ಮಾಧವ್​ನನ್ನು ಕೊನೆಗೂ ಬಾಯ್ತುಂಬ ಅಪ್ಪ ಎಂದು ಹೇಳಿದ್ದಾನೆ ಅವಿ. ಬಿಡುಗಡೆಯಾಗಿರುವ ಪ್ರೊಮೋದಲ್ಲಿ ಮಾಧವ್​ ನಟನೆಗೆ ಕಣ್ಣೀರಾಗಿದ್ದಾರೆ ಅಭಿಮಾನಿಗಳು 

ಇಂದು ನಟ-ನಟಿಯರ ದೊಡ್ಡ ಬಳಗವೇ ಇದೆ. ಆದರೆ ಅವರ ಪೈಕಿ ಕೆಲವರ ನಟನೆಗಳು, ಕಣ್ಣುಗಳಲ್ಲೇ ಅವರು ಮೂಡಿಸುವ ಭಾವನೆಗಳು ಪ್ರೇಕ್ಷಕರ ಹೃದಯಕ್ಕೆ ನೇರವಾಗಿ ನಾಟಿಬಿಡುತ್ತವೆ. ಅದರಲ್ಲಿಯೂ ಭಾವುಕ ದೃಶ್ಯಗಳಲ್ಲಿ ನೋಡುಗರ ಕಣ್ಣಲ್ಲಿ ನೀರು ತರಿಸುವ ಹಲವು ನಟ-ನಟಿಯರು ಇದ್ದರೂ ಕೆಲವರು ಕಣ್ಣಿನಲ್ಲಿಯೇ ಆ ನಟನೆಯನ್ನು ಮಾಡುವ ಮೂಲಕ ಅಭಿಮಾನಿಗಳ ಹೃದಯವನ್ನು ಗೆದ್ದುಬಿಡುತ್ತಾರೆ. ಅಂಥವರಲ್ಲಿ ಒಬ್ಬರು ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗ್ತಿರೋ ಶ್ರೀರಸ್ತು ಶುಭಮಸ್ತುವಿನ ಮಾಧವ. ಈ ಸೀರಿಯಲ್​ನಲ್ಲಿ ಬಹುತೇಕ ಎಲ್ಲ ನಟ-ನಟಿಯರದ್ದೂ ಮನೋಜ್ಞ ಅಭಿನಯ ಎನ್ನುವುದರಲ್ಲಿ ಎರಡು ಮಾತಿಲ್ಲ. ತಮ್ಮ ತಮ್ಮ ಪಾತ್ರಕ್ಕೆ ತಕ್ಕಂತೆ ಸೀರಿಯಲ್​ ಪ್ರೇಮಿಗಳ ಮನಸ್ಸನ್ನು ಗೆದ್ದಿದ್ದಾರೆ. ಅದರಲ್ಲಿ ಒಬ್ಬರಾದವರು ಮಾಧವ್​ ಪಾತ್ರಧಾರಿ ಅಜಿತ್ ಹಂದೆ.

ಸೀರಿಯಲ್​ ಈಗ ಮಹತ್ವದ ಘಟ್ಟ ತಲುಪಿದೆ. ವಿಲನ್​ ಶಾರ್ವರಿಯ ಕುತಂತ್ರದಿಂದ ಮಾಧವ್​ನ ಪತ್ನಿ ಅಪಘಾತದಲ್ಲಿ ಸಾವಿಗೀಡಾಗಿದ್ದಳು. ಆದರೆ ಈಕೆಯ ಕುತಂತ್ರವನ್ನು ಅರಿಯದ ಮಾಧವ್​ನ ಮಕ್ಕಳಾದ ಅವಿ ಮತ್ತು ಅಭಿ ಅಪ್ಪನ ಮೇಲೆ ಕಿಡಿ ಕಾರುತ್ತಲೇ ಬಂದಿದ್ದಾರೆ. ತಮ್ಮ ತಂದೆಯಿಂದಲೇ ತಾಯಿ ಸಾವನ್ನಪ್ಪಿದ್ದು ಎನ್ನುವುದು ಅವರ ಈ ಸೇಡಿಗೆ ಕಾರಣ. ಹಲವಾರು ವರ್ಷಗಳಿಂದ ಅಪ್ಪನ ಬಳಿ ಅವರ ಮಾತುಕತೆ ಇಲ್ಲ. ಕೊನೆಯ ಪಕ್ಷ ಅಪ್ಪ ಎಂದೂ ಕರೆಯಲಿಲ್ಲ. ಇದೇ ನೋವಿನಲ್ಲಿದ್ದ ಮಾಧವ್​ನನ್ನು ಸಮಾಧಾನ ಪಡಿಸುತ್ತಲೇ ಬಂದವಳು ಎರಡನೆಯ ಪತ್ನಿ ತುಳಸಿ. ಆಕೆಗೆ ಹೇಗಾದರೂ ಮಾಡಿ ಅಪ್ಪ-ಮಕ್ಕಳನ್ನು ಒಂದು ಮಾಡಬೇಕು ಎನ್ನುವ ಆಸೆ. ಆ ಆಸೆ ನೆರವೇರಿದೆ. 

ಸೀತಾ-ರಾಮರ ಮದ್ವೆಗೆ ಅಬ್ಬಾ ಹೇಗೆಲ್ಲಾ ಭರ್ಜರಿ ರೆಡಿ ಮಾಡಲಾಗಿದೆ ನೋಡಿ: ಶೂಟಿಂಗ್ ಸೆಟ್​ ವಿಡಿಯೋ ವೈರಲ್​

ಹೀಗೆ ತಮಾಷೆ ಮಾಡುತ್ತಿದ್ದ ಸಂದರ್ಭದಲ್ಲಿ ತುಳಸಿಯನ್ನು ಅವಿ ತಳ್ಳಿಬಿಡುತ್ತಾನೆ. ಆಕೆ ಮೆಟ್ಟಿಲ ಮೇಲಿನಿಂದ ಬೀಳುತ್ತಾಳೆ. ಅವಳ ತಲೆಗೆ ಪೆಟ್ಟಾಗುತ್ತದೆ. ತನ್ನ ಈ ಗಾಯಕ್ಕೆ ಅವಿಯೇ ಕಾರಣ ಎಂದು ಆರೋಪ ಮಾಡುತ್ತಾಳೆ. ಅವಿ ಅವಳನ್ನು ಸಂತೈಸಲು ಎಷ್ಟೇ ಪ್ರಯತ್ನ ಪಟ್ಟರೂ ಅದು ಸಾಧ್ಯವಾಗುವುದಿಲ್ಲ. ಕೊನೆಗೆ ಅವನು ಇದರಲ್ಲಿ ನನ್ನ ತಪ್ಪು ಇಲ್ಲ, ಅಕಸ್ಮಾತ್ತಾಗಿದ್ದು ಎಂದು ತುಳಸಿಗೆ ಮನವರಿಕೆ ಮಾಡಿಕೊಡುತ್ತಾನೆ. ತಾನು ಅವನ ಬಳಿ ಮಾತನಾಡದಿದ್ದ ಕಾರಣ ನೊಂದುಕೊಂಡಿದ್ದ ಅವಿಯನ್ನು ಉದ್ದೇಶಿಸಿ ತುಳಸಿ, ನನಗೆ ಹೀಗೆ ಆಗುವುದರಲ್ಲಿ ನಿನ್ನ ತಪ್ಪಿಲ್ಲ ಎನ್ನುವುದು ನನಗೆ ಗೊತ್ತು. ನಿನಗೆ ಇದರ ಅರಿವು ಆಗಲಿ ಎಂದೇ ನಾನು ನಿನ್ನ ಬಳಿ ಮಾತು ಬಿಟ್ಟಿದ್ದು. ಒಂದೆರಡು ದಿನ ಮಾತನಾಡದೇ ಇದ್ದುದಕ್ಕೆ ಇಷ್ಟು ನೋವು ಪಟ್ಟುಕೊಂಡಿಯಲ್ಲ. 15 ವರ್ಷಗಳಿಂದ ನೀನು ಅಪ್ಪನ ಬಳಿ ಅವರದ್ದಲ್ಲದ ತಪ್ಪಿಗೆ ಮಾತನಾಡುತ್ತಿಲ್ಲ. ಅವರಿಗೆ ಹೇಗೆ ಅನ್ನಿಸಬೇಡ ಎಂದಾಗ ಅವಿಗೆ ಅವನ ತಪ್ಪು ಅರ್ಥವಾಗುತ್ತದೆ.

ಅದೇ ಇನ್ನೊಂದೆಡೆ ಶಾರ್ವರಿಯ ಕುತಂತ್ರದಿಂದ ಗೂಂಡಾಗಳು ಮಾಧವ್​ನನ್ನು ಹೊಡೆಯಲು ಬಂದಾಗ ಅವಿ ಕಾಪಾಡುತ್ತಾನೆ. ಅವಿಗೆ ರಾಡ್​ನಿಂದ ಹೊಡೆಯಲು ಗೂಂಡಾಗಳು ಮುಂದಾದಾಗ ಮಾಧವ್​ ಮಧ್ಯೆ ಬರುತ್ತಾನೆ. ಅವನ ತಲೆಗೆ ಪೆಟ್ಟು ಬಿದ್ದಾಗ, ಅವಿ ಅಪ್ಪಾ ಎಂದು ಕೂಗುತ್ತಾನೆ. ಅಪ್ಪಾ ಎನ್ನುವ ಶಬ್ದ ಕೇಳುತ್ತಿದ್ದಂತೆಯೇ ಮಾಧವ್​ ಕುಸಿದುಬೀಳುತ್ತಾನೆ. ಅವನನ್ನು ಆಸ್ಪತ್ರೆಗೆ ದಾಖಲು ಮಾಡಲಾಗುತ್ತದೆ. ಎಚ್ಚರವಾದಾಗ, ಅವಿಯ ಬಳಿ ನೀನು ಏನೋ ಹೇಳಿದೆ. ಅದನ್ನು ಮತ್ತೊಮ್ಮೆ ಹೇಳು ಎಂದಾಗ ಅವಿ ಅಪ್ಪಾ ಎನ್ನುತ್ತಾನೆ. ಆಗ ಮಾಧವ್​ ಪಾತ್ರಧಾರಿ ಅಜಿತ್​ ಹಂದೆಯವರ ನಟನೆಗೆ ನೆಟ್ಟಿಗರು ಭಾವುಕರಾಗಿದ್ದಾರೆ. ನಟನೆ ಎಂದರೆ ಇದು ಎನ್ನುತ್ತಿದ್ದಾರೆ. 

ಸಾಧನೆ ಮುಂದೆ ಅಕ್ಷರ, ವಿದ್ಯೆ, ಭಾಷೆ ಎಲ್ಲವೂ ಗೌಣ... ಶ್ರೀನಾಥ್​ ಮಾತಲ್ಲಿ ಎಷ್ಟು ಅರ್ಥವಿದೆಯಲ್ವೆ?