ಕಣ್ಣೀರು ಮಹಿಳೆಯ ವೀಕ್​ನೆಸ್​ ಅಲ್ಲ, ಅದು ಶಕ್ತಿ: ಅಂತರಪಟ ಡೈಲಾಗ್​ಗೆ ಫ್ಯಾನ್ಸ್​ ಫುಲ್​ ಖುಷ್​

ಕಣ್ಣೀರು ಮಹಿಳೆಯ ವೀಕ್​ನೆಸ್​ ಅಲ್ಲ, ಅದು ಶಕ್ತಿ ಎಂದ ಅಂತರಪಟ ಸೀರಿಯಲ್​: ಈ ಡೈಲಾಗ್​ ಪ್ರೇಕ್ಷಕರ ಪ್ರಶಂಸೆಗೆ ಕಾರಣವಾಗಿದೆ. 
 

Antarapata Serial Tears are not a womans weakness it is Strenth suc

ಕಣ್ಣೀರು ಎಂದಾಕ್ಷಣ ಸಹಜವಾಗಿ ಎಲ್ಲರ ಕಣ್ಣೆದುರು ಬರುವುದು ಹೆಣ್ಣುಮಕ್ಕಳು. ಇದು ನಿಜ ಕೂಡ. ಗಂಡಸರು ಕಣ್ಣೀರು ಸುರಿಸುವುದು ಕಡಿಮೆಯೇ. ಆದರೆ ಕಣ್ಣೀರು ಹಾಕುವುದು ಇಲ್ಲವೇ ಅಂದೇನಲ್ಲ. ಆದರೆ ಹೆಣ್ಣುಮಕ್ಕಳಿಗೆ ಹೋಲಿಸಿದರೆ ಅವು ತಮ್ಮ ಭಾವನೆಗಳನ್ನು ಒಳಗೆ ಹುದುಗಿಸಿಟ್ಟುಕೊಳ್ಳುತ್ತಾರೆ. ಕಣ್ಣೀರು ಹಾಕಬೇಕು ಎನ್ನಿಸಿದರೂ ಯಾರು ಏನನ್ನುತ್ತಾರೋ ಎನ್ನುವ ಭಯವೂ ಅವರಿಗೆ ಇರುತ್ತದೆ. ಆದರೆ ಹೆಣ್ಣುಮಕ್ಕಳು ಎಷ್ಟೇ ಗಟ್ಟಿಗಿತ್ತಿಯರಾದರೂ ಕೆಲವೊಂದು ಸನ್ನಿವೇಶದಲ್ಲಿ ಕಣ್ಣೀರನ್ನು ತಡೆಯುವುದು ಅವರಿಂದ ಆಗುವುದೇ ಇಲ್ಲ. ಇದನ್ನೇ ಮಿಸ್​ಯೂಸ್​ ಮಾಡಿಕೊಳ್ಳುವ ಹೆಣ್ಣುಮಕ್ಕಳೂ ಇಲ್ಲವೆಂದೇನಿಲ್ಲ. ಸುಖಾ ಸುಮ್ಮನೆ ಕಣ್ಣೀರು ಸುರಿಸಿ ತಮ್ಮ ಕೆಲಸವನ್ನು ಮಾಡಿಸಿಕೊಳ್ಳುವವರೂ ಇದ್ದಾರೆ. ಹಾಗೆಂದು ಹೆಚ್ಚಿನ ಸಂದರ್ಭದಲ್ಲಿ, ಏನನ್ನೂ ಮಾಡಲು ಅಸಹಾಯಕರಾದ ಸಂದರ್ಭದಲ್ಲಿ ಕಣ್ಣೀರು ಸುರಿಯುವುದು ಉಂಟು. ಅದೇ ಕಾರಣಕ್ಕೆ ಕಣ್ಣೀರು ಮಹಿಳೆಯ ವೀಕ್​ನೆಸ್​ ಅಲ್ಲ, ಅದು ಆಕೆಯ ಸ್ಟ್ರೆಂಗ್ಥ್​ (ಶಕ್ತಿ) ಎನ್ನುವುದು ಉಂಟು. ಕಲರ್ಸ್​ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗ್ತಿರೋ ಅಂತರಪಟಲ ಸೀರಿಯಲ್​ನಲ್ಲಿ ಈ ಡೈಲಾಗ್​ ಕೇಳಿಬಂದಿದ್ದು, ಇದು ಸೀರಿಯಲ್​ ಅಭಿಮಾನಿಗಳು ಅದರಲ್ಲಿಯೂ ಹೆಣ್ಣುಮಕ್ಕಳನ್ನು ಸಂತಸದಲ್ಲಿ ತೇಲಿಸಿದೆ. ತಮ್ಮ ಮನಸ್ಸಿನ ಮಾತನ್ನು ಧಾರಾವಾಹಿಮೂಲಕ ಹೇಳಲಾಗಿದೆ ಎಂದು ಹೆಣ್ಣುಮಕ್ಕಳು ಕುಣಿದಾಡುತ್ತಿದ್ದಾರೆ.

ಇದು ಧಾರಾವಾಹಿಗೆ ಇರುವ ಶಕ್ತಿಯೂ ಹೌದು. ಅಲ್ಲಿ ಬರುವ ಡೈಲಾಗ್​ಗಳು, ಅಲ್ಲಿ ಬರುವ ಸನ್ನಿವೇಶಗಳು ಎಲ್ಲವೂ ಬಲು ಬೇಗನೆ ಜನರ ಮನಸ್ಸಿಗೆ ನಾಟುವುದು ಉಂಟು. ಈಗ ಧಾರಾವಾಹಿಯ ಪ್ರೊಮೋದಲ್ಲಿ ಕೇಳಿಬಂದಿರುವ ಈ ಡೈಲಾಗ್​ಗೆ ಮಹಿಳೆಯರು ಫಿದಾ ಆಗಿದ್ದಾರೆ.  ಇದರಲ್ಲಿ ನಾಯಕಿ ಆರಾಧನಾ ಮದುವೆಯ ಈವೆಂಟ್​ ಒಂದನ್ನು ಪ್ರದರ್ಶಿಸಲು ಹೋದ ಸಮಯದಲ್ಲಿ ಅವಳಿಗೆ ಪೀರಿಯಡ್ಸ್​ ಆಗಿ ಬಟ್ಟೆಗೆ ರಕ್ತ ಅಂಟಿದೆ. ಅದನ್ನು ನೋಡಿದ ಆಕೆಯ ಗೆಳೆಯ ಸುಶಾಂತ್​, ಆಕೆಗೆ ನ್ಯಾಪ್​ಕಿನ್​ ತಂದುಕೊಟ್ಟಿದ್ದಾನೆ. ಆಕೆಯ ಮಾನ ಕಾಪಾಡಲು ತನ್ನ ಕೋಟನ್ನು ತೆಗೆದು ಕೊಟ್ಟಿದ್ದಾನೆ. ಅದರಿಂದ ಅವಳು ತನ್ನ ಹಿಂಭಾಗವನ್ನು ಮುಚ್ಚಿಕೊಂಡಿದ್ದಾಳೆ. ಈ ಸೀನ್​ ಪ್ರೇಕ್ಷಕರ ಪ್ರಶಂಸೆಗೆ ಪಾತ್ರವಾಗಿತ್ತು. ಇದೀಗ ಇದರ ಮುಂದುವರೆದ ಭಾಗವಾಗಿ, ಅತ್ತ ಈವೆಂಟ್​ ಬಗ್ಗೆ ಪ್ರಸೆಂಟೇಷನ್​ ಮಾಡಲು ಇನ್ನೂ ಆರಾಧನ ಬಾರದ ಕಾರಣ, ಅಲ್ಲಿದ್ದವರು ಅದನ್ನು ಬೇರೆಯವರಿಗೆ  ಕೊಟ್ಟುಬಿಟ್ಟಿದ್ದಾರೆ. 

ಅವಳ ಡ್ರೆಸ್​ಗೆ ರಕ್ತದ ಕಲೆ, ಮುಂದೆ?... 'ಅಂತರಪಟ' ಕೊಟ್ಟ ಒಳ್ಳೆಯ ಮೆಸೇಜ್​ಗೆ ಮೆಚ್ಚುಗೆಗಳ ಮಹಾಪೂರ

ಅದೇ ಸಂದರ್ಭದಲ್ಲಿ ತನಗೆ ಈವೆಂಟ್​ ಪ್ರಸೆಂಟೇಷನ್​ಗೆ ಅವಕಾಶ ಸಿಗಲಿಲ್ಲ ಎಂದು ಆರಾಧನಾ ಕಣ್ಣೀರು ಸುರಿಸುತ್ತಿದ್ದಾಳೆ. ಆದರೆ ಅದಾಗಲೇ ಎಲ್ಲರೂ ಈಗ ಮತ್ತೆ ಅವಕಾಶ ಕೊಡಲು ಸಾಧ್ಯವಾಗದು. ಅದನ್ನು ಈಗಾಗಲೇ ಬೇರೆಯವರಿಗೆ ಕೊಟ್ಟಾಗಿದೆ ಎನ್ನುತ್ತಾರೆ.  ಈ ಸಂದರ್ಭದಲ್ಲಿ ಆರಾಧನಳಿಗೆ ಬಂದಿದ್ದ ಸಂಕಷ್ಟವನ್ನು ಅರಿತ ಐಎಎಸ್ ಅಧಿಕಾರಿಯಾದ ಶ್ವೇತಾ (ಇದರಲ್ಲಿಈಕೆಯದ್ದೇ ಮದುವೆ ಪ್ಲ್ಯಾನ್​ ಮಾಡಲಾಗುತ್ತಿರುತ್ತದೆ) ಒಂದು ಚಾನ್ಸ್​ ಕೊಡೋಣ ಎನ್ನುತ್ತಾಳೆ. ಇದು ಇದಾಗಲೇ ಈವೆಂಟ್​ ಪಡೆದಾಕೆಗೆ ಸಿಟ್ಟು ತರಿಸುತ್ತದೆ. ಆಗ ಆಕೆ ಕಣ್ಣೀರು ಇಷ್ಟೆಲ್ಲಾ  ಕೆಲಸ ಮಾಡುತ್ತದೆ ಎಂದು ಗೊತ್ತಿರಲಿಲ್ಲ ಎನ್ನುತ್ತಾಳೆ. ಆಗ ಶ್ವೇತಾ ಕಣ್ಣೀರು ಹೆಣ್ಣುಮಕ್ಕಳ ವೀಕ್​ನೆಸ್​ ಅಲ್ಲ, ಶಕ್ತಿ ಎಂದು ಆರಾಧನಳಿಗೆ ಅವಕಾಶ ನೀಡಲಾಗುತ್ತದೆ. ಇದು ಪ್ರೇಕ್ಷಕರ ಪ್ರಶಂಸೆಗೆ ಪಾತ್ರವಾಗಿದೆ. 

ಅಷ್ಟಕ್ಕೂ ಅಳುವುದು ತುಂಬಾ  ಮುಖ್ಯನೇ. ಒಬ್ಬ ವ್ಯಕ್ತಿ ಒತ್ತಡಕ್ಕೆ ಒಳಗಾದಾಗ ದೇಹದಲ್ಲಿ ಅನೇಕ ವಿಷಕಾರಿ ವಸ್ತು ಉತ್ಪತ್ತಿಯಾಗುತ್ತದೆ. ಈ ವಿಷಕಾರಿ ಅಂಶಗಳು ದೇಹದಿಂದ ಹೊರ ಹೋಗಲು ಸಾಧ್ಯವಾಗದಿದ್ದರೆ, ಅವು ದೇಹಕ್ಕೆ ಹಾನಿಯುಂಟು ಮಾಡಬಹುದು. ಆದುದರಿಂದ ಅಳುವುದು ಮುಖ್ಯ. ಯಾವುದೇ ವ್ಯಕ್ತಿ ಒತ್ತಡದಲ್ಲಿ ಸಿಲುಕಿದಾಗಲೆಲ್ಲ ಆತ ತುಂಬಾ ಭಾರವನ್ನು ಅನುಭವಿಸುತ್ತಾರೆ. ಈ ಸಂದರ್ಭದಲ್ಲಿ ಒಬ್ಬ ವ್ಯಕ್ತಿಗೆ ಅಳು ಬಂದರೆ, ಆತನಿಗೆ ಹಗುರವಾದ ಅನುಭವವಾಗುತ್ತದೆ ಮತ್ತು ಆತನ ಒತ್ತಡವೂ ನಿವಾರಣೆಯಾಗುತ್ತದೆ. ಇದೇ ಕಾರಣಕ್ಕೆ ಗಂಡಸರಿಗೆ ಹೋಲಿಸಿದ ಹೆಣ್ಣುಮಕ್ಕಳಲ್ಲಿ ಹೃದಯಾಘಾತಗಳು ಕಡಿಮೆ ಎನ್ನುತ್ತಾರೆ ತಜ್ಞರು. ಅದಕ್ಕಾಗಿ ಅಳು ಬಂದಾಗ ತಡೆಗಟ್ಟಬೇಡಿ ಎನ್ನುತ್ತಾರೆ. 

ಬಾಲನ ಹೊಸ ಅಂಗಡಿಯಲ್ಲಿ ಕದ್ದುಮುಚ್ಚಿ ಬಜ್ಜಿ-ಬೋಂಡಾ ತಿಂದು ಸಿಕ್ಕಿಬಿದ್ದ ಸತ್ಯ!

Latest Videos
Follow Us:
Download App:
  • android
  • ios