Asianet Suvarna News Asianet Suvarna News

ಜಾಹ್ನವಿ ಕುಳಿತ ಬೆಂಚ್‌ನ ಇನ್ಯಾರೂ ಬಳಸಬಾರದು ಜಯಂತ್ ಹೊಸ ಡ್ರಾಮಾ; ಇದು ಓವರ್ ಆಯ್ತು ಅಲ್ವಾ ಎಂದ ಫ್ಯಾನ್ಸ್

ಜಯಂತ್ ಅತಿಯಾದ ಪ್ರೀತಿ ಮತ್ತು ತಾನಿರೋದು ಬಂಗಾರದ ಪಂಜರದಲ್ಲಿ ಅನ್ನೋ ಸುಳಿವನ್ನು ಮನೆಗೆ ಆಗಮಿಸಿದ ಸ್ವಾಮೀಜಿಗಳು ನೀಡಿದರೂ ಜಾಹ್ನವಿಗೆ ಅರ್ಥ ಆಗಿಲ್ಲ.

Laksmi nivasa serial Jayant s plan to take Jahnavi's classroom bench mrq
Author
First Published Jun 25, 2024, 6:54 PM IST

ಪತ್ನಿ ಜಾಹ್ನವಿ ಕಾಲೇಜಿನಲ್ಲಿ ಕುಳಿತ ಬೆಂಚ್ ಇನ್ಯಾರೂ ಬಳಸಬಾರದು ಅಂತ ಜಯಂತ್ ಹೊಸ ಡ್ರಾಮಾ ಮಾಡಿದ್ದಾನೆ. ಕಾಲೇಜಿಗೆ ಹೊಸ ಬೆಂಚ್ ಕೊಡಿಸುವ ನೆಪದಲ್ಲಿ ಜಾಹ್ನಿವಿ ಕುಳಿತ ಬೆಂಚ್ ತೆಗೆದುಕೊಳ್ಳಲು ಜಯಂತ್ ಪ್ಲಾನ್ ಮಾಡಿದ್ದಾನೆ. ಆದರೆ ಇದ್ಯಾವೂದನ್ನು ಅರ್ಥ ಮಾಡಿಕೊಳ್ಳದ ಜಾಹ್ನವಿ ತನ್ನ ಗಂಡ ಎಷ್ಟು ಒಳ್ಳೆಯವನು. ತಾನು ಕಲಿತ ಕಾಲೇಜಿಗೆ ನೆನಪಿಗಾಗಿ ಹೊಸ ಬೆಂಚ್ ಕೊಡಿಸುತ್ತಿದ್ದಾರೆ ಹೆಮ್ಮೆಪಡುತ್ತಿದ್ದಾಳೆ. ಮದುವೆ ಆದಾಗಿನಿಂದ ಪತ್ನಿಯನ್ನು ತನ್ನ ಕಣ್ಣಳತೆಯಲ್ಲಿಯೇ ಇರುವಂತೆ ಜಯಂತ್ ನೋಡಿಕೊಳ್ಳುತ್ತಿದ್ದಾನೆ. 

ಮನೆದೇವರ ಉತ್ಸವಕ್ಕಾಗಿ ಬಂದಿರೋ ಜಾಹ್ನವಿಗೆ ತವರಿನಲ್ಲಿರಲು ಅವಕಾಶ ಸಿಕ್ಕಿದೆ. ಆದ್ರೆ ಇಲ್ಲಿಯೂ ಜಯಂತ್ ಕಂಡಿಷನ್ ಹಾಕಿ ಜಾಹ್ನವಿಯನ್ನು ಕರೆದುಕೊಂಡು ಬಂದಿದ್ದಾನೆ. ಗಂಡನನ್ನೇ ಕೇಳಿ ಎಲ್ಲಾ ಕೆಲಸಗಳನ್ನು ಮಾಡಲು ಜಾಹ್ನವಿ ಶುರು ಮಾಡಿಕೊಂಡಿದ್ದಾಳೆ. ಜಯಂತ್ ಅತಿಯಾದ ಪ್ರೀತಿ ಮತ್ತು ತಾನಿರೋದು ಬಂಗಾರದ ಪಂಜರದಲ್ಲಿ ಅನ್ನೋ ಸುಳಿವನ್ನು ಮನೆಗೆ ಆಗಮಿಸಿದ ಸ್ವಾಮೀಜಿಗಳು ನೀಡಿದರೂ ಜಾಹ್ನವಿಗೆ ಅರ್ಥ ಆಗಿಲ್ಲ. ಆದರೆ ಜಯಂತ್‌ಗೆ ಮಾತ್ರ ಸ್ವಾಮೀಜಿಗಳು ಆಡಿದ ಒಂದೊಂದು ಮಾತು ಅರ್ಥವಾಗಿದೆ. 

ಗಂಡನನ್ನು ಕ್ಲಾಸ್‌ರೂಮ್‌ಗೆ ಕರೆತಂದ ಜಾಹ್ನವಿ

ಈ ಮೊದಲು ರಿಸಲ್ಟ್ ನೋಡಲು ಕಾಲೇಜಿಗೆ ಹೋಗೋಣ ಅಂದಾಗ ಜಯಂತ್ ನಿರಾಕರಿಸಿರುತ್ತಾನೆ. ಮನಸ್ಸು ಬದಲಿಸಿರುವ ಜಯಂತ್ ತಾನೇ ಜಾಹ್ನವಿಯನ್ನು ಕಾಲೇಜಿಗೆ ಕರೆದುಕೊಂಡು ಬಂದಿದ್ದಾನೆ. ಇಡೀ ಕಾಲೇಜಿಗೆ ಜಹ್ನಾವಿ ಫಸ್ಟ್ ಬಂದಿದ್ದಕ್ಕೆ, ಪತ್ನಿಯ ಫೋಟೋಗಳನ್ನು ಜಯಂತ್ ಕ್ಲಿಕ್ ಮಾಡಿದ್ದಾನೆ. ತನ್ನ ಕ್ಲಾಸ್‌ ರೂಮ್ ತೋರಿಸಲು ಜಯಂತ್‌ನನ್ನು ಕರೆದುಕೊಂಡು ಬಂದಿದ್ದಾಳೆ ಜಾಹ್ನವಿ. 

ಜಾನು ನೆನಪಲ್ಲಿ ದೇವದಾಸ್ ಆಗಿರೋ ಲಕ್ಷ್ಮೀ ನಿವಾಸ ವಿಶ್ವನ ಕುರಿತು ಇಂಟ್ರೆಸ್ಟಿಂಗ್ ಫ್ಯಾಕ್ಸ್ಟ್

ಕ್ಲಾಸ್‌ರೂಮ್ ಒಳಗೆ ಬರುತ್ತಿದ್ದಂತೆ ಪ್ರತಿದಿನ ತಾನು ಕುಳಿತುಕೊಳ್ಳುತ್ತಿದ್ದ ಬೆಂಚ್ ತೋರಿಸಿದ್ದಾಳೆ. ಈ ಬೆಂಚ್‌ ನನಗೆ ವಿದ್ಯೆ, ಒಳ್ಳೆಯ ಸ್ನೇಹಿತರನ್ನು ಹಾಗೂ ನಿಮ್ಮನ್ನು ನೀಡಿದೆ ಎಂದು ಜಾಹ್ನವಿ ಹೇಳುತ್ತಾಳೆ. ಆಗ ಜಯಂತ್ ನಾನೂ ಈ ಬೆಂಚ್ ಮೇಲೆ ಕುಳಿತುಕೊಳ್ಳಬಹುದಾ ಎಂದು ಪತ್ನಿಯ ಅನುಮತಿಯನ್ನು ಕೇಳುತ್ತಾನೆ. ಆಗ ಜಾಹ್ನವಿಯೇ ಪತಿಯನ್ನು ಬೆಂಚ್‌ ಮೇಲೆ ಕೂರಿಸುತ್ತಾಳೆ. ಬೆಂಚ್ ಮೇಲೆ ಪತ್ನಿಯನ್ನು ತಬ್ಬಿಕೊಂಡು ಮಾತನಾಡುಲು ಜಯಂತ್ ಶುರು ಮಾಡುತ್ತಾಳೆ. 

ಬೆಂಚ್ ತೆಗೆದುಕೊಂಡು ಹೋಗಲು ಜಯಂತ್ ನಾಟಕ

ಇದೇ ವೇಳೆ ಜಯಂತ್ ಬಂದಿರೋ ವಿಷಯ ತಿಳಿದು ಆತನನ್ನು ಭೇಟಿಯಾಗಲು ಕಾಲೇಜಿನ ಆಡಳಿತ ಮಂಡಳಿ ಸದಸ್ಯರು ಬಂದು ಮಾತನಾಡಿಸುತ್ತಾರೆ. ಆಗ ಕಾಲೇಜಿಗೆ ಹೊಸ ಬೆಂಚ್ ಕೊಡಿಸೋದಾಗಿ ಜಯಂತ್ ಭರವಸೆ ನೀಡುತ್ತಾನೆ. ಈ ಮೂಲಕ ಪತ್ನಿ ಕಾಲೇಜಿನಲ್ಲಿ ಕುಳಿತುಕೊಳ್ಳುತ್ತಿದ್ದ ಎಲ್ಲಾ ಬೆಂಚ್‌ಗಳನ್ನು ತೆಗೆದುಕೊಂಡು ಹೋಗಲು ಮುಂದಾಗಿದ್ದಾನೆ. ಮತ್ತೊಂದೆಡೆ ಜಾಹ್ನವಿಯನ್ನು ಭೇಟಿಯಾಗಲು ಕಾಲೇಜಿಗೆ ತನು ಬಂದಿದ್ದಾಳೆ. ತನು ಮತ್ತು ಜಾಹ್ನವಿ ಮುಖಾಮುಖಿ ಆಗ್ತಾರಾ? ಜಾಹ್ನವಿಗೆ ವಿಶ್ವನ ಲವ್‌ ಸ್ಟೋರಿಯನ್ನು ಹೇಳ್ತಾಳಾ ಎಂಬವುದು ಮುಂದಿನ ಸಂಚಿಕೆಯಲ್ಲಿ ತಿಳಿಯಲಿದೆ.

ಲಕ್ಷ್ಮಿ ನಿವಾಸ ವೆಂಕಿ -ಚೆಲುವಿ ಜೋಡಿ ಸೂಪರೋ ಸೂಪರ್ ರಂಗ…. ಅಂತಿದ್ದಾರೆ ವೀಕ್ಷಕರು

Latest Videos
Follow Us:
Download App:
  • android
  • ios