ಭಾಗ್ಯ-ತಾಂಡವ್‌ರ ಸಂಸಾರ ಸರಿಪಡಿಸಲು ಕುಸುಮಾ ಪ್ರಯತ್ನಿಸುತ್ತಿದ್ದಾಳೆ. ತಾಂಡವ್‌ ಮಾತ್ರ ಭಾಗ್ಯಳಿಂದ ದೂರಾಗಿ ಶ್ರೇಷ್ಠಳೊಂದಿಗೆ ಬದುಕಲು ಬಯಸುತ್ತಿದ್ದಾನೆ. ಭಾಗ್ಯಳ ಬದಲಾವಣೆಗೆ ಕುಸುಮಾ ಒತ್ತಾಯಿಸುತ್ತಿದ್ದರೆ, ತಾಂಡವ್‌ನ ವರ್ತನೆಯಿಂದ ಭಾಗ್ಯ ದುಃಖಿತಳಾಗಿದ್ದಾಳೆ. ಶ್ರೇಷ್ಠಳ ಕುತಂತ್ರಗಳು ಫಲಿಸುತ್ತಿಲ್ಲ. ತಾಂಡವ್‌ ಭಾಗ್ಯಳ ಬಳಿ ಮರಳುವನೇ?

ʼಭಾಗ್ಯಲಕ್ಷ್ಮೀʼ ಧಾರಾವಾಹಿಯಲ್ಲಿ ಭಾಗ್ಯ-ತಾಂಡವ್‌ ಸಂಸಾರ ಸರಿ ಮಾಡೋದೇ ಕುಸುಮಾ-ಸುನಂದಾರ ಗುರಿಯಾಗಿದೆ. ಇನ್ನೊಂದು ಕಡೆ ಭಾಗ್ಯಳಿಂದ ಸಂಪೂರ್ಣವಾಗಿ ದೂರ ಆಗಿ ಅಪ್ಪ-ಅಮ್ಮ, ಮಕ್ಕಳು, ಶ್ರೇಷ್ಠ ಜೊತೆ ಬದುಕಬೇಕು ಅಂತ ತಾಂಡವ್‌ ಕನಸು ಕಾಣುತ್ತಿದ್ದಾನೆ. ಗಂಡ ದಾರಿ ತಪ್ಪಿದ್ದಾನೆ ಅಂತ ಭಾಗ್ಯ ಕಣ್ಣೀರು ಹಾಕುತ್ತಿದ್ದಾಳೆ. ಮುಂದೆ ಏನಾಗುವುದು?

ತಾಂಡವ್‌ ಸಮಸ್ಯೆ ಏನು?
ಕುಸುಮಾ ಈಗಾಗಲೇ ತಾಂಡವ್‌ನನ್ನು ಮನೆಯಿಂದ ಹೊರಗಡೆ ಹಾಕಿದ್ದಾಳೆ. ಮಕ್ಕಳಿಗೆ ತಾಯಿ ಭಾಗ್ಯ ಜೊತೆ ಇರೋಕೆ ಇಷ್ಟ. ಭಾಗ್ಯ ಈಗ ಫೈವ್‌ಸ್ಟಾರ್‌ ಶೆಫ್‌ನಲ್ಲಿ ಉದ್ಯೋಗದಲ್ಲಿ ಒಳ್ಳೆಯ ಸಂಬಳ ಗಳಿಸುತ್ತಿದ್ದಾಳೆ. ಪ್ರತಿ ಬಾರಿಯೂ ಭಾಗ್ಯಳನ್ನು ಹೊಗಳ್ತಾರೆ, ಮೆರಿಸ್ತಾರೆ, ನನ್ನನ್ನು ಕಾಲ ಕಸ ಮಾಡಿಕೊಂಡಿದ್ದಾರೆ ಅಂತ ತಾಂಡವ್‌ ಬೇಸರದಲ್ಲಿದ್ದಾನೆ.

ಆಹಾ ! ಅದ್ಭುತವಾಗಿ ನಾಟಕವಾಡ್ತಿದ್ದಾನೆ ತಾಂಡವ್, ಮಗನ ಮಾತಿಗೆ ಕರಗಿದ ಕುಸುಮ

ಕಣ್ಣೀರು ಹಾಕುತ್ತಿರುವ ಭಾಗ್ಯ! 
ತಾಯಿಯೇ ಅಡ್ಜಸ್ಟ್‌ ಮಾಡಿಕೋ ಅಂತ ಸಲಹೆ ನೀಡಿದ್ದಾಳೆ. ಇಷ್ಟು ವರ್ಷಗಳ ಕಾಲ ತಗ್ಗಿ ಬಗ್ಗಿ ನಡೆದೆ, ಡ್ಯಾನ್ಸ್‌ ಕಲಿತೆ, ಇಂಗ್ಲಿಷ್‌ ಕಲಿತೆ, ಹತ್ತನೇ ತರಗತಿ ಪರೀಕ್ಷೆ ಬರೆದು ಪಾಸ್‌ ಆದೆ. ಇಷ್ಟೆಲ್ಲ ಮಾಡಿದರೂ ನನ್ನನ್ನೇ ಬದಲಾಗು, ಅಡ್ಜಸ್ಟ್‌ ಮಾಡಿಕೋ ಅಂತ ಹೇಳ್ತಾರೆ ಎಂದು ಭಾಗ್ಯ ಕಣ್ಣೀರು ಹಾಕುತ್ತಿದ್ದಾಳೆ. ನನ್ನ ತಂದೆ ಬದಲಾಗಿದ್ದರೆ ಎಷ್ಟು ಚೆನ್ನಾಗಿರತ್ತೆ, ನಾವೆಲ್ಲ ಒಟ್ಟಿಗೆ ಕೂತ್ಕೊಂಡು ಊಟ ಮಾಡೋದೆ ಖುಷಿ, ನಾವೆಲ್ಲ ಒಟ್ಟಿಗಿದ್ದರೆ ಎಷ್ಟು ಚೆಂದ ಅಂತ ಭಾಗ್ಯ ಮಕ್ಕಳು ಆಸೆಪಡುತ್ತಿದ್ದಾರೆ. ಇವರ ಆಸೆ ಯಾವಾಗ ಈಡೇರತ್ತೋ ಏನೋ!

ಭಾಗ್ಯಲಕ್ಷ್ಮಿಯಲ್ಲಿ ಮನೆಬಿಟ್ಟು ಹೊರಟ ತಾಂಡವ್ ಟರ್ಕಿಯಲ್ಲಿ ಹೆಂಡ್ತಿ ಜೊತೆ ಪತ್ತೆ!

ಕಾದು ಕುಳಿತಿರೋ ಶ್ರೇಷ್ಠ
ತಾಂಡವ್‌ ಜೊತೆ ಬದುಕಬೇಕು, ಕುಸುಮಾ-ಭಾಗ್ಯಗೆ ಪಾಠ ಕಲಿಸಬೇಕು ಅಂತಿರೋ ಶ್ರೇಷ್ಠ ಕಂಡರೆ ತಾಂಡವ್‌ಗೂ ಅಷ್ಟಕ್ಕಷ್ಟೇ ಅನ್ನುವ ಥರ ಆಗಿದೆ. ಶ್ರೇಷ್ಠಗೆ ಅಡುಗೆ ಮಾಡೋಕೆ ಬರೋದಿಲ್ಲ, ಮನೆ ಕೆಲಸವೂ ಗೊತ್ತಿಲ್ಲ. ಆಫೀಸ್‌ ಕೆಲಸ ಬಿಟ್ಟರೆ ಎಲ್ಲ ವಿಷಯದಲ್ಲಿಯೂ ಅವಳು ಭಾಗ್ಯ ಮುಂದೆ ಜೀರೋ ಎನ್ನಬಹುದು. ಯಾವುದೇ ಕಾರಣಕ್ಕೆ ತಾಂಡವ್‌ಗೆ ಪತ್ನಿಯಾಗೋಕೆ, ಅವನ ಮಕ್ಕಳ ತಾಯಿಯಾಗೋಕೆ, ಸೊಸೆ ಆಗೋಕೆ ಶ್ರೇಷ್ಠ ಅರ್ಹ ಅಲ್ಲ ಎನ್ನೋದು ಎಲ್ಲರಿಗೂ ಅರ್ಥ ಆಗ್ತಿದೆ. ಆದರೆ ಈ ವಿಷಯ ತಾಂಡವ್‌ಗೆ ಅರ್ಥ ಆಗ್ತಿಲ್ಲ. ಈ ವಿಷಯ ಅರ್ಥ ಆದ ದಿನ ತಾಂಡವ್‌ ಮತ್ತೆ ಭಾಗ್ಯ ಬಳಿ ಬರಬಹುದು.

ಭಾಗ್ಯಲಕ್ಷ್ಮೀ ಸೀರಿಯಲ್​ ಅಮ್ಮ- ಮಗಳು ಭಾಗ್ಯಾ-ತನ್ವಿ ಭರ್ಜರಿ ರೀಲ್ಸ್​ಗೆ ಅಭಿಮಾನಿಗಳು ಫಿದಾ

ಶ್ರೇಷ್ಠಾ ಕುತಂತ್ರ
ತಾಂಡವ್‌ನನ್ನು ವಶ ಮಾಡಿಕೊಳ್ಳಬೇಕು, ಭಾಗ್ಯ-ಕುಸುಮಾಗೆ ಪಾಠ ಕಲಿಸಬೇಕು ಅಂತ ಶ್ರೇಷ್ಠ ದಿನನಿತ್ಯ ಒಂದಲ್ಲ ಒಂದು ನಾಟಕ ಮಾಡುತ್ತಾಳೆ. ಆದರೆ ಅವಳು ಏನೂ ಮಾಡಿದ್ರೂ ತಾಂಡವ್‌ನನ್ನು ಸಂಪೂರ್ಣ ವಶಮಾಡಿಕೊಳ್ಳಲಾಗ್ತಿಲ್ಲ. ಶ್ರೇಷ್ಠ ಕಂಡರೆ ತಾಂಡವ್‌ಗೆ ಒಮ್ಮೊಮ್ಮೆ ಕಿರಿಕಿರಿ ಆಗುತ್ತದೆ. ಇದೇ ಆಮೇಲೆ ಹೆಚ್ಚಾಗಿ ಅವನು ಭಾಗ್ಯ ಬಳಿ ಬರಬಹುದು.

ಕುಸುಮಾ ಧ್ಯೇಯ ಏನು?
ಭಾಗ್ಯ ಸ್ವಲ್ಪ ಬದಲಾದ್ರೆ ಆಮೇಲೆ ತಾಂಡವ್‌ ಅವಳನ್ನು‌ ಸಂಪೂರ್ಣ ಒಪ್ಪಿಕೊಳ್ತಾನೆ. ಇದನ್ನೇ ಕುಸುಮಾ, ಸುನಂದ ಹೇಳುತ್ತಿರೋದು. ಭಾಗ್ಯ-ತಾಂಡವ್‌ ಒಂದಾಗ್ತಾರೆ, ತಾಂಡವ್‌ ಬದಲಾಗ್ತಾನೆ, ಅವನು ಮನೆಗೆ ಬರ್ತಾನೆ ಅಂತ ಕುಸುಮಾ ನಂಬಿಕೊಂಡು ಕೂತಿದ್ದಾಳೆ. ಈ ವಿಷಯ ನಿಜ ಆಗತ್ತೋ ಇಲ್ಲವೋ ಎಂದು ಕಾದು ನೋಡಬೇಕಿದೆ.

ಕಥೆ ಏನು?
ಭಾಗ್ಯ-ತಾಂಡವ್‌ ಮದುವೆಯಾಗಿ ಹದಿನೇಳು ವರ್ಷಗಳು ಕಳೆದಿವೆ. ಇವರಿಗೆ ಇಬ್ಬರು ಮಕ್ಕಳು. ತಾಂಡವ್‌ಗೆ ಭಾಗ್ಯ ಕಂಡರೆ ಇಷ್ಟವೇ ಇಲ್ಲ. ಭಾಗ್ಯಳನ್ನು ಇಷ್ಟವಿಲ್ಲದೆ ಅವನು ಮದುವೆಯಾಗಿದ್ದಾನೆ, ಈಗ ಅವನಿಗೆ ಪತ್ನಿಯಿಂದ ಡಿವೋರ್ಸ್‌ ಬೇಕಿದೆ. ಭಾಗ್ಯಗೆ ಡಿವೋರ್ಸ್‌ ಕೊಟ್ಟು, ಅವನು ಶ್ರೇಷ್ಠಳನ್ನು ಮದುವೆಯಾಗಿ ಬದುಕುವ ಆಸೆ ಹೊಂದಿದ್ದಾನೆ. ಇದು ಸಾಧ್ಯ ಆಗತ್ತಾ ಅಂತ ಕಾದು ನೋಡಬೇಕಿದೆ.

ಭಾಗ್ಯ ಪಾತ್ರದಲ್ಲಿ ಸುಷ್ಮಾ ರಾವ್‌, ತಾಂಡವ್‌ ಪಾತ್ರದಲ್ಲಿ ಸುದರ್ಶನ ರಂಗಪ್ರಸಾದ್‌ ಅವರು ನಟಿಸುತ್ತಿದ್ದಾರೆ.