ನಟ ಸಿಹಿಕಹಿ ಚಂದ್ರು, 3.7 ಕೋಟಿ ಸಾಲದಿಂದ ಬೀದಿಪಾಲಾದ ಕಥೆ ಇದು. ಫುಡ್ ಕಂಪೆನಿಯ ನಷ್ಟದಿಂದ ಕಂಗಾಲಾದ ಅವರು, ದೇವಾಲಯದಲ್ಲಿ ಪವಾಡವೊಂದು ನಡೆಯಿತು. ಅಲ್ಲಿನ ಅರ್ಚಕರು ವಾರದಲ್ಲಿ ಕಳೆದುಕೊಂಡ ಹಣ ಸಿಗುತ್ತದೆ ಎಂದು ಭವಿಷ್ಯ ನುಡಿದರು. ಮರುದಿನವೇ ಸುವರ್ಣ ವಾಹಿನಿಯಿಂದ ಕರೆ ಬಂದು, 'ಬೊಂಬಾಟ್ ಭೋಜನ' ಕಾರ್ಯಕ್ರಮ ಮತ್ತೆ ಆರಂಭವಾಯಿತು. ಕೆಲವೇ ತಿಂಗಳಲ್ಲಿ ಚಂದ್ರು ಸಾಲ ತೀರಿಸಿದರು.

ದೇವರು ಇದ್ದಾನೆ, ಇಲ್ಲ... ಆಸ್ತಿಕತೆ, ನಾಸ್ತಿಕತೆ... ಎಲ್ಲವೂ ಅವರವರ ಭಾವಕ್ಕೆ ಬಿಟ್ಟ ವಿಷಯ. ಅದು ಅವರವರ ನಂಬಿಕೆ. ನಂಬಿದರೆ ದೇವರು ಇದ್ದಾನೆ, ಇಲ್ಲದಿದ್ದರೆ ಯಾವುದೋ ಒಂದು ಶಕ್ತಿ ಇದೆ ಅಷ್ಟೇ... ಆದರೆ ಜೀವನದಲ್ಲಿ ಕೆಲವೊಮ್ಮೆ ನಡೆಯುವ ಪವಾಡಗಳ ಎದುರು ಮನುಷ್ಯ ಮೂಕವಿಸ್ಮಿತನಾಗುವುದು ದಿಟ. ಆ ಪವಾಡಗಳು ಯಾವ ರೂಪದಲ್ಲಿ ಬೇಕಾದರೂ ಆಗಬಹುದು. ಇಂಥದ್ದೇ ಒಂದು ಪವಾಡದ ಬಗ್ಗೆ ಮಾತನಾಡಿದ್ದಾರೆ ನಟ ಸಿಹಿಕಹಿ ಚಂದ್ರು. ಸುಮಾರು 3.70 ಕೋಟಿ ಸಾಲ ಮಾಡಿ ಅಕ್ಷರಶಃ ಬೀದಿ ಪಾಲಾದಾಗ ದೇಗುಲದಲ್ಲಿ ನಡೆದ ಆ ಘಟನೆಯ ಬಗ್ಗೆ ಸುದ್ದಿಮನೆ ಯೂಟ್ಯೂಬ್​ ಚಾನೆಲ್​ನಲ್ಲಿ ನಟ ಮಾತನಾಡಿದ್ದಾರೆ. ಹಾಗೆಂದು ಇದು ಬಹಳ ವರ್ಷಗಳ ಹಿಂದಿನ ಘಟನೆ ಅಲ್ಲ. ನಾಲ್ಕೈದು ವರ್ಷಗಳ ಹಿಂದೆ ನಡೆದದ್ದು.

ಸಿಹಿಕಹಿ ಚಂದ್ರು ಎಂದಾಕ್ಷಣ ಎಲ್ಲರ ಕಣ್ಣೆದುರು ಬರುವುದು ನಗುವಿನ ಮುಖ, ಹಾಸ್ಯಪ್ರವೃತ್ತಿಯ ನಟ. ಆದರೆ ಚಂದ್ರು ಅವರ ಜೀವನದಲ್ಲಿ ಕೆಲವೇ ವರ್ಷಗಳ ಹಿಂದೆ ನಡೆದ ಘಟನೆ ಮಾತ್ರ ಕರಾಳವಾದದ್ದು. ಸ್ಟಾರ್​ ಸುವರ್ಣದಲ್ಲಿ ಪ್ರಸಾರ ಆಗ್ತಿದ್ದ ಬೊಂಬಾಟ್​ ಭೋಜನದಿಂದ ಸೂಪರ್​ಹಿಟ್​ ಆದರು ಚಂದ್ರು. ಇದೇ ಖ್ಯಾತಿಯಿಂದ ತಾವ್ಯಾಕೆ ಇದೇ ಹೆಸರಿನಲ್ಲಿ ಒಂದು ಫುಡ್​ ಕಂಪೆನಿ ತೆಗೆಯಬಾರದು ಎಂದು ಯೋಚಿಸಿ, ಅದನ್ನು ಆರಂಭಿಸಿಯೇಬಿಟ್ಟರಂತೆ. ಆದರೆ ಅದೃಷ್ಟ ಅವರ ಕೈಹಿಡಿಯಲಿಲ್ಲ. ಕಂಡು ಕೇಳರಿಯದಷ್ಟು ನಷ್ಟ ಅನುಭವಿಸಿದರು. ಈ ಉದ್ಯಮ ಸ್ಥಾಪನೆಗೆ ಸುಮಾರು ನಾಲ್ಕು ಕೋಟಿಯಷ್ಟು ಸಾಲ ಮಾಡಿಕೊಂಡು ಬಿಟ್ಟಿದ್ದರು. ಆದರೆ ಕಂಪೆನಿ ಸಂಪೂರ್ಣ ನಷ್ಟ ಅನುಭವಿಸಿ, ನೌಕರರಿಗೆ ಸಂಬಳ ಕೊಡುವಷ್ಟೂ ದುಡ್ಡು ತಮ್ಮ ಕೈಯಲ್ಲಿ ಇರಲಿಲ್ಲ ಎಂದು ನೆನಪಿಸಿಕೊಂಡಿದ್ದಾರೆ ಚಂದ್ರು.

ಜೊಮೆಟೋ ಬಾಯ್​ ಲೇಟಾದ್ದಕ್ಕೆ ಆರತಿ ಬೆಳಗಿ, ಕುಂಕುಮ ಇಟ್ಟು ಬರಮಾಡಿಕೊಂಡ ಉದ್ಯಮಿ: ವಿಡಿಯೋ ವೈರಲ್​

'ಅಕ್ಷರಶಃ ನಾನು ಬೀದಿಪಾಲಾಗಿಬಿಟ್ಟಿದ್ದೆ. ಕಂಪೆನಿ ಮುಚ್ಚಿದೆ. ಮನೆಗೆ ಬಾಡಿಗೆ ಕೊಡಲೂ ಹಣ ಇಲ್ಲದ ಸ್ಥಿತಿಯಾಯಿತು. ಮನೆ ಮಾಲೀಕರಿಗೆ ಹೇಳಿದಾಗ, ಈಗ ಕೋವಿಡ್​ ಸಮಯ, ಯಾರು ಬರ್ತಾರೆ, ಮೂರು ತಿಂಗಳ ನೋಟಿಸ್​ ಕೊಡಬೇಕು ಎಂದುಬಿಟ್ಟರು. ಏನೂ ಮಾಡದ ಅಸಹಾಯಕ ಸ್ಥಿತಿಯಲ್ಲಿದ್ದೆ. ಸೆಕೆಂಡ್​ ಹ್ಯಾಂಡ್​ ಫರ್ನಿಚರ್​ನವನಿಗೆ ಮನೆಗೆ ಕರೆದರೆ, ಆತ ಇದ್ದಷ್ಟೂ ಪೀಠೋಪಕರಣಗಳನ್ನು ತೆಗೆದುಕೊಂಡು ಹೋಗಿ ನನಗೆ ಕೊಟ್ಟಿದ್ದು ಕೇವಲ ಒಂದೂವರೆ ಸಾವಿರ ರೂಪಾಯಿ' ಎಂದು ಆ ಘೋರ ಘಗಟನೆಯನ್ನು ಚಂದ್ರು ಅವರು ನೆನಪಿಸಿಕೊಂಡಿದ್ದಾರೆ. ಸ್ನೇಹಿತನ ಅಂಗಡಿಯೊಂದರಲ್ಲಿ ನನ್ನ ಬಳಿ ಇದ್ದ ಕೆಲವು ದಾಖಲೆಗಳನ್ನು ಇರಿಸಿದೆ. ಇರಲು ಸೂರು ಇರಲಿಲ್ಲ. ಬೀಗಿ ಪಾಲಾಗಿ ಹೋಗಿದ್ದೆ. ಏನು ಮಾಡಬೇಕು ಎಂದು ತಿಳಿಯದೇ ಸಮೀಪವೇ ಇದ್ದ ದೇವಾಲಯಕ್ಕೆ ಹೋದೆ ಎಂದು ಅಲ್ಲಿ ನಡೆದ ಘಟನೆಯನ್ನು ವಿವರಿಸಿದ್ದಾರೆ.

'ಆ ಸಮಯದಲ್ಲಿ ಮಂಗಳಾರತಿ ನಡೆಯುತ್ತಿತ್ತು. ನನ್ನ ದುಗುಡಗಳನ್ನೆಲ್ಲಾ ದೇವರ ಎದುರು ಹೇಳಿಕೊಂಡೆ. ದೇವರೆ ಯಾಕೆ ಅನ್ಯಾಯ ಮಾಡಿದೆ,, ಯಾರಿಗೂ ಮೋಸ ಮಾಡಿದವನಲ್ಲ ನಾನು, ನನಗ್ಯಾಕೆ ಹೀಗಾಯ್ತು ಎಂದೆಲ್ಲಾ ಭಾವುಕನಾಗಿದ್ದೆ. ಅಷ್ಟರಲ್ಲಿಯೇ ಅಲ್ಲಿದ್ದ ಪುರೋಹಿತರು, ನನ್ನನ್ನು ತಡೆದು ನಿಲ್ಲಿಸಿದರು. ಬಹುಶಃ ಫೋಟೋ ಕ್ಲಿಕ್ಕಿಸಿಕೊಳ್ಳಲು ಇರಬೇಕು ಎಂದುಕೊಂಡೆ. ಎಲ್ಲರೂ ಹೋದ ಮೇಲೆ ಅವರು, ಯಾಕೆ ಇಷ್ಟು ಡಲ್​ ಆಗಿದ್ದೀರಿ, ಹಣ ಹೋದರೆ ಏನಂತೆ, ವಾರದಲ್ಲಿಯೇ ನೀವು ಕಳೆದುಕೊಂಡದ್ದೆಲ್ಲಾ ಬರತ್ತೆ ಎಂದುಬಿಟ್ಟರು. ನನ್ನ ಮನಸ್ಸಿನ ದುಗುಡಗಳನ್ನೆಲ್ಲಾ ಅವರು ಅಕ್ಷರ ರೂಪದಲ್ಲಿ ಇಳಿಸಿದ್ದು ನೋಡಿ ನಂಬಲು ಸಾಧ್ಯವೇ ಆಗಿಲ್ಲ' ಎಂದಿರುವ ಚಂದ್ರು ಅವರು, ಮಾರನೆಯ ದಿನವೇ ಸುವರ್ಣ ಟಿವಿಯವರು ಕರೆ ಮಾಡಿ ಬೊಂಬಾಟ್​ ಭೋಜನ ಕಾರ್ಯಕ್ರಮವನ್ನು ಪುನಃ ಆರಂಭಿಸಿರುವುದಾಗಿ ತಿಳಿಸಿದರು. ನನಗೆ ನಂಬಲಿಕ್ಕೇ ಆಗಲಿಲ್ಲ. ಕೆಲವೇ ತಿಂಗಳಿನಲ್ಲಿ ನನ್ನೆಲ್ಲಾ ಸಾಲ ತೀರಿಸಿದೆ. ಈಗ ಸಂಪೂರ್ಣ ಕ್ಷೇಮವಾಗಿದ್ದೇನೆ' ಎಂದಿದ್ದಾರೆ ಚಂದ್ರು.

ಮಗಳ ಮಗುವಿಗೇ ಅಮ್ಮನಾದ ಅಜ್ಜಿ! ಮುಟ್ಟು ನಿಂತರೂ ಗರ್ಭಿಣಿಯಾಗೋ ಸಾಹಸ ಮಾಡಿದ ಈಕೆ ರೋಚಕ ಕಥೆ ಕೇಳಿ

YouTube video player