Asianet Suvarna News Asianet Suvarna News

ಮಗಳಿಗೆ ಆಪರೇಷನ್; ಬಿಗ್‌ ಬಾಸ್‌ ಮನೆಯಿಂದ ದಿಢೀರ್ ಹೊರ ಹೋದ ಅರುಣ್ ಸಾಗರ್

ಮನೆಯಿಂದ ದಿಢೀರ್ ಹೊರ ನಡೆದ ಅರುಣ್ ಸಾಗರ್. ಮರು ಎಂಟ್ರಿ ಕಂಡು ಫುಲ್ ಖುಷ್ ಆದ ಸ್ಪರ್ಧಿಗಳು ಮತ್ತು ವೀಕ್ಷಕರು...

Arun Sagar exits and re enter bigg boss house 9 daughter operation vcs
Author
First Published Dec 20, 2022, 1:56 PM IST

ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಸೀಸನ್ 9 ರಿಯಾಲಿಟಿ ಶೋ ಯಶಸ್ವಿಯಾಗಿ 86ನೇ ದಿನಕ್ಕೆ ಕಾಲಿಟ್ಟಿದೆ. ಮನೆಯಿಂದ ಈಗಾಗಲೆ 10 ಮಂದಿ ಹೊರ ನಡೆದಿದ್ದು ಕೇವಲ 9 ಮಂದಿ ಮಾತ್ರ ಉಳಿದುಕೊಂಡಿದ್ದಾರೆ. ಎರಡು ವಾರಗಳಲ್ಲಿ ಫಿನಾಲೆಗೆ ಕೌಂಟ್‌ಡೌನ್‌ ಆರಂಭವಾಗಲಿದೆ. ಅನುಪಮಾ ಗೌಡ ಮನೆಯಿಂದ ಹೊರ ನಡೆದಿರುವ ವಿಚಾರವನ್ನು ಜೀರ್ಣ ಮಾಡಿಕೊಳ್ಳುವಷ್ಟರಲ್ಲಿ ಮತ್ತೊಂದು ಶಾಕ್ ಕೇಳಿ ಬಂದಿತ್ತು ಅದುವೇ ಅರುಣ್ ಸಾಗರ್ ಪುತ್ರಿ ಬಗ್ಗೆ.

ಅಡುಗೆ ಮನೆಯಲ್ಲಿ ಅರುಣ್ ಸಾಗರ್ ಕೆಲಸ ಮಾಡುತ್ತಿರುವಾಗ ಕನ್ಫೆಷನ್‌ ರೂಮ್‌ಗೆ ಬರುವಂತೆ ಬಿಗ್ ಬಾಸ್ ಹೇಳುತ್ತಾರೆ. 'ಅರುಣ್ ನಿಮ್ಮ ಮಗಳು ಬಿದ್ದು ಗಲ್ಲಕ್ಕೆ ಏಟು ಮಾಡಿಕೊಂಡಿದ್ದಾರೆ. ಗಾಬರಿ ಆಗುವಂತದ್ದು ಏನೂ ಇಲ್ಲ ಆಸ್ಪತ್ರೆಯಲ್ಲಿ ಚಿಕಿತ್ಸೆ ನಡೆಯುತ್ತಿದೆ. ನಿಮ್ಮ ಮನೆಯವರು ನಿಮ್ಮ ಹಾಜರಿಯನ್ನು ಅಪೇಕ್ಷಿಸುತ್ತಿದ್ದಾರೆ. ನಿಮ್ಮ ನಿರ್ಧಾರ ತಿಳಿಸಿದ್ದರೆ ನಿಮ್ಮನ್ನು ಕಳುಹಿಸುವ ವ್ಯವಸ್ಥೆಯನ್ನು ಬಿಗ್ ಬಾಸ್ ಮಾಡುತ್ತಾರೆ.' ಎಂದು ಬಿಗ್ ಬಾಸ್ ಹೇಳಿದ್ದಾರೆ. ವಿಚಾರ ತಿಳಿಯುತ್ತಿದ್ದಂತೆ ಅರುಣ್ ಸಾಗರ್ ಭಾವುಕರಾಗಿದ್ದಾರೆ. ಕಣ್ಣೀರಿಡುತ್ತಲೇ 'ಬಿಗ್ ಬಾಸ್ ನಾನು ನನ್ನ ಮಗಳನ್ನು ಒಮ್ಮೆ ನೋಡಬೇಕು ನಾನು ಹೋಗಲೇ ಬೇಕು ಬಿಗ್ ಬಾಸ್ ನನಗೆ ನನ್ನ ಮಗಳು ಅಂದ್ರೆ ಜೀವ. ನನ್ನನ್ನು ನೋಡಿದರೆ ಆಕೆ ಸ್ವಲ್ಪ ಸಮಾಧಾನವಾಗುತ್ತಾಳೆ' ಎಂದು ತಮ್ಮ ನಿರ್ಧಾರ ತಿಳಿಸಿ ಬರುತ್ತಾರೆ. 

BBK9 ಮಿಣಿ ಮಿಣಿ ಮೀನಾಕ್ಷಿ ಆದ ದೀಪಿಕಾ ದಾಸ್; ಗಂಡು ಬೇಕಂದವರಿಗೆ ಸೊಪ್ಪಿದೆ ಎಂದ ನೆಟ್ಟಿಗರು

ಅರುಣ್ ಸಾಗರ್ ಮುಖದಲ್ಲಿ ಆತಂಕ ಕಂಡು ಮನೆ ಸದಸ್ಯರು ಏನಾಗಿದೆ ಎಂದು ವಿಚಾರಿಸಲು ಆರಂಭಿಸುತ್ತಾರೆ. 'ನನ್ನ ಮಗಳು ಬಿದ್ದು ಏಟು ಮಾಡಿಕೊಂಡಿದ್ದಾಳೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಬೆಳಗ್ಗಿನಿಂದ ಮಗಳು ತುಂಬಾ ನೆನಪಾಗುತ್ತಿದ್ದಳು ಈಗ ನೋಡಿದ್ದರೆ ಈ ರೀತಿ ಆಗಿದೆ' ಎಂದು ಭಾವುಕರಾದರು. ಮನೆ ಮಂದಿ ಎಷ್ಟೇ ಸಮಾಧಾನ ಮಾಡಿದ್ದರು ಅರುಣ್ ಅಳುತ್ತಿದ್ದರು. ಮತ್ತೊಮ್ಮೆ ಬಿಗ್ ಬಾಸ್ ಕರೆದು ಅರುಣ್‌ ಸಾಗರ್‌ ಅವರನ್ನು ಆಸ್ಪತ್ರೆಗೆ ಕಳುಹಿಸಲಾಗಿತ್ತು. ಮಗಳ ಆಪರೇಷನ್ ಮುಗಿಸಿಕೊಂಡು ಅರುಣ್ ರಾತ್ರಿ ಮತ್ತೊಮ್ಮೆ ಬಿಗ್ ಬಾಸ್ ಮನೆ ಪ್ರವೇಶಿಸಿದ್ದಾರೆ. 

'ಆಪರೇಷನ್ ಆಯ್ತು. ತಲೆ ತಿರುಗಿ ಬಿದ್ದಾಗ ಗಲ್ಲಕ್ಕೆ ಏಟು ಬಿದ್ದಿದೆ.' ಎಂದು ಅರುಣ್ ವಿಚಾರ ತಿಳಿಸುತ್ತಾರೆ. ಸದಸ್ಯರು ಹೆಚ್ಚಿನ ಮಾಹಿತಿ ಕೇಳಲು ಪ್ರಯತ್ನ ಪಟ್ಟಾಗ ಹೆಚ್ಚಿಗೆ ಏನೂ ಮಾತನಾಡಬಾರದು ಎಂದು ಹೇಳಿದ್ದಾರೆ ಎನ್ನುತ್ತಾರೆ ಅರುಣ್.

Arun Sagar exits and re enter bigg boss house 9 daughter operation vcs

ಅರುಣ್ ಸಾಗರ್ ಪುತ್ರಿ ಅದಿತಿ ಸಂಗೀತ ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಮೂರ್ನಾಲ್ಕು ಕನ್ನಡ ಚಿತ್ರಗಳಲ್ಲಿ ಹಾಡು ಹಾಡಿದ್ದಾರೆ ಹಾಗೂ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಅವರ 125ನೇ ವೇದ ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ವೇದ ಸಿನಿಮಾದ ನಾಲ್ಕು ಪ್ರೀ-ರಿಲೀಸ್ ಕಾರ್ಯಕ್ರಮಗಳು ಅದ್ಧೂರಿಯಾಗಿ ನಡೆದಿದ್ದು ಅದಿತಿ ಭಾಗಿಯಾಗಿದ್ದರು. ಡಿಸೆಂಬರ್ 23ರಂದು ಸಿನಿಮಾ ರಿಲೀಸ್‌ಗೆ ಸಜ್ಜಾಗಿದೆ ಅಷ್ಟರಲ್ಲಿ  ಆರೋಗ್ಯದಲ್ಲಿ ಸಮಸ್ಯೆ ಕಂಡು ಬಂದಿದೆ. 

ಅರುಣ್ ನಾಪತ್ತೆ: 

ಅರುಣ್ ಸಾಗರ್ ಮಗಳನ್ನು ನೋಡಬೇಕು ನಾನು ಹೊರ ಹೋಗಬೇಕು ಎಂದು ತೀರ್ಮಾನ ತೆಗೆದುಕೊಂಡಾಗ ವೀಕ್ಷಕರು ಕೊಂಚ ಶಾಕ್ ಆದ್ದರು. ಈ ನಿರ್ಧಾರವನ್ನು ಮತ್ತೆ ಬದಲಾಯಿಸುವಂತಿಲ್ಲ ಇಂದು ಮನೆಯಿಂದ ಅರುಣ್ ಹೊರ ನಡೆದರೆ ಈ ವಾರ ಒಬ್ಬರು ಎಲಿಮಿನೇಟ್ ಆದಂತೆ ಎನ್ನುವ ಮಾತುಗಳು ಕೇಳಿ ಬಂದಿತ್ತು. ಅರುಣ್ ಹೊರ ನಡೆದ ಸಮಯದಲ್ಲಿ ಪತ್ರದ ಟಾಸ್ಕ್‌ ಕೂಡ ನಡೆಸಲಾಗಿತ್ತು. ರಾತ್ರಿ ಅರುಣ್ ಹಿಂತಿರುಗಿದ ವಿಚಾರ ಕೇಳಿ ವೀಕ್ಷಕರು ಖುಷಿಯಾಗಿದ್ದಾರೆ. 

'ಒಮ್ಮೆ ಮನೆಯಿಂದ ಹೊರ ನಡೆದರೆ ಮತ್ತೆ ಒಳಗೆ ಬರುವಂತಿಲ್ಲ ಇದು ಮೋಸ' ಎಂದು ಕೆಲವು ಕಾಮೆಂಟ್ ಮಾಡಿದ್ದಾರೆ. ಇನ್ನೂ ಕೆಲವರು 'ಅರುನ್ ಸಾಗರ್‌ ವಿಚಾರದಲ್ಲಿ ತೆಗೆದುಕೊಂಡ ನಿರ್ಧಾರ ಸರಿ ಏಕೆಂದರೆ ಇದು ಸೂಕ್ಷ್ಮ ವಿಚಾರ ಎನ್ನುತ್ತಾರೆ ಕೆಲವರು. 

Follow Us:
Download App:
  • android
  • ios