ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ 'ಅಣ್ಣಯ್ಯ' ಧಾರಾವಾಹಿಯಲ್ಲಿ, ಪಾರು ಅನಿವಾರ್ಯವಾಗಿ ಶಿವುನನ್ನು ಮದುವೆಯಾಗುತ್ತಾಳೆ. ಆಕೆಯ ಪ್ರೀತಿಪಾತ್ರನು ಮೋಸ ಮಾಡಿದ ಬಳಿಕ, ಶಿವು ತನ್ನನ್ನು ಬಾಲ್ಯದಿಂದಲೂ ಪ್ರೀತಿಸುತ್ತಿದ್ದನೆಂದು ಪಾರುಗೆ ತಿಳಿಯುತ್ತದೆ. ಶಿವುನ ಒಳ್ಳೆಯತನ ಅರಿತು, ಪಾರು ಅವನನ್ನು ಪ್ರೀತಿಸಲು ಪ್ರಾರಂಭಿಸುತ್ತಾಳೆ ಮತ್ತು ಆತನನ್ನು ಕಾಪಾಡುತ್ತಾಳೆ. ಆದರೆ ಶಿವುಗೆ ಪಾರು ಪ್ರೀತಿಸುತ್ತಿರುವ ವಿಷಯ ತಿಳಿದಿಲ್ಲ. ವಿಕಾಶ್ ಉತ್ತಯ್ಯ ಮತ್ತು ನಿಶಾ ರವಿಕೃಷ್ಣನ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.

 ತನ್ನ ಲವರ್​ ಜೊತೆ ಸೇರಿಸಲು ಅಣ್ಣಯ್ಯ ಒಪ್ಪಿಕೊಂಡಿದ್ದರಿಂದ ಅನಿವಾರ್ಯ ಸನ್ನಿವೇಶದಲ್ಲಿ ಪಾರು ಅಣ್ಣಯ್ಯ ಅಂದ್ರೆ ಶಿವುನ್ನ ಮದ್ವೆಯಾಗಿದ್ದಾಳೆ. ಆದರೆ ಆ ಲವರ್​ ತನಗೆ ಮೋಸ ಮಾಡಿದ್ದು ಪಾರುಗೆ ಗೊತ್ತಾಗಿದೆ. ಆದರೆ ತನ್ನನ್ನು ಬಾಲ್ಯದಿಂದಲೇ ಶಿವು ಲವ್​ ಮಾಡ್ತಿರೋ ವಿಷ್ಯ ಪಾರುಗೆ ತಿಳಿದಿರಲಿಲ್ಲ. ಕೊನೆಗೆ ತನ್ನೆಲ್ಲಾ ಆಟಿಕೆ ಸಾಮಾನುಗಳನ್ನು, ಗೆಜ್ಜೆ ಇತ್ಯಾದಿಗಳನ್ನು ಶಿವು ಜೋಪಾನ ಮಾಡಿ ಇಟ್ಟಿದ್ದರಿಂದ ಹಾಗೂ ಶಿವುನ ತಂಗಿ ವಿಷಯ ಹೇಳಿದ ಮೇಲೆ ಆತ ತನ್ನನ್ನು ಎಷ್ಟು ಪ್ರೀತಿ ಮಾಡ್ತಾ ಇದ್ದಾನೆ ಎನ್ನುವುದು ಪಾರುಗೂ ಗೊತ್ತಾಗಿ ಗಂಡನ ಮೇಲೆ ಈಗಷ್ಟೇ ಲವ್​ ಶುರುವಾಗಿದೆ. ಗಂಡನನ್ನು ಖುದ್ದು ತನ್ನ ತಂದೆ ಮಾಡುತ್ತಿರುವ ಮೋಸದಿಂದ ಹೆಜ್ಜೆ ಹೆಜ್ಜೆಗೂ ಕಾಪಾಡುತ್ತಿದ್ದಾಳೆ ಪಾರು. ಆದರೆ ಈ ಪೆದ್ದು ಶಿವುಗೆ ಮಾತ್ರ ತನ್ನ ಹೆಂಡತಿ ತನ್ನನ್ನು ಲವ್​ ಮಾಡ್ತಿರೊ ವಿಷಯವೇ ಗೊತ್ತಾಗ್ತಿಲ್ಲ. ಇದನ್ನು ಹೇಗೆ ಹೇಳುವುದು ಎನ್ನುವ ಸಂಕಟದಲ್ಲಿದ್ದಾಳೆ ಪಾರು.

ಇದು ಜೀ ಕನ್ನಡದಲ್ಲಿ ಪ್ರಸಾರ ಆಗ್ತಿರೋ ಅಣ್ಣಯ್ಯ ಸೀರಿಯಲ್​ ಕಥೆ. ನಟ ವಿಕಾಶ್ ಉತ್ತಯ್ಯ ಅಣ್ಣಯ್ಯ ಅಂದ್ರೆ ಶಿವು ಆಗಿ, ನಿಶಾ ರವಿಕೃಷ್ಣನ್ ಪಾರು ಆಗಿ ನಟಿಸಿದ್ದಾರೆ. ಇದೀಗ ಈ ಜೋಡಿ ಸಕತ್​ ರೊಮಾನ್ಸ್​ ಮಾಡುತ್ತಾ ರೀಲ್ಸ್​ ಮಾಡಿದ್ದು, ಇದು ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿದೆ. ಜೋಡಿ ಸೂಪರ್​ ಎನ್ನುತ್ತಿದ್ದಾರೆ ಫ್ಯಾನ್ಸ್​. ಇನ್ನು ಈ ಸೀರಿಯಲ್​ ಕುರಿತು ಹೇಳುವುದಾದರೆ, ಮಾಕಾಳಮ್ಮನ ಪರಮ ಭಕ್ತ ಈ ಅಣ್ಣಯ್ಯ. ತನ್ನ ನಾಲ್ವರು ತಂಗಿಯರು ಈತನಿಗೆ ಪಂಚ ಪ್ರಾಣ. ನೋವು ನುಂಗಿ ನಗು ಹಂಚುವ ಕ್ಯಾರೆಕ್ಟರ್​ ಇವನದ್ದು. ಅದೇ ಇನ್ನೊಂದೆಡೆ, ವಿಷಕಾರೋ ವೀರಭದ್ರನ ಮನೆತನ. ವೀರಭದ್ರನ ಮೊದಲನೇ ಹೆಂಡತಿ ಸೌಭಾಗ್ಯಳ ಮಗಳೇ ಪಾರ್ವತಿ ಉರ್ಫ್​ ಪಾರು. ವೃತ್ತಿಯಲ್ಲಿ ವೈದ್ಯೆ. ಅಣ್ಣಯ್ಯನ ಬಾಲ್ಯದ ಲವ್​ ಈಕೆ. ಆದರೆ ಶಿಕ್ಷಣವೇ ಎಲ್ಲ ಅಂತಿರೋ ಪಾರ್ವತಿ, ಅದ್ಯಾವುದೋ ಘಳಿಗೆಯಲ್ಲಿ ಶಿವುನ ಮದುವೆಯಾಗ ಬೇಕಾಗಿ ಬರುತ್ತದೆ. ಆದರೆ ಅವಳು ಲವ್​ ಮಾಡ್ತಿರೋದೇ ಬೇರೆಯವನನ್ನು. ಕೊನೆಗೆ ಅವನು ಮೋಸಗಾರ ಎಂದು ತಿಳಿಯುತ್ತದೆ. ಈಗ ಪಾರುಗೆ ಶಿವು ಮೇಲೆ ಲವ್​ ಶುರುವಾಗಿದೆ. ಮುಂದೇನು ಎನ್ನುವುದು ಸದ್ಯಕ್ಕಿರುವ ಕುತೂಹಲ.

ಯುಕೆಜಿಯಲ್ಲೇ ಪ್ರಪೋಸ್​ ಮಾಡಿದ್ದ... ಏಣಿ ಹತ್ತಿ ತಾಳಿ ಕಟ್ಟೋ ಹಾಗಿದ್ದ... ನಟಿ ನೇಹಾ ಗೌಡ ಲವ್​ ಸ್ಟೋರಿ ಕೇಳಿ..

ಇನ್ನು ನಟ ವಿಕಾಶ್ ಉತ್ತಯ್ಯ ಅವರ ಕುರಿತು ಹೇಳುವುದಾದರೆ, ಸದ್ಯ ಇವರು, ಅಪಾಯವಿದೆ ಎಚ್ಚರಿಕೆ ಸಿನಿಮಾದ ನಿರೀಕ್ಷೆಯಲ್ಲಿದ್ದಾರೆ. ಇದೇ 28ರಂದು ಚಿತ್ರ ಬಿಡುಗಡೆಯಾಗಲಿದೆ. ಇನ್ನು ಮೂಲತಃ ಕೊಡಗಿನವರಾಗಿರುವ ವಿಕಾಶ್‌ ಉತ್ತಯ್ಯ ಅವರು ಬಣ್ಣದ ಲೋಕಕ್ಕೆ ಕಾಲಿಡುವ ಮುನ್ನ ವಕೀಲರಾಗಿ ಕೆಲಸ ಮಾಡುತ್ತಿದ್ದರು. ನಟನೆ ಮೇಲಿನ ಆಸಕ್ತಿಯಿಂದ ಕೆಲಸ ಬಿಟ್ಟು ನಟರಾಗಿದ್ದಾರೆ. ವಿಕಾಶ್ ಉತ್ತಯ್ಯ ಅವರು ಸೀರಿಯಲ್ ಗೆ ಬರುವ ಮುನ್ನ ಕೆಲ ಸಿನಿಮಾಗಳಲ್ಲಿ ಅಭಿನಯಿದ್ದಾರೆ. ಈ ಹಿಂದೆ ಮೇರಿ ಎಂಬ ಸಿನಿಮಾದಲ್ಲಿ ನಟಿಸಿದ್ದ ಇವರು, ಇತ್ತೀಚೆಗೆ 2023ರಲ್ಲಿ ದ್ವಂದ್ವ ದ್ವಯಂ, ಆನೆ ಸಿನಿಮಾಗಳಿಗೆ ಬಣ್ಣ ಹಚ್ಚಿದ್ದಾರೆ. ಅಲ್ಲದೇ, ಕನಸಿನ ಮಳೆಯಾದವರು ಎಂಬ ಶಾರ್ಟ್ ಫಿಲ್ಮನಲ್ಲೂ ನಟಿಸಿದ್ದಾರೆ. ಕೊಡಗಿನವರಾಗಿರುವ ವಿಕಾಶ್‌, ವಕೀಲರಾಗಿ ಕೆಲಸ ಮಾಡುತ್ತಿದ್ದರು. ನಟನೆ ಮೇಲಿನ ಆಸಕ್ತಿಯಿಂದ ಬಣ್ಣದ ಲೋಕ ಆರಿಸಿಕೊಂಡಿದ್ದಾರೆ. ಇದಾಗಲೇ ಕೆಲವು ಸೀರಿಯಲ್​ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಮೇರಿ ಎಂಬ ಸಿನಿಮಾದಲ್ಲಿಯೂ ನಟಿಸಿದ್ದರು. 2023ರಲ್ಲಿ ದ್ವಂದ್ವ ದ್ವಯಂ, ಆನೆ ಸಿನಿಮಾಗಳಲ್ಲಿಯೂ ಕಾಣಿಸಿಕೊಂಡಿರುವ ಇವರು, ಕನಸಿನ ಮಳೆಯಾದವರು ಎಂಬ ಶಾರ್ಟ್ ಫಿಲ್ಮನಲ್ಲೂ ನಟಿಸಿದ್ದಾರೆ. ಅಪಾಯವಿದೆ ಎಚ್ಚರಿಕೆಯಲ್ಲಿ ವಿಕಾಶ್‌ ಜೊತೆಯಾಗಿ ಅಮೃತಧಾರೆಯ ಮಲ್ಲಿ ಅಂದ್ರೆ ನಟಿ ರಾಧಾ ಭಾಗವತಿ ಅವರು ಕಾಣಿಸಿಕೊಂಡಿದ್ದಾರೆ. ಅಭಿಜಿತ್ ತೀರ್ಥಹಳ್ಳಿ ನಿರ್ದೇಶಿಸಿರುವ ಈ ಚಿತ್ರಕ್ಕೆ ಮಂಜುನಾಥ್ ವಿ ಜಿ ಹಾಗೂ ಪೂರ್ಣಿಮಾ ಗೌಡ ಅವರು ಹಣ ಹೂಡಿದ್ದಾರೆ. ಸುನಾದ್ ಗೌತಮ್ ಅವರ ಸಂಗೀತ ಈ ಚಿತ್ರಕ್ಕಿದೆ. ಇದು ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ಆಗಿದೆ.

ಇನ್ನು ನಿಶಾ ರವಿಕೃಷ್ಣನ್​ ಕುರಿತು ಹೇಳುವುದಾದರೆ, ಗಟ್ಟಿಮೇಳದಲ್ಲಿ ರೌಡಿ ಬೇಬಿಯಾಗಿ ಕಾಣಿಸಿಕೊಂಡಿದ್ದರು. ಇವರಿನ್ನೂ ಸಿಂಗಲ್​. ಈ ಕುರಿತು ನಟಿಯೇ ಹೇಳಿಕೊಂಡಿದ್ದಾರೆ. ಸೀರಿಯಲ್​ಗಳಲ್ಲಿ ಎಂಟು ಮದ್ವೆಯಾಗಿದೆ. ಅವುಗಳಲ್ಲಿ ಆಡಂಬರದ ಮದುವೆಗಳೇ ಜಾಸ್ತಿ ಇದ್ದವು. ಆದರೆ ರಿಯಲ್​ ಲೈಫ್​ನಲ್ಲಿ ಸಿಂಪಲ್​ ಆಗಿ ಮದುವೆಯಾಗುವ ಆಸೆ ಇದೆ ಎಂದಿದ್ದಾರೆ ನಿಶಾ. ಚಟಪಟ ಎಂದು ಕನ್ನಡ ಮಾತನಾಡುವ ನಿಶಾ ರವಿಕೃಷ್ಣನ್ ಅವರು ಮೂಲತಃ ಮಲಯಾಳಿ. ಆದರೆ ಮಿಂಚುತ್ತಿರುವುದು ಕನ್ನಡ ಮತ್ತು ತೆಲಗು ಬಣ್ಣದ ಲೋಕದಲ್ಲಿ. ನಿಶಾ ಮಿಲನ್ ಎಂದು ಕೂಡ ಫೇಮಸ್​ ಆಗಿದ್ದಾರೆ ನಟಿ. 2018ರಲ್ಲಿ ಸ್ಟಾರ್ ಸುವರ್ಣದಲ್ಲಿ ತೆರೆ ಕಂಡ ‘ಸರ್ವಮಂಗಲ ಮಾಂಗಲ್ಯೆ’ ಸೀರಿಯಲ್​ ಮೂಲಕ ಕನ್ನಡಕ್ಕೆ ಪರಿಚಿತರಾದರು. 2019ರಲ್ಲಿ ಅವರಿಗೆ ‘ಗಟ್ಟಿಮೇಳ’ ಸೀರಿಯಲ್​ನ ಅಮೂಲ್ಯ ಪಾತ್ರ ಅವರಿಗೆ ಬ್ರೇಕ್​ ಕೊಟ್ಟಿತು. ರೌಡಿ ಬೇಬಿ ಎಂದೇ ಈಗಲೂ ಎಲ್ಲರೂ ಅವರನ್ನು ಕರೆಯುತ್ತಾರೆ.

ಸಾಲದ ಸುಳಿಯಲ್ಲಿ ಬೀದಿಪಾಲಾದಾಗ ದೇಗುಲದಲ್ಲಿ ಪವಾಡ: ಮರುದಿನವೇ 'ಬೊಂಬಾಟ್​ ಭೋಜನ'! ಸಿಹಿಕಹಿ ಚಂದ್ರು ಕಥೆ ಕೇಳಿ..

View post on Instagram