ಹ್ಯಾಪಿ ಬರ್ತ್ ಡೇ ರಕ್ಸ್ ಎಂದ ರುಕ್ಮಿಣಿ; ಈ ಜೋಡಿ ಎಷ್ಟು ಚಂದ ಅಲ್ವಾ ಅಂದ್ರು ಫ್ಯಾನ್ಸ್!

ರುಕ್ಮಿಣಿ ವಸಂತ್ ‘ಸಪ್ತಸಾಗರದಾಚೆಯೆಲ್ಲೋ’ ಚಿತ್ರದಲ್ಲಿ ರಕ್ಷಿತ್ ಶೆಟ್ಟಿಗೆ ನಾಯಕಿ. ಸಖತ್ ಕ್ಲೋಸ್ ಆಗಿ ಆಕೆ ರಕ್ಷಿತ್ ಶೆಟ್ಟಿಗೆ ಬರ್ತ್ ಡೇ ವಿಶ್ ಮಾಡಿದ್ದಾರೆ. ಅದ್ಕೆ ಫ್ಯಾನ್ಸ್ ಈ ಜೋಡಿ ಎಷ್ಟು ಚಂದ ಅಲ್ವಾ ಅಂತಿದ್ದಾರೆ. 
 

Rukmini vasanth cute birth day wish for Rakshit Shetty on his birthday

ಇವತ್ತು ರಕ್ಷಿತ್ ಶೆಟ್ಟಿ (Rakshith Shetty) ಹ್ಯಾಪಿ ಬರ್ತ್ ಡೇ. ಸೋಷಿಯಲ್ ಮೀಡಿಯಾದಲ್ಲೆಲ್ಲ (Social media) ಒಂದು ಕಡೆ ಅವರ ನಟನೆಯ 777 ಚಾರ್ಲಿ ಕ್ಲಿಪಿಂಗ್ಸ್ ಓಡಾಡ್ತಿದ್ರೆ ಇನ್ನೊಂದು ಕಡೆ ಅವರ ಬರ್ತ್ ಡೇ ಗೆ ವಿಶ್ ಮಾಡಿ ಸಾಕಷ್ಟು ಜನ ಅಭಿಮಾನಿಗಳು, ಸ್ನೇಹಿತರು ಶುರು ಹಾರೈಸುತ್ತಿದ್ದಾರೆ. ಆದರೆ ಒಂದು ಸ್ಪೆಷಲ್ ವಿಶ್ ಮಾತ್ರ ಸಾಕಷ್ಟು ಜನ ಹುಬ್ಬೇರಿಸೋ ಹಾಗೆ ಮಾಡಿದೆ. ’ಹ್ಯಾಪಿ ಬರ್ತ್ ಡೇ ರಕ್ಸ್’ ಅಂತ ಶಾರ್ಟ್ ಆಂಡ್ ಸ್ವೀಟ್ ಆಗಿ ಈಕೆ ವಿಶ್ ಮಾಡಿರೋ ರೀತಿಯಿಂದ ರಕ್ಷಿತ್ ಹಾಗೂ ರುಕ್ಮಿಣಿ (Rikmini Vasanth) ಸಖತ್ ಕ್ಲೋಸ್  ಇದ್ದಾರೆ ಅಂತ ಗೊತ್ತಾಗುತ್ತೆ. ಇದರ ಜೊತೆಗೆ ರುಕ್ಮಿಣಿ ’ಸಪ್ತಸಾಗರದಾಚೆಯೆಲ್ಲೋ’ ಸಿನಿಮಾದ ಒಂದು ಫೋಟೋವನ್ನೂ ಪೋಸ್ಟ್ ಮಾಡಿದ್ದಾರೆ. ಅದರಲ್ಲಿ ರಕ್ಷಿತ್ ಹಾಗೂ ರುಕ್ಮಿಣಿ ಕಣ್ಮುಚ್ಚಿ ಧ್ಯಾನ ಮಾಡುವ ಫೋಸ್ ಇದೆ. ಈ ಜೋಡಿ ನೋಡಿ ಸೋಷಿಯಲ್ ಮೀಡಿಯಾದಲ್ಲಿ ಒಂದಿಷ್ಟು ಜನ ಪಡ್ಡೆಗಳು ರಕ್ಷಿತ್ ಶೆಟ್ಟಿ ಕಾಲೆಳೆಯುವಂತೆ ತಮಾಷೆ ಮಾಡ್ತಿದ್ದಾರೆ. ಮಂಗಳೂರು ಸ್ಟೈಲಲ್ಲಿ , ’ನೋಡಾ ನೋಡಾ ಎಷ್ಟು ಚಂದ ಅಲ್ವಾ?’ ಅಂತ ಕ್ಯೂಟಾಗಿ ಕಮೆಂಟ್ ಮಾಡಿ ಈ ಜೋಡಿಯನ್ನು ರೇಗಿಸುತ್ತಿದ್ದಾರೆ. 

ರಕ್ಷಿತ್ ಶೆಟ್ಟಿ ಮೇಲೆ ಮೊನ್ನೆ ಮೊನ್ನೆ ತಾನೇ ಆಂಕರ್ ಅನುಶ್ರೀ (Anchor Anushree) ಯೂಟ್ಯೂಬ್ ಚಾನಲ್‌ನಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ (Ravichandran) ಒಂದು ಕಮೆಂಟ್ ಮಾಡಿದ್ರು. ರಕ್ಷಿತ್ ಹುಡುಗಿಯರ ಕಡೆ ಕಣ್ಣೆತ್ತಿಯೂ ನೋಡಲ್ಲ ಅಂತ. ಆದರೆ ಇಲ್ಲಿ ರುಕ್ಮಿಣಿ ಮಾಡಿರೋ ಕಮೆಂಟ್ ನೋಡಿದರೆ ಆ ಮಾತು ಪೂರ್ತಿ ಸತ್ಯ ಅಲ್ಲ ಅನಿಸುತ್ತೆ. ಜೊತೆಗೆ ಅವತ್ತು ಅನುಶ್ರೀ ರಕ್ಷಿತ್ ಹತ್ರ, ’ನೀವು ರೊಮ್ಯಾಂಟಿಕ್ ಅಲ್ವಾ?’ ಅನ್ನೋ ಮಾತು ಕೇಳಿದ್ರು. ರಕ್ಷಿತ್ ಆ ಕ್ಷಣಕ್ಕೆ ಹೇಳಿದ ಡೈಲಾಗ್ ಮಾತ್ರ ರಕ್ಷಿತ್ ಅಂದುಕೊಂಡಂಗಲ್ಲ ಅಂತ ಯೋಚ್ನೆ ಮಾಡೋ ಹಾಗೆ ಮಾಡಿತು. ರಕ್ಷಿತ್ ಅವತ್ತು, ನೀವು ರೊಮ್ಯಾಂಟಿಕ್ ಅಲ್ವಾ ಅಂತ ಇನ್ನೋಸೆಂಟಾಗಿ ಅನುಶ್ರೀ ಕೇಳಿದಾಗ, ’ಎಲ್ಲಿ ಬೆಡ್ ರೂಮ್ ಒಳಗಾ?’ ಅಂತ ಕೇಳಿ ಬೆಚ್ಚಿಬೀಳಿಸಿದ್ರು. ಅರೆರೇ ರಕ್ಷಿತ್ ಸಖತ್ ಕಿಲಾಡಿ ಇದ್ದಾರೆ ಅಂತ ಒಂದಿಷ್ಟು ಜನ ಈ ಬಗ್ಗೆ ಮಾತಾಡ್ಕೊಂಡ್ರು. ರಕ್ಷಿತ್ ಈ ಡೈಲಾಗ್ ಅನ್ನೇ ಪ್ರೋಮೋದಲ್ಲಿ ತೋರಿಸಿದ್ದಕ್ಕೋ ಏನೋ ಈ ಶೋ ಮಿಲಿಯನ್ ಗಟ್ಟಲೆ ವ್ಯೂಸ್ ಪಡೆದುಕೊಂಡಿತು. 

Rakshit Shetty: 777 ಚಾರ್ಲಿ ಚಿತ್ರಕ್ಕೆ 5 ಸ್ಟಾರ್‌ ಕೊಟ್ಟ ಮನೇಕಾ ಗಾಂಧಿ

ಹಾಗೆ ನೋಡಿದರೆ ರಕ್ಷಿತ್ ಶೆಟ್ಟಿ ಕಿರಿಕ್ ಪಾರ್ಟಿ ಸಿನಿಮಾ ಗೆದ್ದ ಮೇಲೆ ಅವರಿಗೆ ಫ್ಯಾನ್ ಫಾಲೋವಿಂಗ್ ಸಾಕಷ್ಟಿದೆ. ಅದರಲ್ಲಿ ಹೆಣ್ಮಕ್ಕಳ ಸಂಖ್ಯೆಯೂ ಜಾಸ್ತಿ ಇದೆ. ಈ ಸಿನಿಮಾ ಮೂಲಕ ಇಂಡಸ್ಟ್ರಿಗೆ ಬಂದ ರಶ್ಮಿಕಾ ಮಂದಣ್ಣ ಇಂದು ನ್ಯಾಶನಲ್ ಲೆವೆಲ್ ಸ್ಟಾರ್ ನಟಿ ಆಗಿದ್ದಾರೆ. ಒಂದು ಕಾಲಕ್ಕೆ ರಶ್ಮಿಕಾ ಜೊತೆಗೆ ಲವ್ವಿಡವ್ವಿ ಆಮೇಲೆ ಎಂಗೇಜ್‌ಮೆಂಟ್‌ಅನ್ನೂ ಮಾಡಿಕೊಂಡಿದ್ದರು ರಕ್ಷಿತ್. ಆಮೇಲೆ ಬ್ರೇಕ್ ಅಪ್ ಆಯ್ತು. ಇದು ಒಂದು ಟೖಮಲ್ಲಿ ಸುನಾಮಿಗಿಂತ ಹೆಚ್ಚು ಸುದ್ದಿಯಾಗಿತ್ತು. ಇದಾಗಿ ಸಾಕಷ್ಟು ದಿನಗಳಾಗಿವೆ. 

ರಕ್ಷಿತ್‌ ಶೆಟ್ಟಿ ನಿರ್ಮಾಣದ ಹೊಸ ಸಿನೆಮಾದಲ್ಲಿ ಅಂಕಿತಾ ಅಮರ್‌ ನಾಯಕಿ!

ಇದೀಗ ರುಕ್ಮಿಣಿ ವಸಂತ್ ಅವರ ಜೊತೆಗೆ ‘ಸಪ್ತಸಾಗರದಾಚೆಗೆಲ್ಲೋ’ ಅನ್ನೋ ಸಿನಿಮಾದಲ್ಲಿ ರಕ್ಷಿತ್ ನಟಿಸುತ್ತಿದ್ದಾರೆ. ಇದರಲ್ಲಿ ಇವರಿಬ್ಬರೂ ಲವಿಂಗ್ ಕಪಲ್. ಈ ಜೋಡಿಯ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಜನಪ್ರಿಯವಾಯ್ತು. ಈ ಹಿಂದೆ ‘ಬೀರಬಲ್’ ಸಿನಿಮಾದಲ್ಲಿ ನಟಿಸಿದ್ದ ರುಕ್ಮಿಣಿ ವಸಂತ್ ಇದೀಗ ಗೋಲ್ಡನ್ ಸ್ಟಾರ್ ಗಣೇಶ್ ಜೊತೆ ‘ಬಾನದಾರಿಯಲ್ಲಿ’ ಅನ್ನೋ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇವರ ತಂದೆ ಸೇನೆಯಲ್ಲಿ ಕರ್ನಲ್ ಆಗಿದ್ದು ಮರಣೋತ್ತರ ಅಶೋಕ ಚಕ್ರ ಪಡೆದ ದೇಶದ ಹೆಮ್ಮೆಯ ಪುತ್ರ. ತಾಯಿ ಪ್ರಖ್ಯಾತ ಡ್ಯಾನ್ಸರ್. ರುಕ್ಮಿಣಿ ಅವರೂ ಉತ್ತಮ ಡ್ಯಾನ್ಸರ್ ಆಗಿ ಗುರುತಿಸಿಕೊಂಡಿದ್ದಾರೆ. ಲಂಡನ್‌ನಲ್ಲಿ ಆಕ್ಟಿಂಗ್ ಕಲಿತು ಬಂದಿದ್ದಾರೆ. ಸಿನಿಮಾ ಅವರ ಪ್ಯಾಶನ್.  ಈ ಜೋಡಿಯನ್ನು ಸ್ಕ್ರೀನ್‌ನಲ್ಲಿ ನೋಡಿದ ಮೇಲೆ ಜನರಿಗೆ ಈ ಜೋಡಿ ಸಖತ್ ಇಷ್ಟ ಆಗಿದೆ. ಇವರಿಬ್ಬರ ಸ್ಕ್ರೀನ್ ಪ್ರೆಸೆನ್ಸ್‌ ಗೆ ಮನಸೋಲದವರೇ ಇಲ್ಲ. ಈ ಮುದ್ದಾದ ಜೋಡಿಯ ’ಸಪ್ತಸಾಗರದಾಚೆಯೆಲ್ಲೋ ..’ ಟೀಸರ್ ಇಂದು ಸಂಜೆ 6 ಗಂಟೆಗೆ ಬಿಡುಗಡೆಯಾಗುತ್ತಿದೆ. ಅಲ್ಲಿ ಈ ಜೋಡಿಯನ್ನು ಕಣ್ಮುಂಬಿಕೊಳ್ಳಲು ಅಭಿಮಾನಿಗಳು ಕಾತರತೆಯಿಂದ ಕಾಯುತ್ತಿದ್ದಾರೆ. 

 

ರುಕ್ಮಿಣಿಯನ್ನು ಜನ ರಕ್ಷಿತ್ ಜೊತೆಗೆ ಇಷ್ಟಪಡಲು ಮತ್ತೊಂದು ಕಾರಣ ಈಕೆಗೂ ರಶ್ಮಿಕಾಗೂ ಇರುವ ಕೆಲವು ಹೋಲಿಕೆಗಳು. ರಶ್ಮಿಕಾ ಮತ್ತು ರಕ್ಷಿತ್ ಪ್ರೀತಿಸುತ್ತಿದ್ದಾಗ ಈ ಜೋಡಿಯನ್ನು ಎಲ್ಲರೂ ‘ಆರ್ ಆರ್’ ಅಂತ ಕರೀತಿದ್ರು. ಇದೀಗ ರುಕ್ಮಿಣಿ ರಕ್ಷಿತ್ ಬಾಳಲ್ಲಿ ಬಂದರೂ ಇದೇ ಕಾಂಬಿನೇಶನ್ ಇರುತ್ತೆ. ಹಾಗೇ ಈಕೆಯೂ ಹುಟ್ಟಿದ್ದು 1994 ರಲ್ಲಿ. ರಶ್ಮಿಕಾ 1995 ರಲ್ಲಿ ಹುಟ್ಟಿದ್ದರು. ರಶ್ಮಿಕಾ ರಕ್ಷಿತ್ ಜೋಡಿಯಷ್ಟೇ ಚೆಂದ ರುಕ್ಮಿಣಿ ರಕ್ಷಿತ್ ಜೋಡಿ ಅನ್ನೋದು ಅವರ ಅಭಿಮಾನಿಗಳ ಮಾತು. 

ಸೋ, ‘ನೋಡಾ, ನೋಡಾ ಎಷ್ಟು ಚಂದ ಅಲ್ವಾ!’ ಅನ್ನೋ ಫ್ಯಾನ್ಸ್ ಮಾತು ಸುಮ್ಮನೇ ಹುಟ್ಟಿದ್ದು ಅಲ್ಲವೇ ಅಲ್ಲ. 

ವೆಡ್ಡಿಂಗ್ ಗಿಫ್ಟ್ ಟೀಸರ್ ಹೇಳತ್ತೆ ಕುಟುಂಬ ಕಲಹಕ್ಕೆ ಕಾರಣ..!?

 

Rukmini vasanth cute birth day wish for Rakshit Shetty on his birthday


 

Latest Videos
Follow Us:
Download App:
  • android
  • ios