Asianet Suvarna News Asianet Suvarna News

ಭೂಮಿ ಕೈಸೇರಿತು ಮನೆಯ ಯಜಮಾನಿಯ ಪಟ್ಟ: ಆದ್ರೂ ಮೋಸ ಹೋಗಿಬಿಟ್ಟಳಾ ನಮ್​ ಮಿಸ್ಸು? ಫ್ಯಾನ್ಸ್​ ಬೇಸರ

ಭೂಮಿ ಕೈಸೇರಿತು ಮನೆಯ ಯಜಮಾನಿಯ ಪಟ್ಟ: ಆದ್ರೂ ಮೋಸ ಹೋಗಿಬಿಟ್ಟಳಾ ನಮ್​ ಮಿಸ್ಸು? ಫ್ಯಾನ್ಸ್​ ಬೇಸರ. ಆಗಿದ್ದೇನು? 
 

Bhoomika became the owner of the house but fail to understad Jaidevs plan in Amrutadhare suc
Author
First Published Jun 25, 2024, 6:12 PM IST

ಭೂಮಿಕಾಗೆ ಈಗ ದಿವಾನ್​ ಕುಟುಂಬದ ಯಜಮಾನಿ ಪಟ್ಟದ ಚರ್ಚೆ ಶುರುವಾಗಿದೆ. ಅಜ್ಜಿಗೆ ತಾನು ಹೋದ ಮೇಲೆ ಯಜಮಾನಿ ಯಾರು ಎಂಬ ಬಗ್ಗೆ ಚಿಂತೆ. ಇದೇ ಕಾರಣಕ್ಕೆ ಮನೆಯವರನ್ನೆಲ್ಲಾ ಕರೆದಿದ್ದಾಳೆ. ಈಗಲೇ ಇದೆಲ್ಲಾ ಯಾಕೆ, ನನಗೆ ನೀವೇ ಯಜಮಾನಿ ಎಂದಿದ್ದಾನೆ ಗೌತಮ್​. ಆದರೆ ಅಜ್ಜಿ ತನಗೆ ವಯಸ್ಸಾಯಿತು, ತನ್ನ ನಂತರ ಯಾರು ಎಂಬ ಬಗ್ಗೆ ಈಗಲೇ ಯೋಚನೆ ಮಾಡಬೇಕಲ್ಲಾ ಎನ್ನುತ್ತಲೇ ಮುಂದಿನ ಯಜಮಾನಿ ಯಾರು ಎಂದು ಹೇಳಲು ರೆಡಿಯಾಗಿದ್ದಾಳೆ. ಸಹಜವಾಗಿ ಅಜ್ಜಿ ಹೋದ ಮೇಲೆ ಅವಳ ಸೊಸೆಗೆ ಯಜಮಾನಿಕೆ ಬರುತ್ತದೆ. ಇದರ ಅರ್ಥ ಶಕುಂತಲಾ ದೇವಿಗೆ ಯಜಮಾನಿಕೆ ಬರಬೇಕು. ಇದರಿಂದ ಶಕುಂತಲಾ ಮತ್ತು ಆಕೆಯ ಅಣ್ಣ ಖುಷಿಯಿಂದ ಬೀಗುತ್ತಿದ್ದಾರೆ. ಅಧಿಕೃತವಾಗಿ ಅಜ್ಜಿಯ ಬಾಯಿಯಿಂದ ಈ ಮಾತು ಬರಲಿ ಎಂದು ಕಾಯುತ್ತಿದ್ದಾರೆ. ಆದರೆ ಆದದ್ದೇ ಬೇರೆ. ಅಜ್ಜಿ ಯಜಮಾನಿಕೆ ಪಟ್ಟವನ್ನು ಭೂಮಿಕಾ ಕೈಗೆ ಕೊಟ್ಟಿದ್ದಾಳೆ. ಇದನ್ನು ಕೇಳಿ ಎಲ್ಲರಿಗೂ ಅಚ್ಚರಿಯಾಗಿದೆ. ಶಕುಂತಳಾ ಕುತಂತ್ರ ಅರಿಯದ ಗೌತಮ್​ಗೂ ಇದರಿಂದ ಬೇಸರವಾಗಿದೆ. ಇನ್ನು ಶಕುಂತಲಾ, ಮಗಳು ಮತ್ತು ಅವಳ ಅಣ್ಣನ ಮುಖ ಇಂಗು ತಿಂದ ಮಂಗನಂತಾಗಿದೆ.

ಅಷ್ಟಕ್ಕೂ ಇದನ್ನು ಅಭಿಮಾನಿಗಳು ಮೊದಲೇ ಊಹಿಸಿದ್ದರು.   ಅಜ್ಜಿ ಶಕುಂತಲಾ ದೇವಿಯಲ್ಲ, ಬದಲಿಗೆ ಭೂಮಿಕಾಳಿಗೆ ಈ ಯಜಮಾನಿಕೆ ಪಟ್ಟ ಕೊಡುತ್ತಾಳೆ ಎನ್ನುವ ಬಗ್ಗೆ ಇದಾಗಲೇ ಸೋಷಿಯಲ್​  ಮೀಡಿಯಾದಲ್ಲಿ ಚರ್ಚೆ್ ಕೂಡ ಆಗಿತ್ತು.  ಇಲ್ಲಿಯವರೆಗಿನ ಎಪಿಸೋಡ್​ ನೋಡಿರುವ ಅಮೃತಧಾರೆ ಫ್ಯಾನ್ಸ್​ ಆಸೆ ಕೂಡ ಇದೆ. ಇದಕ್ಕೆ ಕಾರಣ ದಿವಾನ್​ ಕುಟುಂಬವನ್ನು ಮುನ್ನಡೆಸಿಕೊಂಡು ಹೋಗುವ ತಾಕತ್ತು ಭೂಮಿಕಾಳಿಗೆ ಬಿಟ್ಟರೆ ಯಾರಿಗೂ ಇಲ್ಲ ಎನ್ನುವುದು ಅವರ ಅಭಿಮತ.  ಆದ್ದರಿಂದ ಸಹಜವಾಗಿ ಅಭಿಮಾನಿಗಳು ಖುಷಿಯಾಗುವ ಜೊತೆಗೇ ಭೂಮಿಕಾಗೆ ಒಂದಿಷ್ಟು ಟಿಪ್ಸ್​ ಕೊಟ್ಟಿದ್ದರು. ಅದೇನೆಂದರೆ,  ಭೂಮಿಕಾ ನಿನಗೆ ಯಜಮಾನಿಕೆ ಪಟ್ಟ ಸಿಕ್ಕರೆ ನಮಗೆ ಖುಷಿ, ಆದರೆ ದಯವಿಟ್ಟು   ಬಂಗಾರ ಹೇರಿಕೊಂಡು ಇರಬೇಡಮ್ಮಾ, ಈಗಲೇ ನಮಗೆ ಇದನ್ನು ನೋಡಲು ಆಗ್ತಿಲ್ಲ. ನೀನು ಸಿಂಪಲ್​ ಆಗಿ ಹೇಗೆ ಇದ್ಯೋ ಹಾಗೆಯೇ ಇದ್ದುಬಿಡು ಎಂದು ಹೇಳಿದ್ದರು.  

ಜೈಲಿನಲ್ಲಿರೋ ಕ್ರಿಮಿನಲ್​ನನ್ನು ಬಿಡಿಸೋದು ಬೇಕಿತ್ತಾ ಇವಳಿಗೆ? ತಗ್ಲಾಕ್ಕೊಂಡ ಭಾರ್ಗವಿ!

 ಮನೆಯ ಯಜಮಾನಿಕೆ ಕೈಸೇರಿದ್ದು, ಅಭಿಮಾನಿಗಳಿಗೆ ಬಹಳ ಖುಷಿ ಕೊಟ್ಟಿದೆ. ಆದರೂ ಭೂಮಿಕಾ ಮಿಸ್ಸು ದಡ್ಡಿ ಎನಿಸಿಕೊಂಡಿದ್ದನ್ನು ಅಭಿಮಾನಿಗಳಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ. ಇದಕ್ಕೆ  ಕಾರಣ, ಜೈದೇವನ ವಿಚಾರದಲ್ಲಿ  ​ ಭೂಮಿಕಾ ಮೋಸ ಹೋಗಿದ್ದಾಳೆ. ಜೈದೇವ ಎಂಥವನು ಎಂದು  ಅವಳಿಗೆ ಗೊತ್ತಾಗಿದೆ. ಕೆಂಚ ಕೂಡ ಜೈದೇವನ ಹೆಸರು ಹೇಳಿದ್ದಾನೆ.  ಮೋಸಗಾರರನ್ನು ಹುಡುಕಿ ಹೋಗುವ ಜಾಗದಲ್ಲಿ ಜೈದೇವ ಸಿಕ್ಕಿಬಿದ್ದಿದ್ದಾನೆ. ಅಲ್ಲಿ ತಾನು ಭೂಮಿಕಾಗೆ ಸತ್ಯ ಹೇಳಿರುವ ಬಗ್ಗೆ ಕೆಂಚ ಹೇಳಿದ್ದ. ಆದ್ದರಿಂದ ಆತನನ್ನು ಜೈದೇವ್​ ಗ್ಯಾಂಗ್​ ಅಪಹರಣ ಮಾಡಿದ್ದರು. ಅದೇ ಜಾಗಕ್ಕೆ ಗೌತಮ್​ ಮತ್ತು ಭೂಮಿಕಾ ಬಂದಿದ್ದಾರೆ. ಜೈದೇವನನ್ನೂ ನೋಡಿದ್ದಾರೆ.

ಆದರೆ ಜೈದೇವ ಸುಳ್ಳು ಕಥೆ ಕಟ್ಟಿದ್ದಾನೆ. ತನ್ನ ಪತ್ನಿ ಮಲ್ಲಿಯ ಬಳಿ ಅಣ್ಣನಿಗಾಗಿ ಹೋಗಿದ್ದೆ ಎಂದಿದ್ದಾನೆ. ಕೈಗೆ ಗಾಯ ಮಾಡಿಕೊಂಡು ಬಂದವರ ರೀತಿ ಬ್ಯಾಂಡೇಜ್​ ಕಟ್ಟಿಕೊಂಡು ಅಣ್ಣನಿಗಾಗಿ ಏನು ಬೇಕಾದರೂ ಮಾಡಲು ರೆಡಿ ಎಂದಿದ್ದಾನೆ. ಜಾಣೆ ಭೂಮಿಕಾ ಇದನ್ನು ಕೇಳಿಸಿಕೊಂಡಿದ್ದಾಳೆ. ಆದರೆ ಇಲ್ಲಿ ಅವಳು ದಡ್ಡಿಯಾಗಿಬಿಟ್ಟಿದ್ದಾಳೆ. ಜೈದೇವ ನಿಜಕ್ಕೂ ಒಳ್ಳೆಯವರಾ? ಬದಲಾಗಿಬಿಟ್ಟಿದ್ದಾರಾ ಎಂದು ಯೋಚನೆ ಮಾಡಿದ್ದಾಳೆ. ಸಾಮಾನ್ಯವಾಗಿ ಎಲ್ಲವನ್ನೂ ಕೂಲಂಕುಷವಾಗಿ ಚಿಂತನೆ ನಡೆಸುವ ಭೂಮಿಕಾ ಜೈದೇವನ ವಿಷಯದಲ್ಲಿ ಪೆದ್ದಿ ರೀತಿ ವರ್ತಿಸಿರುವುದು ಅಭಿಮಾನಿಗಳಿಗೆ ಬೇಸರ ತರಿಸುತ್ತಿದೆ. 

ಅಂತರ್​ಧರ್ಮೀಯ ಪ್ರೇಮಿಗಳ ಕೌತುಕದ ಕಥೆ: ಗಂಟೆಗೊಮ್ಮೆ ಸ್ಮಾರಕಗಳ ಸಮಾಗಮ! ಡಾ.ಬ್ರೋ ಬಾಯಲ್ಲಿ ಕೇಳಿ...

Latest Videos
Follow Us:
Download App:
  • android
  • ios