ನಟಿ ಶೋಭಿತಾಗೆ ಮದ್ವೆನೇ ಇಷ್ಟ ಇರ್ಲಿಲ್ವಾ? ಎರಡು ವಿಳಾಸ ಕೊಟ್ಟದ್ದೇಕೆ? ಮಾಹಿತಿ ನೀಡಿದ ಆಪ್ತ ಸ್ನೇಹಿತೆ

ಸಾವಿನ ಹಾದಿ ತುಳಿದು ಬದುಕನ್ನು ಕೊನೆಗೊಳಿಸಿಕೊಂಡಿರೋ  ನಟಿ ಶೋಭಿತಾ ಶಿವಣ್ಣ ಅವರ ಬದುಕಿನ ಬಗ್ಗೆ ಅವರ ಸ್ನೇಹಿತೆ ವೀಣಾ ರಾವ್‌ ಹೇಳಿದ್ದೇನು?
 

Sobhita Shivannas friend Veena Rao about Actress life her love for acting and about death suc

ಬ್ರಹ್ಮಗಂಟು ಸೀರಿಯಲ್‌ ಮೂಲಕ ಮನೆಮಾತಾಗಿದ್ದ ಹಿರಿತೆರೆ-ಕಿರುತೆರೆಯ ನಟಿ ಶೋಭಿತಾ ಶಿವಣ್ಣ ಅವರ ಆತ್ಮಹತ್ಯೆ ಇಡೀ ಇಂಡಸ್ಟ್ರಿಯನ್ನು ದಂಗು ಬಡಿಸಿದೆ. ಮಾತ್ರವಲ್ಲದೇ, ಅವರ ಅಪಾರ ಅಭಿಮಾನಿಗಳೂ ಕಣ್ಣೀರಾಗಿದ್ದಾರೆ. ಚೆನ್ನಾಗಿ ನಟನೆಯಲ್ಲಿ ಪಳಗಿದ್ದ ನಟಿ, ಏಕಾಏಕಿ ಹೀಗೆ ಮಾಡಿಕೊಂಡರು ಎನ್ನುವುದು ಇದುವರೆಗೂ ರಹಸ್ಯವಾಗಿಯೇ ಉಳಿದಿದೆ. ಇಲ್ಲಿಯವರೆಗೆ ಮೇಲ್ನೋಟಕ್ಕೆ ಕಂಡುಬಂದಿರುವಂತೆ ನಟಿ ಖಿನ್ನತೆಯಲ್ಲಿದ್ದರು, ಆದ್ದರಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದೇ ಅಂದುಕೊಳ್ಳಲಾಗುತ್ತಿದೆ.  ಆದರೆ, ಅವರದ್ದು ಆತ್ಮಹತ್ಯೆಯೋ, ಕೊಲೆಯೋ ಎನ್ನುವ ಬಗ್ಗೆ ಇನ್ನೂ ತನಿಖೆ ನಡೆಯುತ್ತಿದೆ.  ಮನೆಯ ಕೋಣೆಯ ಸೀಲಿಂಗ್‌ ಫ್ಯಾನ್‌ಗೆ ನೇಣು ಬಿಗಿದುಕೊಂಡು ಅವರು ಸಾವಿಗೆ ಶರಣಾಗಿದ್ದರು. ಇದಾಗಲೇ ಪೊಲೀಸರಿಗೆ ಡೆತ್‌ನೋಟ್‌ ಕೂಡ ಸಿಕ್ಕಿದೆ ಎನ್ನಲಾಗಿದೆ. ಡೆತ್‌ ನೋಟ್‌ನಲ್ಲಿ ನಟಿ, 'ಇಫ್‌ ಯು ವಾಂಟ್‌ ಟು ಕಮಿಟ್‌ ಸೂಸೈಡ್‌, ಯು ಕ್ಯಾನ್‌ ಡು ಇಟ್‌' ಎಂದು ಬರೆದಿದ್ದಾರೆ.  ಆತ್ಮಹತ್ಯೆ ಮಾಡಿಕೊಳ್ಳಬೇಕು ಎಂದು ನೀನು ಬಯಸಿದ್ದಲ್ಲಿ, ನೀನು ಅದನ್ನು ಮಾಡಬಹುದು ಎನ್ನುವುದಾಗಿ ಬರೆದಿರುವ ಹಿನ್ನೆಲೆಯಲ್ಲಿ,  ಇದು ಆತ್ಮಹತ್ಯೆ ಎನ್ನುವುದು ಸದ್ಯದ ಮಟ್ಟಿಗೆ ತಿಳಿದುಬಂದಿದೆ.

ಇನ್ನು, ಈ ರೀತಿ ಆತ್ಮಹತ್ಯೆ ಯಾರೇ ಮಾಡಿಕೊಂಡರೂ, ಮೊದಲು ಗಮನ ಹೋಗುವುದು ಅವರ ದಾಂಪತ್ಯ ಜೀವನದ ಬಗ್ಗೆ. ಹಾಗಿದ್ದರೆ, ಶೋಭಿತಾ ಅವರ ದಾಂಪತ್ಯ ಚೆನ್ನಾಗಿ ಇರಲಿಲ್ವಾ? ಅವರಿಗೆ ಮದುವೆನೇ ಇಷ್ಟ ಇರಲಿಲ್ವಾ? ಹೈದರಾಬಾದ್‌ಗೆ ಹೋಗಿ ನೆಲೆಸಿದ್ದು ಯಾಕೆ ಎಂಬೆಲ್ಲಾ ಪ್ರಶ್ನೆಗಳು ಉದ್ಭವ ಆಗುತ್ತಿವೆ. ಇದರ ಬಗ್ಗೆ ನಟಿಯ ಆಪ್ತ ಸ್ನೇಹಿತೆ ವೀಣಾ ರಾವ್‌ ಎನ್ನುವವರು ಖಾಸಗಿ ವಾಹನಿಯೊಂದರಲ್ಲಿ ಮಾತನಾಡಿದ್ದಾರೆ. ನಾನು ಶೋಭಿತಾಳನ್ನು ಶೋಬ್ಸ್‌ ಎಂದು ಕರೆಯುತ್ತಿದ್ದೆ. ನಟನೆ ಎಂದರೆ ಶೋಭಿತಾಗೆ ಜೀವ ಆಗಿತ್ತು. ಅದನ್ನು ಬಿಡುವುದು ಆಕೆಗೆ ಇಷ್ಟವೇ ಇರಲಿಲ್ಲ. ಕಳೆದ ಭಾನುವಾರ ಅವಳಿಗೆ ಕಾಲ್‌ ಮಾಡಿದ್ದೆ. ಹೇಗಿದೆ ಲೈಫ್ ಕೇಳಿದಾಗಲೂ ನಟನೆಯನ್ನು ಮಿಸ್‌ ಮಾಡ್ಕೋತಾ ಇದ್ದೇನೆ ಎಂದೇ ಹೇಳಿದ್ದಳು. ಹೇಗೋ ಹೈದರಾಬಾದ್‌ನಲ್ಲಿ ಇದ್ಯಲ್ಲ, ಅಲ್ಲಿ ತೆಲಗು ಸೀರಿಯಲ್‌ನಲ್ಲಿ ನಟಿಸಬಹುದಲ್ವಾ ಎಂದು ಹೇಳಿದ್ದೆ.   ಅದಕ್ಕೆ ಶೋಬ್ಸ್‌, ಹೌದು. ಟ್ರೈ ಮಾಡಬೇಕು, ನನಗೆ ಇಲ್ಲಿ ಯಾರೂ ಪರಿಚಯವಿಲ್ಲ ಎಂದು ಹೇಳಿದ್ಲು. ಆಮೇಲೆ ಮಾತನಾಡಲು ಸಿಗಲೇ ಇಲ್ಲ. ಈಗ ಈ ಸುದ್ದಿ ಬಂತು ಎಂದಿದ್ದಾರೆ.

ಶೋಭಿತಾ ಶಿವಣ್ಣ ಮರಣೋತ್ತರ ಪರೀಕ್ಷೆ ಮುಕ್ತಾಯ, ವೈದ್ಯರು ಹೇಳಿದ್ದೇನು?

ಶೋಭಿತಾರಿಗೆ ಮದುವೆ ಇಷ್ಟ ಇರಲಿಲ್ವಾ ಎನ್ನುವ ಪ್ರಶ್ನೆಗೆ, ವೀಣಾ ಅವರು ಸ್ಪಷ್ಟವಾದ ಉತ್ತರ ಕೊಡಲಿಲ್ಲ. ಆದರೆ ಶೋಬ್ಸ್‌ಗೆ ನಟನೆ ಎಂದರೆ ತುಂಬಾ ಇಷ್ಟವಿತ್ತು. ಮದುವೆ ಇಷ್ಟ ಇಲ್ಲ ಅಂತೇನೂ ಇರಲಿಲ್ಲ. ಆದರೆ ನಟನೆಯಲ್ಲೇ ಇರುವುದು ಅವಳಿಗೆ ಇಷ್ಟವಿತ್ತು. ಆದರೆ ಭಾವನ ಸಂಬಂಧಿಕರು ಆಗಿರುವುದರಿಂದ, ಮನೆಯವರೆಲ್ಲರೂ ಇದು ನಿನಗೆ ಮದುವೆಗೆ ರೈಟ್‌ ಏಜ್‌, ಮದುವೆಯಾಗು ಎಂದು ಹೇಳಿ ಮದುವೆ ಮಾಡಿಸಿದರು. ಆಗಲೂ ಅವಳಿಗೆ ಕರಿಯರ್‍‌ದ್ದೇ ಚಿಂತೆಯಾಗಿತ್ತು ಎಂದಿದ್ದಾರೆ ವೀಣಾ ರಾವ್‌. ಸಾಮಾನ್ಯವಾಗಿ ಕರಿಯರ್‍‌ ಮತ್ತು ಮದುವೆಯ ವಿಷಯ ಬಂದಾಗ ಮಹಿಳೆಯರಿಗೆ ಹೇಗೆ ಚಿಂತೆ ಆಗುತ್ತೋ, ಶೋಭಿತಾಗೂ ಹಾಗೇ ಆಗಿತ್ತು. ಆದರೆ ಮನೆಯವರು ಮದುವೆಯ ಬಗ್ಗೆ ಹೇಳಿದ್ದರಿಂದ ಮದುವೆಯಾದಳು. ಮದುವೆಯಾಗಿ ಯುಎಸ್‌ಗೆ ಹೋಗ್ತೇನೆ ಎಂದಿದ್ದಳು. ಅಲ್ಲಿಯೂ ನಟನೆಯಿಂದ ಬ್ರೇಕ್‌ ತೆಗೆದುಕೊಳ್ಳಬೇಕಾಗುತ್ತದೆ ಎಂದೇ ಅವಳಿಗೆ ಚಿಂತೆಯಾಗಿತ್ತು. ನಾನು ಅವಳಿಗೆ ಪರವಾಗಿಲ್ಲ. ಹೊಸದಾಗಿ ಮದುವೆಯಾಗಿರುವೆ. ಸ್ವಲ್ಪ ತಿಂಗಳು ಮದುವೆ ಲೈಫ್‌ ಎಂಜಾಯ್‌ ಮಾಡು, ಬಳಿಕ ವಾಪಸ್‌ ಬಂದು ನಟನೆ ಮುಂದುವರೆದು ಎಂದಿದ್ದೆ. ಅಷ್ಟು ನಟನೆಯ ಹುಚ್ಚು ಅವಳಿಗೆ ಇತ್ತು ಎಂದಿದ್ದಾರೆ.

ಕೋವಿಡ್‌ ಟೈಮ್‌ನಲ್ಲಿ ಬಹುಶಃ ಅವರು ಪರ್ಮನೆಂಟ್‌ ಆಗಿಇಂಡಿಯಾಕ್ಕೆ ಬಂದರು. ಆಕೆ ಪತಿ ಹೈದರಾಬಾದ್‌ನಲ್ಲಿ ಕೆಲಸಕ್ಕೆ ಇದ್ದುದರಿಂದ ಅಲ್ಲಿ ಶಿಫ್ಟ್‌ ಆದರು. ನನಗೆ ಅವಳು ಹೈದರಾಬಾದ್‌ನ ಎರಡು ವಿಳಾಸ ಕೊಟ್ಟಿದ್ದಳು. ಬಹುಶಃ ಅವಳಿಗೆ ಎರಡು ಮನೆ ಇತ್ತು ಎನ್ನಿಸತ್ತೆ. ಅಲ್ಲಿ ಬಂದು ಸಿಗಲು ಹೇಳಿದ್ದಳು. ಕೊನೆಗೂ ಹೋಗಲು ಆಗಲೇ ಇಲ್ಲ ಎಂದು ಸ್ನೇಹಿತೆ ನೊಂದು ನುಡಿದಿದ್ದಾರೆ. ಆದರೂ ಅವಳು ಮಾತಿಗೆ ಸಿಕ್ಕಾಗಲೆಲ್ಲಾ ನಟನೆ ಬಗ್ಗೆನೇ ಹೇಳುತ್ತಿದ್ದಳು, ಅಷ್ಟು ಗೀಳು ಇತ್ತು ಅವಳಿಗೆ ಎಂದಿದ್ದಾರೆ. ಇನ್ನು ಶೋಭಿತಾ ಅವರ ಕುರಿತು ಹೇಳುವುದಾದರೆ, ಮದುವೆಯಾದ ಬಳಿಕ ಶೋಭಿತಾ ಸಿನಿಮಾ ಹಾಗೂ ಸೀರಿಯಲ್‌ಗಳಲ್ಲಿ ನಟನೆ ಮಾಡೋದನ್ನು ಬಿಟ್ಟಿದ್ದರು. ಇದರಿಂದ ಆಕೆ ಖಿನ್ನತೆಗೆ ಜಾರಿದ್ದರಾ? ನಟನೆಗೆ ಪತಿಯ ಪ್ರೋತ್ಸಾಹ ಸಿಗಲಿಲ್ವಾ ಅಥವಾ ಇನ್ನೇನು ಎನ್ನುವ ಎಲ್ಲಾ ಆಯಾಮಗಳಿಂದ ತನಿಖೆ ನಡೆಸಲಾಗುತ್ತಿದೆ. 

Latest Videos
Follow Us:
Download App:
  • android
  • ios