಮ್ಯಾಚಿಂಗ್ ರೀತಿ ಮಂಗಳಸೂತ್ರವನ್ನು ಬದಲಿಸುವುದು, ಜೀನ್ಸ್ ಹಾಕಿದಾಗ ಬೋಳು ಕುತ್ತಿಗೆಯಲ್ಲಿ ಇರುವುದು, ಸೀರೆ ಉಟ್ಟಾಗ ಅದಕ್ಕೆ ತಕ್ಕಂತೆ ಡಿಸೈನ್ ಬದಲಿಸುವುದು... ಹೀಗೆ ಮಂಗಳಸೂತ್ರ ಹಾಗೂ ಅದಕ್ಕೆ ಹಾಕಿರುವ ತಾಳಿ ಎಲ್ಲವೂ ಚೇಂಜ್ ಆಗುತ್ತಲೇ ಇರುತ್ತವೆ. ಕೆಲವು ಅವಿವಾಹಿತೆಯರು ಗಂಡಸರ ಭಯದಿಂದ ಮಂಗಳಸೂತ್ರವನ್ನು ಧರಿಸಿ ತಾವು ವಿವಾಹಿತೆಯರು ಎನ್ನುವ ರೀತಿಯಲ್ಲಿ ರಕ್ಷಣೆ ಮಾಡಿಕೊಂಡರೆ, ಮದುವೆಯಾದ ಹೆಣ್ಣುಮಕ್ಕಳು ಇದನ್ನು ತೆಗೆದು ಇಡುವುದು ಈಗೇನೂ ಹೊಸತಲ್ಲ. ಅದರಲ್ಲಿಯೂ ಸಿನಿಮಾ ನಟಿಯರು ಸೇರಿದಂತೆ ಕೆಲವು ಸೆಲೆಬ್ರಿಟಿಗಳು ಇವರಿಗೆ ಮಾದರಿಯಾಗುವ ಹಿನ್ನೆಲೆಯಲ್ಲಿ, ಮದುವೆಯಾದರೂ ಬೋಳು ಕುತ್ತಿಗೆಯೇ ಅಂದ ಎನ್ನುವ ಕಲ್ಪನೆಯೂ ಈಗಿನವರಿಗೆ ಇದೆ.
ಅದೇನೇ ಇದ್ದರೂ, ತಾಳಿ ಅಥವಾ ಮಂಗಳಸೂತ್ರ ಮುತ್ತೈದೆಯರಿಗೆ ಭೂಷಣ ಎನ್ನುವ ಮಾತು ಭಾರತೀಯ ಸಂಪ್ರದಾಯದಲ್ಲಿದೆ. ಅದಕ್ಕೆ ಅದರದ್ದೇ ಆದ ಮಹತ್ವವನ್ನೂ ನೀಡುತ್ತಾ ಬರಲಾಗಿದೆ. ಕೆಲವು ಪ್ರದೇಶಗಳಲ್ಲಿನ ಹೆಂಗಸರು ಈಗಲೂ ಇದೇ ಮಹತ್ವವನ್ನು ಮಂಗಳಸೂತ್ರಕ್ಕೆ ನೀಡುತ್ತಿದ್ದಾರೆ ಎನ್ನುವುದೂ ಅಷ್ಟೇ ಸತ್ಯ. ಪ್ರತಿನಿತ್ಯವೂ ತಾಳಿಯನ್ನು ಕಣ್ಣಿಗೆ ಒತ್ತಿಕೊಂಡು ತಮ್ಮ ಅಂದಿನ ದಿನವನ್ನು ಆರಂಭಿಸುವವರೂ ಇದ್ದಾರೆ. ಆದ್ದರಿಂದ ತಾಳಿ ಅಂದರೇನು, ಅದರ ಮಹತ್ವ ಏನು ಎಂಬ ಬಗ್ಗೆ ಇದೀಗ ಭಾಗ್ಯಲಕ್ಷ್ಮಿ ಭಾಗ್ಯ ತಾಂಡವ್‌ಗೆ ತಿಳಿಸಿಕೊಟ್ಟಿದ್ದಾಳೆ. ಹಣೆಗೆ ಕುಂಕುಮ ಇಡುವಾಗ ತಾಳಿಗೂ ಕುಂಕುಮ ಇಡುವುದು ಕೆಂಪಗೆ ಚೆನ್ನಾಗಿ ಕಾಣಿಸಲಿ ಎಂದು ಅಲ್ಲ, ಗಂಡನ ಜೀವನ ಗಂಡನ ಆಯಸ್ಸು ಚೆನ್ನಾಗಿರಲಿ ಎಂದು. ಆ ದೇವರಿಗೆ ಕೈಮುಗಿದ ಬಳಿಕ ಇದನ್ನು ಕಣ್ಣಿಗೆ ಒತ್ತಿಕೊಳ್ತೇವಲ್ಲ, ಯಾಕೆಂದ್ರೆ ಗಂಡನಿಗೆ ಒಳ್ಳೆಯದಾಗಲಿ ಎಂದು. ಈ ತಾಳಿಗೆ ಒಂದುಚೂರು ಏನಾದರೂ ಆದ್ರೂ ಎಷ್ಟು ತಲೆ ಕೆಡಿಸಿಕೊಳ್ತೀವಿ ಗೊತ್ತಾ ಗಂಡನಿಗೆ ಏನಾದ್ರೂ ಆಗಿಬಿಟ್ಟಿದ್ಯೋ ಅಂತ. ತಾಳಿಯ ಹಿಂದೆ ಹೇಳಿಕೊಳ್ಳಲಾಗದ ಸಾವಿರ ವಿಷಯ ಇದೆ ಎಂದಿದ್ದಾಳೆ ಭಾಗ್ಯ.
ನಟಿ ಶೋಭಿತಾಗೆ ಮದ್ವೆನೇ ಇಷ್ಟ ಇರ್ಲಿಲ್ವಾ? ಎರಡು ವಿಳಾಸ ಕೊಟ್ಟದ್ದೇಕೆ? ಮಾಹಿತಿ ನೀಡಿದ ಆಪ್ತ ಸ್ನೇಹಿತೆ
ಅಷ್ಟಕ್ಕೂ ಇದಾಗಲೇ ಭಾಗ್ಯಳ ಜೀವನದಲ್ಲಿ ಅಲ್ಲೋಲ ಕಲ್ಲೋಲವಾಗಿದೆ. ಗಂಡನನ್ನು ಶ್ರೇಷ್ಠಾಳ ಜೊತೆಯಲ್ಲಿಯೇ ಬಿಟ್ಟು, ಮಕ್ಕಳು ಮತ್ತು ಅತ್ತೆ-ಮಾವನನ್ನು ಕರೆದುಕೊಂಡು ಭಾಗ್ಯ ಮನೆ ಬಿಟ್ಟು ಹೋಗಿದ್ದಾಳೆ. ಮಕ್ಕಳನ್ನು ಕಳುಹಿಸಲು ತಾಂಡವ್ ಒಪ್ಪಿರಲಿಲ್ಲ. ಆದರೂ ಮಕ್ಕಳು ಅಪ್ಪನ ಈ ಎಲ್ಲಾ ಕುಕೃತ್ಯಗಳನ್ನು ಕಣ್ಣಾರೆ ಕಂಡು ಅಮ್ಮ ಮತ್ತು ಅಜ್ಜ-ಅಜ್ಜಿಯ ಜೊತೆಯಲ್ಲಿ ಇರುವ ನಿರ್ಧಾರ ಮಾಡಿದ್ದು, ಅವರ ಜೊತೆ ಹೋಗಿದ್ದಾರೆ. ಆದರೆ ತಾಂಡವ್‌ಗೆ ಸುತರಾಂ ವಿಚ್ಛೇದನ ಕೊಡುವುದಿಲ್ಲ ಎಂದು ಭಾಗ್ಯ ದೃಢನಿರ್ಧಾರ ಮಾಡಿ ಮನೆಯಿಂದ ಹೊರಬಂದಿದ್ದಾಳೆ. ಇತ್ತ ತಾಂಡವ್‌ಗೆ ಬಿಸಿ ತುಪ್ಪದ ಅನುಭವ. ವಿಚ್ಛೇದನ ಕೊಡದೇ ಶ್ರೇಷ್ಠಾಳನ್ನು ಮದುವೆಯಾಗುವ ಹಾಗಿಲ್ಲ. ಆದರೂ ಶ್ರೇಷ್ಠಾಳ ಜೊತೆ ಇರುವ ಭಾಗ್ಯ ಅವನಿಗೆ ಅಷ್ಟೇ. ಅತ್ತ ಶ್ರೇಷ್ಠಾ ಕೂಡ ಹಿರಿಹಿರಿ ಹಿಗ್ಗುತ್ತಿದ್ದಾಳೆ. ತನ್ನ ಪ್ಲ್ಯಾನ್ ಕೊನೆಗೂ ಸಕ್ಸಸ್ ಆಯಿತು, ತನಗೆ ಯಶಸ್ಸು ಸಿಕ್ಕಿತು ಎಂದು ಬೀಗುತ್ತಿದ್ದಾಳೆ. ಮುಂದೇನು ಎನ್ನುವುದನ್ನು ಇದಾಗಲೇ ವೀಕ್ಷಕರು ಗೆಸ್ ಮಾಡಿಯೂ ಆಗಿದೆ.
ಆದರೆ ಇದೀಗ ಚರ್ಚೆ ಶುರುವಾಗಿರುವುದು ಸೀರಿಯಲ್ ಬಗ್ಗೆಯಲ್ಲ, ಬದಲಿಗೆ ಭಾಗ್ಯ ಇಷ್ಟೆಲ್ಲಾ ಮಾಡಿದರೂ, ತಾಳಿಯನ್ನೇ ಸರ್ವಶ್ರೇಷ್ಠ ಎಂದುಕೊಂಡು ಗಂಡನ ಏಳಿಗೆಗೆ ದುಡಿದರೂ ಅವಳಿಗೆ ಸಿಕ್ಕ ಜೀವನ ಎಂಥದ್ದು, ತನ್ನ ಗಂಡ, ಮಕ್ಕಳು, ಕುಟುಂಬ ಎಂದು ತನ್ನ ಆಸೆ, ಆಕಾಂಕ್ಷೆಗಳನ್ನು ಅದುಮಿಟ್ಟುಕೊಂಡು, ಕುಟುಂಬಕ್ಕಾಗಿ ಜೀವವನ್ನೇ ತ್ಯಾಗ ಮಾಡಿ, ಪತಿಯ ಶ್ರೇಯಸ್ಸಿಗಾಗಿ ತಾಳಿಯನ್ನು ಪೂಜಿಸುವವಳಿಗೆ ಇಂಥ ಜೀವನ ಸಿಕ್ಕಿದೆ ಎಂದ ಮೇಲೆ, ಈ ರೀತಿ ಪೂಜೆಗಳು ಬೇಕಾ ಎನ್ನುವ ಚರ್ಚೆ ಶುರುವಾಗಿದೆ. ಸುಂದರ ದಾಂಪತ್ಯ ಎನ್ನುವುದು ಹೆಣ್ಣು ತನ್ನ ತಾಳಿಯನ್ನು ಪೂಜಿಸುವುದರಿಂದ ಆಗುವುದಲ್ಲ, ಇದಕ್ಕೆ ಗಂಡನ ಮನಸ್ಥಿತಿಯೂ ಕಾರಣವಾಗಬೇಕಿದೆ. ಇದೇ ಕಾರಣಕ್ಕೆ ರೋಸಿ ಹೋಗಿರುವ ಈಗಿನ ಹೆಣ್ಣುಮಕ್ಕಳು ತಾಳಿಗೆ ಬೆಲೆ ಕೊಡುತ್ತಿಲ್ಲ ಎಂದು ಹಲವರು ಕಮೆಂಟ್‌ನಲ್ಲಿಯೂ ತಿಳಿಸುತ್ತಿದ್ದಾರೆ!
ಮೈಮರೆತು ದುಪ್ಪಟ್ಟಾ ಮೇಲೆ ಕುಳಿತ ನಟಿ ಸೋನಲ್ ಮೊಂಥೆರೋ: ಮುಂದೇನಾಯ್ತು ವಿಡಿಯೋ ನೋಡಿ...