ಬಿಗ್‌ ಬಾಸ್‌ ಮನೆಯಲ್ಲಿ ನಿರೂಪಕ ಕಿಚ್ಚ ಸುದೀಪ್‌ ವಿರುದ್ಧವೇ ಸ್ಪರ್ಧಿಗಳು ಅಸಮಾಧಾನ ಹೊರಹಾಕಿದ್ದಾರೆ. ಕಳೆದ ವೀಕೆಂಡ್‌ನಲ್ಲಿ ಕಿಚ್ಚ ಸುದೀಪ್‌ ತೆಗೆದುಕೊಂಡ ಕ್ಲಾಸ್‌ ಬಗ್ಗೆ ಚೈತ್ರಾ ಕುಂದಾಪುರ ಹಾಗೂ ಮಾನಸ ತುಕಾಲಿ ಸಂತೋಷ್‌ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದಾರೆ.

ಬೆಂಗಳೂರು (ಅ.22): ಕಳೆದ ವಾರ ಬಿಗ್‌ ಬಾಸ್‌ ಮನೆ ರಣಾಂಗಣವಾಗಿದ್ದು ಎಲ್ಲರಿಗೂ ನೆನಪಿದೆ. ಇದಕ್ಕಾಗಿ ಲಾಯರ್‌ ಜಗದೀಶ್‌ ಹಾಗೂ ರಂಜಿತ್‌ ಅವರನ್ನು ಬಿಗ್‌ ಬಾಸ್‌ ಮನೆಯಿಂದ ಸ್ವತಃ ಬಿಗ್‌ ಬಾಸ್‌ ಹೊರಹಾಕಿದ್ದಾರೆ. ಇದರ ನಡುವೆ ವೀಕೆಂಡ್‌ನಲ್ಲಿ ನಡೆದ ವಾರದ ಕಥೆ ಕಿಚ್ಚನ ಜೊತೆ ಎಪಿಸೋಡ್‌ನಲ್ಲಿ ನಿರೂಪಕ ಕಿಚ್ಚ ಸುದೀಪ್‌ ಮನೆಮಂದಿಗೆ ಸರಿಯಾಗಿ ಕ್ಲಾಸ್‌ ತೆಗೆದುಕೊಂಡಿದ್ದರು. ಜಗದೀಶ್‌ ಅವರು ಮಾಡಿದ ತಪ್ಪಿಗೆ ಮನೆಯಿಂದ ಹೊರಹೋಗಿದ್ದಾರೆ. ಆದರೆ, ನಿಮ್ಮಲ್ಲಿ ಎಷ್ಟು ಜನ ಸರಿ ಇದ್ದೀರಿ ಎಂದು ಪ್ರಶ್ನೆ ಮಾಡಿದ್ದರು. ಆ ಮೂಲಕ ಮನೆ ಮಂದಿ ಮಾಡಿರುವ ತಪ್ಪುಗಳನ್ನ ಅವರು ಎತ್ತಿ ತೋರಿಸಿದ್ದರು. ಜಗದೀಶ್‌ ಅವರನ್ನು ಮಾಬ್‌ ಟಾರ್ಗೆಟ್‌ ಮಾಡಲಾಗಿದೆ ಅನ್ನೋದನ್ನ ಎಲ್ಲರಿಗೂ ತಿಳಿಸಿದ್ದರು. ಆದರೆ, ಸುದೀಪ್‌ ಅವರು ಮಾಡಿದ ಮಾತಿಗೆ ಮನೆ ಮಂದಿಯಲ್ಲೇ ಆಕ್ರೋಶ ವ್ಯಕ್ತವಾಗಿದೆ. ಚೈತ್ರಾ ಕುಂದಾಪುರ ಹಾಗೂ ಮಾನಸ ತುಕಾಲಿ ಸಂತೋಷ್‌ ಈ ಬಗ್ಗೆ ಮನೆಯಲ್ಲಿ ಅಸಮಾಧಾನ ಹೊರಹಾಕಿದ್ದು, ಇಡೀ ವಾರಾಂತ್ಯದ ಎಪಿಸೋಡ್‌ನಲ್ಲಿ ಜಗದೀಶ್‌ಗೆ ಕ್ಲೀನ್‌ ಚಿಟ್‌ ಕೊಡೋ ಹಾಗೆಯೇ ಸುದೀಪ್‌ ಮಾತನಾಡಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ವಾರಾಂತ್ಯದ ಎಪಿಸೋಡ್‌ ಮುಗಿದ ಬಳಿಕ ಚೈತ್ರಾ ಕುಂದಾಪುರ, ಅನುಷಾ ರೈ ಬಳಿ ಈ ವಿಚಾರ ಮಾತನಾಡಿದ್ದಾರೆ. 'ಸೀರಿಯಸ್ಲಿ ನನಗೆ ಹೇಗೆ ಕಾಣಿಸ್ತು ಅಂದರೆ, ಜಗದೀಶ್‌ ಅವರಿಗೆ ಕ್ಲೀನ್‌ ಚಿಟ್‌ ಕೊಡೋ ರೀತಿಯಲ್ಲಿ ಕಾಣಿಸಿತು.ನನಗೆ ಸೀರಿಯಸ್ಲಿ ಹಾಗೆ ಅನಿಸಿದೆ.ನಾನು ಇದನ್ನ ನೇರವಾಗಿ ಹೇಳ್ತೇನೆ. ಜಗದೀಶ್‌ ಸರ್‌ಗೆ ಕ್ಲೀನ್‌ ಚಿಟ್‌ ಕೊಡೋ ಹಾಗೆ ಕಾಣಿಸ್ತು ಬಿಟ್ರೆ ಬೇರೆ ಏನೂ ಇಲ್ಲ' ಎಂದು ಹೇಳಿದ್ದಾರೆ.

ಬಳಿಕ ಮನೆಯ ಡೈನಿಂಗ್‌ ಟೇಬಲ್‌ ಬಳಿ ಕುಳಿತು, 'ಜನ ಯಾವುದನ್ನು ಕನ್ಸಿಡರ್‌ ಮಾಡ್ತಾರೆ ಅಂದ್ರೆ, ಸುದೀಪ್‌ ಸರ್‌ ಹೇಳಿದ ಆ ಒಂದು ಸೆಂಟೆನ್ಸ್‌ಅನ್ನು ಅವರು ಕನ್ಸಿಡರ್‌ ಮಾಡಲ್ಲ. ಜನ ಇವರುಗಳಿಗೆ ಸುದೀಪ್‌ ಸರ್‌ ರಿಯಾಗಿ ಉಗಿದ್ರು ಅನ್ನೋದನ್ನ ಮಾತ್ರ ನೆನಪಲ್ಲಿ ಇಟ್ಕೋತಾರೆ. ಇಡೀ ಮನೆ ಗ್ರೂಪ್‌ ಮಾಡಿ ಜಗದೀಶ್‌ ಸರ್‌ನ ಹೊರಗಡೆ ಹಾಕಿದ್ರು ಅನ್ನೋದರ ಬಗ್ಗೆ ಸುದೀಪ್‌ ಸರ್ ಕ್ಲಾಸ್‌ ತಗೊಂಡ್ರು ಅನ್ನೋದನ್ನ ನೆನಪಿಟ್ಟುಕೊಳ್ಳುತ್ತಾರೆಯೇ ಹೊರತು. ಮಧ್ಯ ಮಧ್ಯದಲ್ಲಿ ಒಂದೊಂದು ಸೆಂಟೆನ್ಸ್‌ ಸೇರಿಸಿದ್ರು ಅನ್ನೋದನ್ನ ಖಂಡಿತಾ ನೆನಪಿಟ್ಟುಕೊಳ್ಳೋದಿಲ್ಲ' ಎಂದು ಚೈತ್ರಾ ಕುಂದಾಪುರ ಹೇಳಿದ್ದಾರೆ. ಮಾನಸ ತುಕಾಲಿ ಕೂಡ ಇದೇ ಮಾತನ್ನ ಹೇಳಿದ್ದಾರೆ.

ಕೈಮುಗಿದು ಪೂಜೆ ಮಾಡೋ ಕಲ್ಲಿಗೂ, ರೋಡಲ್ಲಿ ಎಲ್ಲೋ ಬಿದ್ದಿರೋ ಕಲ್ಲಿಗೂ ವ್ಯತ್ಯಾಸ ಇದೆ.ರೋಡಲ್ಲಿರೋ ಕಲ್ಲಿಗೆ ಉಗಿದೆ ಎಂದ ತಕ್ಷಣ ನಾನು ತಪ್ಪಿತಸ್ಥೆ ಆಗೋದಿಲ್ಲ. ಮಾತು ಕಂಪ್ಲೀಟ್‌ ಮಾಡೋಕೆ ಬಿಟ್ರೆ ತಾನೆ ನಮ್ಮ ವಿಷಯ ಏನು ಅನ್ನೋದು ಗೊತ್ತಾಗೋದು. ಇಡೀ ಮನೆಯನ್ನ ವಿಲನ್‌ ಮಾಡಿ, ಅವರ ವಿಚಾರದಲ್ಲಿ ನೀವು ಮಾಡಿದ್ದೆಲ್ಲಾ ತಪ್ಪು ಅಂತಾ ತಿಳಿಸೋದು ಇದೆಯಲ್ಲ ಅದು ತಪ್ಪು ಎಂದು ಚೈತ್ರಾ ಹೇಳಿದ್ದಾರೆ.

ಬಿಗ್‌ ಬಾಸ್‌ಗೆ ಶಿಶಿರ್‌ ಶಕುನಿ, ರಂಜಿತ್‌ ಅಮಾಯಕ, ಭವ್ಯಾ ಖಾಲಿ ದೋಸೆ ಎಂದ ಜಗದೀಶ್‌!

ಇನ್ನು ಚೈತ್ರಾ ಹಾಗೂ ಮಾನಸ ಅವರ ಮಾತಿಗೆ ಸೋಶಿಯಲ್‌ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತವಾಗಿದೆ. 'ಸುದೀಪ್‌ ಅವರು ಕಳೆದ 10 ವರ್ಷದಿಂದ ಈ ಶೋ ನಡೆಸಿಕೊಡುತ್ತಿದ್ದಾರೆ. ಈಲ್ಲಿಯವರೆಗೂ ಅವರು ಯಾರ ಪರವಾಗಿಯೂ ಮಾತನಾಡಿಲ್ಲ. ಅವರಿಗೆ ಗೊತ್ತಿರುವ ಹಲವು ಈ ಶೋನಲ್ಲಿದ್ದಾರೆ. ಎಲ್ಲರನ್ನೂ ಅವರು ಸಮಾನವಾಗಿ ನೋಡಿಕೊಳ್ಳುತ್ತಿದ್ದಾರೆ. ಇಲ್ಲದೇ ಇದ್ದಲ್ಲಿ ಸುದೀಪ್‌ ಅವರನ್ನು ಜನರು ಒಪ್ಪಿಕೊಳ್ಳುತ್ತಿರಲಿಲ್ಲ..' ಎಂದಿದ್ದಾರೆ. 'ಹೋದ ಸೀಸನ್ ವಿನಯ ಗೆ ಈಗೇನೇ ಆಗಿದ್ದು.... ವಿನಯ್ ಗೆ ವೀಕ್ ಎಂಡ್ ನಲ್ಲಿ ಸುದೀಪ್ ಅವರು ಉಗಿದರು ಪ್ರತಾಪ್ ಇನೋಸೆಂಟ್ ಅಂಥ ತೋರಿಸಿದರು... ಇಲ್ಲಿ ಕಡೆ ವರೆಗೂ ವಿನಯ್ ವಿಲನ್ ಆಗೆ ಉಳಿದರು..' ಎಂದು ಹೇಳಿದ್ದಾರೆ.

ಉಗ್ರಂ ಮಂಜು, ಚೈತ್ರಾ, ಮಾನಸಗೆ ಪಂಚಾಯ್ತಿಯಲ್ಲಿ ಬೆಂಡೆತ್ತಿದ ಕಿಚ್ಚ ಸುದೀಪ್

Scroll to load tweet…