ಬಾಲನ ಹೊಸ ಅಂಗಡಿಯಲ್ಲಿ ಕದ್ದುಮುಚ್ಚಿ ಬಜ್ಜಿ-ಬೋಂಡಾ ತಿಂದು ಸಿಕ್ಕಿಬಿದ್ದ ಸತ್ಯ!

ಬಾಲನ ಹೊಸ ಅಂಗಡಿಯಲ್ಲಿ ಕದ್ದುಮುಚ್ಚಿ ಬಜ್ಜಿ-ಬೋಂಡಾ ತಿಂದು ಸಿಕ್ಕಿಬಿದ್ದ ಸತ್ಯಾ!
 

Satya who was caught eating bajji bonda secretly in Balas new shop suc

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ ಸತ್ಯ ಸೀರಿಯಲ್​ ಈಗ ಮಹತ್ವದ ಘಟ್ಟಕ್ಕೆ ಬಂದು ತಲುಪಿದೆ. ಸತ್ಯ ಮತ್ತು ಅತ್ತೆ ಸೀತಾ ನಡುವೆ ಇದ್ದ ವೈಮನಸ್ಸು ದೂರವಾಗಿದೆ. ಆದರೆ ಸದಾ ಶ್ರೀಮಂತಿಕೆಯ ಕನಸು ಕಾಣುತ್ತಾ ಶ್ರೀಮಂತನೆಂದು ನಂಬಿ ಬಾಲನನ್ನು ಮದುವೆಯಾಗಿ ಸತ್ಯಳ ಅಕ್ಕ ದಿವ್ಯಾ ಕಂಗೆಟ್ಟು ಹೋಗಿದ್ದಾಳೆ. ರೌಡಿಯಾಗಿದ್ದ ಬಾಲ ಒಳ್ಳೆಯ ಹಾದಿ ಹಿಡಿದು ಬೋಂಡಾ ಬಜ್ಜಿ ಅಂಗಡಿ ಶುರುವಿಟ್ಟುಕೊಂಡಿದ್ದಾನೆ. ಗಂಡ ಹೇಗಾದರೂ ಸರಿ, ರೌಡಿಸಂ ಮಾಡಿಯಾದ್ರೂ ಸರಿ... ತಾನು ಹೇಳದ್ದನ್ನೆಲ್ಲಾ ತಂದುಕೊಡಬೇಕು ಎಂದು ಅಂದುಕೊಂಡಿದ್ದ ದಿವ್ಯಾಗೆ ಈ ಅಂಗಡಿ ನೋಡಿ ಸಿಟ್ಟುಬಂದಿದೆ. ಅದೇ ಇನ್ನೊಂದೆಡೆ, ಬಾಲಾನ ಹೊಸ ಅಂಗಡಿಗೆ ದಿವ್ಯಾ ಬೋಂಡಾ ಅಂಗಡಿ ಎಂದು ನಾಮಕರಣ ಮಾಡಲಾಗಿದ್ದು, ಅದರ ಭರ್ಜರಿ ಓಪನಿಂಗ್​ ನಡೆಯುತ್ತಿದೆ. ಈ ನಡುವೆಯೇ ಅಂಗಡಿಯಲ್ಲಿರುವ ಬಜ್ಜಿ-ಬೋಂಡಾಗಳನ್ನು ಕದ್ದು ತಿಂದ ಸತ್ಯ ಸಿಕ್ಕಿಬಿದ್ದಿದ್ದಾಳೆ!!

ಹೌದು. ಸತ್ಯ ಸೀರಿಯಲ್​ ಶೂಟಿಂಗ್​ ನಡೆಯುತ್ತಿರುವ ವೇಳೆಗೆ ಸತ್ಯ ಪಾತ್ರಧಾರಿ ಗೌತಮಿ ಜಾದವ್​ ಅವರು ಅಂಗಡಿಯಲ್ಲಿದ್ದ ಬಜ್ಜಿ-ಬೋಂಡಾ ಸವಿಯುತ್ತಿದ್ದಾರೆ. ಆ ವೇಳೆ ಶೂಟಿಂಗ್ ಸ್ಪಾಟ್​ನಲ್ಲಿದ್ದವರು ವಿಡಿಯೋ ಮಾಡಿದ್ದು, ಅದೀಗ ವೈರಲ್​ ಆಗಿದೆ. ನಂತರ ಅಲ್ಲಿದ್ದವರೆಲ್ಲರೂ ಬೋಂಡಾ ಸವಿದಿದ್ದಾರೆ. ನಂತರ ಸತ್ಯ ಸೀರಿಯಲ್​ ಶೂಟಿಂಗ್​ ಮುಂದುವರೆದಿದೆ.  

ಮಯೋಸೈಟಿಸ್​ ಕಾಯಿಲೆಗೆ ಕ್ರಯೋಥೆರಪಿ ಚಿಕಿತ್ಸೆ: ನಟಿ ಸಮಂತಾ ವಿಡಿಯೋ ವೈರಲ್​

ಅಂದಹಾಗೆ,  ಸತ್ಯ ಪಾತ್ರ ಮಾಡಿರೋದು ಗೌತಮಿ ಜಾಧವ್. ಈಕೆಗೆ ಕಿರುತೆರೆ ಸಿನಿಮಾ ಹೊಸತಲ್ಲ. 2021 ರ ಫೇಮಸ್ ಸೀರಿಯಲ್ 'ನಾಗರ ಪಂಚಮಿ'ಯಲ್ಲಿ ಈಕೆ ನಟಿಸಿದ್ರು. ಆ ಬಳಿಕ ಸಿನಿಮಾ ಫೀಲ್ಡ್ ಗೆ ಹೋದ ಗೌತಮಿ 'ಲೂಟಿ', 'ಆದ್ಯಾ', 'ಕಿನಾರೆ' ಮೊದಲಾದ ಸಿನಿಮಾಗಳಲ್ಲಿ ಕಾಣಿಸಿಕೊಂಡರು. ಇನ್ನೊಂದು ತಮಿಳು ಸಿನಿಮಾದಲ್ಲೂ ನಟಿಸಿದ್ದಾರೆ. ಸಹಜ ನಟನೆಗೆ ಹೆಸರಾದ ಈಕೆಗೆ ಸಿನಿಮಾ ಯಾಕೋ ಕೈ ಹಿಡೀಲಿಲ್ಲ. ಸೀರಿಯಲ್ ಜಗತ್ತು ಕೈ ಬಿಡಲಿಲ್ಲ. ಈಗ 'ಸತ್ಯಾ' ಸೀರಿಯಲ್ ನ ಟಾಮ್ ಬಾಯ್ ಪಾತ್ರಕ್ಕೆ ಜೀವದುಂಬಿ ನಟಿಸುತ್ತಿದ್ದಾರೆ. ಪಕ್ಕಾ ಟಾಮ್ ಬಾಯ್ ಪಾತ್ರವಿದು. ಬಾಯ್ ಕಟ್ ಹೇರ್, ಟೀ ಶರ್ಟ್ ಮೇಲೊಂದು ಅಂಗಿ ತೊಟ್ಟು ಬುಲೆಟ್ ಏರಿ ಪಕ್ಕಾ ರೌಡಿ ಸ್ಟೈಲ್ ನಲ್ಲಿ ಎಂಟ್ರಿ ಕೊಡೋ ಸತ್ಯ ಇಡೀ ಕನ್ನಡ ಸೀರಿಯಲ್ಗೇ ಡಿಫರೆಂಟ್ ಲುಕ್​ನಲ್ಲಿ ಇರುವವಳು.  ಆತ್ಮ ವಂಚನೆ ಮಾಡಿಕೊಳ್ಳದೇ ನೇರವಾಗಿ ಅನಿಸಿದ್ದನ್ನು ಮಾಡೋಳು.  

ಇಷ್ಟೆಲ್ಲ ರಗಡ್ ಆಗಿರೋ ಸತ್ಯ ರಿಯಲ್ ನಲ್ಲೂ ಹೀಗೇನಾ ಅಂದ್ರೆ, 'ನಾನು ಕಂಪ್ಲೀಟ್ ಉಲ್ಟಾ' ಅಂತಾರೆ ಗೌತಮಿ. ರಿಯಲ್ ನಲ್ಲಿ ಇವರು ಸಖತ್ ಗರ್ಲಿಶ್ ಆಗಿರೋರು. ಸತ್ಯ ಪಾತ್ರಕ್ಕೆ ವಿರುದ್ಧವಾಗಿ ತುಂಬ ಮೃದು ಸ್ವಭಾವದ ಸೂಕ್ಷ್ಮ ಮನಸ್ಸಿನ ಹುಡುಗಿ. ಯಾರನ್ನೂ ಬೈದು ಅಭ್ಯಾಸ ಇಲ್ಲ. ಜೋರಾಗಿ ಮಾತಾಡಿಯೂ ಗೊತ್ತಿಲ್ಲದ ಹುಡುಗಿ. ಶುರು ಶುರುವಿನಲ್ಲಿ ಈ ಪಾತ್ರ ನಿಭಾಯಿಸಲು ಗೌತಮಿ ಒಂಚೂರು ಕಷ್ಟಪಡಬೇಕಾಯ್ತು. ಆದರೆ ನಟನೆ ಅಂದ್ರೆ ನೀರು ಕುಡಿದಷ್ಟೇ ಸಲೀಸಾದ ಈಕೆ ಕ್ರಮೇಣ ಸತ್ಯ ಪಾತ್ರಕ್ಕೆ ಹೊಂದಿಕೊಳ್ಳುತ್ತಾ ಹೋದರು. ಗೌತಮಿ ಮನೆಯಲ್ಲಿ ಚೆಂದದ ನಾಯಿಯೊಂದಿದೆ. ಅದರ ಬರ್ತ್ ಡೇ ಸೆಲೆಬ್ರೇಶನ್ ಮಾಡೋದ್ರಿಂದ ಹಿಡಿದು ಅದರ ಜೊತೆಗೆ ಆಡೋದು, ಓಡೋದು, ಸ್ನಾನ ಮಾಡಿಸೋದು ಇವೆಲ್ಲ ಈಕೆಗೆ ಬಹಳ ಇಷ್ಟ. ಸದ್ಯ, ಸತ್ಯ ಸೀರಿಯಲ್​ನಲ್ಲಿ ಈಕೆಯ ನಟನೆಗೆ ಅಭಿಮಾನಿಗಳು ಮೆಚ್ಚುಗೆ ಸೂಸುತ್ತಿದ್ದಾರೆ. 
 

ರಾಖಿ ಪತಿ ಆದಿಲ್‌ ಜೊತೆ ಶೆರ್ಲಿನ್‌ ಚೋಪ್ರಾ ಮತ್ತೆ ರೊಮ್ಯಾನ್ಸ್‌: ವಿಡಿಯೋ ನೋಡಿ ದಂಗಾದ ಫ್ಯಾನ್ಸ್‌!

Latest Videos
Follow Us:
Download App:
  • android
  • ios