'ಭಾಗ್ಯಲಕ್ಷ್ಮಿ' ಧಾರಾವಾಹಿಯಲ್ಲಿ ಭಾಗ್ಯ ಪಾತ್ರ ನಿರ್ವಹಿಸುತ್ತಿರುವ ಸುಷ್ಮಾ ರಾವ್ ಕುಂಭಮೇಳಕ್ಕೆ ತೆರಳಿದ್ದಾರೆ. ಸದ್ಯ ಧಾರಾವಾಹಿಯಲ್ಲಿ ಮಹತ್ವದ ತಿರುವು ಪಡೆದಿದ್ದು, ವೀಕ್ಷಕರು ಕುತೂಹಲದಿಂದ ಕಾಯುತ್ತಿದ್ದಾರೆ. ನಟನೆಯಲ್ಲದೆ, ಸುಷ್ಮಾ ಭರತನಾಟ್ಯ ಮತ್ತು ಕೂಚುಪುಡಿ ಕಲಾವಿದೆ. ಅವರು ಈ ಹಿಂದೆ ಶ್ರೇಷ್ಠಾ ಪಾತ್ರದ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದರು.
ಸುಷ್ಮಾ ಕೆ.ರಾವ್ ಎಂದರೆ ಬಹುಶಃ ಹೆಚ್ಚು ಮಂದಿಗೆ ಅರ್ಥ ಆಗ್ಲಿಲ್ಲ. ಆದರೆ ಭಾಗ್ಯಲಕ್ಷ್ಮಿಯ ಭಾಗ್ಯ ಎಂದರೆ ಸಾಕು, ಸೀರಿಯಲ್ ಪ್ರಿಯರ ಕಣ್ಣಮುಂದೆ ತ್ಯಾಗಮಯಿ ಪತ್ನಿ-ತಾಯಿಯ ಸ್ವರೂಪ ಬರುತ್ತದೆ. ಇವಳೇ ಭಾಗ್ಯಲಕ್ಷ್ಮಿ. ಇದೀಗ ಭಾಗ್ಯಲಕ್ಷ್ಮಿ ಸೀರಿಯಲ್ ಮಹತ್ವದ ತಿರುವು ಪಡೆದುಕೊಂಡಿದೆ. ಇಲ್ಲಿಯವರೆಗೆ ಪತ್ನಿಗೆ ಮಾನಸಿಕ ಟಾರ್ಚರ್ ಕೊಡುತ್ತಲೇ ಲವರ್ ಶ್ರೇಷ್ಠಾ ಜೊತೆ ಎಂಜಾಯ್ ಮಾಡುತ್ತಿದ್ದ ತಾಂಡವ್, ಶ್ರೇಷ್ಠಾಳ ಕುತಂತ್ರದ ಅರಿವು ಇಲ್ಲದೇ ಈಗ ಆಕೆಯನ್ನು ಮದುವೆಯಾಗುತ್ತಿದ್ದಾನೆ. ತಾಳಿಯೇ ಸರ್ವಸ್ವ ಎಂದುಕೊಂಡು ಮಾತನಾಡುತ್ತಿದ್ದ ಭಾಗ್ಯ ಈಗ ತಾಳಿಯನ್ನು ಗಂಡನ ಕೈಗೆ ಇಟ್ಟಿದ್ದಾಳೆ. ಸೀರಿಯಲ್ ಮುಂದೇನಾಗುತ್ತದೆಯೋ ಎನ್ನುವ ಕಾತರದಲ್ಲಿ ವೀಕ್ಷಕರು ಇದ್ದಾರೆ.
ಇದು ಭಾಗ್ಯಲಕ್ಷ್ಮಿ ಸೀರಿಯಲ್ ಕಥೆಯಾದ್ರೆ ಇದೀಗ ಭಾಗ್ಯ ಪಾತ್ರಧಾರಿ ಸುಷ್ಮಾ ರಾವ್ ಅವರು ಕುಂಭಮೇಳಕ್ಕೆ ಹೊರಟಿದ್ದಾರೆ. ಬರುವ ಶಿವರಾತ್ರಿಯಂದು ಅಂದರೆ ಇದೇ 26ರಂದು ಮಹಾಕುಂಭ ಮುಕ್ತಾಯಗೊಳ್ಳಲಿದೆ. ಇದಾಗಲೇ 56 ಕೋಟಿಗೂ ಅಧಿಕ ಭಕ್ತರು ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ ಮಾಡಿದ್ದಾರೆ. ವಿವಿಧ ಪಕ್ಷಗಳ ನಾಯಕರು ಕೂಡ ಪುಣ್ಯಸ್ನಾನ ಮಾಡಿ ಪುನೀತರಾಗಿದ್ದಾರೆ. ಸಿನಿ ಕ್ಷೇತ್ರದ ಸೆಲೆಬ್ರಿಟಿಗಳೂ ಸ್ನಾನ ಮಾಡಿ ಬಂದಿದ್ದಾರೆ. ಇದೀಗ ಸುಷ್ಮಾ ಅವರು ಕುಂಭಮೇಳಕ್ಕೆ ಹೊರಟಿದ್ದು, ಏರ್ಪೋರ್ಟ್ನಿಂದ ವಿಡಿಯೋ ಮಾಡಿ ಶೇರ್ ಮಾಡಿದ್ದಾರೆ. ಕೆಲವು ದಿನ ರಜೆ ಸಿಕ್ಕಿರುವ ಕಾರಣದಿಂದ ಕುಂಭಮೇಳಕ್ಕೆ ಹೊರಟಿದ್ದೇನೆ. ಹೋಗಬೇಕು ಎಂದು ತುಂಬಾ ದಿನದಿಂದ ಅಂದುಕೊಳ್ಳುತ್ತಿದ್ದೆ. ಈಗ ಟೈಮ್ ಸಿಕ್ಕಿತು ಎಂದಿದ್ದಾರೆ.
ಎರಡು ಮಕ್ಕಳ ಅಪ್ಪನ ಲವ್ ಮಾಡಿರೋ ಶ್ರೇಷ್ಠಾಳಂತ ಹೆಣ್ಮಕ್ಳದ್ದೂ ತಪ್ಪಿರಲ್ಲ...ಆದ್ರೆ... ನಟಿ ಸುಷ್ಮಾ ಮಾತು ಕೇಳಿ...
ಇನ್ನು ಸುಷ್ಮಾ ಕುರಿತು ಹೇಳುವುದಾದರೆ, ಇವರು ಚಿಕ್ಕಮಗಳೂರಿನ ಕೊಪ್ಪದವರು. ಬೆಂಗಳೂರು ವಿಶ್ವವಿದ್ಯಾಲಯದಿಂದ ಕಂಪ್ಯೂಟರ್ ಸೈನ್ಸ್‌ನಲ್ಲಿ ಬಿಎಸ್‌ಸಿ ಪದವಿ ಪಡೆದಿದ್ದಾರೆ. ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾದಿಂದ ಹಿಂದಿಯಲ್ಲಿ ಪದವಿ ಪಡೆದಿದ್ದಾರೆ. ಭರತನಾಟ್ಯ ಮತ್ತು ಕೂಚುಪುಡಿ ಕಲಾವಿದೆ. ನೃತ್ಯಕ್ಕಾಗಿ 1997ರಲ್ಲಿ ಆರ್ಯಭಟ ಪ್ರಶಸ್ತಿ ಪಡೆದಿದ್ದಾರೆ. 2005ರಲ್ಲಿ ನಟನೆಗಾಗಿಯೂ ಆರ್ಯಭಟ ಪ್ರಶಸ್ತಿ ಪಡೆದಿದ್ದಾರೆ. ಇವರಿಗೆ ಈಗ 38 ವರ್ಷ ವಯಸ್ಸು. ಸುಷ್ಮಾ ರಾವ್ ಎಸ್.ನಾರಾಯಣ್ ನಿರ್ದೇಶನದ ಭಾಗಗೀರಥಿ ಧಾರಾವಾಹಿಯಲ್ಲಿ ಹೇಮಾ ಪ್ರಭಾತ್ ಅವರ ತಂಗಿಯ ಪಾತ್ರದಲ್ಲಿ ನಟಿಸುವ ಮೂಲಕ ಕನ್ನಡ ಕಿರುತೆರೆಗೆ ಎಂಟ್ರಿ ಕೊಟ್ಟರು. ನಂತರ ಯಾವ ಜನ್ಮದ ಮೈತ್ರಿ, ಗುಪ್ತಗಾಮಿನಿ, ಸೊಸೆ ತಂದ ಭಾಗ್ಯ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ನಟಿಸಿದರು. ಇನ್ನು ಆ್ಯಂಕರ್ ಆಗಿಯೂ ನಟಿ ಸಾಕಷ್ಟು ಫೇಮಸ್ ಆಗಿದ್ದಾರೆ.
ಕೆಲ ದಿನಗಳ ಹಿಂದೆ ತಮ್ಮ ಮತ್ತು ಶ್ರೇಷ್ಠಾ ಪಾತ್ರದ ಕುರಿತು ಮಾತನಾಡಿದ್ದ ಸುಷ್ಮಾ, ಹಾಗೆ ನೋಡಿದ್ರೆ ಎರಡು ಮಕ್ಕಳ ತಂದೆಯನ್ನು ಪ್ರೀತಿ ಮಾಡಿರುವುದು ಶ್ರೇಷ್ಠಾಳ ತಪ್ಪೇನೂ ಅಲ್ಲ ಎನ್ನುತ್ತಲೇ ಅದಕ್ಕೆ ಸಮಜಾಯಿಷಿಯನ್ನೂ ಕೊಟ್ಟಿದ್ದರು. ಪಾಪ ಅವಳಿಗೆ ಲವ್ ಮಾಡುವಾಗ ತಾಂಡವ್ ಬಗ್ಗೆ ಗೊತ್ತಿರುವುದಿಲ್ಲ. ಆಮೇಲೆ ಗೊತ್ತಾಗತ್ತೆ. ಅವಳಾದ್ರೂ ಏನು ಮಾಡ್ತಾಳೆ. ಪ್ರೀತಿ ಕುರುಡು ಅಂತಾರಲ್ಲ ಹಾಗಾಗಿದೆ ಅವಳ ಪರಿಸ್ಥಿತಿ. ಲವ್ ಮಾಡಿ ಆಗಿರುತ್ತೆ, ಆಮೇಲೆ ಏನೂ ಮಾಡುವ ಸ್ಥಿತಿಯಲ್ಲಿ ಇರಲ್ಲ. ಆದರೆ, ಎಲ್ಲಾ ಗೊತ್ತಾದ ಮೇಲೆ ಅವಳು ಹಿಂದಕ್ಕೆ ಸರಿಯಬಹುದಿತ್ತು. ಮದುವೆ, ಮಕ್ಕಳು ಎಂದೆಲ್ಲಾ ತಿಳಿದ ಮೇಲೆ ತನ್ನದು ತಪ್ಪು ನಿರ್ಧಾರ ಎಂದು ತಿಳಿದುಕೊಳ್ಳಬೇಕಿತ್ತು. ಆದರೆ ಅವಳು ಹಠಕ್ಕೆ ಬಿದ್ದು ಮುಂದುವರೆದದ್ದು ತಪ್ಪು ಎಂದಿದ್ದರು.
ಹುಡುಗಿಯರ ಇಂಪ್ರೆಸ್ ಮಾಡಲು ಭಾಗ್ಯಲಕ್ಷ್ಮಿ ತಾಂಡವ್ ಕೊಟ್ಟ ಟಿಪ್ಸ್ ಕೇಳಿ ಯುವತಿಯರು ಕಿಡಿಕಿಡಿ!
