ಕನ್ನಡ ಬಿಗ್‌ಬಾಸ್ ಸೀಸನ್ 10 ದಿನದಿಂದ ದಿನಕ್ಕೆ ರೋಚಕತೆ ಪಡೆದುಕೊಳ್ಳುತ್ತಿದೆ. ಈ ವಾರ ಮನೆಯಿಂದ ಗೌರೀಶ್ ಅಕ್ಕಿ ಎಲಿಮಿನೇಟ್ ಅನ್ನೋ ಮಾಹಿತಿ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು. ಕೊನೆಗೂ ಈ ಮಾಹಿತಿ ನಿಜವಾಗಿದೆ. ಗೌರೀಶ್ ಅಕ್ಕಿ ಬಿಗ್‌ಬಾಸ್ ಮನೆಯಿಂದ ಎಲಿಮಿನೇಟ್ ಆಗಿದ್ದಾರೆ.

ಬೆಂಗಳೂರು(ಅ.22) ಕನ್ನಡ ಬಿಗ್‌ಬಾಸ್ 10ನೇ ಸೀಸನ್ ಕುತೂಹಲ ಮತ್ತಷ್ಟು ಹೆಚ್ಚಾಗಿದೆ. ಈ ವಾರದ ಎಲಿಮಿನೇಶನ್ ರೌಂಡ್ ಸಾಮಾಜಿಕ ಮಾಧ್ಯಮದಲ್ಲೂ ಭಾರಿ ಚರ್ಚೆಯಾಗಿತ್ತು. 10ನೇ ಆವೃತ್ತಿ ಬಿಗ್‌ಬಾಸ್ ಕನ್ನಡದ ಈ ವಾರದ ಎಲಿಮಿನೇಶನ್ ರೌಂಡ್‌ನಲ್ಲಿ ಗೌರೀಶ್ ಅಕ್ಕಿ ಹೊರಬಿದ್ದಿದ್ದಾರೆ. ಬಿಗ್‌ಬಾಸ್ ಮನೆಯಲ್ಲಿ ಕೆಲವರಿಗಷ್ಟೇ ಆಪ್ತರಾಗಿದ್ದ ಗೌರೀಶ್ ಅಕ್ಕಿ, ಕರ್ನಾಟಕ ಜನತೆಯನ್ನು ರಂಜಿಸುವಲ್ಲೂ ಹಿಂದೆ ಬಿದ್ದಿದ್ದರು. ಹೀಗಾಗಿ ಕಡಿಮೆ ಮತಗಳನ್ನು ಪಡೆದ ಹಿರಿಯ ಸುದ್ದಿ ನಿರೂಪಕ ಗೌರೀಶ್ ಅಕ್ಕಿ ಬಿಗ್‌ಬಾಸ್ ರಿಯಾಲಿಟಿ ಶೋ ಮನೆಯಿಂದ ಔಟ್ ಆಗಿದ್ದಾರೆ.

ಬಿಗ್‌ಬಾಸ್ ಮನೆಯೊಳಗೆ ಗೌರೀಶ್ ಅಕ್ಕಿ ವಿರುದ್ಧ ಹೆಚ್ಚಿನ ಮತಗಳು ಬಿದ್ದಿತ್ತು. ಟಾಸ್ಕ್ ವಿಚಾರದಲ್ಲಿ ಗೌರೀಶ್ ಅಕ್ಕಿ ತೋರಿದ ನಿರಾಸಕ್ತಿ, ಕೆವಲರ ಜೊತೆಗೆ ಮಾತ್ರವೇ ಇದ್ದ ಮಾತುಕತೆ ಹಾಗೂ ಆಪ್ತಪತೆ ಮನೆಮಂದಿಯ ಕೆಂಗಣ್ಣಿಗೆ ಕಾರಣವಾಗಿತ್ತು. ಬಿಗ್‌ಬಾಸ್ ಮನೆಯ ಇತರ ಸ್ಪರ್ಧಿಗಳು ಗೌರೀಶ್ ಅಕ್ಕಿ ವಿರುದ್ದ ಧ್ವನಿ ಎತ್ತಿದ್ದರೆ, ಇತ್ತ ಮತಗಳಲ್ಲೂ ಗೌರೀಶ್ ಅಕ್ಕಿಗೆ ಹಿನ್ನಡೆಯಾಗಿದೆ. 

BBK10 ಮನೆ: ಆನೆಗೆ ಬಾಲ ಬಿಡಿಸಿ ಗೆದ್ದವರು ಯಾರು, ಸಂಗೀತಾಗೆ ಸಹಾಯ ಮಾಡಿದ ತನಿಷಾ-ಕಾರ್ತಿಕ್

ರಿಯಾಲಿಟಿ ಶೋ ಚೌಕಟ್ಟಿಗೆ ಗೌರೀಶ್ ಅಕ್ಕಿ ಅಷ್ಟಾಗಿ ಹೊಂದಿಕೊಳ್ಳಲಿಲ್ಲ ಅನ್ನೋ ಪ್ರತಿಕ್ರಿಯೆಗಳು ವೀಕ್ಷಕರಿಂದ ವ್ಯಕ್ತವಾಗಿದೆ. ಮನೆಯ ಎಲ್ಲರ ಜೊತೆ ಒಡನಾಟ ಇರಲಿಲ್ಲ. ಮಾತುಕತೆಯೂ ಅಷ್ಟಕಷ್ಟೇ ಸಿಮೀತವಾಗಿತ್ತು. ಇತ್ತ ಟಾಸ್ಕ ವಿಚಾರದಲ್ಲಿ ಗೌರೀಶ್ ಅಕ್ಕಿ ಎಲ್ಲರಿಗಿಂತ ಹಿಂದೆ ಉಳಿದಿದ್ದರೂ. ಹೆಚ್ಚಿನ ಟಾಸ್ಕ್‌ಗೆ ಆಸಕ್ತಿಯೇ ತೋರಿಲ್ಲ. ಇದು ತಂಡದ ಮೇಲೆ ಹೊಡೆತ ಬಿದ್ದಿತ್ತು.

ಗೌರೀಶ್ ಅಕ್ಕಿ ಹಾಗೂ ಭಾಗ್ಯಶ್ರಿ ಈ ವಾರ ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಲಿದ್ದಾರೆ ಅನ್ನೋ ಸುದ್ದಿಗಳು ಶನಿವಾರವೇ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿತ್ತು. ಸಾಮಾಜಿಕ ಜಾಲತಾಣದಲ್ಲಿ ವೀಕ್ಷಕರು ವ್ಯಕ್ತಪಡಿಸಿದ ಅಭಿಪ್ರಾಯ ನಿಜವಾಗಿದೆ. ಇಬ್ಬರ ಪೈಕಿ ಗೌರೀಶ್ ಅಕ್ಕಿ ಮನೆಯಿಂದ ಹೊರಬಂದಿದ್ದಾರೆ.

BBK10 ಅಣ್ಣಾ Rock ಅಕ್ಕ Shock: ಸ್ನೇಹಿತ್ ಗೌಡ-ನಮೃತಾ ಗೌಡ ಸಂಭಾಷಣೆ ಕೇಳಿ ಬಿದ್ದುಬಿದ್ದು ನಗುತ್ತಿರುವ ಕರ್ನಾಟಕ

ಅಕ್ಟೋಬರ್ 8 ರಂದು ಬಿಗ್ ಬಾಸ್ ಕನ್ನಡ 10ನೇ ಆವೃತ್ತಿ ಆರಂಭಗೊಂಡಿತ್ತು. ದೊಡ್ಮನೆಯಲ್ಲಿ ಸ್ಪರ್ಧಿಗಳು ಎರಡು ವಾರ ಕಳೆದಿದ್ದಾರೆ. ದಿನದಿಂದ ದಿನಕ್ಕೆ ಬಿಗ್‌ಬಾಸ್ ಕತೂಹಲ ಹೆಚ್ಚಾಗುತ್ತಿದೆ.