ಮದುಮಗಳಾದ ಅನುಶ್ರೀ: ವಿಡಿಯೋ ನೋಡಿ ಅಮರಶಿಲ್ಪಿ ಜಕ್ಕಣ್ಣ ಬೆರಗಾದನಂತೆ, ರವಿವರ್ಮ ಮೈ ಮರೆತನಂತೆ!
ಆ್ಯಂಕರ್ ಅನುಶ್ರೀ ಅವರು ಸರಿಗಮಪ ಕಾರ್ಯಕ್ರಮಕ್ಕಾಗಿ ಮದುಮಗಳಂತೆ ರೆಡಿ ಆಗಿದ್ದು, ಇದರ ವಿಡಿಯೋ ವೈರಲ್ ಆಗಿದೆ. ಫ್ಯಾನ್ಸ್ ಥಹರೇವಾರಿ ಕಮೆಂಟ್ಸ್ ಮಾಡುತ್ತಿದ್ದಾರೆ.
ಕನ್ನಡ ಕಿರುತೆರೆ ಜನಪ್ರಿಯ ನಿರೂಪಕಿ ಕಮ್ ಸ್ಯಾಂಡಲ್‌ವುಡ್ ನಟಿ (Sandalwood star) ಅನುಶ್ರೀ ಮನೆಮಾತಾಗಿರುವ ನಟಿ. ಅದ್ಭುತವಾಗಿ ಕಾರ್ಯಕ್ರಮ ನಿರೂಪಣೆಯ ಜೊತೆಗೆ ಸಂಗೀತ, ನೃತ್ಯದಿಂದಲೂ ಮನರಂಜಿಸುವ ಅನುಶ್ರೀ ಸದ್ಯ ಸರಿಗಮಪ ಸಂಗೀತದ ರಿಯಾಲಿಟಿ ಷೋನಲ್ಲಿ ಬಿಜಿಯಾಗಿದ್ದಾರೆ. ಜೀ ಕನ್ನಡ ಚಾನೆಲ್ನಲ್ಲಿ (Zee Kannada Channel) ವಾರಾಂತ್ಯದಲ್ಲಿ ಎಲ್ಲರ ಮೆಚ್ಚುಗೆ ಗಳಿಸುತ್ತಿರುವ ಸರಿಗಮಪ ಸಂಗೀತ ರಿಯಾಲಿಟಿ ಷೋ ಈಗ 20ನೇ ಕಂತಿಗೆ ಕಾಲಿಟ್ಟಿದೆ. ಅಪಾರ ಪ್ರಮಾಣದಲ್ಲಿ ಜನ ಮೆಚ್ಚುಗೆ ಗಳಿಸಿರುವ ಈ ಷೋದಲ್ಲಿ ರಾಜ್ಯಗಳ ವಿವಿಧ ಮೂಲೆಗಳ ಸಂಗೀತ ಪ್ರತಿಭೆಗಳನ್ನು ವಾಹಿನಿ ಪರಿಚಯಿಸಿದೆ. ಇದಾಗಲೇ 19 ಸರಣಿಗಳನ್ನು (season) ಪೂರೈಸಿದ್ದು, ಇದೀಗ 20ನೇ ಸೀಸನ್ ಶುರುವಾಗಿದೆ. ಈ ಬಾರಿ, ಹೊಸತನಕ್ಕೆ ಕೈಹಾಕಲಾಗಿದೆ.
ಇಲ್ಲಿಯವರೆಗೆ ಕರ್ನಾಟಕದಲ್ಲಿ ಆಡಿಷನ್ ನಡೆದಿದೆ. ಇಲ್ಲಿ ಆಡಿಷನ್ ನಡೆದಿರುವ ಸಂದರ್ಭದಲ್ಲಿ ಕರ್ನಾಟಕದ ಹೊರ ರಾಜ್ಯಗಳ ಪ್ರತಿಭೆಗಳೂ ಪಾಲ್ಗೊಂಡಿದ್ದು, ಹಲವರಿಗೆ ಈ ಕಾರ್ಯಕ್ರಮದಲ್ಲಿ ಹಾಡುವ ಅವಕಾಶ ದೊರಕಿದೆ. ಇದೀಗ ಹೊಸ ಪ್ರಯತ್ನಕ್ಕೆ ಕೈಹಾಕಿರುವ ತಂಡ, ಕನ್ನಡದ ಕಂಪನ್ನು ಹೊರ ದೇಶಗಳಿಗೂ ಬಿತ್ತರಿಸುವ ಪ್ರಯತ್ನಕ್ಕೆ ಮುಂದಾಗಿದೆ. ಇದಾಗಲೇ ಷೋ ಆರಂಭಗೊಂಡಿದ್ದು, ಇದನ್ನು ಎಂದಿನಂತೆ ಆ್ಯಂಕರ್ ಅನುಶ್ರೀ ನಡೆಸಿಕೊಡುತ್ತಿದ್ದಾರೆ. ಈ ಸಂಗೀತ ಷೋ ಕಾರ್ಯಕ್ರಮ ನಡೆಸಿಕೊಡಲು ಹೋದ ಸಂದರ್ಭದಲ್ಲಿ ತಾವು ಹೇಗೆ ಮೇಕಪ್ ಮಾಡಿಕೊಂಡು ರೆಡಿಯಾಗಿದ್ದು ಎಂಬ ಬಗ್ಗೆ ವಿಶೇಷ ವಿಡಿಯೋ ಶೇರ್ ಮಾಡಿಕೊಂಡಿದ್ದು, ಅದೀಗ ವೈರಲ್ ಆಗಿದೆ. ಸೀದಾ ಸಾದಾ ಆಗಿ ಮೇಕಪ್ ರೂಂಗೆ ಕಾಲಿಟ್ಟು ಅನುಶ್ರೀ ಮದುಮಗಳಂತೆ ಕಂಗೊಳಿಸಿದ್ದಾರೆ. ಭರ್ಜರಿ ಡ್ರೆಸ್, ಆಭರಣ ತೊಟ್ಟು ಥೇಟ್ ಮದುಮಗಳಂತೆ ಕಾಣುತ್ತಿದ್ದಾರೆ. ಇದರ ವಿಡಿಯೋ ತುಣುಕನ್ನು ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದು, ಅದೀಗ ವೈರಲ್ ಆಗಿದೆ. ಈ ಬಾರಿಯ ಸರಿಗಮಪ ಕಾರ್ಯಕ್ರಮಕ್ಕೆ ಕೆಂಪು ಬಣ್ಣ ರಾಯಭಾರಿ ಎನ್ನುವ ಕ್ಯಾಪ್ಷನ್ ಕೊಟ್ಟಿರೋ ಅನುಶ್ರೀ, ಅಡಿಯಿಂದ ಮುಡಿಯವರೆಗೆ ಕೆಂಪು ಬಣ್ಣದಲ್ಲಿ ಕಂಗೊಳಿಸಿದ್ದಾರೆ.
Sa Re Ga Ma Pa: ಬ್ರಿಟನ್ ರಾಜನ ಜೊತೆ ಫಾರಿನ್ ಟೂರ್ ಕನಸು ಕಾಣ್ತಿರೋ ಆ್ಯಂಕರ್ ಅನುಶ್ರೀ!
ಇದಕ್ಕೆ ಥಹರೇವಾರಿ ಕಮೆಂಟ್ಗಳು ಬಂದಿವೆ. ಅಮರ ಶಿಲ್ಪಿ ಜಕ್ಕಣ್ಣ ಇವಳ ನೋಡಿ ಬೆರಗಾದ, ಕುಂಚ ರಾಜ ರವಿವರ್ಮ ಮೈ ಮರೆತು ಶರಣಾದ ಎಂದು ಕಿಚ್ಚಬಸಯ್ಯ ಎನ್ನುವ ಇನ್ಸ್ಟಾಗ್ರಾಂ ಅಭಿಮಾನಿ ಬರೆದಿದ್ದಾರೆ. ಹಿಡಿಯಷ್ಟು ಇರುವ ಈ ನನ್ನ ಹೃದಯದಲ್ಲಿ ಹಿಡಿಯಲಾರದಷ್ಟು ಪ್ರೀತಿ ನಿಮ್ಮ ಮೇಲೆ ಎಂದು ಪೂರ್ಣಿ ಎನ್ನುವ ಫ್ಯಾನ್ ಬರೆದಿದ್ದರೆ, ಇನ್ನೊಬ್ಬರು ನಿಮ್ಮನ್ನ ಯಾವಾಗ ನೋಡಿದ್ರೂ ನನ್ನ ಮುಖದಲ್ಲಿ ತಾನಾಗೇ ನಗು ಬರತ್ತೆ ಎಂದಿದ್ದಾರೆ. ಒಟ್ಟಿನಲ್ಲಿ ಕಮೆಂಟ್ ಬಾಕ್ಸ್ಗಳು ಹಾರ್ಟ್ ಎಮೋಜಿಯಿಂದ ತುಂಬಿ ಹೋಗಿವೆ. ಅನುಶ್ರೀ ಹೋದಲ್ಲಿ, ಬಂದಲ್ಲಿ ಅವರ ಫ್ಯಾನ್ಸ್ ಅವರ ಮದುವೆಯ ಬಗ್ಗೆಯೇ ಕೇಳುತ್ತಾರೆ. ಈಗಲೂ ಕೆಲವರು ಅದನ್ನೇ ಕೇಳಿದ್ದು ಥೇಟ್ ಮದುಮಗಳ ರೀತಿ ಕಾಣಿಸುತ್ತಿದ್ದೀರಿ, ನಿಮ್ಮನ್ನು ಮದುಮಗಳಾಗಿ ನೋಡೋ ಆಸೆ ಎಂದಿದ್ದಾರೆ.
ಈ ಹಿಂದೆ ಸೀಸನ್20 ಯ ಕುರಿತ ಪ್ರೋಮೋದಲ್ಲಿ ಅನುಶ್ರೀ ಅವರು ಫಾರಿನ್ ಟೂರ್ ಕನಸು ಕಾಣುತ್ತಿದ್ದನ್ನು ಶೇರ್ ಮಾಡಲಾಗಿತ್ತು. ವಿದೇಶ ಪ್ರವಾಸ ಮಾಡಲು ಬಟ್ಟೆ ಪ್ಯಾಕ್ ಮಾಡಿಕೊಳ್ತಿರೋ ಅನುಶ್ರೀ, ಸಿಂಗಪುರದಲ್ಲಿ ಹಾಕಿಕೊಳ್ಳಲು, ಅಮೆರಿಕದಲ್ಲಿ ಹಾಕಿಕೊಳ್ಳುವ ಡ್ರೆಸ್‌ಗಳನ್ನು ಪ್ಯಾಕ್ ಮಾಡಿದ್ದಾರೆ. ಇದರ ಜೊತೆಗೆ, ಬ್ರಿಟನ್ ಆಡಿಷನ್‌ನಲ್ಲಿ ಹಾಕಿಕೊಳ್ಳಲು ಡ್ರೆಸ್ ಒಂದನ್ನು ಆಯ್ಕೆ ಮಾಡಿಕೊಂಡ ನಟಿ, ಈ ಡ್ರೆಸ್ ಹಾಕಿಕೊಂಡ್ರೆ ಬ್ರಿಟನ್ ರಾಜ ಬಂದು ನನ್ನನ್ನು ನೋಡುತ್ತಾನೆ, ಕರೆದುಕೊಂಡು ಹೋಗುತ್ತಾನೆ ಎಂದು ಅನುಶ್ರೀ ತಮಾಷೆ ಮಾಡಿದ್ದರು. ಆಗಲೂ ಸುಂದರವಾಗಿ ಕಾಣುತ್ತಿದ್ದ ಇವರನ್ನು ಫ್ಯಾನ್ಸ್ ಕೊಂಡಾಡಿದ್ದರು.
ನಿಮ್ ಬಣ್ಣ ಬಯಲಾಗೈತಿ, ಇಲ್ಲಿ ನಮ್ ತಲಿ ಕೆಡಿಸ್ಬ್ಯಾಡಿ: ಹಿಟ್ಲರ್ ಕಲ್ಯಾಣದ 'ಪ್ರಾರ್ಥನಾ'ಗೆ ಕ್ಲಾಸ್!