ಹೌಸ್‌ವೈಫ್ ಭಾಗ್ಯ ಈಗ ಫೈವ್‌ಸ್ಟಾರ್ ಹೊಟೇಲ್ ಶೆಫ್! ನೀನೇ ನಮ್ಗೆ ಸ್ಫೂರ್ತಿ ಅಂತಿರೋ ಗೃಹಿಣಿಯರು
ಭಾಗ್ಯ ಸೀರಿಯಲ್‌ನಲ್ಲಿ ಈಗ ಭಾಗ್ಯ ಸ್ಟೈಲೇ ಬದಲಾಗಿದೆ. ಅವಳೀಗ ಫೈವ್ ಸ್ಟಾರ್ ಹೊಟೇಲ್ ಶೆಫ್. ಈ ಭಾಗ್ಯ ನಮಗೂ ಸ್ಫೂರ್ತಿ ಅಂತಿದ್ದಾರೆ ಗೃಹಿಣಿಯರು.
ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ (Colors Kannada Serial Bhagyalakshmi) ಸೀರಿಯಲ್‌ನ ಹೊಸ ಬೆಳವಣಿಗೆ ಈ ಸೀರಿಯಲ್ ನಾಯಕಿ ಭಾಗ್ಯ ಶೆಫ್ ಆಗ್ತಿರೋದು. ಈಕೆ ನಮ್ಮ ನಾಡಿನ ಮಧ್ಯಮ ವರ್ಗದ ಗೃಹಿಣಿಯರನ್ನು ಪ್ರತಿಬಿಂಬಿಸೋ ಪಾತ್ರ. ಸಣ್ಣ ಪುಟ್ಟದಕ್ಕೂ ಗಂಡನೆದುರು ಕೈ ಚಾಚುತ್ತಾ, ಅತ್ತೆ ಮಾವನಿಗೆ ಭಯ ಪಡುತ್ತಾ, ಮನೆ ಮಕ್ಕಳ ಸಂತೋಷವೇ ತನ್ನ ಸಂತೋಷ ಅಂತ ತಿಳಿಯುವ ಮಧ್ಯಮ ವರ್ಗದ ಹೆಂಗಸರು (Middle Class Family Women) ಈ ಪಾತ್ರದಲ್ಲಿ ತಮ್ಮನ್ನು ಕಾಣುತ್ತಿದ್ದರು. ಆದರೆ ಸುಮಾರು ಸಮಯ ಈ ಸೀರಿಯಲ್ ಸ್ಟೋರಿಯನ್ನು ಯದ್ವಾ ತದ್ವಾ ಎಳೆದಾಡಿದ್ದು ಭಾಗ್ಯನನ್ನು ಅತೀ ಒಳ್ಳೆಯತನ, ಪೆದ್ದುತನ ಬೆರೆಸಿ ತೋರಿಸಿದ್ದೆಲ್ಲ ಈ ಸೀರಿಯಲ್ ವೀಕ್ಷಕರಿಗೆ ಬೋರ್ ಹುಟ್ಟಿಸಲಾರಂಭಿಸಿತು. ಹೀಗಾಗಿ ಒಂದು ಹಂತದಲ್ಲಿ ಈ ಸೀರಿಯಲ್ ನಾಯಕಿ ಸುಷ್ಮಾ ಅವರ ಆಕ್ಟಿಂಗ್ ಕಾರಣಕ್ಕೆ ಏರುತ್ತಲೇ ಹೋಗಿದ್ದ ಈ ಸೀರಿಯಲ್ ಟೀಆರ್‌ಪಿ ಈ ಎಳೆದಾಟದಿಂದ ಇಳಿಯುತ್ತಾ ಬಂತು.
ಪಾತಾಳಕ್ಕಿಳಿದಿದ್ದ ಭಾಗ್ಯ ಪಾತ್ರ ಇದೀಗ ಆಕಾಶಕ್ಕೆ ಏರುವ ಲಕ್ಷಣ ಕಾಣುತ್ತಿದೆ. ಒಂದು ಕಡೆ ಭಾಗ್ಯ ತನ್ನ ಗಂಡನ ಪ್ರೇಯಸಿ ಶ್ರೇಷ್ಠಾಗೆ ಬುದ್ಧಿ ಕಲಿಸಿದ್ದಾಳೆ. ತಾನು ಕೊಟ್ಟಿದ್ದ 1 ಲಕ್ಷ ರೂ ಹಣವನ್ನು ಭಾಗ್ಯಾ ವಾಪಸ್ ಪಡೆದು ತರುತ್ತಾಳೆ. ಭಾಗ್ಯಾ, ಶ್ರೇಷ್ಠಾಗೆ ಹೊಡೆಯುತ್ತಿದ್ದನ್ನು ನೋಡುವ ತಾಂಡವ್ ಅವಿತು ನಿಲ್ಲುತ್ತಾನೆ. ಆದರೆ ಮನೆಗೆ ಬಂದವನೇ ಏನೂ ಗೊತ್ತಿಲ್ಲದವನಂತೆ ನೀನು ದೇವಸ್ಥಾನಕ್ಕೆ ಎಂದು ಸುಳ್ಳು ಹೇಳಿ ಎಲ್ಲಿ ಸುತ್ತಾಡುತ್ತಿದ್ದೀಯ ಎಂದು ಭಾಗ್ಯಾಳನ್ನು ಪ್ರಶ್ನಿಸುತ್ತಾನೆ. ಅದರೆ ಭಾಗ್ಯಾ ನೀಡುವ ಖಡಕ್ ಉತ್ತರಕ್ಕೆ ತಾಂಡವ್ ಶಾಕ್ ಆಗುತ್ತಾನೆ.
ಜಾಹ್ನವಿ ಕುಳಿತ ಬೆಂಚ್‌ನ ಇನ್ಯಾರೂ ಬಳಸಬಾರದು ಜಯಂತ್ ಹೊಸ ಡ್ರಾಮಾ; ಇದು ಓವರ್ ಆಯ್ತು ಅಲ್ವಾ ಎಂದ ಫ್ಯಾನ್ಸ್
ಅಷ್ಟೇ ಅಲ್ಲ, ಇಎಂಐ ಹಣವನ್ನೂ ಕೇಳುತ್ತಾನೆ. ಇವತ್ತು ಇಎಂಐ ಹಣ ಕೊಡುವೆ ಅಂತ ಹೇಳಿದ್ದೆ, ಏಕೆ ಹಣ ಎಲ್ಲೂ ಸಿಗಲಿಲ್ವಾ ಎಂದು ಕೊಂಕು ಮಾತನಾಡುತ್ತಾನೆ. ಭಾಗ್ಯಾ ಬ್ಯಾಗ್‌ನಿಂದ ಹಣ ತೆಗೆದವಳೇ ತಾಂಡವ್ ಕೈಗೆ ಹಣ ಕೊಟ್ಟು ಇದರಲ್ಲಿ 2 ತಿಂಗಳ ಇಎಂಐ ಇದೆ, ಕಟ್ಟಿ ಎನ್ನುತ್ತಾಳೆ. ತಾಂಡವ್‌ಗೆ ಭಾಗ್ಯಾ ನಡೆ ನೋಡಿ ಆಶ್ಚರ್ಯ ಎನಿಸುತ್ತದೆ. ಸೊಸೆ ಇಷ್ಟು ಧೈರ್ಯವಾಗಿ ಮಾತನಾಡುವುದನ್ನು ನೋಡಿ ಕುಸುಮಾ, ಧರ್ಮರಾಜ್ , ಸುನಂದಾ ಹಾಗೂ ಮಕ್ಕಳಿಗೆ ಖುಷಿಯಾಗುತ್ತದೆ. ಭಾಗ್ಯಾ ರೂಮ್‌ಗೆ ಬಂದು ಗುಂಡಣ್ಣನ ಫೀಸ್‌ಗೆ ಹಣ ಕೊಡುತ್ತಾಳೆ. ಅದನ್ನು ನೋಡುವ ಕುಸುಮಾ ಮಕ್ಕಳಿಗೆ ಏಕೆ ದುಡ್ಡು ಕೊಡುತ್ತಿದ್ದೀಯ ಎಂದು ಪ್ರಶ್ನಿಸುತ್ತಾಳೆ. ಅಜ್ಜಿ, ಅಮ್ಮ ಸುಮ್ಮನೆ ನಮಗೆ ದುಡ್ಡು ಕೊಡುತ್ತಿಲ್ಲ. ಇವತ್ತು ಸ್ಕೂಲ್ ಫೀಸ್ ಕಟ್ಟಲು ಕೊನೆಯ ದಿನ ಅದಕ್ಕಾಗಿ ಎಂದು ಗುಂಡಣ್ಣ ಹೇಳುತ್ತಾನೆ.
ಆದರೆ ಭಾಗ್ಯಾ ಬಳಿ ಇಷ್ಟು ಹಣ ಎಲ್ಲಿಂದ ಬಂತು ಎಂದು ಕುಸುಮಾಗೆ ಅನುಮಾನ ಉಂಟಾಗುತ್ತದೆ. ನಾನು ಪರಿಚಯದವರ ಬಳಿ ಸಾಲ ಮಾಡಿದೆ ಎಂದು ಭಾಗ್ಯಾ ಹೇಳುತ್ತಾಳೆ. ಕುಸುಮಾ, ಕೆಲಸಕ್ಕೆ ಹೋಗುತ್ತಿರುವ ವಿಚಾರ ತಿಳಿದು ಭಾಗ್ಯಾ ಬೇಸರಗೊಳ್ಳುತ್ತಾಳೆ. ನಾನೂ ಕೆಲಸಕ್ಕೆ ಹೋಗುತ್ತೇನೆ ಎಂದು ಹೇಳಬೇಕು ಎನ್ನುವಷ್ಟರಲ್ಲಿ ಕುಸುಮಾ ಮಧ್ಯೆ ಮಾತನಾಡಿ, ನಾನು ಕೆಲಸಕ್ಕೆ ಹೋಗುತ್ತೇನೆಂದು ನೀನು ಹೋಗಬೇಕು ಎಂದುಕೊಳ್ಳಬೇಡ. ಸೂರ್ಯವಂಶಿ ಕುಟುಂಬದ ಸೊಸೆ ಹೊರಗೆ ಹೋಗಿ ಕೆಲಸ ಮಾಡುವುದು ನನಗೆ ಇಷ್ಟವಿಲ್ಲ ಎನ್ನುತ್ತಾಳೆ. ಬಹುಶಃ ಅತ್ತೆಯ ಈ ಮಾತು ಮುಂದೆ ಭಾಗ್ಯಾ ಕೆರಿಯರ್‌ಗೆ ಸಮಸ್ಯೆ ಆಗಬಹುದು.
ಭೂಮಿ ಕೈಸೇರಿತು ಮನೆಯ ಯಜಮಾನಿಯ ಪಟ್ಟ: ಆದ್ರೂ ಮೋಸ ಹೋಗಿಬಿಟ್ಟಳಾ ನಮ್ ಮಿಸ್ಸು? ಫ್ಯಾನ್ಸ್ ಬೇಸರ
ಸದ್ಯಕ್ಕಂತೂ ಇಂಗ್ಲೀಷ್ ಬರೋದಿಲ್ಲ ಅನ್ನೋ ಸಣ್ಣ ಗಿಲ್ಟ್ ಹೊರತಾಗಿ ಭಾಗ್ಯಾ ಆತ್ಮವಿಶ್ವಾಸ ಗರಿಗೆದರಿದೆ. ಇದನ್ನು ವೀಕ್ಷಕರು ಖುಷಿಯಿಂದ ಎನ್‌ಜಾಯ್ ಮಾಡುತ್ತಿದ್ದಾರೆ. ನಮಗೆಲ್ಲ ಸ್ಫೂರ್ತಿ ಈ ಭಾಗ್ಯ ಎಂದು ಕೊಂಡಾಡುತ್ತಿದ್ದಾರೆ. ಸುಷ್ಮಾ ರಾವ್ ಭಾಗ್ಯ ಪಾತ್ರದಲ್ಲಿ ಸೊಗಸಾಗಿ ಅಭಿನಯಿಸಿದ್ದಾರೆ.