- Home
- Entertainment
- TV Talk
- ಆನಿವರ್ಸರಿ ಸಂಭ್ರಮದಲ್ಲಿ ರೊಮ್ಯಾಂಟಿಕ್ ಪೋಟೊ ಶೇರ್ ಮಾಡಿದ ತಾಂಡವ್.....ಆದ್ರೆ ಭಾಗ್ಯ, ಶ್ರೇಷ್ಠಾ ಜೊತೆ ಅಲ್ಲ!
ಆನಿವರ್ಸರಿ ಸಂಭ್ರಮದಲ್ಲಿ ರೊಮ್ಯಾಂಟಿಕ್ ಪೋಟೊ ಶೇರ್ ಮಾಡಿದ ತಾಂಡವ್.....ಆದ್ರೆ ಭಾಗ್ಯ, ಶ್ರೇಷ್ಠಾ ಜೊತೆ ಅಲ್ಲ!
ಭಾಗ್ಯಲಕ್ಷ್ಮೀ ಧಾರಾವಾಹಿಯ ಸುದರ್ಶನ್ ರಂಗಪ್ರಸಾದ್ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುತ್ತಿದ್ದು, ಈ ಹಿನ್ನೆಲೆಯಲ್ಲಿ ಪತ್ನಿ ಸಂಗೀತಾ ಭಟ್ ಫೋಟೊ ಶೇರ್ ಮಾಡಿದ್ದಾರೆ.

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮಿ ಧಾರಾವಾಹಿಯಲ್ಲಿ (Bhagyalakshmi serial) ಹೀರೋನೂ ಹೌದು, ವಿಲನ್ ಕೂಡ ಹೌದು, ಎನ್ನುವಂತಹ ಪಾತ್ರದಲ್ಲಿ ಮಿಂಚುತ್ತಿರೋದು ಅಂದ್ರೆ ತಾಂಡವ್ ಪಾತ್ರದಲ್ಲಿ ನಟಿಸುತ್ತಿರುವ ಸುದರ್ಶನ್ ರಂಗಪ್ರಸಾದ್.
ತಾಂಡವ್ ಪಾತ್ರಕ್ಕೆ ಜೀವ ತುಂಬಿ ನಟಿಸುವ ಮೂಲಕ ಇದೀಗ ಸುದರ್ಶನ್ ರಂಗಪ್ರಸಾದ್ (Sudarshan Rangaprasad) ಅಂದ್ರೆನೆ ವೀಕ್ಷಕರು ಬೈಯ್ಯುವಂತಹ ಪಾತ್ರ ಇವರದ್ದಾಗಿದೆ. ಹೆಂಡ್ತಿಯನ್ನು ತುಂಬಾನೆ ಕೆಟ್ಟದಾಗಿ ನಡೆಸಿಕೊಳ್ಳುವ ತಾಂಡವ್ ರಿಯಲ್ ಲೈಫಲ್ಲಿ ಪತ್ನಿಯನ್ನು ತುಂಬಾನೆ ಚೆನ್ನಾಗಿ ನೋಡಿಕೊಳ್ಳುತ್ತಾರೆ.
ಇದೀಗ ಸುದರ್ಶನ್ ರಂಗಪ್ರಸಾದ್ ಅವರು ವಿವಾಹ ವಾರ್ಷಿಕೋತ್ಸವವನ್ನು (wedding anniversary) ಆಚರಿಸಿಕೊಳ್ಳುತ್ತಿದ್ದು, ಈ ಹಿನ್ನೆಲೆಯಲ್ಲಿ ಸುದರ್ಶನ್ ಪತ್ನಿ ನಟಿ ಸಂಗೀತಾ ಭಟ್ ಒಂದಿಷ್ಟು ರೊಮ್ಯಾಂಟಿಕ್ ಫೋಟೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.
ಇಬ್ಬರು ಮುದ್ದಾಗಿ, ಜೊತೆಗೆ ಬೋಲ್ಡ್ ಆಗಿ ಪೋಸ್ ಕೊಟ್ಟಿರುವ ಒಂದಷ್ಟು ಫೋಟೊಗಳನ್ನು ಪೋಸ್ಟ್ ಮಾಡಿರುವ ಸಂಗೀತಾ ಭಟ್. Happy Anniversary my forever, my one and only constant, my love ಎಂದು ಕ್ಯಾಪ್ಶನ್ ಕೊಟ್ಟಿದ್ದಾರೆ.
ಅಷ್ಟೇ ಅಲ್ಲ ಅದರ ಜೊತೆಗೆ ಈ ಸುಂದರ ಮನುಷ್ಯನನ್ನು ನನಗೆ ನೀಡಿದ್ದಕ್ಕಾಗಿ ಮತ್ತು ಅವನೊಂದಿಗಿನ ಈ ಜೀವನವನ್ನು ಕಳೆಯಲು ಅವಕಾಶ ನೀಡಿದ್ದಕ್ಕಾಗಿ ಈ ವಿಶ್ವಕ್ಕೆ ನನ್ನ ಕೃತಜ್ಞತೆಯನ್ನು ವ್ಯಕ್ತಪಡಿಸಲು ಪದಗಳು ಸಾಲದು ಎನ್ನುವ ಮೂಲಕ ತಾವು ಸುದರ್ಶನ್ ಅವರನ್ನು ಎಷ್ಟು ಪ್ರೀತಿಸುತ್ತಿದ್ದಾರೆ ಅನ್ನೋದನ್ನು ಹೇಳಿದ್ದಾರೆ ಪತ್ನಿ ಸಂಗೀತಾ ಭಟ್ (Sangeetha Bhat).
ಅಂದ ಹಾಗೆ ಸುದರ್ಶನ್ ಮತ್ತು ಸಂಗೀತಾ ಭಟ್ ಜೋಡಿ, ಪ್ರೀತಿಸಿ ಮದುವೆಯಾಗಿದ್ದಾರೆ. ಸ್ಯಾಂಡಲ್ ವುಡ್ ನಲ್ಲಿ ಗುರುತಿಸಿಕೊಂಡಿರುವ ಸಂಗೀತಾ ಭಟ್, ಹಲವು ಸಿನಿಮಾಗಳ ಮೂಲಕ ಜನಪ್ರಿಯತೆ ಪಡೆದಿದ್ದಾರೆ. ಇಬ್ಬರು ಸಿನಿಮಾ ಒಂದರ ಶೂಟಿಂಗ್ ವೇಳೆ ಪರಿಚಯವಾಗಿದ್ದು, ನಂತರ ಸ್ನೇಹಕ್ಕೆ ತಿರುಗಿ, ಮತ್ತೆ ಪ್ರೇಮಿಗಳಾಗಿದ್ದರು.
ಸಂಗೀತ ಭಟ್ ಪ್ರೀತಿ ಗೀತಿ ಇತ್ಯಾದಿ, ಮಾಮು ಟೀ ಅಂಗಡಿ, ಎರಡನೇ ಸಲ, ದಯವಿಟ್ಟು ಗಮನಿಸಿ, ಕಿಸ್ಮತ್, ರೂಪಾಂತರ, ಕ್ಲಾಂತಾ ಸೇರಿ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಸುದರ್ಶನ್ ರಂಗಪ್ರಸಾದ್ ಸಹ ಹಲವು ಸಿನಿಮಾಗಳಲ್ಲಿ ನಟಿಸಿದ್ದು, ಸದ್ಯ ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ತಾಂಡವ್ ಸೂರ್ಯವಂಶಿಯಾಗಿ ಗಮನ ಸೆಳೆಯುತ್ತಿದ್ದಾರೆ.