Asianet Suvarna News Asianet Suvarna News

ಸಾಧನೆ ಮುಂದೆ ಅಕ್ಷರ, ವಿದ್ಯೆ, ಭಾಷೆ ಎಲ್ಲವೂ ಗೌಣ... ಶ್ರೀನಾಥ್​ ಮಾತಲ್ಲಿ ಎಷ್ಟು ಅರ್ಥವಿದೆಯಲ್ವೆ?

ಭಾಗ್ಯಳಿಗೆ ಸನ್ಮಾನ ಮಾಡಲು ನಟ ಶ್ರೀನಾಥ್​ ಎಂಟ್ರಿಯಾಗಿದೆ. ಅಕ್ಷರ, ವಿದ್ಯೆ, ಭಾಷೆ ಎಲ್ಲವನ್ನೂ ಮೀರಿ ಸಾಧನೆ ಮಾಡಿರುವ ಭಾಗ್ಯಳ ಕುರಿತು ಅವರಾಡಿದ ಮಾತುಗಳಿಗೆ ಶ್ಲಾಘನೆಗಳ ಮಹಾಪೂರ ಹರಿದುಬರುತ್ತಿದೆ.
 

Actor Sheenath honor Bhagyalakshmi  Praises her for her success in life being a housewife suc
Author
First Published Jul 2, 2024, 1:32 PM IST

ಸಾಧನೆ, ಸಾಧಿಸುವ ಛಲವೊಂದಿದ್ದರೆ ಸಾಕು. ಅದರ ಮುಂದೆ ಉಳಿದೆಲ್ಲವೂ ಗೌಣ. ಡಬಲ್​-ತ್ರಿಬಲ್​ ಡಿಗ್ರಿ ಪಡೆದರೇನು?, ಹತ್ತಾರು ಭಾಷೆ ಬಂದರೇನು? ನಿರರ್ಗಳವಾಗಿ ಇಂಗ್ಲಿಷ್​ ಮಾತನಾಡಲು ಬಂದರೇನು?  ಸಾಧನೆ ಮಾಡುವ ಛಲವೇ ಇಲ್ಲದಿದ್ದರೆ ಯಾವುದೂ ಪ್ರಯೋಜನಕ್ಕೆ ಬರುವುದೇ ಇಲ್ಲ, ಇದನ್ನು ಇದಾಗಲೇ ಹಲವಾರು ಮಹನೀಯರು ಸಾಧಿಸಿ ತೋರಿಸಿದ್ದಾರೆ. ಒಂದಕ್ಷರವೂ ಕಲಿಯದೇ, ಶಾಲೆಯ ಮೆಟ್ಟಿಲೂ ಹತ್ತದೇ, ನಾಲ್ಕೈದು ತರಗತಿಯನ್ನೂ ಸರಿಯಾಗಿ ಕಲಿಯದೇ ಸಾಧನೆಯ ಉತ್ತುಂಗ ಏರಿದವರು ಅದೆಷ್ಟು ಮಂದಿ? ನಮ್ಮೆಲ್ಲರ ಹೆಮ್ಮೆಯ ಡಾ.ರಾಜ್​ಕುಮಾರ್​ ಸೇರಿದಂತೆ, ಪದ್ಮ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿ ಪಡೆದ ಸಾಲು ಮರದ ತಿಮ್ಮಕ್ಕ, ಹಾಜಬ್ಬ, ಅಷ್ಟೇ ಏಕೆ, ಹತ್ತಾರು ಶಿಕ್ಷಣ ಸಂಸ್ಥೆ, ಆಸ್ಪತ್ರೆಗಳನ್ನು ಕಟ್ಟಿರುವ ಎಂ.ಎಸ್​.ರಾಮಯ್ಯ, ಅಂತರರಾಷ್ಟ್ರೀಯ ಉದ್ಯಮಿ ಧೀರುಭಾಯಿ ಅಂಬಾನಿ... ಹೀಗೆ ಹೇಳುತ್ತಾ ಹೋದರೆ ಪಟ್ಟಿ ದೊಡ್ಡದಾಗುತ್ತಲೇ ಸಾಗುತ್ತದೆ. ಇದನ್ನೇ ಈಗ ಕಲರ್ಸ್​ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ ಭಾಗ್ಯಲಕ್ಷ್ಮಿ ಸೀರಿಯಲ್​ನಲ್ಲಿ ಸ್ಯಾಂಡಲ್​ವುಡ್​ ನಟ ಶ್ರೀನಾಥ್​ ಇದನ್ನೇ ಸೂಚ್ಯವಾಗಿ ಹೇಳಿದ್ದಾರೆ.

ಎಲ್ಲಾ ಅಡೆತಡೆಗಳನ್ನು ಮೀರಿ ಭಾಗ್ಯ ಸ್ಟಾರ್​ ಹೋಟೆಲ್​ನಲ್ಲಿ ಉದ್ಯೋಗ ಗಿಟ್ಟಿಸಿಕೊಂಡಿದ್ದಾಳೆ. ಇಂಗ್ಲಿಷ್​ ಬರದಿದ್ದರೂ ಅಡುಗೆ ಮೂಲಕವೇ ಎಲ್ಲರ ಮನಸ್ಸನ್ನು ಗೆದ್ದಿದ್ದಾಳೆ. ನಿನ್ನಿಂದ ಐದು ಪೈಸೆಯೂ ದುಡಿಯಲು ಸಾಧ್ಯವಿಲ್ಲ ಎಂದು ಹಂಗಿಸುತ್ತಿದ್ದ ಗಂಡ ತಾಂಡವ್​ಗೆ ತಿರುಗೇಟು ನೀಡುವ ರೀತಿಯಲ್ಲಿ, ಲಕ್ಷ ಲಕ್ಷ ಸಂಪಾದನೆ ಮಾಡುತ್ತಿದ್ದಾರೆ. ಇವಳನ್ನು ಅಭಿನಂದಿಸಲು ಶ್ರೀನಾಥ್​ ಅವರ ಎಂಟ್ರಿಯಾಗಿದೆ. ಇಂದು ಸೀರಿಯಲ್​ಗಳು ಕೇವಲ ಸೀರಿಯಲ್​ಗಳಾಗಿ ಉಳಿದಿಲ್ಲ. ಅದು ಮನೆಮನೆಯ ಕಥೆಗಳಾಗಿವೆ. ಇದರಿಂದ ಸ್ಫೂರ್ತಿ ಪಡೆಯುವ ಅದೆಷ್ಟೋ ಜನರು ಇದ್ದಾರೆ. ಅದಕ್ಕೆ ಉದಾಹರಣೆಯಾಗಿ ಭಾಗ್ಯಳನ್ನು ನೋಡಿ ಕೆಲವು ಮಹಿಳೆಯರು ಎಸ್​ಎಸ್​ಎಲ್​ಸಿ ಪರೀಕ್ಷೆ ಬರೆದಿದ್ದಾರೆ. ಇದೀಗ ಮಹಿಳೆ ಮನಸ್ಸು ಮಾಡಿದರೆ ಏನು ಮಾಡಲು ಸಾಧ್ಯ ಎನ್ನುವ ಭಾಗ್ಯ ಹಲವು ಮಹಿಳೆಯರಿಗೆ ಸ್ಫೂರ್ತಿ ಕೂಡ ಆಗಿದ್ದಾಳೆ.

ಮೇಘನಾ ಫಿಲ್ಮ್​ಗೆ ಎಂಟ್ರಿ ಕೊಟ್ಟಿದ್ದು ನಮಗೆ ಬೇಸರವಾಗಿತ್ತು, ಆದ್ರೆ... ಅಪ್ಪ ಸುಂದರರಾಜ್​ ಮನದಾಳದ ಮಾತು

ಇದೀಗ ಅವಳಿಗೆ ಅಭಿನಂದನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅಲ್ಲಿಗೆ ಬಂದಿರುವ ಶ್ರೀನಾಥ್​ ಅವರು, ಸಾಧನೆ ಮುಂದೆ ಅಕ್ಷರ, ವಿದ್ಯೆ, ಭಾಷೆ ಎಲ್ಲವೂ ಗೌಣ. ಇದಕ್ಕೆ ಉದಾಹರಣೆಯೇ ಭಾಗ್ಯ ಎನ್ನುತ್ತಲೇ ಭಾಗ್ಯಳನ್ನು ಸನ್ಮಾನ ಮಾಡಿದ್ದಾರೆ. ಅಲ್ಲಿಗೇ ಅತ್ತೆ ಕುಸುಮಳ ಎಂಟ್ರಿಯಾಗಿದೆ.  ಭಾಗ್ಯಳಿಗೆ ಸ್ಟಾರ್​ ಹೋಟೆಲ್​ನಲ್ಲಿ ಕೆಲಸ ಸಿಕ್ಕಿರುವ ಸುದ್ದಿ ಟಿ.ವಿಯಲ್ಲಿ ಬ್ರೇಕಿಂಗ್​ ಬಂದಾಗ ಮನೆಯವರೆಲ್ಲಾ ಕುಣಿದು ಕುಪ್ಪಳಿಸಿದ್ದರೂ ಅತ್ತೆ ಕುಸುಮಾ ಸಿಟ್ಟಿನಿಂದ ಒಳಕ್ಕೆ ಹೋಗಿದ್ದಳು. ತಾಂಡವ್​ ಮುಖ ಇಂಗು ತಿಂದ ಮಂಗನಂತಾಗಿದೆ.  ಭಾಗ್ಯಳ ಅಮ್ಮ, ಮಕ್ಕಳು ಮತ್ತು ಮಾವಂದಿರು ಸಂಭ್ರವನ್ನೇನೋ ದ ಸಂಭ್ರಮದ ಆಚರಣೆ. ಎಲ್ಲರೂ ಕುಣಿದು ಕುಣಿದು ಕುಪ್ಪಳಿಸುತ್ತಿರುವ ಸಮಯದಲ್ಲಿಯೇ ಅತ್ತೆ ಕುಸುಮಾ ಎಂಟ್ರಿಯಾಗಿತ್ತು. ಟಿ.ವಿ. ನೋಡಿ ಅವಳಿಗೆ ಶಾಕ್​ ಆಗಿತ್ತು. 

ಅವಳು ಕೆಲಸಕ್ಕೆ ಹೋಗುವುದು ಕುಸುಮಾಗೆ ಇಷ್ಟವಿರಲಿಲ್ಲ. ತನ್ನನ್ನು ಕೇಳದೇ ಕೆಲಸಕ್ಕೆ ಹೋದಳು ಎಂದು ಸಿಟ್ಟು ಬಂದಿದೆ.  ಖುಷಿಯನ್ನೂ ಪಡಲಾಗದೇ, ಸಿಟ್ಟನ್ನೂ ಹತ್ತಿಕ್ಕಲಾಗದೇ ಬಿಸಿತುಪ್ಪ ಆಗಿಬಿಟ್ಟಿದೆ ಈ ಸುದ್ದಿ. ಇನ್ನು ತಾಂಡವ್​ನೋ ಇಂಗುತಿಂದ ಮಂಗನಂತಾಗಿ ಬ್ರೇಕಿಂಗ್​ ಸುದ್ದಿ ಕೇಳಿ ಹಾರ್ಟೇ ಬ್ರೇಕ್​  ಆಗಿ ಹೋಗಿದೆ! ಅದೇ ಇನ್ನೊಂದೆಡೆ ಶ್ರೇಷ್ಠಾ ಕೂಡ ಟಿ.ವಿ ನೋಡಿ ಶಾಕ್​ ಆಗಿದ್ದಾಳೆ. ಪೂಜಾ ಭಾವುಕಳಾಗಿ ಕಣ್ಣೀರು ಹಾಕಿದ್ದಾಳೆ. ತನ್ನ ಸುದ್ದಿ ಟಿ.ವಿಯಲ್ಲಿ ಬಂದಿರುವ ವಿಷಯ ನೋಡಿ ಖುದ್ದು ಭಾಗ್ಯಳಿಗೂ ಶಾಕ್​ ಆಗಿದೆ. ಅತ್ತೆಗೆ ವಿಷಯ ಗೊತ್ತಾದರೆ ಏನು ಮಾಡುವುದು ಎಂದು ಟೆನ್ಷನ್​ನಲ್ಲಿ ಇದ್ದಾಳೆ. ಅದರ ನಡುವೆಯೇ ಭಾಗ್ಯಳಿಗೆ ಸನ್ಮಾನ ಸಮಾರಂಭ. ಅತ್ತೆ ಬಂದು ಭಾಗ್ಯಳನ್ನು ಹೊಗಳೇ ಹೊಗಳುತ್ತಾಳೆ ಎನ್ನುವ ನಿರೀಕ್ಷೆ ಎಲ್ಲರದ್ದು. 

ಸೀತಾ-ರಾಮರ ಮದ್ವೆಗೆ ಅಬ್ಬಾ ಹೇಗೆಲ್ಲಾ ಭರ್ಜರಿ ರೆಡಿ ಮಾಡಲಾಗಿದೆ ನೋಡಿ: ಶೂಟಿಂಗ್ ಸೆಟ್​ ವಿಡಿಯೋ ವೈರಲ್​

 

Latest Videos
Follow Us:
Download App:
  • android
  • ios