ಎರಡು ಮಕ್ಕಳ ಅಪ್ಪನ ಲವ್ ಮಾಡಿರೋ ಶ್ರೇಷ್ಠಾಳಂತ ಹೆಣ್ಮಕ್ಳದ್ದೂ ತಪ್ಪಿರಲ್ಲ...ಆದ್ರೆ... ನಟಿ ಸುಷ್ಮಾ ಮಾತು ಕೇಳಿ...
ಭಾಗ್ಯಲಕ್ಷ್ಮಿ ಸೀರಿಯಲ್ ಭಾಗ್ಯ ಉರ್ಫ್ ಸುಷ್ಮಾ ಕೆ.ರಾವ್, ಶ್ರೇಷ್ಠಾ ಪಾತ್ರದ ಬಗ್ಗೆ ಮಾತನಾಡಿದ್ದಾರೆ. ಅವರು ಹೇಳಿದ್ದೇನು?
ಸದ್ಯ ಭಾಗ್ಯಲಕ್ಷ್ಮಿ ಸೀರಿಯಲ್ನಲ್ಲಿ ಸಕತ್ ಟ್ವಿಸ್ಟ್ ಬಂದಿದೆ. ತಾಂಡವ್ ಯಾವುದೇ ಕಾರಣಕ್ಕೂ ಶ್ರೇಷ್ಠಾಳನ್ನು ಬಿಟ್ಟು ಕೊಡುವುದಿಲ್ಲ ಎನ್ನುವ ಸತ್ಯ ಕುಸುಮಾ ಮತ್ತು ಭಾಗ್ಯಳಿಗೆ ಮನವರಿಕೆ ಆಗಿದೆ. ದಿನನಿತ್ಯವೂ ಅವನ ಮೇಲೆ ಎಗರಾಡಿ, ಕೂಗಾಡಿ ಪ್ರಯೋಜನ ಇಲ್ಲ ಎನ್ನುವುದು ಅವರಿಗೆ ತಿಳಿದಿದೆ. ಅದಕ್ಕಾಗಿಯೇ ಈಗ ಪ್ಲ್ಯಾನ್ ಮಾಡಿ ಆರತಿ ಮಾಡಿಯೇ ಶ್ರೇಷ್ಠಾಳನ್ನು ಮನೆಗೆ ಕರೆಸಿಕೊಂಡಿದ್ದಾರೆ. ಇದನ್ನು ನೋಡಿ ತಾಂಡವ್ ಮತ್ತು ಶ್ರೇಷ್ಠಾ ಇಬ್ಬರಿಗೂ ಶಾಕ್ ಆಗಿದ್ದರೂ, ಶ್ರೇಷ್ಠಾ ತಾನು ಅಂದುಕೊಂಡಂಗೆ ಆಗಿದೆ ಎನ್ನುತ್ತಲೇ ಮನೆಗೆ ಬಂದಿದ್ದಾಳೆ. ಇಲ್ಲದಿದ್ದರೆ ಆತ್ಮಹತ್ಯೆ ಮಾಡಿಕೊಳ್ತೇನೆ ಎಂದು ಹೆದರಿಸಿದ್ದರಿಂದ ತಾಂಡವ್ ಕೂಡ ಮನೆಯವರ ಮೇಲೆ ರೇಗಾಡುತ್ತಿದ್ದ. ಈಗ ಶ್ರೇಷ್ಠಾ ಮನೆಗೇ ಬಂದಿರುವುದನ್ನು ನೋಡಿ ಅವನಿಗೂ ನೆಮ್ಮದಿ. ಈಗ ಅತ್ತೆ-ಸೊಸೆ ಸೇರಿ ಶ್ರೇಷ್ಠಾಳಿಗೆ ಬುದ್ಧಿ ಕಲಿಸುತ್ತಿದ್ದಾರೆ. ಬೆಳಿಗ್ಗೆ ಏಳದಿದ್ದರೆ ನೀರು ಹೊಯ್ದು ಎಬ್ಬಿಸುವುದು, ಮನೆಯ ಕೆಲಸ ಮಾಡಿಸುವುದು... ಹೀಗೆ ಆಕೆಗೆ ಟಾರ್ಚರ್ ಕೊಡುತ್ತಿದ್ದಾರೆ. ನಮ್ಮ ಮನೆಯ ಸೊಸೆಯಾಗಲು ಇವೆಲ್ಲಾ ಅರ್ಹತೆ ಬೇಕು ಎಂದು ಕುಸುಮಾ ಹೇಳುತ್ತಿರುವುದರಿಂದ ಶ್ರೇಷ್ಠಾಳಿಗೆ ಈಗ ಅಲ್ಲಿಂದ ಯಾವಾಗ ಕಾಲು ಕೀಳುತ್ತೇನೋ ಎನ್ನುವ ಭಯ ಶುರುವಾಗಿದೆ.
ಇದು ಭಾಗ್ಯಲಕ್ಷ್ಮಿ ಸೀರಿಯಲ್ ಕಥೆಯಾಯ್ತು. ಇಬ್ಬರು ಬೆಳೆದು ನಿಂತಿರುವ ಮಕ್ಕಳು, 18 ವರ್ಷಗಳ ಸಂಸಾರ ಎಲ್ಲವನ್ನೂ ಧಿಕ್ಕರಿಸಿ ತಾಂಡವ್ ಶ್ರೇಷ್ಠಾಳ ಹಿಂದೆ ಬಿದ್ದಿರೋದು ಹಲವರಿಗೆ ನುಂಗಲಾಗದ ತುತ್ತಾಗಿದೆ. ಅಷ್ಟಕ್ಕೂ ಇದೇನು ಸೀರಿಯಲ್ ಕಥೆಯಲ್ಲ. ನಿಜ ಜೀವನದಲ್ಲಿಯೂ ಎಷ್ಟೋ ಮಂದಿ ಈ ರೀತಿಯ ಬದುಕನ್ನು ಬದುಕುತ್ತಿದ್ದಾರೆ. ಗಣ್ಯಾತಿಗಣ್ಯರು ಎನಿಸಿಕೊಂಡವರೂ ಹೀಗೆ ಅಕ್ರಮ ಸಂಬಂಧ ಇಟ್ಟುಕೊಂಡಿರುವುದು ಉಂಟು. ಕೆಲವು ಬೆಳಕಿಗೆ ಬರುತ್ತಿದ್ದರೆ, ಮತ್ತೆ ಅಲ್ಲಲ್ಲೇ ಮುಚ್ಚಿಹೋಗುತ್ತಿವೆ. ಯಾವುದೋ ಹಗರಣ ನಡೆದಾಗ ಎಲ್ಲವೂ ಬಟಾಬಯಲಾಗುತ್ತವೆಯಷ್ಟೇ. ಆದರೆ, ಇಂಥ ಸಂಬಂಧಗಳ ಬಗ್ಗೆ ಇದೀಗ ಭಾಗ್ಯ ಪಾತ್ರಧಾರಿ ಸುಷ್ಮಾ ಕೆ. ರಾವ್ ಮಾತನಾಡಿದ್ದಾರೆ.
ಹುಡುಗಿಯರ ಇಂಪ್ರೆಸ್ ಮಾಡಲು ಭಾಗ್ಯಲಕ್ಷ್ಮಿ ತಾಂಡವ್ ಕೊಟ್ಟ ಟಿಪ್ಸ್ ಕೇಳಿ ಯುವತಿಯರು ಕಿಡಿಕಿಡಿ!
ರೇಡಿಯೋಸಿಟಿ ಚಾನೆಲ್ಗೆ ನೀಡಿರುವ ಸಂದರ್ಶನದಲ್ಲಿ ಅವರು, ಹಲವಾರು ವಿಷಯಗಳ ಬಗ್ಗೆ ಮಾತನಾಡಿದ್ದಾರೆ. ಶ್ರೇಷ್ಠಾಳ ಬಗ್ಗೆ ಕೇಳಿದಾಗ ಸುಷ್ಮಾ ಅವರು, ಹಾಗೆ ನೋಡಿದ್ರೆ ಎರಡು ಮಕ್ಕಳ ತಂದೆಯನ್ನು ಪ್ರೀತಿ ಮಾಡಿರುವುದು ಶ್ರೇಷ್ಠಾಳ ತಪ್ಪೇನೂ ಅಲ್ಲ ಎನ್ನುತ್ತಲೇ ಅದಕ್ಕೆ ಸಮಜಾಯಿಷಿಯನ್ನೂ ಕೊಟ್ಟಿದ್ದಾರೆ. ಪಾಪ ಅವಳಿಗೆ ಲವ್ ಮಾಡುವಾಗ ತಾಂಡವ್ ಬಗ್ಗೆ ಗೊತ್ತಿರುವುದಿಲ್ಲ. ಆಮೇಲೆ ಗೊತ್ತಾಗತ್ತೆ. ಅವಳಾದ್ರೂ ಏನು ಮಾಡ್ತಾಳೆ. ಪ್ರೀತಿ ಕುರುಡು ಅಂತಾರಲ್ಲ ಹಾಗಾಗಿದೆ ಅವಳ ಪರಿಸ್ಥಿತಿ. ಲವ್ ಮಾಡಿ ಆಗಿರುತ್ತೆ, ಆಮೇಲೆ ಏನೂ ಮಾಡುವ ಸ್ಥಿತಿಯಲ್ಲಿ ಇರಲ್ಲ. ಆದರೆ, ಎಲ್ಲಾ ಗೊತ್ತಾದ ಮೇಲೆ ಅವಳು ಹಿಂದಕ್ಕೆ ಸರಿಯಬಹುದಿತ್ತು. ಮದುವೆ, ಮಕ್ಕಳು ಎಂದೆಲ್ಲಾ ತಿಳಿದ ಮೇಲೆ ತನ್ನದು ತಪ್ಪು ನಿರ್ಧಾರ ಎಂದು ತಿಳಿದುಕೊಳ್ಳಬೇಕಿತ್ತು. ಆದರೆ ಅವಳು ಹಠಕ್ಕೆ ಬಿದ್ದು ಮುಂದುವರೆದದ್ದು ತಪ್ಪು ಎಂದಿದ್ದಾರೆ. ಇದೇ ವಿಡಿಯೋದಲ್ಲಿ, ಸುಷ್ಮಾ ಅವರು ಸೀರಿಯಲ್ ಬಗ್ಗೆ ಹಲವು ವಿಷಯಗಳನ್ನು ಶೇರ್ ಮಾಡಿಕೊಂಡಿದ್ದಾರೆ.
ಫ್ಯಾನ್ಸ್ಗೆ ಸಿಕ್ಕಾಪಟ್ಟೆ ಟೆನ್ಷನ್ ಕೊಟ್ಟ ಭಾಗ್ಯ-ತಾಂಡವ್ ಒಂದಾಗಿ ಬಿಟ್ರಾ? ಕುಣಿದು ಕುಪ್ಪಳಿಸಿದ ಜೋಡಿ! ಏನಪ್ಪಾ ಇದು?