ಕಿಚ್ಚ ಸುದೀಪ್ ಪುತ್ರಿ ಸಾನ್ವಿ ಸುದೀಪ್, ಟಾಲಿವುಡ್‌ಗೆ ಹಿನ್ನೆಲೆ ಗಾಯಕಿಯಾಗಿ ಪದಾರ್ಪಣೆ ಮಾಡಿದ್ದಾರೆ. ನಾನಿ ಮತ್ತು ಶ್ರೀನಿಧಿ ಶೆಟ್ಟಿ ಅಭಿನಯದ 'ಹಿಟ್ 3' ಚಿತ್ರದ ಟ್ರೈಲರ್‌ನಲ್ಲಿ ಸಾನ್ವಿ ಧ್ವನಿಯಿದೆ ಎಂದು ನಾನಿ ಖಚಿತಪಡಿಸಿದ್ದಾರೆ. ಈ ಹಿಂದೆ 'ಜಿಮ್ಮಿ' ಮತ್ತು 'ದಬಾಂಗ್ 3' ಚಿತ್ರಗಳಲ್ಲೂ ಸಾನ್ವಿ ಹಾಡಿದ್ದರು.
ಕಿಚ್ಚ ಸುದೀಪ್ ಮಗಳು ಸಾನ್ವಿ ಸುದೀಪ್ ಅವರ ಕಂಠಕ್ಕೆ ಇದಾದಲೇ ಅವರ ಫ್ಯಾನ್ಸ್ ಫಿದಾ ಆಗಿದ್ದಾರೆ. ಜೀ ಕನ್ನಡದ ‘ಸರಿಗಮಪ’ ವೇದಿಕೆ ಮೇಲೆ ‘ಅಪ್ಪಾ ಐ ಲವ್ ಯೂ ಪಾ..’ ಎಂದು ಹಾಡಿ ಮೋಡಿ ಮಾಡಿದ್ದರು ಸಾನ್ವಿ. ಇದೀಗ ಸಾನ್ವಿ ಅವರು ಟಾಲಿವುಡ್‌ಗೆ ಸದ್ದಿಲ್ಲದೇ ಎಂಟ್ರಿ ಕೊಟ್ಟಿದ್ದಾರೆ. ಹೌದು. ಸ್ಯಾಂಡಲ್ವುಡ್ ಸ್ಟಾರ್ ಸುದೀಪ್ ಪುತ್ರಿ ಈಗ ಟಾಲಿವುಡ್ನಲ್ಲಿ ಮಿಂಚಿಂಗ್. ಹಾಗೆಂದು ಅವರು ಅಲ್ಲಿ ನಟಿಯಾಗಿ ಕಾಣಿಸಿಕೊಳ್ಳುತ್ತಿಲ್ಲ. ಬದಲಿಗೆ ತಮ್ಮ ಕಂಠಸಿರಿಯಿಂದ ಟಾಲಿವುಡ್‌ಗೆ ಪದಾರ್ಪಣೆ ಮಾಡಿದ್ದಾರೆ. ‘ಹಿಟ್ 3’ ಸಿನಿಮಾದಲ್ಲಿ ಬರುವ ಟ್ರೈಲರ್‌ನಲ್ಲಿ ಬರೋ ಒಂದು ಆಲಾಪದಲ್ಲಿ ಸಾನ್ವಿ ಧ್ವನಿ ಇರುವ ವಿಷಯ ಇದೀಗ ರಿವೀಲ್ ಆಗಿದೆ.
ಈ ಕುರಿತು ಟಾಲಿವುಡ್ ನಟ ನಾನಿ ಸಂದರ್ಶನದಲ್ಲಿ ರಿವೀಲ್ ಮಾಡಿದ್ದಾರೆ. ನಾನಿ ಮತ್ತು ಶ್ರೀನಿಧಿ ಶೆಟ್ಟಿ ನಟನೆಯ ʻಹಿಟ್ 3ʼ ಸಿನಿಮಾ ಬರುವ ಮೇ 1ರಂದು ತೆರೆ ಕಾಣಲಿದೆ. ಸದ್ಯ ಸಿನಿಮಾದ ಪ್ರಚಾರದಲ್ಲಿ ಬಿಜಿಯಾಗಿದ್ದಾರೆ ನಾನಿ. ಈ ವೇಳೆ ಮಾಧ್ಯಮಗಳಿಗೆ ನೀಡಿರುವ ಸಂದರ್ಶನದಲ್ಲಿ ಸಾನ್ವಿ ವಿಷಯವನ್ನು ರಿವೀಲ್ ಮಾಡಿದ್ದಾರೆ. ಈ ಸಿನಿಮಾದ ಟ್ರೈಲರ್ನ ಕೊನೆಯಲ್ಲಿ ಹಿನ್ನೆಲೆ ಸಂಗೀತದ ಜೊತೆ ಒಂದು ಧ್ವನಿಯ ಆಲಾಪ ಬರುತ್ತದೆ. ಇದು ಸಾನ್ವಿ ಅವರದ್ದು ಎಂದಿರೋ ನಾನಿ ಅವರು, ಅವರನ್ನು ನಟ ಹೊಗಳಿದ್ದಾರೆ. ಇದೇ ವೇಳೆ, ಸುದೀಪ್ ಅವರ ಜೊತೆಗಿನ ಒಡನಾಟದ ಬಗ್ಗೆ ಮಾತನಾಡಿರುವ ನಾನಿ, “ಸುದೀಪ್ ಅವರು ನನ್ನ ಕುಟುಂಬ. ನೆನ್ನೆಯಷ್ಟೇ ನಾವು ಭೇಟಿಯಾಗಿದ್ದೆವು. ಅವರು ʻಬಿಲ್ಲ ರಂಗ ಭಾಷಾʼ ಶೂಟಿಂಗ್ ಬಿಜಿಯಲ್ಲಿ ಇದ್ದಾರೆ. ಪ್ರಿಯಾ ಮತ್ತು ಸಾನ್ವಿ ಕೂಡ ನಮ್ಮ ಫ್ಯಾಮಿಲಿ ಎನ್ನುತ್ತಾ ʻಹಿಟ್ 3’ ಟ್ರೈಲರ್ ಗಮನಿಸಿದ್ದರೆ, ಅದರಲ್ಲಿ ಗಾಯಕಿಯ ಧ್ವನಿ ಕೇಳಿಸುತ್ತದೆ. ಅದನ್ನು ಹಾಡಿರುವುದು ಸಾನ್ವಿ. ನಾನು ಸಾನ್ವಿ ವಾಯ್ಸ್‌ಗೆ ದೊಡ್ಡ ಅಭಿಮಾನಿ” ಎಂದಿದ್ದಾರೆ.
ಆ ನಟ ನನ್ನ ಕ್ರಷ್, ಅವ್ರ ಮದ್ವೆಯಾದಾಗ ಹಾರ್ಟ್ ಬ್ರೇಕ್ ಆಗೋಯ್ತು- ಬಿಕ್ಕಿ ಬಿಕ್ಕಿ ಅತ್ತೆ ಎಂದ ಸಾನ್ವಿ ಸುದೀಪ್
ಅಷ್ಟಕ್ಕೂ, ನಾನಿ ಹಾಗೂ ಸಾನ್ವಿ ಮಧ್ಯೆ ಪರಿಚಯ ಬೆಳೆಯೋಕೆ ಕಾರಣ ಆಗಿದ್ದು, ‘ಈಗ’ ಸಿನಿಮಾ. ರಾಜಮೌಳಿ ನಿರ್ದೇಶನದ ಈ ಚಿತ್ರದಲ್ಲಿ ನಾನಿ ಹೀರೋ ಆಗಿ ಕಾಣಿಸಿಕೊಂಡರೆ, ಸುದೀಪ್ ವಿಲನ್ ಪಾತ್ರ ಮಾಡಿದ್ದರು. ಸಿನಿಮಾ ಶೂಟಿಂಗ್ ಸಂದರ್ಭದಲ್ಲಿ ನಾನಿ ಪರಿಚಯ ಸಾನ್ವಿಗೆ ಆಗಿತ್ತು. ಆ ಬಾಂಡಿಂಗ್ ಈಗಲೂ ಮುಂದುವರಿದಿದೆ. ಅಂದಹಾಗೆ, ʻಜಿಮ್ಮಿʼ ಕನ್ನಡ ಸಿನಿಮಾದ ಟೀಸರ್‌ನಲ್ಲಿ ಸಾನ್ವಿ ಅವರ ಹಿನ್ನೆಲೆ ಗಾಯನವಿತ್ತು. ʻದಬಾಂಗ್ 3’ ಚಿತ್ರದಲ್ಲಿನ ಹಾಡೊಂದರ ಟ್ರ್ಯಾಕ್ ಕೂಡ ಸಾನ್ವಿ ಹಾಡಿದ್ದರು. ಸದ್ಯ ʻಹಿಟ್ 3ʼ ಸಿನಿಮಾದಲ್ಲೂ ಸಾನ್ವಿ ಹಿನ್ನೆಲೆ ಗಾಯಕಿಯಾಗಿ ಹಾಡಿದ್ದಾರೆ.
ಈ ಹಿಂದೆ ಸಾನ್ವಿ, ಸಲ್ಮಾನ್ ಖಾನ್ ಕುರಿತು ಹೇಳಿದ್ದರು. ದಬಾಂಗ್ 3 ರಲ್ಲಿ ಕಿಚ್ಚ ಸುದೀಪ್ ಅವರು, ಸಲ್ಮಾನ್ ಖಾನ್ ಅವರೊಂದಿಗೆ ಕೆಲಸ ಮಾಡಿದ್ದರು. ಈ ಸಂದರ್ಭದಲ್ಲಿ ಸುದೀಪ್ ಅವರ ಮಗಳು ಸಾನ್ವಿ, ಸಲ್ಮಾನ್ ಖಾನ್ ಅವರನ್ನು ಭೇಟಿಯಾದ ಮತ್ತು ಅವರೊಂದಿಗೆ ಸಮಯ ಕಳೆದ ಅನುಭವವನ್ನು ಹಂಚಿಕೊಂಡಿದ್ದರು. ನಾನು ಚಿಕ್ಕವಳಿದ್ದಾಗ ಅವರನ್ನು ಭೇಟಿಯಾಗಿದ್ದೆ. ಆ ಸಂದರ್ಭದಲ್ಲಿ ನಾನು ಧರಿಸಿದ್ದ ಬ್ರೇಸ್ಲೈಟ್ ಅನ್ನು ಅವರಿಗೆ ನೀಡಿದ್ದೆ. ಅದನ್ನು ಅವರು ಬಿಗ್ ಬಾಸ್ ಚಿತ್ರೀಕರಣದ ಸಮಯದಲ್ಲಿ ಧರಿಸಿದ್ದರು' ಎಂದಿದ್ದರು. ನಂತರ ಕೆಲ ವರ್ಷಗಳ ನಂತರ ದಬಾಂಗ್ 3 ಚಿತ್ರೀಕರಣದ ಸಮಯದಲ್ಲಿ ಅವರನ್ನು ಮತ್ತೆ ಭೇಟಿಯಾದ ಬಗ್ಗೆ ನೆನಪಿಸಿಕೊಂಡಿರುವ ಸಾನ್ವಿ ಅವರು, ಇದು "ಅತ್ಯಂತ ಮೋಜಿನ ಸಂದರ್ಭವಾಗಿತ್ತು" ಎಂದು ಹೇಳಿದ್ದರು.
ಚಿಕ್ಕವಳಿದ್ದಾಗ ಸಲ್ಮಾನ್ ಖಾನ್ ಮನೆಗೆ ಹೋದಾಗ ನಡೆದ ಘಟನೆಯನ್ನು ನೆನಪಿಸಿಕೊಂಡ ಸಾನ್ವಿ ಸುದೀಪ್
