ಭಾಗ್ಯಳನ್ನು ಅವಮಾನಿಸಿದ ತಾಂಡವ್ ಮತ್ತು ಶ್ರೇಷ್ಠಾ ಕೆಲಸ ಕಳೆದುಕೊಂಡರು. ಭಾಗ್ಯ ಕಚೇರಿ ಕ್ಯಾಂಟೀನ್ ಮಾಲೀಕಳಾದಳು. ತಾಂಡವ್ ಮಾತಿನಿಂದಲೇ ಪ್ರೇರಣೆ ಪಡೆದ ಭಾಗ್ಯ, ಅಡುಗೆ ಕೌಶಲ್ಯದಿಂದ ಸ್ವಾವಲಂಬಿಯಾದಳು. ಈಗ ಭಾಗ್ಯಳ ಔದಾರ್ಯಕ್ಕಾಗಿ ವೀಕ್ಷಕರು ಕಾಯುತ್ತಿದ್ದಾರೆ.
ಭಾಗ್ಯಳನ್ನು ಹೇಗಾದರೂ ಮಾಡಿ ತುಳಿಯಬೇಕು, ಗಂಡಸು ಇಲ್ಲದೆಯೇ ಹೆಣ್ಣು ಏನೂ ಮಾಡಲು ಸಾಧ್ಯವಿಲ್ಲ ಎನ್ನುವುದು ಸಾಬೀತಾಗಬೇಕು, ನಾನಿಲ್ಲದೇ ಭಾಗ್ಯಳಿಗೆ ಸಂಸಾರ ನಡೆಸಲು ಸಾಧ್ಯವೇ ಇಲ್ಲ ಎನ್ನುವ ಅಹಂನಲ್ಲಿದ್ದ ತಾಂಡವ್ಗೆ ಭಾರಿ ಮುಖಭಂಗ ಆಗಿಯೇ ಬಿಟ್ಟಿದೆ. ತನ್ನ ಲವರ್ ಶ್ರೇಷ್ಠಾಳನ್ನು ಭಾಗ್ಯ ಬಿಟ್ಟುಕೊಟ್ಟರೂ ತಾಂಡವ್ಗೆ ಸಮಾಧಾನ ಇಲ್ಲ. ಸಂಸಾರ ನಡೆಸುವುದು ಎಂದರೆ ಅಡುಗೆ ಮನೆಯಲ್ಲಿ ಸೌಟು ಆಡಿಸಿದಂತೆ ಅಲ್ಲ ಎಂದು ಅವನು ಹೇಳಿದ್ದ. ಆದರೆ ಈಗ ಸೌಟು ಹಿಡಿಯೋಳು ಸಂಸಾರವನ್ನು ನಿಭಾಯಿಸಬಲ್ಲುಳು ಎನ್ನೋದನ್ನು ತೋರಿಸಿಕೊಟ್ಟಿರೋ ಭಾಗ್ಯ, ತಾಂಡವ್ ಕಚೇರಿಯಲ್ಲಿಯೇ ಕ್ಯಾಂಟೀನ್ ಓನರ್ ಆಗಿದ್ದಾಳೆ.
ಇಷ್ಟೇ ಆಗಿದ್ದರೆ ಪರವಾಗಿರಲಿಲ್ಲ. ಇದನ್ನೇ ತಾಂಡವ್ ಮತ್ತು ಶ್ರೇಷ್ಠಾಳಿಗೆ ಅರಗಿಸಿಕೊಳ್ಳಲು ಆಗದ ಸ್ಥಿತಿ. ಇದರ ನಡುವೆಯೇ ಇದೀಗ ಕಚೇರಿಯಲ್ಲಿಯೇ ಭಾಗ್ಯಳ ಮೇಲೆ ದರ್ಪ ತೋರಿದ್ದಾನೆ ತಾಂಡವ್. ಈತನಿಗೆ ಶ್ರೇಷ್ಠಾ ಜೊತೆಯಾಗಿದ್ದಾಳೆ. ಇದನ್ನೆಲ್ಲಾ ಕಚೇರಿಯ ಮ್ಯಾನೇಜರ್ ನೋಡಿದ್ದಾರೆ. ಅವರಿಗೆ ಪರಿಸ್ಥಿತಿ ಅರ್ಥವಾಗಿದೆ. ತಾಂಡವ್ ಮತ್ತು ಶ್ರೇಷ್ಠಾ ಜೊತೆಗೂಡಿ ಟಾರ್ಚರ್ ಕೊಡುತ್ತಿರುವುದು ತಿಳಿದಿದೆ. ಇದೇ ಕಾರಣಕ್ಕೆ ಇಬ್ಬರನ್ನು ಕೆಲಸದಿಂದ ಟರ್ಮಿನೇಟ್ ಮಾಡಿದ್ದಾರೆ. ಇಬ್ಬರ ಕೈಗೆ ಟರ್ಮಿನೇಷನ್ ಲೆಟರ್ ಕೊಟ್ಟಿದ್ದಾರೆ. ಇದನ್ನು ನೋಡಿ ತಾಂಡವ್ ಮತ್ತು ಶ್ರೇಷ್ಠಾಳ ನೆಲವೇ ಕುಸಿದ ಅನುಭವವಾಗಿದೆ.
ರೌಡಿಗಳ ಮಟ್ಟಹಾಕಲು ಬಂದ ಬುಲ್ಡೋಜರ್ ಬೇಬಿ! ಮುಂದಿನ ಸಿಎಂ ನೀವೇ ಎಂದ ನೆಟ್ಟಿಗರು...
ಆದರೆ, ಇದನ್ನು ನೋಡಿ ಭಾಗ್ಯಳಿಗೂ ಶಾಕ್ ಆಗಿದೆ. ಭಾಗ್ಯಳ ಮುಖ ನೋಡಿ ನೆಟ್ಟಿಗರು ಗರಂ ಆಗಿದ್ದಾರೆ. ಇಷ್ಟು ವರ್ಷ ಪತಿವ್ರತೆಯಾಗಿದ್ದು ಸಾಕು, ಇನ್ನೇನಾದರೂ ನೀವು ತಾಂಡವ್ಗೆ ಹೆಲ್ಪ್ ಮಾಡಲು ಹೋದರೆ ನಾವು ಸುಮ್ಮನೇ ಇರಲ್ಲ ಎಂದು ಧಮ್ಕಿ ಹಾಕುತ್ತಿದ್ದಾರೆ. ಅವರಿಬ್ಬರೂ ಬೀದಿಗೆ ಬರಲಿ, ನೀನು ಅತ್ತೂ ಕರೆದು ಅವರನ್ನು ಕೆಲಸಕ್ಕೆ ಇಟ್ಟುಕೊಳ್ಳುವ ಹಾಗೆ ಮಾಡಿದರೆ ಸರಿಯಿರಲ್ಲ ಎಂದು ಕಮೆಂಟ್ ಬಾಕ್ಸ್ನಲ್ಲಿ ಭಾಗ್ಯಳಿಗೆ ತಾಕೀತು ಮಾಡುತ್ತಿದ್ದಾರೆ ಸೀರಿಯಲ್ ಪ್ರೇಮಿಗಳು. ಅಷ್ಟಕ್ಕೂ ಭಾಗ್ಯ ಸದ್ಯ ತಾಂಡವ್ ಮತ್ತು ಶ್ರೇಷ್ಠಾಳ ಪರವಾಗಿ ಮಾತನಾಡಿ ಅವರನ್ನು ಕೆಲಸಕ್ಕೆ ಇಟ್ಟುಕೊಳ್ಳುವಂತೆ ಮಾಡುವ ನಿರೀಕ್ಷೆ ಇದೆ. ಹೀಗೆ ಮಾಡಿದರೆ ಆಕೆಯಿಂದಲೇ ಕೆಲಸ ಉಳಿಸಿಕೊಳ್ಳುವ ಸ್ಥಿತಿಯಿಂದ ಇಬ್ಬರೂ ತೊಳಲಾಡುವಂತೆ ಆಗಬೇಕು ಎಂದೂ ಮತ್ತೆ ಕೆಲವರು ಹೇಳುತ್ತಿದ್ದಾರೆ.
ಒಟ್ಟಿನಲ್ಲಿ ಇಷ್ಟು ದಿನ ವೀಕ್ಷಕರು ಕಾಯುತ್ತಿದ್ದ ದಿನ ಬಂದೇ ಬಿಟ್ಟಿದೆ. ಅಷ್ಟಕ್ಕೂ, ಭಾಗ್ಯಳಿಗೆ ಇಂಥದ್ದೊಂದು ಅಡುಗೆ ಐಡಿಯಾ ಕೊಟ್ಟಿದ್ದೂ ತಾಂಡವ್ನೇ. ಭಾಗ್ಯ ಮಾಡುವ ಎಲ್ಲಾ ಕೆಲಸಕ್ಕೂ ಆತ ಕಲ್ಲು ಹಾಕಿದ್ದ. ಕೊನೆಗೆ ಗೆದ್ದು ಬೀಗಿದ್ದ ಆತ, ಮುಂದಿನ ತಿಂಗಳ ಇಎಂಐ ಹೇಗೆ ಕಟ್ಟುತ್ತಿಯಾ? ಸಂಸಾರ ನಡೆಸುವುದು ಎಂದರೆ ಅಡುಗೆ ಮನೆಯಲ್ಲಿ ಸೌಟು ಆಡಿಸಿದಂತೆ ಅಲ್ಲ ಎಂದಿದ್ದ. ಇದನ್ನು ಕೇಳುತ್ತಿದ್ದಂತೆಯೇ ಭಾಗ್ಯಳಿಗೆ ಹೊಸ ಜೀವವೇ ಬಂದಂತಾಗಿತ್ತು. ಅದೇ ವೇಳೆ ಹಾಸ್ಟೆಲ್ ಹುಡುಗರು ತನ್ನ ಅಡುಗೆಯನ್ನು ಹೊಗಳಿದ್ದು ನೆನಪಿಗೆ ಬಂತು. ಅಡುಗೆ ಮನೆಯಲ್ಲಿ ಸೌಟು ಆಡಿಸಿ, ಬದುಕನ್ನು ಕಟ್ಟಿಕೊಳ್ಳಬಹುದಲ್ಲ ಎನ್ನುವ ಯೋಚನೆ ಬಂದಿದೆ. ಈ ಕೆಲಸವನ್ನಂತೂ ತಾಂಡವ್ ಕಿತ್ತುಕೊಳ್ಳಲು ಸಾಧ್ಯವೇ ಇಲ್ಲ. ಇದೇ ತನಗೆ ವರದಾನ ಆಗಬಹುದು ಎಂದುಕೊಂಡು ಅದನ್ನು ಮಾಡುವ ಯೋಚನೆ ಮಾಡಿ, ಈ ಹಂತಕ್ಕೆ ತಲುಪಿದ್ದಾಳೆ. ಅಷ್ಟಕ್ಕೂ ಅಡುಗೆ ಮಾಡಿಯೇ ಬದುಕು ಕಟ್ಟಿಕೊಳ್ಳುತ್ತಿರುವ ಸಹಸ್ರಾರು ಮಂದಿ ಇದ್ದಾರೆ ಎನ್ನುವುದೂ ಅಷ್ಟೇ ನಿಜ.
Saanvi Sudeep: ಸದ್ದಿಲ್ಲದೇ ಟಾಲಿವುಡ್ಗೆ ಎಂಟ್ರಿಕೊಟ್ಟ ಸಾನ್ವಿ ಸುದೀಪ್! ವಿಷ್ಯ ರಿವೀಲ್ ಮಾಡಿದ ನಟ ನಾನಿ
