ಕನ್ನಡತಿ ಸೀರಿಯಲ್‌ನಲ್ಲಿ ಒಂದು ಕಡೆ ಹವಿ ಅಂದರೆ ಹರ್ಷ ಭುವಿ ಮದುವೆ ಸಂಭ್ರಮ ನಡೀತಿದೆ. ಇನ್ನೊಂದು ಕಡೆ ವರೂ ನಾನೇ ಮದ್ವೆ ಹುಡುಗಿ ಅಂತದ್ದಾಳೆ. ಇದು ಈ ಸೀರಿಯಲ್ ಫ್ಯಾನ್ಸ್‌ಗಳ ಆಕ್ರೋಶಕ್ಕೆ ಕಾರಣವಾಗಿದೆ. ಈ ಸಿಟ್ಟಲ್ಲಿ ಏನೆಲ್ಲ ಕಮೆಂಟ್ ಮಾಡ್ತಿದ್ದಾರೆ ಗೊತ್ತಾ?

ಕನ್ನಡತಿ ಸೀರಿಯಲ್‌(Kannadathi serial) ನಲ್ಲಿ ಹರ್ಷ ಮದುವೆ(Wedding) ಸಂಭ್ರಮದಲ್ಲಿ ತೇಲಾಡ್ತಾ ಇದ್ದಾನೆ. ಭುವಿ ಮದುವೆಗೆ ಖರ್ಚು(Money) ಹೊಂದಿಸಲಾಗದೇ ಒದ್ದಾಡುತ್ತಿದ್ದಾಳೆ. ಆದರೆ ವರೂ ಮಾತ್ರ ಇನ್ನೂ ಹರ್ಷ ಕುಮಾರ್ ಜೊತೆ ಹಸೆಮಣೆ ಏರುವವಳು ನಾನೇ ಅಂತಿದ್ದಾಳೆ. ಅವಳ ಈ ಆಟಿಟ್ಯೂಡ್(Attidude) ಫ್ಯಾನ್ಸ್‌(Fans)ಗಳ ಆಕ್ರೋಶಕ್ಕೆ ಕಾರಣವಾಗಿದೆ. ವರೂ ಪಾತ್ರವನ್ನು ಹೀಗೋ ಮುಂದುವರಿಸಿದ್ರೆ ಈ ಸೀರಿಯಲ್‌ಅನ್ನೇ ಬೈಕಾಟ್(Boycott) ಮಾಡ್ತೀವಿ ಅಂತಿದ್ದಾರೆ ಫ್ಯಾನ್ಸ್.

ಹವಿ ಮದುವೆಯ ಅರೇಂಜ್‌ಮೆಂಟ್‌(Arrangements)ಗಳನ್ನೆಲ್ಲ ವರೂ ಒಡೆತನದ 'ಸಪ್ತಪದಿ' ಸಂಸ್ಥೆಯೇ ನಿರ್ವಹಿಸುತ್ತಾ ಇದೆ. ಇದೂ ಈಕೆಗೆ ತನ್ನ ಹಠ ತೀರಿಸಲು ದಾರಿ ಸುಗಮವಾಗುವ ಹಾಗೆ ಮಾಡಿದೆ. ಆದರೆ ವರೂಧಿನಿಯ ಈ ಹಠ ಪ್ರೇಕ್ಷಕರ ಸಿಟ್ಟಿಗೆ ಕಾರಣವಾಗಿದೆ. ವರೂ ಇನ್ನೂ ಬದಲಾಗದೇ ಇರೋದು ತಪ್ಪು ಅಂತ ಅವರು ಕಮೆಂಟ್(Comment) ಮಾಡುತ್ತಿದ್ದಾರೆ. ಜೊತೆಗೆ ಹರ್ಷ ಭುವಿ ಆಕೆಯ ಜೊತೆಗೆ ಇಷ್ಟೆಲ್ಲ ಆತ್ಮೀಯತೆ ತೋರಿಸ್ತಿದ್ರೂ ವರೂ ಇನ್ನೂ ತನ್ನ ಹಳೇ ಚಾಳಿ ಬಿಡದೇ ಹೋಗಿರೋದು ಫ್ಯಾನ್ಸ್‌ಗೆ ಕಿರಿಕಿರಿ ತಂದಿದೆ. 'ಅವಳು ವರೂಧಿನಿ ಅಲ್ಲ, ರೋಧಿನಿ. ಅವಳು ಗೆಲ್ಲಬಾರದು. ಹರ್ಷ ಭುವಿ ಮದುವೆ ಆಗ್ಲಿಲ್ಲ ಅಂದ್ರೆ ಈ ಜನ್ಮದಲ್ಲಿ ಧಾರಾವಾಹಿ ನೋಡೋದಿಲ್ಲ ಅಂತ ಪ್ರತಿಜ್ಞೆ ಮಾಡಬೇಕಾಗುತ್ತೆ, ಹುಷಾರು' ಅಂತ ಫ್ಯಾನ್‌ಗಳಲ್ಲೊಬ್ಬರು ಕಮೆಂಟ್ ಮಾಡಿದ್ದಾರೆ.

Kannadathi: ಹಣೆಬರಹ ಬದಲಾಯ್ಸಿ ಹರ್ಷನ ಜೊತೆ ಹಸೆಮಣೆ ಏರ್ತಾಳಂತೆ ವರೂ, ಏನ್ ಹೆದ್ರಿಸ್ತೀರಾ ಗುರೂ!

ಹಾಗೆ ನೋಡಿದರೆ ಸೀರಿಯಲ್ ಆರಂಭದಿಂದಲೂ ಇದು ತ್ರಿಕೋನ ಪ್ರೇಮ ಅಂತಲೇ ಬಿಂಬಿಸಿದ್ದರು. ಈ ಸೀರಿಯಲ್‌ನ ಎಲ್ಲಾ ಪಾತ್ರಗಳೂ ತಕ್ಕಮಟ್ಟಿಗಾದರೂ ಬದಲಾಗ್ತಾ ಹೋದವು. ಹರ್ಷ ಫುಲ್ ಮಾಡರ್ನ್(Modern) ಹುಡುಗ ಅನಿಸಿಕೊಂಡಿದ್ದ. ಭುವಿ ಸಹವಾಸಕ್ಕೆ ಬಿದ್ದಿದ್ದೇ ಚೂರು ಚೂರೇ ಬದಲಾಗ್ತಾ ಹೋದ. ಸದಾ ಪಾರ್ಟಿ, ಪಬ್ಬು ಅಂತ ಓಡಾಡ್ತಾ ಇದ್ದವನ ಲೈಫಲ್ಲಿ ಬೆಳದಿಂಗಳ ಹಾಗೆ ಭುವಿ ಬಂದಿದ್ದೇ ತನ್ನೆಲ್ಲ ಚಾಳಿಗಳನ್ನು ಬಿಟ್ಟು ಅವಳ ಸಂಗಕ್ಕಾಗಿ ಹಾತೊರೆಯತೊಡಗಿದ. ಭುವಿ ತಂಗಿ ಮದ್ವೆ ಮಾಡಿ ಮನೆಗೊಂದು ನೆಲೆ ಮಾಡ್ಬೇಕು ಅಂತಲೇ ಕಷ್ಟಪಡುತ್ತಿದ್ದವಳು ಹರ್ಷನ ಪ್ರೀತಿಗೆ ಬಿದ್ದವಳೇ ತನ್ನ ಪ್ರೀತಿ ಸಾಕಾರಗೊಳಿಸಬೇಕು ಅಂತ ಅಂದುಕೊಳ್ತಾಳೆ, ಅತ್ತ ಆಸ್ತಿಯಲ್ಲಿ ಪಾಲು ಬೇಕು ಅಂತ ಹರ್ಷನ ಕಸಿನ್ ದೇವ್‌ನ ಹೆಂಡತಿ ಡಾ ತಾಪ್ಸಿ ಆರಂಭದಲ್ಲಿ ವಿಲನ್(Villon) ಥರ ಕಂಡರೂ ಭುವಿಯ ಸಲಹೆಯಂತೆ ಅವಳಿಗೆ ಹರ್ಷ ಹಾಸ್ಪಿಟಲ್ (Hospital) ಕಟ್ಟಿಸಿಕೊಟ್ಟ ಮೇಲೆ ಹರ್ಷ-ಅಮ್ಮಮ್ಮ ಪರವಾಗಿಯೇ ನಿಲ್ಲುತ್ತಿದ್ದಾಳೆ. ಅವಳಿಗೆ ಭುವಿ ಬಗ್ಗೆ ಅಸೂಯೆ ಇದ್ದ ಹಾಗಿಲ್ಲ. ಸಾನಿಯಾ ಪಾತ್ರ ಮಾತ್ರ ಆರಂಭದಿಂದಲೂ ಹರ್ಷನಿಗೆ ನಾನಾ ಬಗೆಯಲ್ಲಿ ವಿರೋಧ ತೋರುತ್ತಲೇ ಬಂದ ಪಾತ್ರ. ಶುರು ಶುರುವಿಗೆ ಜಗಳವಾಡ್ತಾ ವ್ಯಂಗ್ಯದ ಮಾತಾಡ್ತಾ ಹರ್ಷನನ್ನು ತಿವಿಯುತ್ತಿದ್ದಳು ಕೊನೆ ಕೊನೆಗೆ ಭುವಿ, ಅಮ್ಮಮ್ಮ ಸಾಯಿಸಲು ಸುಪಾರಿ ಕೊಡುವ ಮಟ್ಟಕ್ಕೆ ಬೆಳೆಯುತ್ತಾಳೆ. ಅದ್ಯಾವುದೂ ವರ್ಕೌಟ್ ಆಗಿಲ್ಲ ಅಂತ ಗೊತ್ತಾದಮೇಲೆ ಜಾಣ್ಮೆಯಿಂದಲೇ ಭುವಿ ಹರ್ಷನ ಮೇಲೆ ಬಿರುಕು ಮೂಡಿಸಲು ಪ್ರಯತ್ನಿಸುತ್ತಿದ್ದಾಳೆ.

ಡೀಸೆಂಟ್ ಆಗಿದ್ದ ಕನ್ನಡತಿಯಲ್ಲೂ ಶುರುವಾಗಿದೆ ರೊಮ್ಯಾನ್ಸ್‌ ಕಚಗುಳಿ

ಆದರೆ ವರೂ ಮಾತ್ರ ಹಾಗಲ್ಲ. ಅವಳು ಪ್ರೀತಿಯ ವಿಚಾರಕ್ಕೆ ಬಂದರೆ ಸೈಕೋ(Psycho) ನೇ. ಶುರುವಿಂದಲೂ ಹರ್ಷನನ್ನು ಹೀರೋ ಅಂತ ಆರಾಧಿಸುತ್ತಾ ಬಂದವಳು. ಆರಂಭದಲ್ಲಿ ಹರ್ಷನಿಗೆ ಅವಳ ಮೇಲೆ ಸಣ್ಣ ಕ್ರಶ್(Crush) ಆಗಿದ್ದರೂ ಭುವಿ ಸಿಕ್ಕಮೇಲೆ ಯಾವ ಭಾವನೆಗಳೂ ಇಲ್ಲ. ಅವನಿಗೆ ತನ್ನ ಮೇಲೆ ಭಾವನೆಗಳೇ ಇಲ್ಲ ಅಂತ ಗೊತ್ತಾದ ಮೇಲೆ ಅವಳ ಡಿಪ್ರೆಶನ್, ಮಾನಸಿಕ ಸಮಸ್ಯೆ ಹೆಚ್ಚಾಗಿದೆ. ಆದರೆ ಅದನ್ನವಳು ಮುಚ್ಚಿಡುತ್ತಾ ಬಂದಿದ್ದಾಳೆ. ಏನೇ ಮಾಡಿದರೂ ಅವಳಿಗೆ ಹರ್ಷನ ಪ್ರೀತಿಯಿಂದ ಹೊರಬರೋದಕ್ಕೆ ಆಗುತ್ತಿಲ್ಲ. ಎಂಗೇಜ್‌ಮೆಂಟ್‌(Engagement)ನಲ್ಲಿ ರಿಂಗನ್ನೇ ಮಾಯಾ ಮಾಡಿರೋ ವರೂ ಇದೀಗ ಮದುವೆಯನ್ನೇ ಮುರಿಯೋ ಪ್ಲಾನ್‌ನಲ್ಲಿದ್ದಾಳೆ. ಮದುವೆಯನ್ನು ಜಾಣತನದಿಂದ ಮುರಿಯೋದಾಗಿ ಸಾನಿಯಾಗೆ ಹೇಳಿದ್ದಾಳೆ. ಅವಳ ಪ್ಲಾನ್ ಏನು ಅಂತ ಸದ್ಯಕ್ಕೆ ಎಲ್ಲೂ ರಿವೀಲ್ ಆಗಿಲ್ಲ. ಆದರೆ ಇದು ಫ್ಯಾನ್ಸ್ ಸಿಟ್ಟಿಗೆ ಕಾರಣವಾಗಿದೆ. 

View post on Instagram

ಕೆಲವರು ಹೀಗೆಲ್ಲ ಮಾಡಿದ್ರೆ ಸೀರಿಯಲ್ ನೋಡೋದೇ ನಿಲ್ಲಿಸ್ತೀವಿ ಅಂತ ಬೆದರಿಸಿದ್ದಾರೆ. ಇನ್ನೂ ಕೆಲವರು, 'ವರೂ ನೀನು ಸೊಲೊಗಮಿ(Sologamy) ಆಗ್ಬಿಡು, ಹಸೆಮಣೆಯಲ್ಲಿ ನೀನೊಬ್ಳೇ ಕೂತ್ಕೋ, ಹರ್ಷ ಬರೋದಿಲ್ಲ' ಅಂತ ಕಮೆಂಟ್ ಮಾಡಿದ್ದಾರೆ. ಇನ್ನೂ ಕೆಲವರು ಈ ಪ್ರೋಮೋನ ನೋಡೋಕೇ ಆಗ್ತಿಲ್ಲ. ದಯವಿಟ್ಟು ತೆಗ್ದುಬಿಡಿ ಅಂದಿದ್ದಾರೆ. ಹರ್ಷ ಭುವಿ ಮದುವೆ ಮುರಿಯೋ ಪ್ರೋಮೋಗೆ ಸಿಕ್ಕಾಪಟ್ಟೆ ನೆಗೆಟಿವ್(Negative) ಕಮೆಂಟ್‌ಗಳು ಫ್ಯಾನ್ಸ್ ಕಡೆಯಿಂದ ಬರ್ತಿವೆ. ಆದರೆ ಕೆಲವರು ಮಾತ್ರ ಯಾವತ್ತೂ ನಾಯಕ ನಾಯಕಿಯನ್ನೇ ಮದುವೆ ಆಗ್ಬೇಕು, ಅದರಲ್ಲಿ ಒಂದು ಹೈಡ್ರಾಮಾ ತರೋದಕ್ಕೆ ಹೀಗೆಲ್ಲ ಮಾಡ್ತಿದ್ದಾರೆ ಅಂತ ಹೇಳಿದ್ದಾರೆ. ಈ ಎಲ್ಲ ಕಮೆಂಟ್‌ಗಳನ್ನು ನೋಡ್ತಿದ್ರೆ ಜನ ಈ ಸೀರಿಯಲ್‌ ಮೇಲೆ ಎಮೋಶನಲೀ ಎಷ್ಟು ಡಿಪೆಂಡ್ ಆಗಿದ್ದಾರೆ ಅನ್ನೋದು ಗೊತ್ತಾಗುತ್ತೆ.

ಸರ್ಕಾರಿ ಶಾಲೆಗೆ ಹೊಸ ಮೆರಗು ನೀಡಿದ 'ಕನ್ನಡತಿ' ನಟ ಕಿರಣ್ ರಾಜ್