ಅಣ್ಣಯ್ಯ ಸೀರಿಯಲ್‌ನಲ್ಲಿ ಗುಂಡಮ್ಮಂಗೆ ಹೊಟ್ಟೆಗೇ ಹಾಕದ ಅತ್ತೆ ಬಗ್ಗೆ ವೀಕ್ಷಕರಿಗೆ ಕೆಂಡದಂಥಾ ಕೋಪ ಇತ್ತು. ಈಗ ಗುಂಡಮ್ಮ ಅತ್ತೆ ಕೈಲೇ ಕೈತುತ್ತು ಹಾಕಿಸಿಕೊಳ್ತಿದ್ದಾಳೆ. ಇದು ಇದು ಚೆನ್ನಾಗಿರೋದು ಅಂತಿದ್ದಾರೆ ವೀಕ್ಷಕರು.
ಅಣ್ಣಯ್ಯ ಸೀರಿಯಲ್ ಸದ್ಯ ಟಿಆರ್‌ಪಿಲಿ ಭಲೇ ಮಿಂಚ್ತಾ ಇದೆ. ಈ ಸೀರಿಯಲ್‌ಗೆ ಶುರುವಲ್ಲಿ ಬಿಲ್ಡಪ್ಪು ಕೊಟ್ಟಿದ್ದೇ ಕೊಟ್ಟಿದ್ದು. ಅಣ್ಣ ತಂಗಿ ಸೆಂಟಿಮೆಂಟನ್ನು ಹಂಗೇ ಎತ್ತಿ ಮೆರೆಸಿದ್ದೇ ಮೆರೆಸಿದ್ದು. ಆದರೆ 'ನಾವು ಅಣ್ಣ ತಂಗಿ ಸೆಂಟಿಮೆಂಟು ಏನಿದ್ರೂ ಸಿನಿಮಾದಾಗೇ ನೊಡ್ಕೋತೀವ್ ಹೋಗ್' ಅಂತ ವೀಕ್ಷಕರು ಮೂತಿ ತಿರುವಿ ಬಿಟ್ಟರು. ಕೊಂಚ ಡಿಫರೆಂಟಾಗಿ ಶಿವಣ್ಣ ರಾಧಿಕಾ ರೇಂಜಲ್ಲಿ ಅಣ್ಣ ತಂಗಿ ಸೆಂಟಿಮೆಂಟನ್ನು ಮೆರೆಸಲು ಹೊರಟಿದ್ದ ಸೀರಿಯಲ್ ಟೀಮ್ ಈ ರೆಸ್ಪಾನ್ಸ್ ನೋಡಿ ಥಂಡಾ ಆಯ್ತು. ನೆಕ್ಸ್ಟ್ ಕಾರ್ಡ್ ಪ್ಲೇ ಮಾಡಲೇ ಬೇಕಲ್ಲಾ.. ಸೋ ಶಿವು ಮತ್ತು ಪಾರು ಸ್ಟೇಜಿಗೆ ಬಂದರು. ಜನ ಎಲ್ಲಿ ಅದದೇ ಲವ್ ಸ್ಟೋರಿ ಅಂತ ಹಿಂದಿನಂಗೆ ಮೂತಿ ತಿರುವುತ್ತಾರೇನೋ ಅನ್ನೋ ಭಯದಲ್ಲಿದ್ದ ಚಾನೆಲ್‌ನವ್ರಿಗೆ ಕೆಲವೇ ದಿನದಲ್ಲಿ ಈ ಭಯ ಹೋಯ್ತು. ಈ ಕಾರ್ಡ್ ವರ್ಕ್ ಆಯ್ತು. ರೌಡಿ ಬೇಬಿ ನಿಶಾ ರವಿಕೃಷ್ಣನ್‌ಗೆ ಸೀರಿಯಲ್ ಫೀಲ್ಡ್‌ನಲ್ಲಿ ಭಾಳ ಜನ ಅಭಿಮಾನಿಗಳಿದ್ದಾರೆ. ಆಕೆಯ ರೌಡಿ ಬೇಬಿ ಸ್ಟೈಲಿಗೆ ಇಲ್ಲಿ ಮಾರು ಹೋಗದವರಿಲ್ಲ. ಸೋ ರೌಡಿ ಬೇಬಿ ಪಾರುವಾಗಿ ಶಿವು ಜೊತೆ ಈಕೆಯ ಡ್ಯುಯೆಟ್ ಅದೆಷ್ಟೋ ಹುಡುಗಿಯರ ನಿದ್ದೆಯನ್ನು ಕದ್ದು ಬಿಟ್ಟಿತು.
ಆದರೆ ಈ ಸೀರಿಯಲ್‌ನಲ್ಲಿ ವರ್ಕ್ ಆದ ಇನ್ನೊಂದು ಸ್ಟ್ರಾಂಗ್ ಅಂಶವೇ ಗುಂಡಮ್ಮ. ನೀವು ಸೀರಿಯಲ್ ಪ್ರೋಮೋಗೆ ಬರೋ ರೆಸ್ಪಾನ್ಸ್ ನೋಡಿ. ಗುಂಡಮ್ಮ ಏನೇ ಮಾಡಿದ್ರೂ ಜನ ಸಪೋರ್ಟ್ ಮಾಡೋದು, ಆಕೆಯ ಸೀನ್ ಬಂದಾಕ್ಷಣ ಎಲ್ಲವನ್ನೂ ಬದಿಗಿಟ್ಟು ಟಿವಿ ಮುಂದೆ ಕೂರೋದು. ಸದ್ಯಕ್ಕಂತೂ ಗುಂಡಮ್ಮನ ಹವಾ ತಾರಾಮಾರಾ ಹೆಚ್ಚಾಗ್ತಿದೆ. ಇಷ್ಟು ದಿನ ಎಷ್ಟೇ ತಾಕತ್ತಿದ್ದರೂ ಒಳ್ಳೆ ಹುಡುಗಿಯ ಜವಾಬ್ದಾರಿ ನಿರ್ವಹಣೆಗೆ ಬಾಯಿ ಮುಚ್ಚಿಕೊಂಡಿದ್ಲು ಗುಂಡಮ್ಮ. ಈಕೆಯ ಒಳ್ಳೆತನವನ್ನೇ ಅತ್ತೆ ಲೀಲಾ ಚೆನ್ನಾಗಿ ಬಳಸಿಕೊಂಡು ಹೊಟ್ಟೆಗೂ ಹಾಕದೇ ಗುಂಡಮ್ಮ ಹಸಿದುಕೊಂಡು ಸಾಯೋ ಹಂಗೆ ಮಾಡಿದ್ಲು. ದೇವರಿಗಿಟ್ಟ ಪ್ರಸಾದ, ಅದು ಇದು ತಿಂದ್ಕೊಂಡು ಹೆಂಗೋ ಜೀವ ಹಿಡ್ಕೊಂಡಿದ್ದ ಗುಂಡಮ್ಮಂಗೆ ಈಗ ಈ ಒಳ್ಳೆತನ ಎಲ್ಲ ಊಸರವಳ್ಳಿಯಂಥಾ ತನ್ನ ಅತ್ತೆ ಮುಂದೆ ವರ್ಕೌಟ್ ಆಗಲ್ಲ ಅಂತ ಗೊತ್ತಾಗಿದೆ. ಅದಕ್ಕೆ ಲೇಟಾಗಾದ್ರೂ ಲೇಟೆಸ್ಟ್ ಆಗಿ ತನ್ನ ಹವಾ ಶುರು ಹಚ್ಕೊಂಡಿದ್ದಾಳೆ. ಮುಳ್ಳನ್ನು ಮುಳ್ಳಿಂದಲೇ ತೆಗೆಯೋದಕ್ಕೆ ಮುಂದಾಗಿದ್ದಾಳೆ.
ಅಲ್ಲಿ ರಾಮ, ಇಲ್ಲಿ ಚಿರು... ಈ ನಾಯಕರ್ಯಾಕೆ ಪೆದ್ದರಂತೆ ಆಡ್ತಾರೆ? ಕಿಡಿ ಕಾರಿದ ವೀಕ್ಷಕರು
ಅತ್ತೆ ಹತ್ರ ಬಂದು ಅಡುಗೆ ಏನು ಅಂತ ಗುಂಡಮ್ಮ ವಿಚಾರಿಸಿಕೊಂಡಾಗ ಅತ್ತೆ ತನ್ನ ಎಂದಿನ ಆಟಿಟ್ಯೂಡ್‌ನಿಂದಲೇ ಮಾತು ಶುರು ಮಾಡಿದ್ದಾಳೆ. ಬೆಳಗ್ಗೆ ಮಿಕ್ಕಿರೋ ಅನ್ನದಿಂದ ತನಗೂ ತನ್ನ ಮಗನಿಗೂ ಚಿತ್ರಾನ್ನ ಕಲಸಿರುವುದಾಗಿ ಹೇಳಿದ್ದಾಳೆ. 'ಹಸಿವಾದ್ರೆ ಮಾತ್ರ ಸ್ವಲ್ಪ ರಾಂಗಾಗ್ತೀನಿ' ಎನ್ನುತ್ತಾ ಪಾತ್ರೆಯಿಂದ ಪ್ಲೇಟಿಗೆ ಅನ್ನ ಹಾಕ್ಕೊಂಡಿದ್ದಾಳೆ. ಅತ್ತೆ, 'ಏನ್ಮಾಡ್ತಾ ಇದ್ದೀಯ, ನನ್ನ ಮುಂದೆನೇ ಪ್ಲೇಟಿಗೆ ಅನ್ನ ಹಾಕೋವಷ್ಟು ಬೆಳೆದುಬಿಟ್ಯಾ' ಅಂತ ಶುರು ಮಾಡ್ತಾಳೆ. ಜಾಣೆ ಗುಂಡಮ್ಮ ಆ ಪ್ಲೇಟನ್ನು ಅತ್ತೆ ಕೈಗೇ ಕೊಟ್ಟು, 'ಇಷ್ಟು ದಿನ ಎಷ್ಟೇ ಹಸಿವಾದ್ರೂ ಸುಮ್ಮನಿರ್ತಾ ಇದ್ದೆ. ನೀವಾಗಿ ನೀವು ಹೇಳೋವರೆಗೂ ತಿನ್ನಬಾರದು ಅಂದುಕೊಂಡಿದ್ದೆ ಅತ್ತೆ. ಆದರೆ ಯಾಕೋ ನೀವು ಹೇಳೋ ಹಾಗೆ ಕಾಣಲ್ಲ. ಹೇಳಿ ಕೇಳಿ ನಾನು ಶಿವಣ್ಣನ ತಂಗಿ ಬೇರೆ, ಪಾಲಿಗೆ ಬಂದಿದ್ದು ಪಂಚಾಮೃತ ಅಂದಕೊಳ್ಳುತ್ತಿದೆ. ಈಗಲೂ ನಾನು ತಿಂತೀನಿ ಅಂತಲ್ಲ' ಅಂದಾಗ ಅತ್ತೆಗೆ ಸಂದೇಹ. 'ನೀವೇ ಕೈಯ್ಯಾರೆ ನನಗೆ ತುತ್ತು ಕೊಡಬೇಕು' ಅಂದು ಬಿಡ್ತಾಳೆ. ಅತ್ತೆ ಕೊಡಲ್ಲ ಅಂದ್ರೆ ಅಂತ ಕೇಳಿದಾಗ ಬಿಡೋರು ಯಾರು ಅಂತ ಆವಾಜ್ ಹಾಕಿದ್ದಾರೆ. ಅತ್ತೆ ಈಗ ಕಂಗಾಲಾಗಿದ್ದಾಳೆ. ತನ್ನ ಆಟ ಇವಳ ಮುಂದೆ ನಡೆಯಲ್ಲ ಅನ್ನೋದು ಗೊತ್ತಾಗಿ ಸೊಸೆಗೆ ಅನ್ನ ತಿನ್ನಿಸಲು ಮುಂದಾಗಿದ್ದಾಳೆ.
ಗಂಡ ಮಾಡಿದ ಚಪಾತಿ ನಂಬಿದ್ರೆ ಉಪವಾಸವೇ ಗತಿ ! ಪತಿಯನ್ನು ಅಡುಗೆ ಕೆಲಸಕ್ಕೆ ಹಚ್ಚಿದ್ರಾ ಚೈತ್ರಾ ಕುಂದಾಪುರ?
ಇದಕ್ಕೆ ವೀಕ್ಷಕರು ಫುಲ್ ಬೆಂಕಿ ಇಮೋಜಿ ಹಾಕಿ ತಮ್ಮ ಖುಷಿಯನ್ನು ಶೇರ್ ಮಾಡ್ತಿದ್ದಾರೆ. 'ಇದು ಇದು ಚೆನ್ನಾಗಿರೋದು ಗುಂಡಮ್ಮ' ಅಂತ ಎಲ್ಲರೂ ಅಂದರೆ ಎಲ್ಲರೂ ಗುಂಡಮ್ಮನ ಸಪೋರ್ಟಿಗೆ ಬಂದ್ಬಿಟ್ಟಿದ್ದಾರೆ. ಇನ್ಮೇಲೆ ಗುಂಡಮ್ಮನ್ನ ಕೇಳೋರ್ಯಾರು.


