ಭಾಗ್ಯಲಕ್ಷ್ಮಿ ಸೀರಿಯಲ್‌ ತಾಂಡವ್‌ ಪಾತ್ರಧಾರಿ ಸುದರ್ಶನ್‌ ರಂಗಪ್ರಸಾದ್‌ ಅವರು ಹುಡುಗಿಯರನ್ನು ಇಂಪ್ರೆಸ್‌ ಮಾಡಲು ಏನು ಮಾಡಬೇಕು ಎನ್ನುವ ಟಿಪ್ಸ್‌ ಕೊಟ್ಟಿದ್ದಾರೆ. ಆದರೆ ಅವರ ಮಾತಿಗೆ ಸಾಕಷ್ಟು ಟೀಕೆಗಳು ಕೇಳಿಬಂದಿವೆ. ಅಷ್ಟಕ್ಕೂ ಅವರು ಹೇಳಿದ್ದೇನು ನೋಡಿ... 

ತಾಂಡವ್‌ ಎಂದರೆ ಸೀರಿಯಲ್‌ ಪ್ರೇಮಿಗಳಿಗೆ ನೆನಪಾಗುವುದು ಭಾಗ್ಯಲಕ್ಷ್ಮಿ ಸೀರಿಯಲ್‌. ಇದರಿಂದ 18 ವರ್ಷಗಳ ಸಂಸಾರದಿಂದ ಎರಡು ಮಕ್ಕಳನ್ನು ಪಡೆದಿರುವ ನಾಯಕ, ಈ ವಯಸ್ಸಿನಲ್ಲಿ ಪತ್ನಿಯನ್ನು ತೊರೆದು ಪ್ರೇಯಸಿಯ ಜೊತೆ ಇರಲು ಹಾತೊರೆಯುತ್ತಿರುವ ಕಥೆ ಇದಾಗಿದೆ. ತನ್ನ ಸಂಸಾರವನ್ನು ಉಳಿಸಿಕೊಳ್ಳಲು ಭಾಗ್ಯ ಪ್ರಯತ್ನ ಮಾಡುತ್ತಿದ್ದರೆ, ಅತ್ತ ಲವರ್‌ ಶ್ರೇಷ್ಠಾ ತಾಂಡವ್‌ಗೆ ಬ್ಲ್ಯಾಕ್‌ಮೇಲ್‌ ಮಾಡುತ್ತಲೇ ಹೇಗಾದರೂ ತನ್ನತ್ತ ಸೆಳೆದುಕೊಳ್ಳಲು ಹವಣಿಸುತ್ತಿದ್ದಾಳೆ. ಸೀರಿಯಲ್‌ನಲ್ಲಿ ಓರ್ವ ಪತ್ನಿ ಮತ್ತು ಓರ್ವ ಪ್ರೇಯಸಿಯನ್ನು ಹೊಂದಿರುವ ತಾಂಡವ್‌ ನಿಜವಾದ ಹೆಸರು ಸುದರ್ಶನ್‌ ರಂಗಪ್ರಸಾದ್‌ ಆಗಿದ್ದು, ಇವರು ರಿಯಲ್‌ ಲೈಫ್‌ನಲ್ಲಿ ಪತ್ನಿ ಸಂಗೀತಾ ಜೊತೆ ಸುಖ ಸಂಸಾರ ನಡೆಸುತ್ತಿದ್ದಾರೆ.

ಆದರೆ, ಸೀರಿಯಲ್‌ನಲ್ಲಿ ಒರಟು ಗಂಡನಾಗಿ ಸದಾ ಪತ್ನಿಗೆ ಗೂಬೆ, ಕತ್ತೆ ಸೇರಿದಂತೆ ಅಸಭ್ಯವಾಗಿ ಬೈಗುಳಗಳ ಸುರಿಮಳೆಯನ್ನೇಗೈಯುವ ಸುದರ್ಶನ್‌ ತಾಂಡವ್‌ ರಿಯಲ್‌ ಲೈಫ್‌ನಲ್ಲಿ ಸಾಫ್ಟ್‌ ಆಗಿದ್ದಾರೆ. ಆದರೆ ಇದೀಗ ಸಂದರ್ಶನವೊಂದರಲ್ಲಿ ಹುಡುಗಿಯರನ್ನು ಹೇಗೆ ಇಂಪ್ರೆಸ್‌ ಮಾಡುವುದು ಎಂದು ಹೇಳುವ ಮೂಲಕ ಹಲವರ ಕೆಂಗಣ್ಣಿಗೆ ಗುರಿಯಾಗಿದ್ದಾರೆ! ಸದಾ ತಮಾಷೆಯಾಗಿಯೇ ಉತ್ತರಿಸುವ ಸುದರ್ಶನ್‌ ರಂಗಪ್ರಸಾದ್‌ ಅವರು ಈ ವಿಷಯದಲ್ಲಿಯೂ ತಮಾಷೆ ಮಾಡಿದ್ದೇ ಆದರೂ ಅದು ಸೂಕ್ಷ್ಮ ವಿಷಯವಾಗಿರುವ ಹಿನ್ನೆಲೆಯಲ್ಲಿ, ಮಹಿಳೆಯರೂ ಸೇರಿದಂತೆ ಹಲವು ಕಮೆಂಟಿಗರು ನಟನ ವಿರುದ್ಧ ತಿರುಗಿ ಬಿದ್ದಿದ್ದಾರೆ.

ರೊಮಾನ್ಸ್ ಸೀನ್​ ಮಾಡುವಾಗ ಕೆಲವು ನಟಿಯರು ಕೊಡೋ ಕಾಟದ ಬಗ್ಗೆ ಕಿಚ್ಚ ಸುದೀಪ್​ ಓಪನ್​ ಮಾತು!

 ನಾನು, ಬೇಗ ಬೇಗ ಲವ್‌ ಮಾಡಿ ಮದ್ವೆಯಾದೆ. ಹುಡುಗಿಯರನ್ನು ಬೇಗ ಬೇಗ ಕ್ಯಾಚ್‌ ಹಾಕಿಕೊಳ್ಳಬೇಕು, ಇಲ್ಲಾಂದ್ರೆ ದೊಡ್ಡ ಲೈನೇ ನಿಂತಿರುತ್ತದೆ ಎಂದಿದ್ದಾರೆ. ಈ ಮಾತಿನ ಬಗ್ಗೆ ನೆಟ್ಟಿಗರಿಗೆ ಅಷ್ಟೇನೂ ಆಕ್ಷೇಪವಿಲ್ಲ. ಆದರೆ ಸುದರ್ಶನ್‌ ರಂಗಪ್ರಸಾದ್‌ ಅವರು ಇಷ್ಟಕ್ಕೇ ಸುಮ್ಮನಾಗದೇ, ಹುಡುಗಿಯರನ್ನು ಇಂಪ್ರೆಸ್‌ ಮಾಡುವುದು ಬಲು ಸುಲಭ. ಮೊದಲಿಗೆ ಒಂದಿಷ್ಟು ಮರ್ಯಾದೆ ಕೊಡಿ, ಆಮೇಲೆ ನಾಲ್ಕೈದು ಕಿತ್ತೋಗಿರೋ ಜೋಕ್ಸ್‌ ಹೇಳಿ, ಆಮೇಲೆ ಅವರು ಮಾತನಾಡಿರುವುದನ್ನು ಕೇಳಿಸಿಕೊಂಡರೆ ಸಾಕು ಎಂದಿದ್ದಾರೆ. ಕಿತ್ತೋಗಿರೋ ಜೋಕ್ಸ್‌ ಹೇಳಿ ಹುಡುಗಿಯರನ್ನು ಇಂಪ್ರೆಸ್‌ ಮಾಡಿಕೊಳ್ಳಬಹುದು ಎನ್ನುವ ನಟನ ಮಾತಿಗೆ ಭಾರಿ ಟೀಕೆಗಳು ಕೇಳಿಬಂದಿವೆ.

ತಾಂಡವ್‌ ಸೀರಿಯಲ್‌ನಲ್ಲಿ ಪತ್ನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸುವುದು ಇದೆ, ಆದರೆ ನಿಜ ಜೀವನದಲ್ಲಿಯೂ ನಟ ಇಂಥದ್ದೊಂದು ಚೀಪ್‌ ಮಾತನಾಡುತ್ತಾರೆ ಎನ್ನುವುದು ತಿಳಿದಿರಲಿಲ್ಲ, ತಮಾಷೆಗೂ ಒಂದು ಮಿತಿ ಇರುತ್ತದೆ. ಕಿತ್ತೋಗಿರೋ ಜೋಕ್ಸ್‌ ಕೇಳಿ ಇಂಪ್ರೆಸ್‌ ಆಗಲು ಹುಡುಗಿಯರನ್ನು ಏನೆಂದು ತಿಳಿದುಕೊಂಡಿರುವಿರಾ ಎಂದೆಲ್ಲಾ ಗರಂ ಗರಂ ಕಮೆಂಟ್ಸ್‌ ಸುರಿಮಳೆಯಾಗುತ್ತಿದೆ. ಅಂದಹಾಗೆ ಸುದರ್ಶನ್ ಮತ್ತು ಅವರ ಪತ್ನಿ ಸಂಗೀತಾ ಅವರು ‘ಪ್ರೀತಿ ಗೀತಿ ಇತ್ಯಾದಿ’ ಸಿನಿಮಾದಲ್ಲಿ ಒಟ್ಟಿಗೆ ನಟಿಸುವ ವೇಳೆ ಪ್ರೀತಿಸತೊಡಗಿದ್ದರು. ಬಳಿಕ ಈ ಜೋಡಿ ಕೆಲ ಸಿನಿಮಾಗಳಲ್ಲಿ ನಟಿಸಿ, ಚಿತ್ರರಂಗದಿಂದ ಬ್ರೇಕ್ ಪಡೆದಿತ್ತು. ಸಂಗೀತಾ ಭಟ್ ಅವರು ಸಿನಿಮಾದಲ್ಲಿ ಬಿಜಿಯಾಗಿದ್ದು, ಸುದರ್ಶನ್‌ ಅವರು ಸದ್ಯ ಭಾಗ್ಯಲಕ್ಷ್ಮಿಯಿಂದ ಫೇಮಸ್‌ ಆಗ್ತಿದ್ದಾರೆ.

ಫ್ಯಾನ್ಸ್​ಗೆ ಸಿಕ್ಕಾಪಟ್ಟೆ ಟೆನ್ಷನ್​ ಕೊಟ್ಟ ಭಾಗ್ಯ-ತಾಂಡವ್​ ಒಂದಾಗಿ ಬಿಟ್ರಾ? ಕುಣಿದು ಕುಪ್ಪಳಿಸಿದ ಜೋಡಿ! ಏನಪ್ಪಾ ಇದು?