ಭಾಗ್ಯಲಕ್ಷ್ಮೀ ಸೀರಿಯಲ್​ ಅಮ್ಮ- ಮಗಳು ಭಾಗ್ಯಾ-ತನ್ವಿ ಭರ್ಜರಿ ರೀಲ್ಸ್​ಗೆ ಅಭಿಮಾನಿಗಳು ಫಿದಾ

ಭಾಗ್ಯಲಕ್ಷ್ಮೀ ಸೀರಿಯಲ್​ ಅಮ್ಮ ಭಾಗ್ಯ ಪಾತ್ರಧಾರಿ ಸುಷ್ಮಾ ರಾವ್​ ಮತ್ತು ಮಗಳು ತನ್ವಿ ಪಾತ್ರಧಾರಿ ಅಮೃತಾ ಗೌಡ ಭರ್ಜರಿ ರೀಲ್ಸ್​ ಮಾಡಿದ್ದಾರೆ. ವಿಡಿಯೋ ವೈರಲ್​ ಆಗಿದೆ.  
 

BhagyaLakshmi  Bhagyas character Sushma Rao and Tanvi Amrutha Gowdas reels

ಕಲರ್ಸ್​ ಕನ್ನಡದ ಭಾಗ್ಯಲಕ್ಷ್ಮೀ ಸೀರಿಯಲ್​ ಇದೀಗ ಕುತೂಹಲದ ಘಟ್ಟ ತಲುಪಿದೆ. ಸವತಿ ಶ್ರೇಷ್ಠಾ ಭಾಗ್ಯಳ ಮನೆ ಸೇರಿದ್ದಾಳೆ. ಭಾಗ್ಯ ಮತ್ತು ಅತ್ತೆ ಕುಸುಮಾ ಆಕೆಯನ್ನು ಪೂಜೆ ಮಾಡಿ ಮನೆ ತುಂಬಿಸಿಕೊಂಡಿದ್ದು, ಇದೀಗ ಮನೆ ಕೆಲಸ ಮಾಡಿಸುತ್ತಲೇ ಆಕೆಗೆ ಟಾರ್ಚರ್​ ಕೊಡುತ್ತಿದ್ದಾರೆ. ಮಲಗಿದ್ದಲ್ಲೇ ಎಲ್ಲಾ ಸೌಕರ್ಯ ಪಡೆಯುತ್ತಿದ್ದ ಶ್ರೇಷ್ಠಾಳಿಗೆ ಇದೀಗ ತಾಂಡವ್​ ಮನೆ ಬಿಸಿತುಪ್ಪ ಆಗಿದೆ. ನುಂಗಲೂ ಆಗಲ್ಲ, ಉಗುಳಲೂ ಆಗಲ್ಲ ಅಂಥ ಪರಿಸ್ಥಿತಿ. ಆದರೆ ತಾಂಡವ್​ ಜೊತೆ ಇರಬೇಕು ಎಂದರೆ, ಅತ್ತೆ ಕುಸುಮಾಳನ್ನು ಒಲಿಸಿಕೊಳ್ಳಬೇಕು ಎಂದರೆ ಭಾಗ್ಯ ಮಾಡುವ ಎಲ್ಲಾ ಕೆಲಸಗಳನ್ನೂ ಆಕೆ ಮಾಡಲೇಬೇಕಿದೆ. ಇದಕ್ಕಾಗಿ ಭಾಗ್ಯಳ ಮಕ್ಕಳು ಕೂಡ ಅಮ್ಮನಿಗೆ ಸಪೋರ್ಟ್​ ಮಾಡುತ್ತಿದ್ದಾರೆ. ಆದರೆ, ಮನೆ ಕೆಲಸದವಳನ್ನು ಇಟ್ಟುಕೊಂಡಿರುವ ಶ್ರೇಷ್ಠಾ ಈಗ ಎಲ್ಲರಿಗೂ ಶಾಕ್​ ಕೊಟ್ಟಿದ್ದಾಳೆ. ತಾಂಡವ್​ ಕೂಡ ಇದರಿಂದ ಖುಷಿಯಾಗಿದ್ದಾನೆ. ಉಳಿದವರಿಗೆ ಇದು ಈಗ ನುಂಗಲಾಗದ ತುತ್ತಾಗಿದೆ. 

ಇವೆಲ್ಲವುಗಳ ನಡುವೆಯೇ, ಶೂಟಿಂಗ್​ನಿಂದ ಬಿಡುವು ಮಾಡಿಕೊಂಡು ಭಾಗ್ಯ ಪಾತ್ರಧಾರಿ ಸುಷ್ಮಾ ಕೆ. ರಾವ್​ ಮತ್ತು ಮಗಳು ತನ್ವಿ ಪಾತ್ರಧಾರಿ ಅಮೃತಾ ಗೌಡ ಅವರು ಭರ್ಜರಿ ರೀಲ್ಸ್​ ಮಾಡಿದ್ದಾರೆ. ತಮಿಳು ಚಿತ್ರ ಯಾತಿ ಯಾತಿಯ ಹಾಡೊಂದಕ್ಕೆ ಈ ರೀಲ್​ ಅಮ್ಮ-ಮಗಳು ಸಕತ್​ ಸ್ಟೆಪ್​ ಹಾಕಿದ್ದಾರೆ. ಇವರ ಜೋಡಿಗೆ ಫ್ಯಾನ್ಸ್​ ಶ್ಲಾಘನೆಗಳ ಮಹಾಪೂರವನ್ನೇ ಹರಿಸಿದ್ದಾರೆ. ಅಷ್ಟಕ್ಕೂ ಶೂಟಿಂಗ್​ನಿಂದ ಬಿಡುವು ಆದಾಗಲೆಲ್ಲ ಸುಷ್ಮಾ ಅವರು ಭಾಗ್ಯಲಕ್ಷ್ಮಿ ಟೀಮ್​ ಜೊತೆ ಹೀಗೆ ಸ್ಟೆಪ್​ ಹಾಕುತ್ತಲೇ ಇರುತ್ತಾರೆ. ಸೋಷಿಯಲ್​ ಮೀಡಿಯಾದಲ್ಲಿಯೂ ಸಕತ್​ ಆ್ಯಕ್ಟೀವ್​ ಆಗಿರುವ ಅವರು, ಹಲವಾರು ವಿಡಿಯೋ ಶೇರ್​ ಮಾಡುತ್ತಾರೆ. 

ಫ್ಯಾನ್ಸ್​ಗೆ ಸಿಕ್ಕಾಪಟ್ಟೆ ಟೆನ್ಷನ್​ ಕೊಟ್ಟ ಭಾಗ್ಯ-ತಾಂಡವ್​ ಒಂದಾಗಿ ಬಿಟ್ರಾ? ಕುಣಿದು ಕುಪ್ಪಳಿಸಿದ ಜೋಡಿ! ಏನಪ್ಪಾ ಇದು?

ಇನ್ನು ಸುಷ್ಮಾ ಕೆ. ರಾವ್‌  ಕುರಿತು ಹೇಳುವುದಾದರೆ, ಇವರು ಚಿಕ್ಕಮಗಳೂರಿನ ಕೊಪ್ಪದವರು. ಬೆಂಗಳೂರುಲ ವಿಶ್ವವಿದ್ಯಾಲಯದಿಂದ ಕಂಪ್ಯೂಟರ್ ಸೈನ್ಸ್‌ನಲ್ಲಿ ಬಿಎಸ್‌ಸಿ ಪದವಿ ಪಡೆದಿದ್ದಾರೆ. ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾದಿಂದ ಹಿಂದಿಯಲ್ಲಿ ಪದವಿ ಪಡೆದಿದ್ದಾರೆ.  ಭರತನಾಟ್ಯ ಮತ್ತು ಕೂಚುಪುಡಿ ಕಲಾವಿದೆ. ನೃತ್ಯಕ್ಕಾಗಿ  1997ರಲ್ಲಿ  ಆರ್ಯಭಟ ಪ್ರಶಸ್ತಿ ಪಡೆದಿದ್ದಾರೆ. 2005ರಲ್ಲಿ ನಟನೆಗಾಗಿಯೂ ಆರ್ಯಭಟ ಪ್ರಶಸ್ತಿ ಪಡೆದಿದ್ದಾರೆ. ಇವರಿಗೆ ಈಗ 38 ವರ್ಷ ವಯಸ್ಸು. ಸುಷ್ಮಾ ರಾವ್ ಎಸ್‌.ನಾರಾಯಣ್ ನಿರ್ದೇಶನದ ಭಾಗಗೀರಥಿ ಧಾರಾವಾಹಿಯಲ್ಲಿ ಹೇಮಾ ಪ್ರಭಾತ್ ಅವರ ತಂಗಿಯ ಪಾತ್ರದಲ್ಲಿ ನಟಿಸುವ ಮೂಲಕ ಕನ್ನಡ ಕಿರುತೆರೆಗೆ ಎಂಟ್ರಿ ಕೊಟ್ಟರು. ನಂತರ ಯಾವ ಜನ್ಮದ ಮೈತ್ರಿ, ಗುಪ್ತಗಾಮಿನಿ, ಸೊಸೆ ತಂದ ಭಾಗ್ಯ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. 

ಇನ್ನು ತನ್ವಿಯ ಬಗ್ಗೆ ಹೇಳುವುದಾದರೆ ಈಕೆಯ ರಿಯಲ್​ ಹೆಸರು ಅಮೃತಾ ಗೌಡ. ಅಮೃತಾ ಗೌಡ ನಿಜ ಜೀವನದಲ್ಲೂ ಶಾಲಾ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಎಜುಕೇಶನ್ ಜೊತೆಗೆ ಶೂಟಿಂಗ್ ಎರಡನ್ನೂ ಜೊತೆಯಾಗಿ ಮ್ಯಾನೇಜ್ ಮಾಡುವ ಈ ಬಾಲನಟಿ, ಸೋಶಿಯಲ್ ಮೀಡಿಯಾದಲ್ಲೂ (social media) ಆಕ್ಟೀವ್ ಆಗಿದ್ದಾರೆ. ಅಮೃತಾ ಹೆಚ್ಚಾಗಿ ತನ್ನ ತಮ್ಮನ ಪಾತ್ರದಲ್ಲಿ ಕಾಣಿಸಿಕೊಳ್ಳುವ ನಿಹಾರ್ ಗೌಡ ಜೊತೆ, ಭಾಗ್ಯಲಕ್ಷ್ಮಿ ತಂಡದ ಜೊತೆ ರೀಲ್ಸ್ ಮಾಡುತ್ತಾ, ಡ್ಯಾನ್ಸ್ ಗೆ ಹೆಜ್ಜೆ ಹಾಕುತ್ತಾ ಎಂಜಾಯ್ ಮಾಡುವ ವಿಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡುತ್ತಿರುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಫಾಲೋವರ್ಸ್ ಗಳನ್ನು ಪಡೆದಿರುವ ಈ ಬಾಲಕಲಾವಿದೆ ನೆಗೆಟಿವ್ ಪಾತ್ರದಲ್ಲಿ ನಟಿಸಿದ್ರೂ ಈಕೆಯ ನಟನೆಗೆ ಅಭಿಮಾನಿಗಳು ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ. ಇದೀಗ ಸೀರಿಯಲ್​ ಅಮ್ಮ-ಮಗಳ ರೀಲ್ಸ್​ ನೋಡಿ ಮುಂದೊಂದು ದಿನ ನಾಯಕಿಯಾಗಿ ಕಾಣಿಸಿಕೊಳ್ಳೋದ್ರಲ್ಲಿ ಡೌಟೇ ಇಲ್ಲ ಎನ್ನುತ್ತಿದ್ದಾರೆ ಅಭಿಮಾನಿಗಳು. 

ಎರಡು ಮಕ್ಕಳಾಗೋ ತನಕ ಸುಮ್ಮನಿದ್ದಿ ಯಾಕೆ? ಲೈವ್‌ನಲ್ಲಿ ಬೆವರಿಳಿಸಿದ ವೀಕ್ಷಕರಿಗೆ ತಾಂಡವ್‌ ಉತ್ತರ ಕೇಳಿ...

Latest Videos
Follow Us:
Download App:
  • android
  • ios