'ಭಾಗ್ಯಲಕ್ಷ್ಮಿ' ಧಾರಾವಾಹಿಯ ತನ್ವಿ ಪಾತ್ರಧಾರಿ ಅಮೃತಾ ವರ್ಷಿಣಿ ಗೌಡ ಪಿಯುಸಿ ಕಾಮರ್ಸ್‌ನಲ್ಲಿ 91% ಅಂಕ ಗಳಿಸಿದ್ದಾರೆ. ಚಿತ್ರೀಕರಣದ ನಡುವೆಯೂ ಉತ್ತಮ ಸಾಧನೆ ಮಾಡಿದ್ದಕ್ಕೆ ಅಭಿನಂದನೆಗಳು ಬರುತ್ತಿವೆ. ಶಿಕ್ಷಕರು ಮತ್ತು ಸ್ನೇಹಿತರು ಸಹಾಯ ಮಾಡಿದರು ಎಂದು ಅಮೃತಾ ಹೇಳಿದ್ದಾರೆ. ಪರೀಕ್ಷೆಯಲ್ಲಿ ಅಂಕಗಳಿಸಿದ ಬಗ್ಗೆ ತಾಯಿಯ ಟಾರ್ಚರ್ ಬಗ್ಗೆ ಮಾತನಾಡಿದ್ದಾರೆ. ಕನ್ನಡದಲ್ಲಿ 97 ಸೇರಿದಂತೆ 600ಕ್ಕೆ 543 ಅಂಕಗಳನ್ನು ಪಡೆದಿದ್ದಾರೆ. ಧಾರಾವಾಹಿಯಲ್ಲಿ ಫಸ್ಟ್ ಪಿಯುಸಿ ಓದುತ್ತಿದ್ದರೆ, ರಿಯಲ್ ಲೈಫ್‌ನಲ್ಲಿ ಸೆಕೆಂಡ್ ಪಿಯುಸಿ ಮುಗಿಸಿದ್ದಾರೆ.

 ಭಾಗ್ಯಲಕ್ಷ್ಮಿ ಸೀರಿಯಲ್​ ತನ್ವಿ ಈಗ ಸಕತ್​ ಸದ್ದು ಮಾಡುತ್ತಿದ್ದಾಳೆ. ಇದಕ್ಕೆ ಕಾರಣ ಸೀರಿಯಲ್​ ಅಲ್ಲ, ಬದಲಿಗೆ ನಿನ್ನೆ ಬಿಡುಗಡೆಗೊಂಡ ಫಲಿತಾಂಶದಲ್ಲಿ ಪಿಯುಸಿಯ ಕಾಮರ್ಸ್​ ವಿಭಾಗದಲ್ಲಿ ಶೇಕಡಾ 91 ತೆಗೆದಿರುವುದಕ್ಕೆ. ಅಂದಹಾಗೆ ತನ್ವಿ ಎಂದೇ ಫೇಮಸ್​ ಆಗಿರೋ ಈಕೆಯ ಹೆಸರು ಅಮೃತ ವರ್ಷಿನಿ ಗೌಡ. ಈಗಿನ ಬಹುತೇಕ ಮಕ್ಕಳು ಶೇಕಡಾ 90ರ ಮೇಲೆ ತೆಗೆಯುವುದು ಸಾಮಾನ್ಯವಾಗಿದೆ. ಆದರೆ ಒಂದೆಡೆ ಶೂಟಿಂಗ್​ ಬಿಜಿಯ ನಡುವೆಯೇ, ಇಷ್ಟು ಅಂಕ ಗಳಿಸಿರುವ ಕಾರಣ ತನ್ವಿಗೆ ಶ್ಲಾಘನೆಗಳ ಮಹಾಪೂರವೇ ಹರಿದುಬರುತ್ತಿದೆ. ಭಾಗ್ಯಲಕ್ಷ್ಮಿ ಸೀರಿಯಲ್​ನಲ್ಲಿ ತನ್ವಿ, ತನ್ನ ಸುಂದರ ಅಭಿನಯದಿಂದ ಒಂದು ಸಲ ಅಮ್ಮನ ಪರ, ಮತ್ತೊಮ್ಮೆ ಅಪ್ಪನ ಪರ, ಮಗದೊಮ್ಮೆ ಗೊಂದಲಗೂಡಾಗಿರುವ ಮನಸ್ಸು... ಹೀಗೆ ಎಲ್ಲಾ ರೀತಿಯ ಅಭಿನಯಕ್ಕೂ ಸೈ ಎನಿಸಿಕೊಂಡಿದ್ದಾಳೆ. ಶಿಕ್ಷಣದ ಜೊತೆಗೆ ಶೂಟಿಂಗ್ ಎರಡನ್ನೂ ಜೊತೆಯಾಗಿ ಮ್ಯಾನೇಜ್ ಮಾಡುವ ಈಕೆ ಅದೇ ಇನ್ನೊಂದೆಡೆ ಸೋಷಿಯಲ್ ಮೀಡಿಯಾದಲ್ಲೂ (social media) ಸಕತ್​ ಆಕ್ಟೀವ್.

ಇದೀಗ ಸುದ್ದಿ ವಾಹಿನಿಯೊಂದಕ್ಕೆ ಬಹುತೇಕ ಅಮ್ಮಂದಿರಂತೆ ತನ್ನ ಅಮ್ಮನೂ ಪರೀಕ್ಷೆ ವೇಳೆ ನೀಡುತ್ತಿದ್ದ ಬೈಗುಳಗಳ ಬಗ್ಗೆ ಮಾತನಾಡಿದ್ದಾರೆ. ಇವರ ತಾಯಿ ಕೂಡ ನಾನು ಮಗಳಿಗೆ ಸಕತ್​ ಟಾರ್ಚರ್​ ಕೊಡುತ್ತಿದ್ದೆ ಎಂದು ಹೇಳಿದ್ದಾರೆ. ತಮ್ಮ ಓದಿನ ಬಗ್ಗೆ ಮಾತನಾಡಿದ ತನ್ವಿ ಉರ್ಫ್​ ಅಮೃತಾ, ನಾನು ಶೂಟಿಂಗ್​ನಲ್ಲಿ ಬುಕ್​ ಹಿಡಿದುಕೊಂಡಿರ್ತಿದ್ದೆ. ಆದರೆ ಓದ್ತಾ ಇರಲಿಲ್ಲ. 24/7 ಓದುವವಳು ನಾನಲ್ಲ. ಕೆಲವೇ ಗಂಟೆ ಓದಿ ಅದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಹಂಬಲಿಸುವವಳು. ಅದಕ್ಕಾಗಿ ಅಷ್ಟೇ ಓದಿದ್ದೆ. ಕಾಲೇಜಿನಲ್ಲಿ ಟೀಚರ್ಸ್​ ಮತ್ತು ನನ್ನ ಸ್ನೇಹಿತರು ಸಿಕ್ಕಾಪಟ್ಟೆ ಸಹಾಯ ಮಾಡಿದ್ದಾರೆ. ಶೂಟಿಂಗ್​ ಮುಗಿಸಿ ಬಂದ ಮೇಲೆ ನೋಟ್ಸ್​ಗಳನ್ನು ಫ್ರೆಂಡ್ಸ್​ ವಾಟ್ಸ್​ಆ್ಯಪ್​ನಲ್ಲಿ ಕಳಿಸ್ತಿದ್ದರು. ಅದರಿಂದ ನನಗೆ ಓದಲು ಸಹಾಯವಾಯ್ತು ಎಂದಿದ್ದಾಳೆ.

ಭಾಗ್ಯಲಕ್ಷ್ಮಿ ಮಗಳು ತನ್ವಿಯ ಕ್ಯೂಟ್​ ಫೋಟೋಶೂಟ್​​: ಬಾಲಕಿಯ ಕುರಿತು ಕೆಲವು ಇಂಟರೆಸ್ಟಿಂಗ್​ ವಿಷ್ಯ ಇಲ್ಲಿದೆ...

ಆದರೆ ಕನಸಿನಲ್ಲಿಯೂ ನಾನು ಇಷ್ಟು ತೆಗೆಯುತ್ತೇನೆ ಎಂದು ಅಂದುಕೊಂಡಿರಲಿಲ್ಲ. ಡಿಸ್ಟಿಂಕ್ಷನ್​ ಬರುತ್ತದೆ ಎಂದು ಗೊತ್ತಿತ್ತು. ಅಮ್ಮ ನನಗೆ ಸಿಕ್ಕಾಪಟ್ಟೆ ಪರೀಕ್ಷೆ ವೇಳೆ ಎಲ್ಲಾ ಅಮ್ಮಂದಿರಂತೆ ಟಾರ್ಚರ್​ ಕೊಡ್ತಿದ್ರು. ಓದು ಓದು ಅಂತಿದ್ರು. ಅವರಿಗೂ ನಾನು ಇಷ್ಟು ತೆಗೆಯುತ್ತೇನೆ ಎಂದು ಗೊತ್ತಿರಲಿಲ್ಲ. 90 ಪರ್ಸೆಂಟ್​ ಆದ್ರೂ ಬರಬೇಕು ನೋಡು ಎಂದಿದ್ರು. ನಾನು 91 ತೆಗೆದೆ ಎಂದು ಹೇಳಿದಾಗ ಅಮ್ಮ ಕಕ್ಕಾಬಿಕ್ಕಿಯಾಗಿ ಹೋದರು ಎಂದಿದ್ದಾಳೆ ಅಮೃತಾ. ಅಮ್ಮ ಕೂಡ ಮಾತನಾಡಿ, ನಾನು ಅವಳಿಗೆ ಪರೀಕ್ಷೆ ವೇಳೆ ಸಿಕ್ಕಾಪಟ್ಟೆ ಟಾರ್ಚರ್​ ಕೊಟ್ಟಿದ್ದೆ. ಸರಿ ಓದ್ತಾನೇ ಇರಲಿಲ್ಲ. ಅದಕ್ಕೆ ಓದು ಓದು ಅಂತ ಹಿಂಸೆ ಮಾಡ್ತಿದ್ದೆ. ತುಂಬಾ ಖುಷಿಯಾಗ್ತಿದೆ ಎಂದಿದ್ದಾರೆ. 

ಅಂದಹಾಗೆ ಅಮೃತಾ, 600ಕ್ಕೆ 543 ಅಂಕ ಪಡೆದಿದ್ದಾಳೆ. ಕನ್ನಡದಲ್ಲಿ 100ಕ್ಕೆ 97 ಅಂಕ ಪಡೆದಿರುವ ಅಮೃತಾ ಗೌಡ, ಇಂಗ್ಲಿಷ್‌ನಲ್ಲಿ 81, ಎಕನಾಮಿಕ್ಸ್‌ನಲ್ಲಿ 93, ಬ್ಯುಸಿನೆಸ್ ಸ್ಟಡೀಸ್‌ನಲ್ಲಿ 83, ಅಕೌಂಟೆನ್ಸಿಯಲ್ಲಿ 94, ಸ್ಟಾಟಿಸ್ಟಿಕ್ಸ್‌ನಲ್ಲಿ 95 ಅಂಕಗಳನ್ನು ಅಮೃತಾ ಗೌಡ ಪಡೆದುಕೊಂಡಿದ್ದಾರೆ. ಅಂದಹಾಗೆ, 'ಭಾಗ್ಯಲಕ್ಷ್ಮೀ' ಸೀರಿಯಲ್​ನಲ್ಲಿ ಈಕೆ ಸದ್ಯ ಫಸ್ಟ್​ ಪಿಯುಸಿ. ಅಮ್ಮ ಭಾಗ್ಯ ಜೊತೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದು ಮೊದಲ ವರ್ಷದ ಪಿಯುಸಿ ಸೇರಿದ್ದಾಳೆ. ಆದರೆ ರಿಯಲ್ ಲೈಫ್‌ನಲ್ಲಿ ತನ್ವಿ ಪಾತ್ರ ಮಾಡಿರುವ ಅಮೃತಾ ಆಗಲೇ ಸೆಕೆಂಡ್ ಪಿಯುಸಿ ಮುಗಿಸಿದ್ದಾಳೆ. 

ಅಯ್ಯಯ್ಯೋ... ಡಾನ್ಸ್​ ಮಾಡ್ತಾ ಮಾಡ್ತಾ ಭಾಗ್ಯಳ ಅಮ್ಮಂಗೆ ಇದೇನಾಗೋಯ್ತು? ವಿಡಿಯೋಗೆ ಫ್ಯಾನ್ಸ್​ ಶಾಕ್​!