Annayya Serial Episode: 'ಅಣ್ಣಯ್ಯ' ಧಾರಾವಾಹಿಯಲ್ಲಿ ಜಿಮ್‌ ಸೀನ, ರಶ್ಮಿ ಮದುವೆ ನಡೆದಿದೆ. ಮೊದಲ ಬಾರಿಗೆ ಪಿಂಕಿ ವಿರುದ್ಧ ಸೀನ ಎದುರು ಮಾತನಾಡಿದ್ದಾನೆ. 

'ಅಣ್ಣಯ್ಯ' ಧಾರಾವಾಹಿಯಲ್ಲಿ ಜಿಮ್‌ ಸೀನ ಹಾಗೂ ರಶ್ಮಿಯನ್ನು ದೂರ ಮಾಡಲು ಲೀಲಾ ಒಂದಲ್ಲ ಒಂದು ಪ್ರಯತ್ನಪಡುತ್ತಿದ್ದಾಳೆ. ಇನ್ನೊಂದು ಕಡೆ ಶಿವು ಕೂಡ ಪಿಂಕಿಗೆ ಎಚ್ಚರಿಕೆ ಕೊಟ್ಟಿದ್ದಾನೆ. ಆದರೆ ಲೀಲಾ ಮಾತ್ರ ಪಿಂಕಿ ತಲೆಯನ್ನು ಹಾಳು ಮಾಡಿದ್ದಳು.

ಹಣ ಕದ್ದಿದ್ದ ಶಾರದಾ!

ರಶ್ಮಿ ಮದುವೆ ಫಿಕ್ಸ್‌ ಆಗಿತ್ತು. ಮದುವೆ ಮಂಟಪದಲ್ಲೇ ಆ ಹುಡುಗ ಸರಿ ಇಲ್ಲ ಎನ್ನೋದು ಗೊತ್ತಾಗಿತ್ತು. ಇನ್ನೊಂದು ಕಡೆ ಹುಡುಗನ ಮನೆಯವರು ವರದಕ್ಷಿಣೆಗೋಸ್ಕರ ಪೀಡಿಸುತ್ತಿದ್ದರು. ಹುಡುಗನ ಮನೆಯವರಿಗೆ ಹಣ ಕೊಡಬೇಕು ಅಂತ ಶಿವು ಹಣ ಅರೇಂಜ್‌ ಮಾಡಿದ್ದನು. ಆದರೆ ಆ ಹಣವನ್ನು ನೀಟ್‌ ಆಗಿ ಇಡೋ ಜವಾಬ್ದಾರಿ ಜಿಮ್‌ ಸೀನ ಮೇಲೆ ಬಿದ್ದಿತ್ತು. ಆದರೆ ಅದನ್ನು ಶಾರದಾ ಕದ್ದಿದ್ದಳು. ಈ ಮದುವೆ ಮುರಿಯಬೇಕು, ನನ್ನ ಮಗಳ ಜೀವನ ಚೆನ್ನಾಗಿರಬೇಕು ಅಂತ ಅವಳು ಬಯಸಿದ್ದಳು.

ರಶ್ಮಿ, ಜಿಮ್‌ ಸೀನ ಮದುವೆ ಆಯ್ತು!

ಈ ಹಣ ಕಳೆದು ಹೋಗಲು, ಮದುವೆ ಮುರಿಯಲು ಜಿಮ್‌ ಸೀನ ಕಾರಣ ಅಂತ ಅವನ ತಂದೆ ಮಾದಪ್ಪಣ್ಣನೇ ಒತ್ತಾಯದಿಂದ ರಶ್ಮಿ ಜೊತೆ ಮದುವೆ ಮಾಡಿಸಿದ್ದನು. ಪಿಂಕಿ ಎನ್ನೋ ಹುಡುಗಿಯನ್ನು ಜಿಮ್‌ ಸೀನ ಲವ್‌ ಮಾಡಿದ್ದನು. ಇವರಿಬ್ಬರು ಮದುವೆ ಆಗೋ ಪ್ಲ್ಯಾನ್‌ ಮಾಡಿದ್ದರು. ಆದರೆ ಅನಿರೀಕ್ಷಿತವಾಗಿ ಜಿಮ್‌ ಸೀನ ಹಾಗೂ ರಶ್ಮಿ ಮದುವೆ ಆಯ್ತು.

ಮದುವೆಯಾದ್ಮೇಲೂ ಕಿತ್ತಾಟ!

ರಶ್ಮಿ ಹಾಗೂ ಜಿಮ್‌ ಸೀನ ಇಬ್ಬರೂ ಯಾವಾಗಲೂ ಜಗಳ ಆಡುತ್ತಿರುತ್ತಾರೆ. ರಶ್ಮಿ ದಪ್ಪಗಿದ್ದಾಳೆ ಅಂತ ಜಿಮ್‌ ಸೀನ ಕೊಂಕು ನುಡಿಯುತ್ತಿರುತ್ತಾನೆ. ಇನ್ನೊಂದು ಕಡೆ ಜಿಮ್‌ ಸೀನ ತೆಳ್ಳಗಿದ್ದಾನೆ ಅಂತ ರಶ್ಮಿಯೂ ಜಗಳ ಆಡುತ್ತಿರುತ್ತಾಳೆ. ಈಗ ಇವರಿಬ್ಬರಿಗೂ ಮದುವೆಯಾಗಿದ್ದು, ಮದುವೆಯಾದ್ಮೇಲೂ ಕಿತ್ತಾಡುತ್ತಿದ್ದಾರೆ.

ಸೀನನಿಗೆ ಬುದ್ಧಿ ಹೇಳಿದ್ದ ದಂಪತಿ!

“ನನ್ನ ತಂಗಿಗೆ ಮೋಸ ಮಾಡಬೇಡ” ಅಂತ ಸೀನನಿಗೆ ಶಿವು ಹೇಳಿದ್ದಾನೆ. ಇನ್ನೊಂದು ಕಡೆ, “ನಾನು ಕೂಡ ಇಷ್ಟವಿಲ್ಲದೆ ಮದುವೆಯಾದೆ, ಆದರೆ ಈಗ ತುಂಬ ಖುಷಿಯಿಂದ ಇದ್ದೇನೆ. ದೇವರು ಹಾಕಿದ ನಂಟು ಸುಳ್ಳಾಗೋದಿಲ್ಲ. ರಶ್ಮಿ ಒಳ್ಳೆಯ ಹುಡುಗಿ, ಮೋಸ ಮಾಡಬೇಡ” ಎಂದು ಪಾರು ಕೂಡ ಶಿವುಗೆ ಬುದ್ಧಿ ಹೇಳಿದ್ದಳು. ತಾಯಿ ಲೀಲಾ, ಗರ್ಲ್‌ಫ್ರೆಂಡ್‌ ಪಿಂಕಿ ಏನೇ ಹೇಳಿದರೂ ಕೂಡ ಜಿಮ್‌ ಸೀನ ಸದ್ಯ ಸೈಲೆಂಟ್‌ ಆಗಿದ್ದಾನೆ.

ರೊಚ್ಚಿಗೆದ್ದ ಜಿಮ್‌ ಸೀನ

ಜಿಮ್‌ ಸೀನನ ಕಪಾಳಕ್ಕೆ ಬಾರಿಸಿದ ಪಿಂಕಿ, “ನಿನ್ನ ಬಾವ ನನಗೆ ಎಚ್ಚರಿಕೆ ಕೊಡ್ತಾನೆ, ಅಂಗಡಿಯಲ್ಲಿ ಕೆಲಸ ಮಾಡೋ ಅವನು ನನಗ್ಯಾಕೆ ಬುದ್ಧಿ ಹೇಳೋದು?” ಎಂದು ಕೂಗಿದ್ದಳು. ಇದನ್ನು ಕೇಳಿ ಜಿಮ್‌ ಸೀನನಿಗೆ ಸಿಟ್ಟು ಬಂದಿದೆ. “ನನ್ನ ಬಾವನ ಬಗ್ಗೆ ಒಂದೂ ಮಾತು ಆಡಬೇಡ” ಅಂತ ಅವನು ಹೇಳಿದ್ದಾನೆ. ಅಷ್ಟೇ ಅಲ್ಲದೆ ಪಿಂಕಿ ಮೇಲೆ ಕೂಗಾಡಿದ್ದಾನೆ. ಒಟ್ಟಿನಲ್ಲಿ ಅವನು ರಶ್ಮಿಯನ್ನು ಬಿಡೋದು ಡೌಟ್‌. ರಶ್ಮಿ ಹಾಗೂ ಜಿಮ್‌ ಸೀನ ಒಂದಾದರೂ ಆಶ್ಚರ್ಯ ಇಲ್ಲ.

ಸಂದೇಶ ಏನು?

ಎಷ್ಟೋ ವ್ಯಕ್ತಿಗಳು ಇಷ್ಟವಿಲ್ಲದೆ ಮದುವೆ ಆಗ್ತಾರೆ, ಆಮೇಲೆ ಬೇರೆ ಆಗೋದುಂಟು. ಇನ್ನೂ ಕೆಲವರು ಇಷ್ಟಪಟ್ಟು ಮದುವೆ ಆದರೂ ಕೂಡ ಚಿಕ್ಕ ವಿಷಯಕ್ಕೆ ಡಿವೋರ್ಸ್‌ ತಗೊಳ್ತಾರೆ. ಹೊಂದಾಣಿಕೆ ಎನ್ನೋದು ಇರೋದೇ ಇಲ್ಲ. ಆದರೆ ಇಲ್ಲಿ ಮದುವೆ ಎನ್ನೋ ವ್ಯವಸ್ಥೆಗೆ ಬೆಲೆ ಕೊಡಲಾಗಿದೆ. ಒಮ್ಮೆ ಮದುವೆಯಾದರೆ ಗಂಡ-ಹೆಂಡ್ತಿ ಖುಷಿಯಿಂದ, ಹೊಂದಾಣಿಕೆಯಿಂದ ಬಾಳಬೇಕು ಎಂಬ ಸಂದೇಶ ನೀಡಲಾಗಿದೆ.

ಕತೆ ಏನು?

ಶಿವು ತಂಗಿ ರಶ್ಮಿಗೂ, ಜಿಮ್‌ ಸೀನನಿಗೂ ಮದುವೆ ಆಗಿದೆ. ಈ ಮದುವೆ ಜಿಮ್‌ ಸೀನನಿಗೆ ಇಷ್ಟವೇ ಇರಲಿಲ್ಲ. ಅಣ್ಣನಿಗೆ ಅವಮಾನ ಆಗಬಾರದು ಅಂತ ರಶ್ಮಿ ಕೂಡ ಓಕೆ ಎಂದಿದ್ದಾಳೆ. ಮುಂದೆ ಏನಾಗುವುದು ಎಂದು ಕಾದು ನೋಡಬೇಕಿದೆ.

ಪಾತ್ರಧಾರಿಗಳು

ಶಿವು- ವಿಕಾಶ್‌ ಉತ್ತಯ್ಯ, ಪಾರು-‌ ನಟಿ ನಿಶಾ ರವಿಕೃಷ್ಣನ್, ಜಿಮ್‌ ಸೀನ-ಸುಷ್ಮಿತ್‌ ಜೈನ್‌, ರಶ್ಮಿ-ಪ್ರತೀಕ್ಷಾ ಶ್ರೀನಾಥ್‌