ಫ್ಯಾನ್ಸ್ಗೆ ಸಿಕ್ಕಾಪಟ್ಟೆ ಟೆನ್ಷನ್ ಕೊಟ್ಟ ಭಾಗ್ಯ-ತಾಂಡವ್ ಒಂದಾಗಿ ಬಿಟ್ರಾ? ಕುಣಿದು ಕುಪ್ಪಳಿಸಿದ ಜೋಡಿ! ಏನಪ್ಪಾ ಇದು?
ಭಾಗ್ಯಲಕ್ಷ್ಮಿ ಸೀರಿಯಲ್ನಲ್ಲಿ ಭಾಗ್ಯ ಮತ್ತು ತಾಂಡವ್ ಕಿತ್ತಾಡುತ್ತಿರುವ ನಡುವೆಯೇ ಡಾನ್ಸ್ ಮಾಡಿರುವ ವಿಡಿಯೋ ವೈರಲ್ ಆಗಿದೆ. ಫ್ಯಾನ್ಸ್ ಹೇಳ್ತಿರೋದೇನು?
ಭಾಗ್ಯಲಕ್ಷ್ಮಿ ಸೀರಿಯಲ್ ಪ್ರೇಮಿಗಳಿಗೆ ಸದ್ಯ ಟೆನ್ಷನ್ ಶುರುವಾಗಿದೆ. ಭಾಗ್ಯ ಬದಲಾಗಿ ಗಂಡನಿಗೆ ಪಾಠ ಕಲಿಸ್ತಿದ್ದರೂ, ತಾಂಡವ್ ಪ್ರೇಯಸಿಯನ್ನು ಬಿಡಲು ತಯಾರಿಲ್ಲ. ಪತ್ನಿ ಭಾಗ್ಯ ಅವನ ಪಾಲಿಗೆ ಬಿಸಿ ತುಪ್ಪ ಆಗಿದ್ದಾಳೆ. ಅತ್ತ ಉಗಿಯಲೂ ಆಗ್ತಿಲ್ಲ, ಇತ್ತ ಬಿಡಲೂ ಆಗ್ತಿಲ್ಲ. ಪತ್ನಿಯ ಜೊತೆ ಇರಲು ಇಷ್ಟವಿಲ್ಲ, ಬಿಟ್ಟು ಶ್ರೇಷ್ಠಾ ಜೊತೆ ಹೋದರೆ ಪೊಲೀಸರು ಯಾವುದೇ ಸಮಯದಲ್ಲಿ ಅರೆಸ್ಟ್ ಮಾಡುವ ಭಯ. ಅದೇ ಇನ್ನೊಂದೆಡೆ, ಮಗಳಿಗೆ ಕಾಲೇಜಿಗೆ ಸೇರಿಸಲು ಹೋದಾಗ ಪ್ರಿನ್ಸಿಪಾಲ್ಗೆ ಕೆಟ್ಟದ್ದಾಗಿ ಮಾತನಾಡಿ ಮಗಳ ಅಡ್ಮಿಷನ್ಗೂ ಅಡ್ಡಗಾಲು ಹಾಕಿದ್ದಾನೆ ತಾಂಡವ್. ಅಮ್ಮ ಭಾಗ್ಯಳ ವಿರುದ್ಧ ಕೆಟ್ಟದ್ದಾಗಿ ಮಾತನಾಡ್ತಿದ್ದ ಸಹಪಾಠಿಗಳಿಗೆ ಹೊಡೆದು ಕಾಲೇಜಿನಿಂದ ಸಸ್ಪೆಂಡ್ ಆಗಿದ್ದಾಳೆ ಮಗಳು ತನ್ವಿ. ಪ್ರಿನ್ಸಿಪಾಲ್ರನ್ನು ಕಾಡಿಬೇಡಿ ಅವಳನ್ನು ಮತ್ತೆ ಸೇರಿಸಲು ಕಾಲೇಜಿಗೆ ಬಂದರೆ ಅಲ್ಲಿ ಪ್ರಿನ್ಸಿಪಾಲ್ರಿಗೇ ಎದುರು ಮಾತನಾಡಿದ್ದಾನೆ ತಾಂಡವ್. ಮುಂದೇನಾಗುತ್ತೆ ಎನ್ನುವ ಟೆನ್ಷನ್ನಲ್ಲಿದ್ದಾರೆ ಫ್ಯಾನ್ಸ್.
ಇದರ ನಡುವೆಯೇ, ತಾಂಡವ್ ಮತ್ತು ಭಾಗ್ಯ ಭರ್ಜರಿ ರೀಲ್ಸ್ ಮಾಡಿದ್ದಾರೆ. ಅಷ್ಟಕ್ಕೂ ಇದೇನು ಸೀರಿಯಲ್ ಒಳಗಿನ ಮಾತಲ್ಲ, ಬದಲಿಗೆ ಭಾಗ್ಯಲಕ್ಷ್ಮಿ ಸೀರಿಯಲ್ ತಂಡದವರು ಆಗಾಗ್ಗೆ ರೀಲ್ಸ್ ಮಾಡುತ್ತಲೇ ಇರುತ್ತಾರೆ. ಇದೀಗ ಭಾಗ್ಯ ಪಾತ್ರಧಾರಿ ಸುಷ್ಮಾ ಕೆ. ರಾವ್ ಹಾಗೂ ತಾಂಡವ್ ಪಾತ್ರಧಾರಿ ಸುದರ್ಶನ್ ರಂಗಪ್ರಸಾದ್ ಮಕ್ಕಳ ಜೊತೆ ರೀಲ್ಸ್ ಮಾಡಿದ್ದು ಅದೀಗ ವೈರಲ್ ಆಗಿದೆ. ಅಲ್ಲಿ ಟೆನ್ಷನ್ ಕೊಟ್ಟು ಇಲ್ಲಿ ಮಜ ಮಾಡ್ತಿದ್ದೀರಾ ಎಂದು ಹಲವರು ಕಮೆಂಟ್ ನಲ್ಲಿ ಇವರನ್ನು ಪ್ರಶ್ನಿಸುತ್ತಿದ್ದಾರೆ.
ಎರಡು ಮಕ್ಕಳಾಗೋ ತನಕ ಸುಮ್ಮನಿದ್ದಿ ಯಾಕೆ? ಲೈವ್‌ನಲ್ಲಿ ಬೆವರಿಳಿಸಿದ ವೀಕ್ಷಕರಿಗೆ ತಾಂಡವ್ ಉತ್ತರ ಕೇಳಿ...
ಇನ್ನು ಸುಷ್ಮಾ ಕೆ. ರಾವ್ ಕುರಿತು ಹೇಳುವುದಾದರೆ, ಇವರು ಚಿಕ್ಕಮಗಳೂರಿನ ಕೊಪ್ಪದವರು. ಬೆಂಗಳೂರುಲ ವಿಶ್ವವಿದ್ಯಾಲಯದಿಂದ ಕಂಪ್ಯೂಟರ್ ಸೈನ್ಸ್‌ನಲ್ಲಿ ಬಿಎಸ್‌ಸಿ ಪದವಿ ಪಡೆದಿದ್ದಾರೆ. ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾದಿಂದ ಹಿಂದಿಯಲ್ಲಿ ಪದವಿ ಪಡೆದಿದ್ದಾರೆ. ಭರತನಾಟ್ಯ ಮತ್ತು ಕೂಚುಪುಡಿ ಕಲಾವಿದೆ. ನೃತ್ಯಕ್ಕಾಗಿ 1997ರಲ್ಲಿ ಆರ್ಯಭಟ ಪ್ರಶಸ್ತಿ ಪಡೆದಿದ್ದಾರೆ. 2005ರಲ್ಲಿ ನಟನೆಗಾಗಿಯೂ ಆರ್ಯಭಟ ಪ್ರಶಸ್ತಿ ಪಡೆದಿದ್ದಾರೆ. ಇವರಿಗೆ ಈಗ 38 ವರ್ಷ ವಯಸ್ಸು. ಸುಷ್ಮಾ ರಾವ್ ಎಸ್.ನಾರಾಯಣ್ ನಿರ್ದೇಶನದ ಭಾಗಗೀರಥಿ ಧಾರಾವಾಹಿಯಲ್ಲಿ ಹೇಮಾ ಪ್ರಭಾತ್ ಅವರ ತಂಗಿಯ ಪಾತ್ರದಲ್ಲಿ ನಟಿಸುವ ಮೂಲಕ ಕನ್ನಡ ಕಿರುತೆರೆಗೆ ಎಂಟ್ರಿ ಕೊಟ್ಟರು. ನಂತರ ಯಾವ ಜನ್ಮದ ಮೈತ್ರಿ, ಗುಪ್ತಗಾಮಿನಿ, ಸೊಸೆ ತಂದ ಭಾಗ್ಯ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದಾರೆ.
ಇನ್ನು ತಾಂಡವ್ ಅರ್ಥಾತ್ ಸುದರ್ಶನ್ ಅವರ ರಿಯಲ್ ಲೈಫ್ ಕುರಿತು ಹೇಳುವುದಾದರೆ, ಇವರ ಮದುವೆಯಾಗಿ ಒಂಬತ್ತು ವರ್ಷಗಳಾಗಿವೆ. ಪತ್ನಿ ಸಂಗೀತಾ ಭಟ್ ನಟಿಯಾಗಿ, ಮಾಡೆಲ್ ಆಗಿ ಗುರುತಿಸಿಕೊಂಡಿದ್ದಾರೆ. ತಮಿಳು ಸಿನಿಮಾ ಮೂಲಕ ಸಂಗೀತ ಭಟ್ ಚಿತ್ರರಂಗಕ್ಕೂ ಪದಾರ್ಪಣೆ ಮಾಡಿದ್ದಾರೆ. ಕನ್ನಡದಲ್ಲಿ ಕೆಲವೊಂದು ಸಿನಿಮಾಗಳಲ್ಲಿ ನಟಿಸಿದ್ದ ಸಂಗೀತಾ ಭಟ್ ಸ್ವಲ್ಪ ಕಾಲ ಸಿನಿ ಪಯಣದಿಂದ ದೂರವೇ ಉಳಿದು 2 ವರ್ಷಗಳ ನಂತರ ಮತ್ತೆ ಸಿನಿಮಾಗಳಲ್ಲಿ ನಟಿಸಿದ್ದರು. ನಟನೆಯಿಂದ ದೂರ ಉಳಿದ ನಂತರ ಸಂಗೀತಾ ಅವರು ಕೆಲವು ದಿನಗಳ ಕಾಲ ಜರ್ಮನಿಯಲ್ಲಿದ್ದರು. ಕಳೆದ ವರ್ಷ ಬಿಡುಗಡೆಯಾದ '48 ಅವರ್ಸ್' ಸಿನಿಮಾ ಅವರ ಕೊನೆಯ ಚಿತ್ರ.
ನನ್ನ ರಿಯಲ್ ಹೆಂಡ್ತಿಯಾಗಿದ್ರೆ ನನ್ನ ಕಿಡ್ನಿ ಮಾರಿ ಐಫೋನ್ ತಗೊಂಡ್ ಬರುತ್ತಿದ್ದಳು ಅಷ್ಟೇ!'