Bhagyalakshmi Kannada Serial Today Episode: ʼಭಾಗ್ಯಲಕ್ಷ್ಮೀʼ ಧಾರಾವಾಹಿ ವೀಕ್ಷಕರಿಗೆ ಒಂದು ವಿಷಯ ಬೇಸರ ತರಿಸಿದೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಆಗ್ತಿದೆ.
ʼಭಾಗ್ಯಲಕ್ಷ್ಮೀʼ ಧಾರಾವಾಹಿಯಲ್ಲಿ ಭಾಗ್ಯಳಿಗೆ ತೊಂದರೆಯೇ ತಪ್ಪುತ್ತಿಲ್ಲ. ಒಂದಾದ ಮೇಲೆ ಒಂದರಂತೆ ಅವಳಿಗೆ ಸಮಸ್ಯೆ ಎದುರಾಗುತ್ತಿದೆ. ಇಷ್ಟುದಿನ ಅವಳು ಫುಡ್ ಬ್ಯುಸಿನೆಸ್ ಮಾಡ್ಕೊಂಡು ಜೀವನ ಮಾಡಬಹುದು ಎಂದುಕೊಂಡಿದ್ದಳು, ಈಗ ಲೈಸೆನ್ಸ್ ಇಲ್ಲ ಎಂದು ಇದಕ್ಕೂ ಸಮಸ್ಯೆ ಎದುರಾಗಿದೆ. ಹೊಟ್ಟೆ ಹಾಳು ಮಾಡಿಕೊಂಡಿರೋ ತಾಂಡವ್‌ಗೆ ಭಾಗ್ಯ ಮಾಡಿರುವ ಅಡುಗೆ ಸಿಕ್ಕಿದೆ. ಆದರೂ ಕೂಡ ಅದು ತನ್ನ ಮೊದಲ ಪತ್ನಿ ಭಾಗ್ಯ ಮಾಡಿರೋ ಅಡುಗೆ ಮಾತ್ರ ಅಂತ ಅರ್ಥ ಆಗಿಲ್ಲ. ಭಾಗ್ಯಳಿಗೆ ಒಂದಲ್ಲ ಒಂದು ಸಮಸ್ಯೆ ಬರ್ತಿರೋದು ನೋಡಿ ವೀಕ್ಷಕರು ಬೇಸರ ಮಾಡಿಕೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಸಾಕಷ್ಟು ಕಾಮೆಂಟ್ಸ್‌ಗಳು ಬರುತ್ತಿವೆ.
ಆನಿವರ್ಸರಿ ಸಂಭ್ರಮದಲ್ಲಿ ರೊಮ್ಯಾಂಟಿಕ್ ಪೋಟೊ ಶೇರ್ ಮಾಡಿದ ತಾಂಡವ್.....ಆದ್ರೆ ಭಾಗ್ಯ, ಶ್ರೇಷ್ಠಾ ಜೊತೆ ಅಲ್ಲ!
ವೀಕ್ಷಕರು ಹೇಳಿದ್ದೇನು?
- ದಿನಕ್ಕೊಂದು ಪ್ರಾಬ್ಲಮ್. ಸ್ಟ್ರೆಸ್ ಕಡಿಮೆ ಮಾಡಿಕೊಳ್ಳೋಕೆ ಸೀರಿಯಲ್ ನೋಡ್ಬೇಕಾ? ಚಿಂತೆ ಜಾಸ್ತಿ ಮಾಡಿಕೊಳ್ಳೋಕೆ ಸೀರಿಯಲ್ ನೋಡ್ಬೇಕಾ?
- ಈ ಸಮಸ್ಯೆ ನಂತರ ಹೊಸ, ಹೊಸ ಸಮಸ್ಯೆಗಳು ಭಾಗ್ಯ ಅವರಿಗೆ ಕಾದು ಕುಳಿತಿವೆ..
- ಊಟ ಬಿಟ್ಟು ಬೇರೆ ಯಾವ ವಿಷಯವೂ ಇಲ್ವಾ, ಭಾಗ್ಯಳ ಕೆಲಸ ಹಾಳುಗೆಡವಿ ಕಪಾಳಕ್ಕೆ ಹೊಡೆಸಿಕೊಂಡು ಸುಮ್ಮನಾಗೋ ಶ್ರೇಷ್ಠ ,ಇಷ್ಟೇ ಸೀರಿಯಲ್‌ನ ಮುಖ್ಯ ಕಥೆ.
- ಅಷ್ಟು ವರ್ಷ ತಾಂಡವ್, ಭಾಗ್ಯ ಜೊತೆಗೆ ಸಂಸಾರ ಮಾಡಿರುತ್ತಾನೆ. ಆದ್ರೆ ಈಗ ಅವಳ ಕೈ ರುಚಿ ಗುರುತು ಸಿಗ್ತಿಲ್ವಾ? ಒಂದೆರಡು ಸಲ ಒಬ್ಬರ ಕೈ ರುಚಿ ತಿಂದ್ರೆ ಸಾಕು, ನೆಕ್ಸ್ಟ್ ಊಟದಲ್ಲಿ ಅದು ಇಂತವರೆ ಮಾಡಿದ ಅಡುಗೆ ಅಂತ ಗೊತ್ತಾಗತ್ತೆ. ಅಂತದರಲ್ಲಿ ಅಷ್ಟು ವರ್ಷ ಸಂಸಾರ ಮಾಡಿ ಭಾಗ್ಳದ್ದೇ ಕೈ ಅಡುಗೆ ತಿಂದು ಈಗ ಅವ್ರ ಕೈ ರುಚಿ ಗುರುತು ಸಿಕ್ಕಿಲ್ಲ ಅಂದ್ರೆ. ಸ್ವಲ್ಪ ಆದ್ರೂ ಲಾಜಿಕ್ ಇರ್ಬೇಕು.
- ಇವತ್ತಿನ ಎಪಿಸೋಡ್‌ಲ್ಲಿ ತಾಂಡವ್, ಆ ಫುಡ್ ಬಗ್ಗೆ, ಮನೆಯಲ್ಲೂ, ಎಲ್ಲೇ ಹೋದ್ರೂ ಅದರ ಬಗ್ಗೆ ಮಾತಾಡ್ತಾ ಇರಬೇಕು. ಶ್ರೇಷ್ಠಳಿಗೆ ಅವನು ಬೈಬೇಕು ಅಡಿಗೆ ಮಾಡೋದಿಕ್ಕೆ ಆಗಲ್ವಾ? ಫುಡ್ ಆರ್ಡರ್ ಮಾಡ್ತಾ ಇದೀಯಾ ಅಂತ ಬೈಬೇಕು. ತಾಂಡವ್‌ಗೆ ಒಂಥರ ಆಟ, ಶ್ರೇಷ್ಠಗೆ ಪ್ರಾಣ ಸಂಕಟ.
- ಡೈರೆಕ್ಟರ್ ಸರ್, ಗೊತ್ತಿಲ್ಲದೆ ತಾಂಡವ್ ಕೈಯಿಂದಲೇ ಭಾಗ್ಯಗೆ ಲೈಸೆನ್ಸ್ ಕೊಡಿಸುವ ಹಾಗೆ ಮಾಡಿ, ಆಗ ಮಜಾ ಇರುತ್ತೆ.
- ಕೆಟ್ಟತನಕ್ಕೆ ಕೊನೆಯೇ ಇಲ್ವಾ. ಈ ಪಾಪಿಗಳಿಗೆ ಯಾವಾಗ ತೊಂದ್ರೆ ಆಗೋದು? ಈ ಥರಹದ್ದು ಈ ಸೀರಿಯಲ್‌ನಲ್ಲಿ ತೋರಿಸೋದೆ ಇಲ್ಲ. ಅಧರ್ಮಕ್ಕೆ ಶಿಕ್ಷೆ ಆಗೋದು ಇರಲೇ ಬೇಕು ಅಲ್ವಾ ?
- ತಾಂಡವ್ ಮತ್ತು ಶ್ರೇಷ್ಠ ಕೆಲಸ ಕಳೆದುಹೋಗಲಿ, ಅವರು ರಸ್ತೆ ಬದಿಯಲ್ಲಿ ಭಿಕ್ಷೆ ಬೇಡುವ ಹಾಗೆ ಸ್ಟೋರಿ ನೀಡಲಿ.
Bhagyalakshmi Serial: ತಾಂಡವ್-ಶ್ರೇಷ್ಠ ಬಳಿಕ ಇನ್ನೊಂದು ಮದುವೆ ಆಗೋ ಸೂಚನೆಯಿದು!
ಕಥೆ ಏನು?
ಭಾಗ್ಯ ಹಾಗೂ ತಾಂಡವ್‌ಗೆ ಮದುವೆಯಾಗಿದ್ದು ಇಬ್ಬರು ಮಕ್ಕಳಿವೆ. ತಾಂಡವ್ ತಾಯಿ ಕುಸುಮ ಇಷ್ಟಪಟ್ಟು ಈ ಮದುವೆ ಮಾಡಿಸಿದ್ದಳು. ತಾಂಡವ್‌ಗೆ ಈ ಮದುವೆ ಇಷ್ಟವೇ ಇರಲಿಲ್ಲ. ಯಾರ ಮಾತನ್ನೂ ಕೂಡ ಕೇಳದೆ ಇವನು ಶ್ರೇಷ್ಠಳನ್ನು ಮದುವೆಯಾಗಿದ್ದಾನೆ. ಗಂಡನಿಗೆ ಬೇಕಾದ ರೀತಿಯಲ್ಲಿ ಇರಲು ಭಾಗ್ಯ ಪ್ರಯತ್ನಪಟ್ಟರೂ ಪ್ರಯೋಜನ ಆಗಲಿಲ್ಲ. ಭಾಗ್ಯಳಿಂದ ನಾನು ಸದಾ ಅವಮಾನ ಎದುರಿಸ್ತೀನಿ ಅಂತ ತಾಂಡವ್‌ನನ್ನು ಅವಳು ಬೆಳೆಯೋಕೆ ಬಿಡಬಾರದು ಅಂತಿದ್ದಾನೆ. ಇನ್ನು ಕನ್ನಿಕಾ ಎನ್ನುವವಳಿಗೆ ಭಾಗ್ಯಳನ್ನು ಕಂಡ್ರೆ ಆಗೋದಿಲ್ಲ. ಶ್ರೇಷ್ಠ ಹಾಗೂ ತಾಂಡವ್, ಕನ್ನಿಕಾ ಸೇರಿಕೊಂಡು ಭಾಗ್ಯಗೆ ತೊಂದರೆ ಕೊಡ್ತಿದ್ದಾರೆ.
ಪಾತ್ರಧಾರಿಗಳು
ಭಾಗ್ಯ - ನಟಿ ಸುಷ್ಮಾ ಕೆ ರಾವ್
ಶ್ರೇಷ್ಠ - ಕಾವ್ಯಾ ಗೌಡ
ತಾಂಡವ್ - ಸುದರ್ಶನ್ ರಂಗಪ್ರಸಾದ್
