BBK9 ಮಿಣಿ ಮಿಣಿ ಮೀನಾಕ್ಷಿ ಆದ ದೀಪಿಕಾ ದಾಸ್; ಗಂಡು ಬೇಕಂದವರಿಗೆ ಸೊಪ್ಪಿದೆ ಎಂದ ನೆಟ್ಟಿಗರು

ಅರುಣ್ ಸಾಗರ್- ದೀಪಿಕಾ ದಾಸ್‌ ಹೊಸ ಲುಕ್‌ ಸಿಕ್ಕಾಪಟ್ಟೆ ವೈಲರ್. ಸ್ವಯಂವರದಲ್ಲಿ ಭಾಗಿಯಾಗಲು ಯಾರೆಲ್ಲಾ ರೆಡಿ?

Deepika das meenakshi look goes viral colors kannada bigg boss 9  vcs

ಬಿಗ್ ಬಾಸ್‌ ಸೀಸನ್ 9ರ ನಾಗಿಣಿ ದೀಪಿಕಾ ದಾಸ್‌ ದಿನೇ ದಿನೇ ವೀಕ್ಷಕರಿಗೆ ತುಂಬಾ ಇಷ್ಟವಾಗುತ್ತಿದ್ದಾರೆ. ಫಿನಾಲೆ ದಿನಕ್ಕೆ ಕೇವಲ ಎರಡುವರೆ ವಾರ ಉಳಿದಿದೆ. ಪ್ರತಿಯೊಬ್ಬರೂ ಕ್ಯಾಪ್ಟನ್ ಆಗಿ ಕಿಚ್ಚನ ಚಪ್ಪಾಳೆ ಪಡೆದು ಪ್ರತಿ ಕ್ಷಣವನ್ನು ಜೀವಿಸಿದ್ದಾರೆ. ನಟ ಅರುಣ್ ಸಾಗರ್ ಮತ್ತು ದೀಪಿಕಾ ದಾಸ್‌ ಮನೆ ಮಂದಿ ಟೆನ್ಶನ್ ಕಡಿಮೆ ಮಾಡಬೇಕು, ವಾತಾವರಣ ಬದಲಾಯಿಸಬೇಕು ಎಂದು ಡಿಫರೆಂಟ್ ಆಗಿರುವ ಲುಕ್‌ ಪ್ರಯೋಗ ಮಾಡಿ ಮನೋರಂಜನೆ ನೀಡಿದ್ದಾರೆ.

ಮುಂಬಲ್ಲು, ವಿಚಿತ್ರ ಜಡೆ, ದೊಡ್ಡ ಕನ್ನಡಕ, ವಿಚಿತ್ರವಾಗಿ ಧರಿಸಿದ ಇಳಕಲ್ ಸೀರೆ, ಹಣೆ ತುಂಬಾ ಕುಂಕುಮ್, ಕೈ ತುಂಬ ಬಳೆ ಹಾಕಿಕೊಂಡು ದೀಪಿಕಾ ದಾಸ್ ಮಿಂಚಿದ್ದಾರೆ. ಅರುಣ್‌ ಪಕ್ಕಾ ಉತ್ತರ ಕರ್ನಾಟಕ ಶೈಯಲಿಯಲ್ಲಿ ಮುಂಬಲ್ಲು ಮಾಡಿಕೊಂಡಿದ್ದರು. ಇವರಿಬ್ಬರ ಕಾಂಬಿನೇಷನ್‌ ಘಟನೆ ಸೂಪರ್ ಆಗಿತ್ತು. ತಂಗಿಗೆ ಹುಡುಗ ಬೇಕಾಗಿದ್ದಾನೆ ಎಂದು ಅರುಣ್ ಬೋರ್ಡ್‌ ಬರೆದುಕೊಂಡು ಹಾಕಿಕೊಂಡಿದ್ದರು.  ಅರುಣ್ ಸಾಗರ್ ಮತ್ತು ದೀಪಿಕಾ ದಾಸ್‌ರನ್ನು ಮೊದಲು ನೋಡಿದ್ದು ಅಮೂಲ್ಯ ಗೌಡ್, ಅನುಪಮಾ ಆನಂದ್ ಕುಮಾರ್ ಮತ್ತು ರಾಕೇಶ್ ಅಡಿಗ. ಸಖತ್ ಹಾಟ್ ಆಗಿ ಕಾಣಿಸಿಕೊಳ್ಳುವ ದೀಪಿಕಾ ದಾಸ್‌ರನ್ನು ಈ ಲುಕ್‌ನಲ್ಲಿ ನೋಡಿ ಯಾರೂ ಕಂಡು ಹಿಡಿಯುತ್ತಿರಲಿಲ್ಲ 'ದೀಪ್ಸ್‌ ಒಮ್ಮೆ ನೀವು ವೈಲ್ಡ್‌ ಕಾರ್ಡ್‌ ಸ್ಪರ್ಧಿ ರೀತಿ ಕಾಣಿಸುತ್ತಿದ್ದೀರಿ' ಎಂದು ಕಾಲೆಳೆಯುತ್ತಾರೆ ರಾಕಿ. 

ಆ ನಂತರ ರೂಪೇಶ್ ರಾಜಣ್ಣ ಬಳಿ ಹೋಗುತ್ತಾರೆ. ಮಿಣಿ ಮಿಣಿ ಮೀನಾಕ್ಷಿ ಹೆಸರಿನಲ್ಲಿ ಪರಿಯಚ ಮಾಡಿಕೊಳ್ಳುತ್ತಾರೆ. ಇದು ದೀಪಿಕಾ ದಾಸ್ ಎಂದು ನಂಬಲಾಗದೆ ರಾಜಣ್ಣ ದಿಗ್ಬ್ರಮೆಯಾಗುತ್ತದೆ. ನಾನು ಮದುವೆಯಾಗಲು ರೆಡಿ ಆದರೆ ಇದು ನಿಜಕ್ಕೂ ದೀಪಿಕಾನಾ ಎಂದು ಪದೇ ಪದೇ ಪ್ರಶ್ನೆ ಮಾಡುತ್ತಾರೆ. ಆರ್ಯವರ್ಧನ್‌ ಕೊರಳಿನಲ್ಲಿರುವ ಚಿನ್ನದ ಸರಕ್ಕೆ ದೀಪಿಕಾ ನಿಮ್ಮ ಸರ ಕೊಟ್ಟರೆ ಮದುವೆಯಾಗುವೆ ಎನ್ನುತ್ತಾರೆ. 'ಕುತ್ತಿಗೆಯಲ್ಲಿರುವ ಸರ ಮಾತ್ರಯಾಕೆ ಮೈಯಲ್ಲಿರುವ ಮನಸ್ಸು ಕೂಡ ಕೊಡುವೆ' ಎಂದು ಡೈಲಾಗ್ ಹೊಡೆಯುತ್ತಾರೆ. 

Deepika das meenakshi look goes viral colors kannada bigg boss 9  vcs

'ಕಾಲೇಜ್ ಹುಡುಗಿಯರ ಫಸ್ಟ್‌ ಸೆಮಿಸ್ಟರ್‌ನಲ್ಲಿ ಹೀಗೆ ಕಾಣಿಸುತ್ತಾರೆ ಫೈನಲ್ ಸೆಮಿಸ್ಟರ್‌ನಲ್ಲಿ ದಿನ ದೀಪಿಕಾ ಹೇಗಿರುತ್ತಾರೆ ಹಾಗೆ ಕಾಣಿಸುತ್ತಾರೆಂದು' ಕಾಲೆಳೆದಿದ್ದಾರೆ. ಮತ್ತೊಂದು ತಮಾಷೆ ಏನೆಂದರೆ ಸೈಲೆಂಟ್ ಆಗಿರುವ ದೀಪು ಇದ್ದಕ್ಕಿದ್ದಂತೆ ಬದಲಾಗಿರುವುದು ಎಲ್ಲರಿಗೂ ಶಾಕ್ ಆಗಿದೆ ಹೀಗಾಗಿ 'ನಾಗಿಣಿ ಹುಚ್ಚಿ ಆದ ಕಥೆ' ಎಂದು ಕಾಮೆಂಟ್ ಮಾಡಿದ್ದಾರೆ. ಕಾಂತಾರ ಸಿನಿಮಾದಲ್ಲಿ ಕಾಡಿನಲ್ಲಿ ಸೊಪ್ಪು ಸಿಗ್ತದೆ ಎನ್ನುವ ಡೈಲಾಗ್‌ ಭಾರೀ ಫೇಮಸ್‌ ಆಗಿತ್ತು ಅದೇ ಡೈಲಾಗ್‌ನ ದೀಪಿಕಾ ದಾಸ್‌ಗೆ ಹೇಳಿದ್ದಾರೆ. ಈ ಮೂಲಕ ಮತ್ತೊಮ್ಮೆ ಕಾಂತಾರ ಸಿನಿಮಾ ನೆನಪಿಸಿಕೊಂಡಿದ್ದಾರೆ.

BBK9 ಸಾಲಸೋಲ ಮಾಡಿ ಅಣ್ಣನ ಮದ್ವೆ ಮಾಡಿದ್ದು ಎರಡನೇ ದಿನಕ್ಕೆ ಬಿಟ್ಟೋದ: ದೀಪಿಕಾ ದಾಸ್

 ಮೂತಿ ತಿರುಗಿಸಿಕೊಂಡು ಹೋಗ್ತಿದ್ದ ದೀಪಿಕಾ ದಾಸ್?

 ದೀಪಿಕಾ ದಾಸ್ ರೀ-ಎಂಟ್ರಿ ಕಂಡು ಮನೆ ಮಂದಿ ಶಾಕ್ ಅಗಿದ್ದರು ಆದರೆ ಮನೆಗೆ ಮತ್ತೊಂದು ರೀತಿ ಗ್ಲೋ ಬಂದಿದೆ ಏಕೆಂದರೆ ದೀಪಿಕಾ ಬದಲಾಗಿದ್ದಾರೆ ಅನಿಸುತ್ತಿದೆ. ದೀಪಿಕಾ ದಾಸ್ ಗುಣದಲ್ಲಿ ಬದಲಾವಣೆ ಕಾಣಿಸುತ್ತಿದ್ಯಾ ಎಂದು ವೀಕೆಂಡ್ ಮಾತುಕಥೆಯಲ್ಲಿ ಕಿಚ್ಚ ಸುದೀಪ್ ಕೇಳಿದ್ದರು ಆಗ ಪ್ರತಿಯೊಬ್ಬರು ಹೌದು ಹೌದು ಎಂದು ಹೇಳಿದ್ದಾರೆ. ಮನೆಯಲ್ಲಿ ದೀಪಿಕಾ ದಾಸ್ ನಡೆದುಕೊಂಡು ಹೋಗುವಾಗ ಯಾರಾದರೂ ಎದುರು ಸಿಕ್ಕರೆ ನೋಡಿದ್ದರೂ ನೋಡದಂತೆ ನಡೆದುಕೊಂಡು ಹೋಗುತ್ತಿದ್ದರು ಆದರೆ ಈಗ ಮೈ ಮುಟ್ಟಿ ಹಾಯ್ ಬೈ ಎಂದು ಮಾತನಾಡಿಸುತ್ತಿದ್ದಾರೆ ಎಂದು ರೂಪೇಶ್ ರಾಜಣ್ಣ ಹೇಳಿದ್ದಾರೆ.  ದೀಪಿಕಾ ದಾಸ್ ರೀ- ಎಂಟ್ರಿ ಆದ್ಮೇಲೆ ಅರುಣ್ ಸಾಗರ್, ಆರ್ಯವರ್ಧನ್, ರೂಪೇಶ್ ಶೆಟ್ಟಿ, ರೂಪೇಶ್ ರಾಜಣ್ಣ ಮತ್ತು ಪ್ರಶಾಂತ್ ಸಂಬರಗಿ ಗುಂಪಿಗೆ ಸೇರಿಕೊಂಡು ತಮಾಷೆ ಮಾಡುತ್ತಿದ್ದಾರೆ.

Deepika Das Warning: ನನ್ನ ವೈಯಕ್ತಿಕ ಜೀವನ ನಿಮ್ಮ ಬ್ಯುಸಿನೆಸ್‌ ಅಲ್ಲ ಎಂದ ನಟಿ!

Latest Videos
Follow Us:
Download App:
  • android
  • ios