- Home
- Entertainment
- TV Talk
- Kannada Serial Heroes: ಅಲ್ಲಿ ರಾಮ, ಇಲ್ಲಿ ಚಿರು... ಈ ನಾಯಕರ್ಯಾಕೆ ಪೆದ್ದರಂತೆ ಆಡ್ತಾರೆ? ಕಿಡಿ ಕಾರಿದ ವೀಕ್ಷಕರು
Kannada Serial Heroes: ಅಲ್ಲಿ ರಾಮ, ಇಲ್ಲಿ ಚಿರು... ಈ ನಾಯಕರ್ಯಾಕೆ ಪೆದ್ದರಂತೆ ಆಡ್ತಾರೆ? ಕಿಡಿ ಕಾರಿದ ವೀಕ್ಷಕರು
ಕನ್ನಡ ಕಿರುತೆರೆಯ ನಾಯಕರ ಮೇಲೆ ವೀಕ್ಷಕರು ಗರಂ ಆಗಿದ್ದಾರೆ. ಕಾರಣ ಇಷ್ಟೇ… ಕಣ್ಣೇದುರೇ ಎಲ್ಲಾ ನಡೆಯುತ್ತಿದ್ದರು, ಏನನ್ನು ಅರ್ಥ ಮಾಡಿಕೊಳ್ಳದ ನಾಯಕರು. ನಿರ್ದೇಶಕರಿಂದಲೇ ಎಲ್ಲಾ… ಆದ್ರೂ ವೀಕ್ಷಕರಿಗೆ ನಾಯಕರ ಮೇಲೆ ಸಿಟ್ಟು.

ಕನ್ನಡದಲ್ಲಿ ಕಿರುತೆರೆಗಳಲ್ಲಿ (Kannada serial)ಹಲವು ಧಾರಾವಾಹಿಗಳು ಬಂದು ಹೋಗುತ್ತಿವೆ, ಕೆಲವು ಸೀರಿಯಲ್ ಗಳು ಜನರ ಮನಸಿನಲ್ಲಿ ಅಚ್ಚೊತ್ತು ನಿಂತರೆ ಇನ್ನೂ ಕೆಲವು ಹಾಗೆ ಬಂದು ಹೀಗೆ ಹೋಗುತ್ತವೆ. ಕೆಲವು ಸೀರಿಯಲ್ ನಾಯಕರು ಇಷ್ಟವಾದರೆ, ಇನ್ನೂ ಕೆಲವು ನಾಯಕಿಯರು ಇಷ್ಟ ಆಗ್ತಾರೆ. ಆದರೆ ಸೀರಿಯಲ್ ಕಥೆಗಳನ್ನು ನೋಡ್ತಿದ್ರೆ… ನಾಯಕರನ್ನು ನೋಡಿ ಇವರೇನು ಪೆದ್ದರೇ? ಬುದ್ದಿ ಇಲ್ವಾ ಅನಿಸಿ ಬಿಡುತ್ತೆ.
ಈವಾಗ ಯಾಕೆ ಈ ಮಾತು ಹೇಳ್ತಿದ್ದೀವಿ ಅಂದ್ರೆ, ಕನ್ನಡ ಕಿರುತೆರೆಯ ನಾಯಕರ ಮೇಲೆ ವೀಕ್ಷಕರು ಗರಂ ಆಗಿದ್ದಾರೆ. ಅದು ಯಾಕಂದ್ರೆ, ಈ ಸೀರಿಯಲ್ ಗಳಲ್ಲಿ ಹೀರೋಗಳು ಯಾಕೋ ಹೀರೋ ಥರಾನೇ ಆಡ್ತಿಲ್ಲ, ಸುತ್ತಲು ಏನು ನಡಿತಿದೆ ಅನ್ನೋದೇ ಅವರಿಗೆ ಗೊತ್ತಾಗ್ತಿಲ್ಲ.
ಸೀತಾ ರಾಮ ಧಾರಾವಾಹಿಯಲ್ಲಿ (Seetha Rama Serial) ರಾಮನನ್ನು ನೋಡಿ, ಬ್ರಹ್ಮಗಂಟು ಸೀರಿಯಲ್ ಚಿರು ನೋಡಿದ್ರೂ ಹಾಗೆ. ಇಬಬ್ರಿಗೂ ಸ್ವಂತ ಬುದ್ದಿ ಅನ್ನೋದೇ ಇಲ್ಲ. ಕೆಟ್ಟವರನ್ನೇ ದೇವರು ಅಂದುಕೊಳ್ಳುತ್ತಾರೆ. ಅವರು ಹಾಕಿರೋ ಗೆರೆ ದಾಟೋದಿಲ್ಲ.
ರಾಮನಿಗಂತೂ ಚಿಕ್ಕಿ ಭಾರ್ಗವೀನೇ ಎಲ್ಲಾ. ಆಕೆ ಏನು ಹೇಳಿದ್ರೂ ನಂಬುತ್ತಾನೆ. ಆಕೆ ಮೇಲೆ ಯಾರು ಆರೋಪ ಮಾಡಿದ್ರು, ಅದು ನಿಜಾನೋ, ಸುಳ್ಳೋ ಅನ್ನೋ ಯೋಚನೆ ಮಾಡೊದಕ್ಕೂ ಹೋಗಲ್ಲ ರಾಮ. ಭಾರ್ಗವಿಯ ಅಸಲಿ ಮುಖ ಪರಿಚಯಿಸಲು ಹೊರಟ ಅಶೋಕ್ ಗೆ ಈಗಾಗಲೇ ಮುಖಭಂಗ ಆಗಿದೆ.
ಇನ್ನೊಂದು ಕಡೆ ಚಿರು. ಅತ್ತಿಗೆ ಏನು ಮಾಡಿದ್ರೂ ಸರಿ. ಅತ್ತಿಗೆ ತಪ್ಪು ಮಾಡ್ತಿದ್ದಾಳೆ ಅಂತ ಗೊತ್ತಿದ್ರೂ ಅದನ್ನು ಅರ್ಥ ಮಾಡ್ಕೊಂಡು ತಪ್ಪು ಅಂತ ಹೇಳೋ ಬುದ್ದಿಯೂ ಈ ಚಿರುವಿಗೆ ಇಲ್ವೇ ಇಲ್ಲ. ಅತ್ತಿಗೆ ಬಾವಿಗೆ ಹಾರು ಅಂತ ಹೇಳಿದ್ರೂ ಹಾರೋದಕ್ಕೆ ರೆಡಿಯಾಗಿರ್ತಾನೆ ಚಿರು.
ಇತ್ತಿಚಿನ ಎಪಿಸೋಡ್ ಗಳನ್ನೇ ನೋಡಿ, ಚಿರುಗೆ ದೀಪಾ ಮೇಲೆ ಲವ್ ಆಗಿರೋದಂತೂ ನಿಜಾ. ಅದನ್ನು ಹೇಳೋದಕ್ಕೆ ಒದ್ದಾಡ್ತಿದ್ದಾನೆ ಚಿರು. ಆದ್ರೆ ಅತ್ತಿಗೆ ಡಿವೋರ್ಸ್ ಲೆಟರ್ ಕೊಟ್ಟಾಗ, ನಿಮಗೆ ಡಿವೋರ್ಸ್ ಓಕೆ ಅಂದ್ರೆ ನನಗೂ ಅದು ಓಕೆ ಎನ್ನುತ್ತಾ ದೀಪಾಳಿಂದ ದೂರ ಹೋಗೋದಕ್ಕೂ ರೆಡಿಯಾಗಿದ್ದಾನೆ.
ಮತ್ತೊಂದು ಕಡೆ ಕಲರ್ಸ್ ಕನ್ನಡದಲ್ಲಿ ಕರ್ಣ, ದತ್ತಾ ಭಾಯ್. ಕರ್ಣನಿಗೆ ತನ್ನ ಅಮ್ಮನ ಬಗ್ಗೆ ಏನೂ ಗೊತ್ತಿರದೇ ಇದ್ದರೂ ಕೂಡ, ಆಕೆ ಮೇಲೆ ವಿಪರೀತ ಕೋಪ, ಅದ್ರೆ, ಅರುಂಧತಿನೇ ಕೆಟ್ಟವಳು ಅನ್ನೋದು, ಕಣ್ಣೆದುರು ಕಾಣುವಂತಿದ್ದರೂ ಆತನಿಗೆ ಗೊತ್ತಾಗ್ತಿಲ್ಲ.
ದತ್ತಾಭಾಯ್ ಗೂ ಅಷ್ಟೇ, ಬೇರೆ ನಾಯಕರಿಗೆ ಹೋಲಿಕೆ ಮಾಡಿದ್ರೆ, ಸ್ವಲ್ಪ ಖಡಕ್ ಆಗಿರೋದು ದತ್ತಾ ಭಾಯ್, ಆದ್ರೆ ಅಕ್ಕ ಶರಾವತಿ ಅಷ್ಟೇಲ್ಲಾ, ಕಿತಾಪತಿ ಮಾಡಿದ್ರೂ ಆತನ ಕಣ್ಣಿಗೆ ಮಾತ್ರ ಯಾವುದೂ ಕಾಣಿಸೋದೆ ಇಲ್ಲ. ಅಂತ ಜನರು ಆಡಿಕೊಳ್ಳುತ್ತಿದ್ದಾರೆ. ಒಟ್ಟಲ್ಲಿ ಧಾರಾವಾಹಿಗಳಲ್ಲಿ (kannada serial) ನಾಯಕಿಯನ್ನು ಮೇಲಕ್ಕೆ ಹೊತ್ತು ಹೊತ್ತು, ನಾಯಕರನ್ನು ಪೆದ್ದರಂತೆ, ಆಟಕ್ಕುಂಟು, ಲೆಕ್ಕಕ್ಕಿಲ್ಲ ಎಂಬಂತೆ ತೋರಿಸ್ತಿರೋದಂತೂ ನಿಜಾ. ವೀಕ್ಷಕರು ಗರಂ ಆಗಿರೋದು ಸರಿಯಾಗಿದೆ ಬಿಡಿ.