ಆಂಕರ್ ಅನುಶ್ರೀ ಮದುವೆ ದಿನ ಸಮೀಪಿಸುತ್ತಿದೆ, ಹುಡುಗ ಯಾರು ಗೊತ್ತಾಯ್ತಾ?
ಕನ್ನಡದ ಖ್ಯಾತ ನಿರೂಪಕಿ ಅನುಶ್ರೀ ಅವರ ಮದುವೆ ಸುದ್ದಿ ವೈರಲ್. ಮಾರ್ಚ್‌ನಲ್ಲಿ ಮದುವೆ? ವಿದೇಶದಲ್ಲಿ ಜವಳಿ ಖರೀದಿ? ಹೊಸ ವರ್ಷದಲ್ಲಿ ಅನುಶ್ರೀ ಯಾರನ್ನು ವರಿಸಲಿದ್ದಾರೆ? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿಯಲು ಓದಿ.
ಕನ್ನಡದ ಸ್ಟಾರ್ ನಿರೂಪಕಿ ಅನುಶ್ರೀ ವರ್ಷಾಂತ್ಯದಲ್ಲಿ ಸಖತ್ ಸುದ್ದಿ ಮಾಡಿದ್ದು ತನ್ನ ಮದುವೆಯ ಮೂಲಕ. ಇಷ್ಟೂ ಸಮಯ 'ಅನುಶ್ರೀ ಯಾಕೆ ಮದುವೆ ಆಗ್ತಿಲ್ಲ?' ಅನ್ನೋದು ಅವರ ಅನೇಕ ಫ್ಯಾನ್‌ಗಳ ಮಿಲಿಯನ್ ಡಾಲರ್ ಪ್ರಶ್ನೆಯಾಗಿತ್ತು. ಏಕೆಂದರೆ ಅನುಶ್ರೀ ಅವರಿಗೆ ಮದುವೆ ವಯಸ್ಸು ದಾಟುತ್ತಿದೆ. ಅವರೀಗಾಗಲೇ ಮೂವತ್ತೈದರ ಹರೆಯವನ್ನು ದಾಟಿದ್ದು ಇನ್ನೇನು ಕೆಲವೇ ಸಮಯದಲ್ಲಿ ಮೂವತ್ತೇಳನೇ ವರ್ಷಕ್ಕೆ ಅಡಿ ಇಡಲಿದ್ದಾರೆ. ಈ ಕಾಲದಲ್ಲಿ ಲೇಟ್ ಮ್ಯಾರೇಜೇ ಟ್ರೆಂಡು. ಬಾಲಿವುಡ್ ನಟಿ ದೀಪಿಕಾ ಪಡುಕೋಣೆಯಿಂದ ಹಿಡಿದು ಸಾಮಾನ್ಯರವರೆಗೆ ಎಲ್ಲರೂ ಲೈಫಲ್ಲಿ ಚೆನ್ನಾಗಿ ಓಡಾಡಿ ಒಂದಿಷ್ಟು ದುಡ್ಡು, ಮನೆ ಅಂತೆಲ್ಲ ಮಾಡ್ಕೊಂಡ ಮೇಲೆಯೇ ಮದುವೆ ಆಗೋದಕ್ಕೆ ಹೊರಡ್ತಾರೆ. ಇದಕ್ಕೆ ಅನುಶ್ರೀ ಅವರೂ ಹೊರತಾಗಿಲ್ಲ. ಬಹಳ ಚಿಕ್ಕ ವಯಸ್ಸಲ್ಲೇ ಬದುಕಿನಲ್ಲಿ ಸಾಕಷ್ಟು ಏಳುಬೀಳುಗಳನ್ನು ಕಂಡ ಹೆಣ್ಣುಮಗಳು ಇವರು.
ಮಂಗಳೂರಿನ ಸಮೀಪದ ಊರಿಂದ ಬಂದ ಹುಡುಗಿ ಇಂದು ಕನ್ನಡಿಗರ ಮನೆ, ಮನದಲ್ಲಿ ಬೇರೂರಿದ್ದು ಸಣ್ಣ ಸಾಧನೆ ಅಲ್ಲ. ಅರಳು ಹುರಿದಂತೆ ಮಾತನಾಡುವ ಕನ್ನಡದ ಈ ಸ್ಟಾರ್ ಆಂಕರ್ ಹೆಸರು ಒಂದಿಷ್ಟು ಜನರೊಂದಿಗೆ ಕೇಳಿಬಂದರೂ ಈ ನಟಿ ಕಂ ಆಂಕರ್ ಅದಕ್ಕೆಲ್ಲ ಸೊಪ್ಪು ಹಾಕದೇ, ಅದಕ್ಕೂ ನನಗೂ ಸಂಬಂಧ ಇಲ್ಲ ಅಂತಲೇ ಇದ್ದುಬಿಟ್ಟರು.
ಉಪ್ಪಿಗಾಗಿ ಒಗ್ಗಟ್ಟಾದ ಸ್ಯಾಂಡಲ್‌ವುಡ್: 'ಯುಐ' ಸಿನಿಮಾದಲ್ಲಿ ಕತೆಯೇ ಸರಿನೋ ತಪ್ಪೋ ಎಂದ ಯಶ್!
ಇಷ್ಟು ಸಮಯ ದೊಡ್ಡ ದೊಡ್ಡ ಸೆಲೆಬ್ರಿಟಿಗಳಿಂದ ಹಿಡಿದು ಕಾಮನ್ ಮ್ಯಾನ್‌ವರೆಗೆ ಎಲ್ಲರೂ ಅವರ ಬಳಿ ಮದುವೆ ವಿಚಾರ ಕೇಳಿ ಕಾಲೆಳೆಯೋರೆ. ಯಾರ ಜೊತೆಗೂ ದನಿ ಎತ್ತರಿಸಿ ಮಾತನಾಡದ ಈ ಹೆಣ್ಮಗಳು ಅವರೆಲ್ಲರಿಗೂ ಸಾವಧಾನದಿಂದಲೇ ಉತ್ತರಿಸಿ ಅವರ ಮುಖದಲ್ಲೂ ನಗು ಬರಿಸ್ತಿದ್ರು. ಈ ಬಾರಿ ಇಂಥಾ ಪ್ರಶ್ನೆ ಕೇಳಿ ಕೇಳಿ ಸಾಕಾಯ್ತೋ ಅಥವಾ ನಿಜಕ್ಕೂ ಮದುವೆ ಆಗೋ ಹುಡುಗ ಸಿಕ್ನೋ ಒಟ್ಟಿನಲ್ಲಿ ಹೊಸ ವರ್ಷದಲ್ಲಿ ನನ್ನ ಮದುವೆ ಅಂತ ಪಬ್ಲಿಕ್ಕಾಗೇ ಜೀ ಕನ್ನಡದ ಮಹಾನಟಿ ವೇದಿಕೆಯಲ್ಲಿ ಹೇಳಿಬಿಟ್ಟರು. ಎಂಥಾ ಸೆಲೆಬ್ರಿಟಿಗಳಿಗೂ ಬೀಳದ ಶಿಳ್ಳೆ, ಚಪ್ಪಾಳೆ ಅನುಶ್ರೀ ಅವರ ಈ ಘೋಷಣೆಗೆ ಬಿತ್ತು. ಕೆಲವು ಸಮಯದ ಹಿಂದೆ ಅನುಶ್ರೀ ಅವ್ರದ್ದೇ ಯೂಟ್ಯೂಬ್ ಚಾನೆಲ್ನಲ್ಲಿ ಅನುಶ್ರೀ ಅವ್ರ ಕಾಮಿಡಿ ಕಿಲಾಡಿಗಳು ಶೋ ಮೂಲಕ ಜನಪ್ರಿಯರಾದ ನಟಿ ನಯನಾ, ಸೂರಜ್, ಜಗ್ಗ ಹಾಗೂ ಗಿಲ್ಲಿ ಜೊತೆ ಚಾಟ್ ಶೋ ನಡೆಸಿಕೊಟ್ಟಿದ್ದರು. ಈ ವೇಳೆ ಮದುವೆ ಟಾಪಿಕ್ ಬಂದಿತ್ತು.
ಸೂರಜ್ ಅನುಶ್ರೀ ಅವ್ರು ಫೆಬ್ರವರಿಯಲ್ಲಿ ಮದುವೆ ಆಗ್ತಾರೆ ಅಂತ ಕಾಲ್ ಎಳಿತಾರೆ. ಆಗ ಅನುಶ್ರೀ ಅವರು ಇಲ್ಲ ಕಣ್ರೋ ನಾನು ಅಪ್ಪು ಫ್ಯಾನ್ ಆಗಿರೋದ್ರಿಂದ ಮಾರ್ಚ್ ನಲ್ಲಿ ಮದುವೆ ಆಗಬಹುದು ಅಂತಾರೆ. ಹೀಗಾಗಿ ಎಲ್ಲಾ ಕಡೆ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ ಅನುಶ್ರೀ ಮದುವೆ ವಿಚಾರ.
ಶಿವಣ್ಣಗೆ ಯಶಸ್ವಿ ಸರ್ಜರಿ ಬೆನ್ನಲ್ಲೇ ಫ್ಯಾನ್ಸ್ ಜೊತೆ ಮಾತನಾಡಲಿರುವ ದಿನಾಂಕ ಕೊಟ್ಟ ಪತ್ನಿ ಗೀತಾ!
ಮಾರ್ಚ್ ಯಾಕೆ ಅಂದ್ರೆ ಮಾರ್ಚ್ 17ರಂದು ಪುನೀತ್ ರಾಜ್ಕುಮಾರ್ ಅವರ ಬರ್ತ್ ಡೇ ಆಗಿದ್ದು, ಆ ದಿನವೇ ಅನುಶ್ರೀ ಹಸೆಮಣೆ ಏರ್ತಾರೆ ಅನ್ನೋ ಸುದ್ದಿ ಓಡಾಡ್ತಿದೆ. ಆದರೆ ಆಮೇಲೆ ಅನುಶ್ರೀ ಅವರೇ ಈ ಸುದ್ದಿಯನ್ನು ತಳ್ಳಿಹಾಕಿದ್ದಾರೆ. ಆದರೆ ಈಗ ಹರಿದಾಡ್ತಿರೋ ಲೇಟೆಸ್ಟ್ ಸುದ್ದಿ ಅಂದರೆ ಅನುಶ್ರೀ ಮದುವೆ ದಿನ ಶೀಘ್ರದಲ್ಲೇ ಇದೆ. ಅವರು ನಿರೂಪಣೆ ಮಾಡೋದರ ಜೊತೆಗೆ ಮದುವೆ ತಯಾರಿಯಲ್ಲೂ ಬ್ಯುಸಿ ಆಗಿದ್ದಾರೆ. ಶೀಘ್ರ ಮದುವೆ ಜವಳಿ ಖರೀದಿಗೆ ವಿದೇಶಕ್ಕೆ ಹೋಗೋ ಪ್ಲಾನ್ ಇದ್ದ ಹಾಗಿದೆ ಅನ್ನೋ ಮಾತು ಹೇಳಿ ಬರ್ತಿದೆ. ಜೊತೆಗೆ ಅವರು ಹೊಸ ವರ್ಷದಲ್ಲಿ ತನ್ನ ಮದುವೆ ಆಗೋ ಹುಡುಗನ ಪ್ರವರ ಹಂಚಿಕೊಳ್ಳೋ ಸಾಧ್ಯತೆ ಇದೆ. ಸದ್ಯ ಅವರ ಫ್ಯಾನ್ಸ್ ಅವರ ಹುಡುಗನನ್ನು ನೋಡಲು ತುದಿಗಾಲಲ್ಲಿ ನಿಂತಿದ್ದಾರೆ.