ಶಿವಣ್ಣಗೆ ಯಶಸ್ವಿ ಸರ್ಜರಿ ಬೆನ್ನಲ್ಲೇ ಫ್ಯಾನ್ಸ್ ಜೊತೆ ಮಾತನಾಡಲಿರುವ ದಿನಾಂಕ ಕೊಟ್ಟ ಪತ್ನಿ ಗೀತಾ!

ಅಮೆರಿಕದ ಆಸ್ಪತ್ರೆ ದಾಖಲಾಗಿದ್ದ ನಟ ಶಿವರಾಜ್ ಕುಮಾರ್ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ. ಶಿವಣ್ಣ ಆರೋಗ್ಯ ಕುರಿತು ಮಾಹಿತಿ ನೀಡಿದ ಪತ್ನಿ ಗೀತಾ ಶಿವರಾಜ್ ಕುಮಾರ್, ಅಭಿಮಾನಿಗಳ ಜೊತೆ ಶಿವಣ್ಣ ಮಾತನಾಡಲಿದ್ದಾರೆ ಎಂದಿದ್ದಾರೆ. ಯಾವಾಗ ಅನ್ನೋ ದಿನಾಂಕವನ್ನೂ ಬಹಿರಂಗಪಡಿಸಿದ್ದಾರೆ.

Geetha shivarajkumar update shivarajkumar Health and successful surgery at Amrica ckm

ಫ್ಲೋರಿಡಾ(ಡಿ.25) ಅಭಿಮಾನಿಗಳ ಪ್ರಾರ್ಥನೆ, ಶೀಘ್ರ ಚೇತರಿಕೆಗಾಗಿ ದೇವಸ್ಥಾನಗಳಲ್ಲಿ ಪೂಜೆ, ಹಿರಿಯ ಆಶೀರ್ವಾದಗಳಿಂದ ನಟ ಶಿವರಾಜ್ ಕುಮಾರ್ ಶಸ್ತ್ರಕಿಚಿಕಿತ್ಸೆ ಯಶಸ್ವಿಯಾಗಿದೆ. ಪಿತ್ತ ಕೋಶ ಶಸ್ತ್ರಕಿಕಿತ್ಸೆಗಾಗಿ ಶಿವರಾಜ್ ಕುಮಾರ್ ಅಮೆರಿಕದ ಮಿಯಾಮಿ ಕ್ಯಾನ್ಸರ್ ಆಸ್ಪತ್ರೆಗೆ ದಾಖಲಾಗಿದ್ದರು. ಸತತ 6 ಗಂಟೆಗಳ ಕಾಲ ನಡೆದ ಸರ್ಜರಿ ಯಶಸ್ವಿಯಾಗಿದೆ. ಡಾ.ಮುರುಗೇಶ್ ನೇತೃತ್ವದ ವೈದ್ಯರ ತಂಡ ಯಶಸ್ವಿಯಾಗಿ ಸರ್ಜರಿ ಮಾಡಿದೆ. ಶಿವಣ್ಣ ಶಸ್ತ್ರಚಿಕಿತ್ಸೆ ಹಾಗೂ ಆರೋಗ್ಯದ ಕುರಿತು ಪತ್ನಿ ಗೀತಾ ಶಿವರಾಜ್ ಕುಮಾರ್ ಮಾಹಿತಿ ನೀಡಿದ್ದಾರೆ. ನಿಮ್ಮೆಲ್ಲರ ಹಾರೈಕೆಯಿಂದ ಶಿವಣ್ಣ ಆರೋಗ್ಯವಾಗಿದ್ದಾರೆ ಎಂದಿದ್ದಾರೆ.

ಡಾ. ಮುರುಗೇಶ್ ಹಾಗೂ ವೈದ್ಯರ ತಂಡದ ಆಪರೇಶನ್ ಯಶಸ್ವಿಯಾಗಿದೆ.ಅಭಿಮಾನಿ ದೇವರುಗಳ ಹಾಗೆ ನಮಗೆ ವೈದ್ಯರು ಕೂಡ ದೇವರಾಗಿದ್ದಾರೆ. ಶಿವರಾಜ್ ಕುಮಾರ್ ಯಶಸ್ವಿ ಶಸ್ತ್ರಚಿಕಿತ್ಸೆ ಬಳಿಕ ಇದೀಗ ಐಸಿಯುವ ಸ್ಥಳಾಂತರಿಸಲಾಗಿದೆ. ಸದ್ಯ ಶಿವಣ್ಣ ಆರೋಗ್ಯವಾಗಿದ್ದಾರೆ ಎಂದು ಗೀತಾ ಶಿವರಾಜ್ ಕುಮಾರ್ ಹೇಳಿದ್ದಾರೆ. ಹಲವು ಅಭಿಮಾನಿಗಳು ಶಿವಣ್ಣ ಆರೋಗ್ಯ ವಿಚಾರಿಸುತ್ತಿದ್ದಾರೆ. ಇನ್ನು ನಾಲ್ಕೇ ದಿನದಲ್ಲಿ ಶಿವರಾಜ್ ಕುಮಾರ್ ನಿಮ್ಮಲ್ಲರ ಜೊತೆ ಮಾತನಾಡಲಿದ್ದಾರೆ ಎಂದು ಗೀತಾ ಶಿವರಾಜ್ ಕುಮಾರ್ ಹೇಳಿದ್ದಾರೆ.ಅಂದರೆ ಡಿಸೆಂಬರ್ ಅಂತ್ಯದಲ್ಲೇ ಅಭಿಮಾನಿಗಳ ಜೊತೆ ಮಾತನಾಡಲಿದ್ದಾರೆ. ಹೊಸ ವರ್ಷಕ್ಕೆ ಅಭಿಮಾನಿಗಳ ಸಂಭ್ರಮ ಡಬಲ್ ಆಗುವುದರಲ್ಲಿ ಅನುಮಾನವಿಲ್ಲ. 

ಸತತ 6 ಗಂಟೆ ಕಾಲ ನಡೆದ ಸರ್ಜರಿ ಯಶಸ್ವಿ, ನಟ ಶಿವರಾಜ್ ಕುಮಾರ್‌ ಐಸಿಯುಗೆ ಶಿಫ್ಟ್!

ಅಭಿಮಾನಿಗಳು ಶಿವರಾಜ್ ಕುಮಾರ್ ಆರೋಗ್ಯ ಚೇಕರಿಕೆಗೆ, ಶೀಘ್ರದಲ್ಲೇ ಗುಣಮುಖರಾಗಲು ಪ್ರಾರ್ಥನೆ ಮಾಡಿದ್ದೀರಿ. ಪೂಜೆ ಸಲ್ಲಿಸಿದ್ದಾರೆ. ಆಶೀರ್ವದಾ ಮಾಡಿದ್ದೀರಿ. ನಿಮ್ಮಲ್ಲರ ಹಾರೈಕೆಯಿಂದ ಶಿವರಾಜ್ ಕುಮಾರ್‌ಗೆ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ. ಇದಕ್ಕೆ ವೈದ್ಯರಾದ. ಡಾ.ಮುರುಗೇಶ್ ಅವರು ಮುತುವರ್ಜಿಯಿಂದ ಶಿವರಾಜ್ ಕುಮಾರ್ ಆರೋಗ್ಯ ನೋಡಿಕೊಳ್ಳುತ್ತಿದ್ದಾರೆ. ವೈದ್ಯರ ಇಡೀ ತಂಡಕ್ಕೆ ಕೃತರಜ್ಞರಾಗಿದ್ದೇವೆ ಎಂದು ಗೀತಾ ಶಿವರಾಜ್ ಕುಮಾರ್ ಹೇಳಿದ್ದಾರೆ. 

ಸುದೀರ್ಘ ಶಸ್ತ್ರಚಿಕಿತ್ಸೆ ಕಾರಣದಿಂದ ಶಿವರಾಜ್ ಕುಮಾರ್ ಸುಸ್ತಾಗಿದ್ದಾರೆ. ಸದ್ಯ ಶಿವರಾಜ್ ಕುಮಾರ್ ಅವರಿಗೆ ವಿಶ್ರಾಂತಿಯ ಅಗತ್ಯವಿದೆ. ಇನ್ನು ಮೂರು ಅಥವಾ ನಾಲ್ಕು ದಿನಗಳಲ್ಲಿ ಶಿವರಾಜ್ ಕುಮಾರ್ ನಿಮ್ಮ ಜೊತೆ ಮಾತನಾಡುತ್ತಾರೆ ಎಂದು ಗೀತಾ ಶಿವರಾಜ್ ಕುಮಾರ್ ಹೇಳಿದ್ದಾರೆ. ಇದೇ ವೇಳೆ ಅಮೆರಿಕದಿಂದ ಶಿವರಾಜ್ ಕುಮಾರ್ ಕುಟುಂಬ ಜೊತೆಗಿರುವ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಅಭಿಮಾನಿಗಳು ಯಾರೂ ಕೂಡ ಆತಂಕ ಪಡುವ ಅಗತ್ಯವಿಲ್ಲ. ಶಿವರಾಜ್ ಕುಮಾರ್ ಆರೋಗ್ಯ ಅಪ್‌ಡೇಟ್ ಕುರಿತು ಮಾಹಿತಿ ಸಿಕ್ಕಿಲ್ಲ, ನೀಡಿಲ್ಲ ಎಂದು ಗಾಬರಿಪಡುವುದು ಬೇಡ. ಕೆಲ ದಿನಗಳ ಕಾಲ ಶಿವರಾಜ್ ಕುಮಾರ್‌ಗೆ ಸಂಪೂರ್ಣ ವಿಶ್ರಾಂತಿ ಅಗತ್ಯವಿದೆ. ಬಳಿಕ ಶಿವರಾಜ್ ಕುಮಾರ್ ಫೋಟೋ ಹಾಗೂ ಇತರ ಮಾಹಿತಿಗಳನ್ನು ನೀಡುತ್ತೇವೆ. ಸದ್ಯ ಶಿವಣ್ಣ ಆರೋಗ್ಯವಾಗಿದ್ದಾರೆ ಎಂದು ಮಧು ಬಂಗಾರಪ್ಪ ಹೇಳಿದ್ದಾರೆ. ಇದೇ ವೇಳೆ ವೈದ್ಯ ಡಾ. ಮುರುಗೇಶ್ ಕೂಡ ಮಾತನಾಡಿದ್ದಾರೆ. ಶಿವರಾಜ್ ಕುಮಾರ್ ಶಸ್ತ್ರಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸಿದ್ದಾರೆ. ಎಲ್ಲವೂ ಚೆನ್ನಾಗಿ ಆಗಿದೆ. ಶಿವರಾಜ್ ಕುಮಾರ್ ಆರೋಗ್ಯ ಉತ್ತಮವಾಗಿದೆ ಎಂದು ಡಾ. ಮುರುಗೇಶ್ ಹೇಳಿದ್ದಾರೆ. 

ಮುಂದಿನ 10 ದಿನಗಳ ಕಾಲ ಶಿವರಾಜ್ ಕುಮಾರ್ ಮಿಯಾಮಿ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಇರಲಿದ್ದಾರೆ. 10 ದಿನಗಳ ಕಾಲ ಶಿವರಾಜ್ ಕುಮಾರ್ ಮಿಯಾಮಿ ಕ್ಯಾನ್ಸರ್ ಆಸ್ಪತ್ರೆಯಲ್ಲಿ ವಿಶ್ರಾಂತಿ ಪಡೆಯಲಿದ್ದಾರೆ. ಈ ವೇಳೆ ಶಿವರಾಜ್ ಕುಮಾರ್ ಆರೋಗ್ಯವನ್ನು ವೈದ್ಯರ ತಂಡ ಸಂಪೂರ್ಣ ನಿಗಾವಹಿಸಲಿದೆ.  

ಹರಕೆ, ಹಾರೈಕೆ ನಡುವೆ ಅಮೇರಿಕದಲ್ಲಿ ಶಿವಣ್ಣನಿಗೆ ಸರ್ಜರಿ, ಕರುನಾಡಲ್ಲಿ ಫ್ಯಾನ್ಸ್ ಪೂಜೆ!

ಪಿತ್ತ ಕೋಶ ಸಂಬಂಧ ಶಿವರಾಜ್ ಕುಮಾರ್ ಅಮೆರಿಕದ ಫ್ಲೋರಿಡಾದಲ್ಲಿರುವ ಮಿಯಾಮಿ ಕ್ಯಾನ್ಸರ್ ಆಸ್ಪತ್ರೆಗೆ ದಾಖಲಾಗಿದ್ದು. ಅಮೆರಿಕ ಕಾಲಮಾನದ ಪ್ರಕಾರ ಮಧ್ಯಾಹ್ನ 12 ಗಂಟೆಗೆ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ಮುಗಿದೆ. 

 

Latest Videos
Follow Us:
Download App:
  • android
  • ios