Small Screen
‘ಅಣ್ಣಯ್ಯ’ ಧಾರಾವಾಹಿಯಲ್ಲಿ ಶಿವು ಪಾತ್ರದಲ್ಲಿ ವಿಕಾಶ್ ಉತ್ತಯ್ಯ, ಪಾರು ಪಾತ್ರದಲ್ಲಿ ನಿಶಾ ರವಿಕೃಷ್ಣನ್ ನಟಿಸುತ್ತಿದ್ದಾರೆ.
ಈ ಜೋಡಿಯ ಕೆಮಿಸ್ಟ್ರಿ ಅನೇಕರಿಗೆ ಇಷ್ಟ ಆಗಿದೆ. ʼಆರಂಭದಲ್ಲಿ ನಮ್ಮ ಜೋಡಿ ಅಷ್ಟು ವೀಕ್ಷಕರಿಗೆ ಇಷ್ಟ ಆಗಿರಲಿಲ್ಲ, ಈಗ ಇಷ್ಟ ಆಗುತ್ತಿದೆʼ ಎಂದು ವಿಕಾಶ್ ಉತ್ಯಯ್ಯ ಅವರು ಹೇಳಿದ್ದಾರೆ.
ಅಣ್ಣಯ್ಯ ಧಾರಾವಾಹಿ ಹೀರೋ, ಹೀರೋಯಿನ್ ರಿಯಲ್ ಆಗಿ ಒಂದಾದರೆ ಚೆನ್ನ ಎಂದು ಕೆಲವರು ಹೇಳುತ್ತಾರೆ. ಇನ್ನೂ ಕೆಲವರು ಇವರಿಬ್ಬರು ಲವ್ ಮಾಡುತ್ತಿದ್ದಾರೆ ಎಂದು ಮಾತಾಡಿಕೊಳ್ತಿದ್ದಾರೆ.
“ವೀಕ್ಷಕರು ಶಿವು-ಪಾರು ರಿಯಲ್ ಆಗಿ ಒಂದಾಗಲಿ ಅಂತ ಹೇಳ್ತಾರೆ. ಈ ರೀತಿ ಬಯಸೋದು ತಪ್ಪಲ್ಲ” ಎಂದು ವಿಕಾಶ್ ಉತ್ತಯ್ಯ ಹೇಳಿದ್ದಾರೆ.
“ಸೀರಿಯಲ್ ಪಾತ್ರಗಳನ್ನು ವೀಕ್ಷಕರು ತುಂಬ ವೈಯಕ್ತಿಕವಾಗಿ ತಗೊಳ್ತಾರೆ, ನಿಜ ಅಂತ ನಂಬ್ತಾರೆ” ಎಂದು ವಿಕಾಶ್ ಉತ್ತಯ್ಯ ಹೇಳಿದ್ದಾರೆ.
“ಈ ರೀತಿ ವೈಯಕ್ತಿಕವಾಗಿ ತಗೊಳ್ಳೋದು ನಮ್ಮ ವೈಯಕ್ತಿಕ ಬದುಕಿನ ಮೇಲೆ ಪರಿಣಾಮ ಬೀರೋದು ನಿಜ” ಎಂದು ವಿಕಾಶ್ ಉತ್ತಯ್ಯ ಹೇಳಿದ್ದಾರೆ.
ಈ ಹಿಂದೆ ಕೂಡ ಕೆಲ ಧಾರಾವಾಹಿಗಳ ಪಾತ್ರಧಾರಿಗಳಲ್ಲಿ ಕೆಲವರು ಪ್ರೀತಿಸಿ, ರಿಯಲ್ ಆಗಿ ಮದುವೆಯಾದರೆ, ಇನ್ನೂ ಕೆಲವರು ಬೇರೆ ಬೇರೆ ಸಂಗಾತಿ ಹುಡುಕಿಕೊಂಡಿದ್ದಾರೆ.