ಧಾರಾವಾಹಿಗಳಲ್ಲಿ ಪಾತ್ರ ಬದಲಾವಣೆ ಸಾಮಾನ್ಯ. 'ಅಣ್ಣಯ್ಯ' ಧಾರಾವಾಹಿಯಲ್ಲಿ ನಾಯಕಿ ಬದಲಾಗುವ ಬಗ್ಗೆ ವಿಕಾಶ್ ಉತ್ತಯ್ಯ ಸಂದರ್ಶನದಲ್ಲಿ ಪ್ರತಿಕ್ರಿಯಿಸಿದ್ದಾರೆ. ಸದ್ಯಕ್ಕೆ ನಿಶಾ ರವಿಕೃಷ್ಣನ್ ಅವರೇ ನಾಯಕಿಯಾಗಿ ಮುಂದುವರೆಯುತ್ತಾರೆ. ವಿಕಾಶ್ ಅವರ 'ಅಪಾಯವಿದೆ ಎಚ್ಚರಿಕೆ' ಸಿನಿಮಾ ಬಿಡುಗಡೆಯಾಗಲಿದೆ. ವೃತ್ತಿಯಲ್ಲಿ ವಕೀಲರಾಗಿದ್ದ ವಿಕಾಶ್, ನಟನೆಯ ಆಸಕ್ತಿಯಿಂದ ಚಿತ್ರರಂಗಕ್ಕೆ ಬಂದಿದ್ದಾರೆ. ಈ ಚಿತ್ರವು ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರ ಹೊಂದಿದೆ.

 ಸೀರಿಯಲ್​ಗಳಲ್ಲಿ ಪಾತ್ರಗಳು ಬದಲಾಗುವುದು ಹೊಸ ವಿಷಯವೇನಲ್ಲ. ಸುದೀರ್ಘ ಅವಧಿಯವರೆಗೆ ಒಂದು ಸೀರಿಯಲ್​ ಮಾಡುತ್ತಿದ್ದರೆ, ನಟ-ನಟಿಯರು ಇನ್ನಾವುದೋ ಕಮಿಟ್​ಮೆಂಟ್​ ಅಥವಾ ಇನ್ನಾವುದೋ ಕಾರಣಗಳಿಂದ ಸೀರಿಯಲ್​ ಬಿಟ್ಟು ಹೋಗುವುದು ಸಾಮಾನ್ಯವಾಗಿದೆ. ಆರಂಭದಲ್ಲಿ ಕಾಂಟ್ರ್ಯಾಕ್ಟ್​ ಸಮಯದಲ್ಲಿ ಇಂತಿಷ್ಟು ವರ್ಷ ಎಂದು ಸಹಿ ಹಾಕಿಸಿಕೊಳ್ಳಲಾಗುತ್ತದೆ. ಆದರೆ ಹಲವು ಸಂದರ್ಭದಲ್ಲಿ ಟಿಆರ್​ಪಿ ಹೆಚ್ಚಿದ್ದಾಗ ಅಥವಾ ಮತ್ತಿನ್ನೇನೋ ಕಾರಣಕ್ಕೆ, ಸೀರಿಯಲ್​ ಎಳೆಯಲಾಗುತ್ತದೆ. ಆದರೆ ಅದಾಗಲೇ ಬೇರೆ ಕಮಿಟ್​ಮೆಂಟ್​ ಕಾರಣದಿಂದ ಪಾತ್ರಧಾರಿಗಳು ಬದಲಾಗುತ್ತಾರೆ. ಅದನ್ನು ಜನರು ಅಷ್ಟು ಸುಲಭದಲ್ಲಿ ಒಪ್ಪಿಕೊಳ್ಳುವುದಿಲ್ಲ ಎನ್ನುವುದು ಸತ್ಯವಾದರೂ, ಸೀರಿಯಲ್​ಗಳಿಗೆ ಅದು ಅನಿವಾರ್ಯವಾಗಿಬಿಡುತ್ತದೆ. ಅದೇ ರೀತಿ ಈಚೆಗಷ್ಟೇ ಜೀ ಕನ್ನಡದಲ್ಲಿ ಶುರುವಾಗಿರುವ ಅಣ್ಣಯ್ಯ ಸೀರಿಯಲ್​ನ ನಾಯಕಿ, ರೌಡಿ ಬೇಬಿ ಖ್ಯಾತಿಯ ನಿಶಾ ರವಿಕೃಷ್ಣನ್ ರೋಲ್​ ಚೇಂಜ್​ ಆಗಿಬಿಟ್ಟರೆ?

ಹಾಗಂತ ಇದೇನೂ ನಿಜ ಸುದ್ದಿಯಲ್ಲ ಬಿಡಿ. ಕೀರ್ತಿ ಎಂಟರ್​ಟೇನ್​ಮೆಂಟ್​ ಯೂಟ್ಯೂಬ್​ ಚಾಲೆನ್​ಗೆ ಅಣ್ಣಯ್ಯ ಪಾತ್ರಧಾರಿ ವಿಕಾಶ್ ಉತ್ತಯ್ಯ ಅವರ ಸಂದರ್ಶನದ ಸಮಯದಲ್ಲಿ ಕೀರ್ತಿ ಅವರು ತಮಾಷೆಯಾಗಿ ಕೇಳಿರುವ ಪ್ರಶ್ನೆ ಇದು. ವಿಕಾಶ್​ ಅವರು ತಮ್ಮ ಮುಂಬರುವ ಅಪಾಯವಿದೆ ಎಚ್ಚರಿಕೆ ಸಿನಿಮಾ ಪ್ರಮೋಷನ್​ಗಾಗಿ ಈ ಚಾನೆಲ್​ಗೆ ಬಂದಿದ್ದು, ಅದರಲ್ಲಿ ಅಣ್ಣಯ್ಯ ಸಿರಿಯಲ್​ ಬಗ್ಗೆ ಮಾತನಾಡಿದ್ದಾರೆ. ಒಂದು ವೇಳೆ ನಾಯಕಿ ಪಾರು ರೋಲ್​ ಚೇಂಜ್​ ಆದ್ರೆ ಎಂದು ಕೀರ್ತಿ ಅವರು ಕೇಳಿದ್ದಾರೆ. ನಿಶಾ ಜಾಗದಲ್ಲಿ ಇನ್ನಾರನ್ನು ಆಯ್ಕೆ ಮಾಡಿಕೊಳ್ಳುತ್ತೀರಿ ಎಂದು ಪ್ರಶ್ನಿಸಿದಾಗ, ನಾವು ಯಾಕೆ ಹಾಗೆ ಯೋಚನೆ ಮಾಡಬೇಕು? ಅಣ್ಣಯ್ಯ ಸೀರಿಯಲ್​ನಲ್ಲಿ ನಿಶಾ ಅವರೇ ನಾಯಕಿಯಾಗಿ ಮುಂದುವರೆಯುತ್ತಾರೆ ಎಂದಿದ್ದಾರೆ ವಿಕಾಶ್​.

ಅಣ್ಣಯ್ಯನ ಮೇಲೆ ಪಾರುಗೆ ಈಗಷ್ಟೇ ಶುರುವಾಗಿದೆ ಲವ್​: ಅಬ್ಬಬ್ಬಾ ಇಲ್ಲಿ ನೋಡಿ ಈ ಪರಿ ರೊಮಾನ್ಸ್...

ಇನ್ನು ಅಣ್ಣಯ್ಯ ಸೀರಿಯಲ್​ ಕುರಿತು ಹೇಳುವುದಾದರೆ, ಮಾಕಾಳಮ್ಮನ ಪರಮ ಭಕ್ತ ಈ ಅಣ್ಣಯ್ಯ. ತನ್ನ ನಾಲ್ವರು ತಂಗಿಯರು ಈತನಿಗೆ ಪಂಚ ಪ್ರಾಣ. ನೋವು ನುಂಗಿ ನಗು ಹಂಚುವ ಕ್ಯಾರೆಕ್ಟರ್​ ಇವನದ್ದು. ಅದೇ ಇನ್ನೊಂದೆಡೆ, ವಿಷಕಾರೋ ವೀರಭದ್ರನ ಮನೆತನ. ವೀರಭದ್ರನ ಮೊದಲನೇ ಹೆಂಡತಿ ಸೌಭಾಗ್ಯಳ ಮಗಳೇ ಪಾರ್ವತಿ ಉರ್ಫ್​ ಪಾರು. ವೃತ್ತಿಯಲ್ಲಿ ವೈದ್ಯೆ. ಅಣ್ಣಯ್ಯನ ಬಾಲ್ಯದ ಲವ್​ ಈಕೆ. ಆದರೆ ಶಿಕ್ಷಣವೇ ಎಲ್ಲ ಅಂತಿರೋ ಪಾರ್ವತಿ, ಅದ್ಯಾವುದೋ ಘಳಿಗೆಯಲ್ಲಿ ಶಿವುನ ಮದುವೆಯಾಗ ಬೇಕಾಗಿ ಬರುತ್ತದೆ. ಆದರೆ ಅವಳು ಲವ್​ ಮಾಡ್ತಿರೋದೇ ಬೇರೆಯವನನ್ನು. ಕೊನೆಗೆ ಅವನು ಮೋಸಗಾರ ಎಂದು ತಿಳಿಯುತ್ತದೆ. ಈಗ ಪಾರುಗೆ ಶಿವು ಮೇಲೆ ಲವ್​ ಶುರುವಾಗಿದೆ. ಮುಂದೇನು ಎನ್ನುವುದು ಸದ್ಯಕ್ಕಿರುವ ಕುತೂಹಲ. 

ಇನ್ನು ನಟ ವಿಕಾಶ್ ಉತ್ತಯ್ಯ ಅವರ ಅಪಾಯವಿದೆ ಎಚ್ಚರಿಕೆ ಸಿನಿಮಾ ಇದೇ 28ರಂದು ಬಿಡುಗಡೆಯಾಗಲಿದೆ. ಇನ್ನು ಮೂಲತಃ ಕೊಡಗಿನವರಾಗಿರುವ ವಿಕಾಶ್‌ ಉತ್ತಯ್ಯ ಅವರು ಬಣ್ಣದ ಲೋಕಕ್ಕೆ ಕಾಲಿಡುವ ಮುನ್ನ ವಕೀಲರಾಗಿ ಕೆಲಸ ಮಾಡುತ್ತಿದ್ದರು. ನಟನೆ ಮೇಲಿನ ಆಸಕ್ತಿಯಿಂದ ಕೆಲಸ ಬಿಟ್ಟು ನಟರಾಗಿದ್ದಾರೆ. ವಿಕಾಶ್ ಉತ್ತಯ್ಯ ಅವರು ಸೀರಿಯಲ್ ಗೆ ಬರುವ ಮುನ್ನ ಕೆಲ ಸಿನಿಮಾಗಳಲ್ಲಿ ಅಭಿನಯಿದ್ದಾರೆ. ಈ ಹಿಂದೆ ಮೇರಿ ಎಂಬ ಸಿನಿಮಾದಲ್ಲಿ ನಟಿಸಿದ್ದ ಇವರು, ಇತ್ತೀಚೆಗೆ 2023ರಲ್ಲಿ ದ್ವಂದ್ವ ದ್ವಯಂ, ಆನೆ ಸಿನಿಮಾಗಳಿಗೆ ಬಣ್ಣ ಹಚ್ಚಿದ್ದಾರೆ. ಅಲ್ಲದೇ, ಕನಸಿನ ಮಳೆಯಾದವರು ಎಂಬ ಶಾರ್ಟ್ ಫಿಲ್ಮನಲ್ಲೂ ನಟಿಸಿದ್ದಾರೆ. ಕೊಡಗಿನವರಾಗಿರುವ ವಿಕಾಶ್‌, ವಕೀಲರಾಗಿ ಕೆಲಸ ಮಾಡುತ್ತಿದ್ದರು. ನಟನೆ ಮೇಲಿನ ಆಸಕ್ತಿಯಿಂದ ಬಣ್ಣದ ಲೋಕ ಆರಿಸಿಕೊಂಡಿದ್ದಾರೆ. ಇದಾಗಲೇ ಕೆಲವು ಸೀರಿಯಲ್​ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಮೇರಿ ಎಂಬ ಸಿನಿಮಾದಲ್ಲಿಯೂ ನಟಿಸಿದ್ದರು. 2023ರಲ್ಲಿ ದ್ವಂದ್ವ ದ್ವಯಂ, ಆನೆ ಸಿನಿಮಾಗಳಲ್ಲಿಯೂ ಕಾಣಿಸಿಕೊಂಡಿರುವ ಇವರು, ಕನಸಿನ ಮಳೆಯಾದವರು ಎಂಬ ಶಾರ್ಟ್ ಫಿಲ್ಮನಲ್ಲೂ ನಟಿಸಿದ್ದಾರೆ. ಅಪಾಯವಿದೆ ಎಚ್ಚರಿಕೆಯಲ್ಲಿ ವಿಕಾಶ್‌ ಜೊತೆಯಾಗಿ ಅಮೃತಧಾರೆಯ ಮಲ್ಲಿ ಅಂದ್ರೆ ನಟಿ ರಾಧಾ ಭಾಗವತಿ ಅವರು ಕಾಣಿಸಿಕೊಂಡಿದ್ದಾರೆ. ಅಭಿಜಿತ್ ತೀರ್ಥಹಳ್ಳಿ ನಿರ್ದೇಶಿಸಿರುವ ಈ ಚಿತ್ರಕ್ಕೆ ಮಂಜುನಾಥ್ ವಿ ಜಿ ಹಾಗೂ ಪೂರ್ಣಿಮಾ ಗೌಡ ಅವರು ಹಣ ಹೂಡಿದ್ದಾರೆ. ಸುನಾದ್ ಗೌತಮ್ ಅವರ ಸಂಗೀತ ಈ ಚಿತ್ರಕ್ಕಿದೆ. ಇದು ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ಆಗಿದೆ.

ರಿಯಲ್​ ಲೈಫ್​ ಲವ್​ ಬಗ್ಗೆ ಕೊನೆಗೂ ಗುಟ್ಟು ಬಿಚ್ಚಿಟ್ಟ ಅಣ್ಣಯ್ಯ: ಲವರ್​ ವಿಷ್ಯ ಕೇಳಿ ಅಭಿಮಾನಿಗಳಿಗೆ ಶಾಕ್​!

ಪಾರು Change ಮಾಡೋ ಮಾತೇ ಇಲ್ಲ | Keerthi ENT Clinic