ಒಂದು ನಿಮಿಷವೂ ಯೋಚಿಸದೇ ತಲೆ ಬೋಳಿಸಿದ ರಾಮಾಚಾರಿ ಚಾರುಲತಾ; ಫೋಟೋ ವೈರಲ್
ವೈರಲ್ ಆಯ್ತು ಚಾರು ತೆಗೆದುಕೊಂಡ ದಿಟ್ಟ ನಿರ್ಧಾರ. ತಲೆ ಬೋಳಿಸಿದ್ದು ಎಷ್ಟು ಸರಿ ಅಂತಿದ್ದಾರೆ ನೆಟ್ಟಿಗರು?
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ರಾಮಾಚಾರಿ ಧಾರಾವಾಹಿಯಲ್ಲಿ ಮೌನ ಗುಡ್ಡೆಮನೆ ಚಾರು ಪಾತ್ರದಲ್ಲಿ ಮಿಂಚುತ್ತಿದ್ದಾರೆ. ಈಗ ಹೊಸ ಲುಕ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ವೈಶಾಲ ಈಗ ನಾರಾಯಣ ಆಚಾರ್ಯರ ಮನೆಗೆ ಮತ್ತೆ ಬಂದಿದ್ದಾಳೆ. ಹಿರಿ ಸೊಸೆ ಬಂದಿದ್ದಾಳೆ ಅನ್ನೋ ಖುಷಿಗಿಂತ ಹೆಚ್ಚಾಗಿ ಮತ್ತೆ ಇನ್ನು ಏನು ಅಪಾಯ ತಂದುಬಿಡುತ್ತಾಳೆ ಅನ್ನೋ ಭಯ ಶುರುವಾಗಿದೆ.
ಕಾಲಿಗೆ ಸ್ವಾಧೀನವಿಲ್ಲ ಎಂದು ನಾಟಕ ಮಾಡುತ್ತಿರುವ ವೈಶಾಖಾ ದೇವರಲ್ಲಿ ಹರಿಕೆ ಹೊತ್ತಿದ್ದೆ ಈಗ ಪಾಲಿಸಲು ನನಗೆ ಶಕ್ತಿ ಇಲ್ಲ ಎಂದು ಬೇಸರ ಮಾಡಿಕೊಳ್ಳುತ್ತಾರೆ. ಅಯ್ಯೋ ಅಕ್ಕ ಹರಕೆ ಏನೇ ಇದ್ದರೂ ನಾನು ಮಾಡುತ್ತೀನಿ ಎಂದು ಮಾತು ಕೊಟ್ಟುಬಿಡುತ್ತಾಳೆ.
ಮಾತು ಕೊಟ್ಟ ಮೇಲೆ ತಲೆ ಬೋಳಿಸಿಕೊಳ್ಳಬೇಕು, ಉಪವಾಸವಿದ್ದು ದೇವರ ಪೂಜೆ ಮಾಡಬೇಕು ಎಂದು ವೈಶಾಖಾ ಹೇಳುತ್ತಾಳೆ. ಮನೆ ಮಂದಿ ಹೆದರಿಕೊಂಡರೂ ಚಾರು ಗಟ್ಟಿತನದಿಂದ ಹರಿಕೆ ತೀರಿಸಲು ತಲೆ ಬೋಳಿಸಿಕೊಳ್ಳುತ್ತಾರೆ.
ಚಾರು ತಲೆ ಬೋಳಿಸಿಕೊಂಡಿರುವ ಸಂಚಿಕೆ ಪ್ರಸಾರವಾಗುತ್ತಿದೆ. ನಿಜಕ್ಕೂ ಚಾರು ತಲೆ ಬೋಳಿಸಿರುವ ಹಾಗೆ ಕಾಣಿಸುತ್ತದೆ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ. ಈ ಫೋಟೋ ಸಖತ್ ವೈರಲ್ ಆಗುತ್ತಿದೆ.
ಚಾರು ತಲೆ ಬೋಳಿಸಿಕೊಂಡಿರುವ ಹಾಗೆ ಮೇಕಪ್ ಮತ್ತು ಹೇರ್ ಸ್ಟೈಲ್ ಮಾಡಲಾಗಿದೆ. ಈ ರೀತಿ ಮೇಕಪ್ ಮಾಡಿಸಿಕೊಳ್ಳಲು ತುಂಬಾ ಸಮಯ ಹಿಡಿಯುತ್ತದೆ. ಹೀಗಾಗಿ ಚಾರು ಶ್ರಮವನ್ನು ವೀಕ್ಷಕರು ಮೆಚ್ಚಿಕೊಂಡಿದ್ದಾರೆ.