ಆರಂಭದಿಂದಲೂ ಸತ್ಯಳನ್ನ ಸಖತ್ ರಗಡ್ ಪಾತ್ರದಲ್ಲೇ ನೋಡ್ಕೊಂಡು ಬಂದವರಿಗೆ ಈಗಿನ ಸತ್ಯ ಪಾತ್ರ ಇಷ್ಟ ಆಗ್ತಾ ಇಲ್ಲ. ಅವಳನ್ನು ಮಾಲಾಶ್ರೀ ಥರ ಡೇರಿಂಗ್ ಆಗಿಯೇ ನೋಡೋಕೆ ಇಷ್ಟ. ದಯವಿಟ್ಟು ಅಳುಮುಂಜಿ ಶ್ರುತಿ ಥರ ಮಾಡ್ಬೇಡಿ ಅಂತಿದ್ದಾರೆ ಫ್ಯಾನ್ಸ್.

ಜೀ ಕನ್ನಡ(Zee Kannada)ದಲ್ಲಿ ಪ್ರಸಾರವಾಗುತ್ತಿರುವ ಸತ್ಯ ಸೀರಿಯಲ್(Sathya Serial) ಕಳೆದ ಕೆಲವು ದಿನಗಳಿಂದ ಕೊಂಚ ಬೇರೆ ಆಂಗಲ್‌ನಲ್ಲಿ ಬರ್ತಿದೆ. ಸತ್ಯ ಮತ್ತು ಕಾರ್ತಿಕ್ ಗೆ ಮದುವೆ(Marriage) ಆಗಿದೆ. ಆದರೆ ಅದು ಅವರಿಬ್ಬರೂ ಇಷ್ಟ ಪಟ್ಟು ಆದ ಮದುವೆ ಅಲ್ಲ. ಕಾರ್ತಿಕ್ ಜೊತೆಗೆ ಸತ್ಯ ಅಕ್ಕ ದಿವ್ಯಾ ಮದುವೆ ನಡೆಯಬೇಕಿತ್ತು. ಆದರೆ ಆ ಟೈಮ್‌(Time)ಗೆ ದಿವ್ಯಾಳನ್ನು ಅವಳ ಹಳೇ ಗೆಳೆಯ ಬಾಲ ಹಣದ ಆಸೆ ತೋರಿಸಿ ಕರೆದುಕೊಂಡು ಹೋಗಿದ್ದಾನೆ. ಅವಳು ಮದುವೆ ಮನೆಯಿಂದಲೇ ಎಸ್ಕೇಪ್(Escape) ಆಗಿದ್ದಾಳೆ. ಆಮೇಲೆ ಹಿರಿಯರೆಲ್ಲ ಮಾತಾಡಿ ಸತ್ಯಗೂ ಕಾರ್ತಿಕ್‌ಗೂ ಮದುವೆ ಮಾಡಿದ್ದಾರೆ. ಆದರೆ ಕಾರ್ತಿಕ್‌ಗೆ ಈ ಮದುವೆ ಸುತರಾಂ ಇಷ್ಟ ಇಲ್ಲ. ಆತ ಸತ್ಯಳನ್ನು ಪತ್ನಿ ಅಂತ ಒಪ್ಪಿಕೊಳ್ತನೂ ಇಲ್ಲ. ಆದರೆ ಸತ್ಯ ಮಾತ್ರ ವಿಧೇಯ ಹೆಣ್ಣಿನ ಹಾಗೆ ಗಂಡನನ್ನು ಅವನ ಮನೆಯವರನ್ನು ಒಲಿಸಿಕೊಳ್ಳುವ ಪ್ರಯತ್ನದಲ್ಲಿದ್ದಾಳೆ. ಆದರೆ ಆರಂಭದಿಂದಲೂ ಸತ್ಯಳನ್ನು ರಗಡ್ ಲುಕ್‌(Rugged Look)ನಲ್ಲೇ ನೋಡಿಕೊಂಡು ಬಂದಿದ್ದ ಜನರಿಗೆ ಅವಳ ಈ ವರ್ತನೆ ಇಷ್ಟ ಆಗ್ತಿಲ್ಲ.

ಇದರ ಜೊತೆಗೆ ಒಂದು ವಾರ ಕಳೆದರೂ ಅವಳಿನ್ನೂ ಮದುವೆ ಸೀರೆಯಲ್ಲೇ ಇದ್ದಾಳೆ. ಒಮ್ಮೆ ಅವಳ ಡ್ರೆಸ್‌ ಚೇಂಜ್(Dress Change) ಮಾಡಿಸಿ ಅಂತ ಸತ್ಯ ಸೀರಿಯಲ್ ಫ್ಯಾನ್ಸ್(Fans) ಸೋಷಿಯಲ್ ಮೀಡಿಯಾದಲ್ಲಿ ರಿಕ್ವೆಸ್ಟ್(Request) ಮೇಲೆ ರಿಕ್ವೆಸ್ಟ್ ಮಾಡ್ತಿದ್ದಾರೆ. ಇದಕ್ಕೆ ಕಾರಣ ಸತ್ಯ ಇರೋ ಲುಕ್‌ಗೂ ಈ ಸೀರೆಗೂ ಯಾಕೋ ಸರಿ ಬರ್ತಿಲ್ಲ. ಸೀರೆಯಲ್ಲಿ ಅವಳನ್ನು ನೋಡೋಕೂ ಇರಿಟೇಟ್(Irritate) ಆಗ್ತಿದೆ ಅನ್ನೋದು ವೀಕ್ಷಕರ ಅಭಿಪ್ರಾಯ.

ಈ ಸೀರಿಯಲ್‌ ಬಗ್ಗೆ ಬರ್ತಿರೋ ಇನ್ನೊಂದು ಪ್ರಮುಖವಾದ ಮಾತು ಅಂದರೆ ಸತ್ಯ ಮಾಲಾಶ್ರೀ ಥರನೇ ಇರಲಿ, ಅವಳನ್ನು ದಯವಿಟ್ಟು ಶ್ರುತಿ ಮಾಡಬೇಡಿ ಅಂತ. ಅವಳನ್ನು ಆರಂಭದಿಂದಲೂ ಧೈರ್ಯವಂತ, ಸಾಹಸಿ ಮನೋಭಾವದ ಹುಡುಗಿಯಾಗಿ ನೋಡಿದ ಜನರಿಗೆ ಇದೀಗ ಅತೀ ಒಳ್ಳೆತನದಲ್ಲಿ ತನ್ನದಲ್ಲದ ವರ್ತನೆ ತೋರೋದು ಇಷ್ಟ ಆಗ್ತಿಲ್ಲ. ಅವಳ್ಯಾಕೆ ಆ ಅಮೂಲ್ ಬೇಬಿಯನ್ನು ಆ ಪರಿ ಒಲಿಸಿಕೊಳ್ಳುವ ಪ್ರಯತ್ನ ಮಾಡ್ತಿದ್ದಾಳೆ ಅನ್ನೋದೇ ವೀಕ್ಷಕರಿಗೂ ಅರ್ಥ ಆಗ್ತಿಲ್ಲ. ಆತನ ಮೇಲೆ ಸತ್ಯಗೆ ಮೊದಲಿಂದಲೂ ಪ್ರೀತಿ ಇದೆ. ಅಮೂಲ್ ಬೇಬಿ ಅಂತ ಕರೆಸಿಕೊಳ್ಳುವ ಕಾರ್ತಿಕ್ ಅವಳ ಪ್ರೀತಿಗೆ ನಿಜಕ್ಕೂ ಅರ್ಹನಾ ಅನ್ನೋದು ಪ್ರಶ್ನೆ. ಏಕೆಂದರೆ ಮೊದಲಿನಿಂದಲೂ ತೋರಿಸಿದ ಹಾಗೆ ಆತನದು ಸತ್ಯಳ ಹಾಗೆ ಗಟ್ಟಿ ವ್ಯಕ್ತಿತ್ವ ಅಲ್ಲ.

ಹ್ಯಾಪಿ ಬರ್ತ್ ಡೇ ರಕ್ಸ್ ಎಂದ ರುಕ್ಮಿಣಿ; ಈ ಜೋಡಿ ಎಷ್ಟು ಚಂದ ಅಲ್ವಾ ಅಂದ್ರು ಫ್ಯಾನ್ಸ್!

ಸೀರಿಯಲ್ ಟೀಮ್ ಮೇಲಿರುವ ಮತ್ತೊಂದು ಕಂಪ್ಲೇಂಟ್(Complaint) ಅಂದರೆ ಯಾಕೆ ಕಾರ್ತಿಕ್ ಸತ್ಯಾಳನ್ನು ಆ ಲೆವೆಲ್‌ಗೆ ದ್ವೇಷಿಸುತ್ತಾನೆ ಅನ್ನೋದು. ಅದಕ್ಕೆ ಸೀರಿಯಲ್‌ನಲ್ಲಿ ಸಿಗೋ ಕಾರಣ ಕಾರ್ತಿಕ್‌ಗೆ ದಿವ್ಯಾಳನ್ನ ಜೊತೆಗೆ ನಿಕ್ಕಿಯಾಗಿದ್ದ ತನ್ನ ಮದುವೆಯನ್ನು ಸತ್ಯಳೇ ತಪ್ಪಿಸಿದಳು ಅನ್ನುವ ತಪ್ಪು ಕಲ್ಪನೆ ಇದೆ ಅಂತ. ಆದರೆ ಅವನಿಗೆ ದಿವ್ಯಾ ಮೇಲೆ ಅಂಥಾ ಪ್ರೇಮದ ಭಾವನೆಗಳೇನೂ ಇದ್ದ ಹಾಗಿರಲಿಲ್ಲ. ಹಿರಿಯರು ನಿಶ್ಚಯಿಸಿದ ಮದುವೆಯನ್ನು ಒಪ್ಪಿ ಅವಳಿಗೆ ತಾಳಿ ಕಟ್ಟೋದಕ್ಕೆ ರೆಡಿಯಾಗಿದ್ದ. ಹಾಗೆ ನೋಡಿದರೆ ಮೊದಲು ಆತನಿಗೆ ಸತ್ಯ ಬಗ್ಗೆ ಕೊಂಚ ಒಲವು ಇದ್ದ ಹಾಗಿತ್ತು. ಆದರೆ ಈಗ ಅವಳ ನೆರಳೂ ಕಂಡರಾಗದ ಹಾಗೆ ಅವನ ವರ್ತನೆ ಇದೆ. ಆತ ಸತ್ಯಾಳ ಮೇಲೆ ಮಾಡುವ ಆರೋಪದಲ್ಲೂ ಹುರುಳಿಲ್ಲ. ಹೀಗಾಗಿ ಅವನು ಸತ್ಯಳನ್ನು ದ್ವೇಷಿಸೋದಕ್ಕೆ ಬಲವಾದ ಕಾರಣವೇ ಇಲ್ಲ. ಹೀಗಾಗಿ ಈಗಿನ ಸೀನ್‌ಗಳು ದಿಕ್ಕು ತಪ್ಪಿದಂತಾಗಿದೆ ಅನ್ನೋದು ಪ್ರೇಕ್ಷಕರ ಅಭಿಪ್ರಾಯ.

View post on Instagram

ಪ್ರೇಕ್ಷಕರಿಗೆ ಸತ್ಯಾಳನ್ನು ಮಾಲಾಶ್ರೀ ಸ್ಟೈಲಲ್ಲೇ ನೋಡೋದಿಷ್ಟ. ಶ್ರುತಿ ಥರದ ಅಳುಮುಂಜಿಯಾಗಿ ನೋಡೋಕೆ ಇಷ್ಟ ಇಲ್ಲ. ಪ್ರೇಕ್ಷಕರ ಮನಸ್ಥಿತಿಯನ್ನ ಅರಿತು ಸತ್ಯಳನ್ನು ಸತ್ಯಳ ಹಾಗೆ ಮುಂದುವರಿಸ್ತಾರಾ ಸೀರಿಯಲ್ ಟೀಮ್‌(Serial Team) ನವರು ಅಂತ ಕಾದು ನೋಡಬೇಕು.

Kannadathi: ವರೂ ಇನ್ನೂ ಬದಲಾಗಿಲ್ಲವೆಂದರೆ ಸೀರಿಯಲ್ ನೋಡೋಲ್ಲ ಅಂತಿದ್ದಾರೆ ವೀಕ್ಷಕರು!