ಭಾಗ್ಯಲಕ್ಷ್ಮಿಯಲ್ಲಿ ಮನೆಬಿಟ್ಟು ಹೊರಟ ತಾಂಡವ್ ಟರ್ಕಿಯಲ್ಲಿ ಹೆಂಡ್ತಿ ಜೊತೆ ಪತ್ತೆ!
ಭಾಗ್ಯಲಕ್ಷ್ಮೀ ಧಾರಾವಾಹಿಯ ನಾಯಕ ತಾಂಡವ್ ಮನೆಬಿಟ್ಟು ಹೊರ ನಡೆದಿದ್ದು,ಇದೀಗ ಟರ್ಕಿಯಲ್ಲಿ ಹೆಂಡತಿ ಜೊತೆ ಕಾಣಿಸಿಕೊಂಡಿದ್ದಾರೆ.

ಭಾಗ್ಯಲಕ್ಷ್ಮೀ ಧಾರಾವಾಹಿ (Bhagyalakshmi serial) ಇಲ್ಲಿವರೆಗೂ ಇಂಟ್ರೆಸ್ಟಿಂಗ್ ಆಗಿ ಸಾಗುತ್ತಿತ್ತು, ತಾಂಡವ್ ವಿರುದ್ಧ ತಿರುಗಿ ಬಿದ್ಧಿದ್ದ ಭಾಗ್ಯ ಇದೀಗ ಮತ್ತೆ ತಣ್ಣಗಾಗಿದ್ದಾಳೆ. ತಾಂಡವ್ ಮತ್ತು ಶ್ರೇಷ್ಠಾ ಅಟ್ಟಹಾಸದ ಮುಂದೆ ಭಾಗ್ಯ ಮೌನಗೌರಿಯಾಗಬೇಕಾಗಿ ಬಂದಿದೆ. ಮತ್ತೆ ಸೀರಿಯಲ್ ನಲ್ಲಿ ಅದೇ ರಾಗ, ಅದೇ ಹಾಡು ಎನ್ನುವಂತಾಗಿದೆ.
ಸದ್ಯಕ್ಕಂತೂ ಸೀರಿಯಲ್ ನಲ್ಲಿ ಶ್ರೇಷ್ಠಾ ಜೊತೆ ಸೇರಿ ತಾಂಡವ್ ಮನೆಬಿಟ್ಟು ಹೊರ ನಡೆದಿದ್ದಾರೆ. ಅಮ್ಮ ಅಪ್ಪನಿಗೂ ನಿಮಗೆ ನಾನು ಬೇಕಾದರೆ ನನ್ನ ಜೊತೆ ಇರಿ, ಇಲ್ಲವಾದರೆ ಭಾಗ್ಯ ಜೊತೆ ಇರಿ ಎಂದು ಸವಾಲು ಹಾಕಿ, ಕೊನೆಗೆ ಶ್ರೇಷ್ಠಾಳನ್ನು ಕರೆದುಕೊಂಡು ಹೊರ ನಡೆದಿದ್ದಾರೆ. ಆದರೆ ಇನ್ನೊಂದೆಡೆ ಟರ್ಕಿಯಲ್ಲಿ ಹೆಂಡ್ತಿ ಜೊತೆ ಪತ್ತೆಯಾಗಿದ್ದಾರೆ.
ಹೌದು, ಟರ್ಕಿಯಲ್ಲಿ ಹೆಂಡತಿ ಜೊತೆ ತಾಂಡವ್ ಅಲ್ಲಲ್ಲ, ಸುದರ್ಶನ್ ರಂಗಪ್ರಸಾದ್ (Sudarshan Rangaprasad)ಕಾಣಿಸಿಕೊಂಡಿದ್ದಾರೆ. ಹೌದು, ನಟ ತಮ್ಮ ನಟನೆಗೆ ಕೊಂಚ ಬ್ರೇಕ್ ಕೊಟ್ಟು, ಪತ್ನಿ ಸಂಗೀತಾ ಭಟ್ ಜೊತೆ ವಿದೇಶದಲ್ಲಿ ಎಂಜಾಯ್ ಮಾಡುತ್ತಿದ್ದಾರೆ.
ಸುದರ್ಶನ್ ಹಾಗೂ ಸಂಗೀತಾ (Sangeetha Bhat) ಟರ್ಕಿಗೆ ತೆರಳಿದ್ದು, ಅಲ್ಲಿನ ಸುಂದರವಾದ ತಾಣಗಳಲ್ಲಿ ಈ ಜೋಡಿ ಸುತ್ತಾಡುತ್ತಾ ಎಂಜಾಯ್ ಮಾಡಿದ್ದಾರೆ. ಜೊತೆಗೆ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಅಲ್ಲಿನ ಸುಂದರ ಫೋಟೊಗಳನ್ನು ಶೇರ್ ಮಾಡಿದ್ದಾರೆ.
ಸುದರ್ಶನ್ ಮತ್ತು ಸಂಗೀತಾ ಜೊತೆಯಾಗಿ ಏರ್ ಬಲೂನ್ ಎಕ್ಸ್ ಪೀರಿಯನ್ಸ್ ಮಾಡಿದ್ದಾರೆ, ಅಷ್ಟೇ ಅಲ್ಲ ಟರ್ಕಿಯ ವಿವಿಧ ಆಹಾರಗಳನ್ನು ಸಹ ಟ್ರೈ ಮಾಡಿದ್ದಾರೆ. ಜೊತೆಗೆ ಅಲ್ಲಿನ ವಿವಿಧ ತಾಣಗಳಿಗೆ ತೆರಳಿ ಫೋಟೊ ಕ್ಲಿಕ್ ಮಾಡಿದ್ದಾರೆ.
ಇನ್ನು ಸುದರ್ಶನ್ ರಂಗಪ್ರಸಾದ್ ಬಗ್ಗೆ ಹೇಳಬೇಕಾಗಿಲ್ಲ, ಕನ್ನಡ ಕಿರುತೆರೆಯ ವೀಕ್ಷಕರಿಗೆ ಚಿರಪರಿಚಿತ. ಸದ್ಯಕ್ಕೆ ಭಾಗ್ಯ ಲಕ್ಷ್ಮೀ ಧಾರಾವಾಹಿಯಲ್ಲಿ ಬ್ಯುಸಿಯಾಗಿದ್ದಾರೆ. ನಟಿ ಸಂಗೀತಾ ಭಟ್ ಒಂದಿಷ್ಟು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಜೊತೆಗೆ ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿದ್ದಾರೆ.
ಸಂಗೀತಾ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಬೋಲ್ಡ್ ಫೊಟೋಗಳನ್ನು ಶೇರ್ ಮಾಡುತ್ತಲೇ ಇರುತ್ತಾರೆ. ನಟಿಯ ಬೋಲ್ಡ್ ಅವತಾರ ನೋಡಿ ಜನ ಶಾಖ್ ಆಗಿದ್ದಾರೆ. ಇವರು ಕನ್ನಡ ಚಿತ್ರರಂಗದ ಭರವಸೆಯ ನಟಿ ಹೌದು.